☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

DK SHIVAKUMAR: ಬಸ್ ದರ ಏರಿಕೆಗೆ ಕೇಂದ್ರದ ಇಂಧನ ನೀತಿಯೇ ಕಾರಣ : ಸಿಎಂ ಡಿಕೆಶಿ

Image of DK Shivakumar
ಕೇಂದ್ರ ಸರ್ಕಾರ ಪೆಟ್ರೋಲ್ & ಡೀಸೆಲ್ ಬೆಲೆಯನ್ನು ಇಳಿಸಿದರೆ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಲು ಸಿದ್ಧರಿದ್ದೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar)

ಮುಖ್ಯಾಂಶಗಳು

  • ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗಿಲ್ವಾ..?
  • ಬೆಲೆ ಏರಿಕೆ ಬಗ್ಗೆ ಡಿಕೆ ಹಾರಿಕೆ ಉತ್ತರ
ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಿದರೆ ರಾಜ್ಯದಲ್ಲಿಯೂ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಲು ಸಿದ್ಧರಿದ್ದೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಒಂದು ಸಂದರ್ಭದಲ್ಲಿ ಮುಂದಿನ ಹತ್ತು ದಿನಗಳಿಂದ ಮೂರು ವಾರಗಳವರೆಗೆ ಡೀಸೆಲ್ ಖರೀದಿಸಲು ಕೂಡ ಹಣವಿಲ್ಲದ ಸ್ಥಿತಿ ಎದುರಾಗಿತ್ತು. ಆಗ ಸರ್ಕಾರವೇ ಮಧ್ಯಪ್ರವೇಶಿಸಿ ಆರ್ಥಿಕ ನೆರವು ನೀಡಬೇಕಾಯಿತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ ಶಕ್ತಿ ಯೋಜನೆಯಿಂದ ನಿಗಮಗಳ ಮೇಲಿನ ಹೊರೆ ಮತ್ತಷ್ಟು ಹೆಚ್ಚಾಗಿದೆ. ಈ ಕಾರಣಕ್ಕಾಗಿ ಕೆಲವು ಮಾರ್ಗಗಳಲ್ಲಿ ಎರಡು ಅಥವಾ ಮೂರು ರೂಪಾಯಿಗಳಷ್ಟು ದರ ಏರಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಏರಿಕೆ ಆಗಿಲ್ವಾ..? ಇಂಧನ ಬೆಲೆ ಏರಿಕೆಯಾದಾಗ ವಿರೋಧ ಪಕ್ಷಗಳು ಏಕೆ ಸುಮ್ಮನಿದ್ದವು ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಪೆಟ್ರೋಲ್, ಡೀಸೆಲ್ ಜೊತೆಗೆ ಅಡುಗೆ ಅನಿಲ, ರಸಗೊಬ್ಬರ, ಕೀಟನಾಶಕ, ಉಕ್ಕು, ಸಿಮೆಂಟ್ ಮತ್ತು ಔಷಧಗಳ ಬೆಲೆ ಏರಿಕೆಯ ವಿರುದ್ಧ ಅವರು ಏಕೆ ಪ್ರತಿಭಟಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗಿ ರೈತರು ಸಂಕಷ್ಟದಲ್ಲಿದ್ದರೂ ವಿರೋಧ ಪಕ್ಷಗಳಿಗೆ ಅವರ ಬಗ್ಗೆ ಕಾಳಜಿ ಇಲ್ಲವೇ ಎಂದು ಕೇಳಿದರು. ರಾಜ್ಯದಲ್ಲಿ ಬರ ಎದುರಿಸುತ್ತಿರುವ ರೈತರ ನೋವು ಸರ್ಕಾರಕ್ಕೆ ತಿಳಿದಿದೆ ಎಂದ ಅವರು, ಸಾರಿಗೆ ಸಂಸ್ಥೆಗಳು ಕೂಡ ಆರ್ಥಿಕವಾಗಿ ಚೇತರಿಸಿಕೊಳ್ಳಬೇಕು ಎಂದರು. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಮತ್ತು ತೆರಿಗೆ ಕಡಿಮೆ ಮಾಡುವಂತೆ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಿ ಎಂದು ಸವಾಲು ಹಾಕಿದರು. ಕೆಲವೆಡೆ ಹಾಲಿನ ಬೆಲೆ ಲೀಟರ್‌ಗೆ ಎಂಟು ರೂಪಾಯಿ ಬದಲು ಹನ್ನೆರಡು ರೂಪಾಯಿ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಹಾಲಿನ ಗುಣಮಟ್ಟ ಮತ್ತು ಕೊಬ್ಬಿನ ಅಂಶವೇ ಬೆಲೆ ವ್ಯತ್ಯಾಸಕ್ಕೆ ಕಾರಣ ಎಂದು ಹೇಳಿದರು. ಸಾಮಾನ್ಯ ಹಾಲು, ದೇಸಿ ಹಸುವಿನ ಹಾಲು ಮತ್ತು ಎಮ್ಮೆ ಹಾಲಿನ ಗುಣಲಕ್ಷಣಗಳು ಬೇರೆ ಬೇರೆಯಾಗಿರುತ್ತವೆ ಎಂದು ವಿವರಿಸಿದರು. ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ದಸರಾ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕರ್ನಾಟಕದ ರಾಜಮನೆತನದ ಬಗ್ಗೆ ಅಪಾರ ಗೌರವವಿದೆ, ಪರಿಶೀಲಿಸಿ ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ : ನಾಗೇಂದ್ರಗೆ ಮತ್ತೆ ಸಚಿವ ಸ್ಥಾನ ಸಿಗುತ್ತಾ..? ಹೈಕಮಾಂಡ್ ನಿರ್ಧಾರದತ್ತ ಕಾಂಗ್ರೆಸ್ಸಿಗರ ಚಿತ್ತ ಬಸ್ ದರ ಏರಿಕೆಯನ್ನು ಕೇವಲ ರಾಜ್ಯ ಸರ್ಕಾರದ ನಿರ್ಧಾರವಾಗಿ ನೋಡುವ ಬದಲು ಇಂಧನ ಬೆಲೆ, ಶಕ್ತಿ ಯೋಜನೆಯ ಹೊರೆ ಮತ್ತು ಸಾರಿಗೆ ನಿಗಮಗಳ ನಷ್ಟ ಎಂಬ ಮೂರು ಅಂಶಗಳ ಜೊತೆಗೆ ನೋಡಬೇಕಾಗಿದೆ. ಕೇಂದ್ರ ತೆರಿಗೆ ಕಡಿಮೆಯಾದರೆ ರಾಜ್ಯವೂ ದರ ಇಳಿಸುತ್ತದೆ ಎಂಬ ಹೇಳಿಕೆ ರಾಜಕೀಯ ಸವಾಲಿನಂತೆಯೂ, ಹೊಣೆಗಾರಿಕೆಯನ್ನು ಕೇಂದ್ರದತ್ತ ತಿರುಗಿಸುವ ಪ್ರಯತ್ನದಂತೆಯೂ ಕಾಣುತ್ತದೆ. ಆದರೆ ಜನರಿಗೆ ಬೇಕಿರುವುದು ವಾದವಲ್ಲ, ದರದಲ್ಲಿನ ನಿಜವಾದ ಇಳಿಕೆ. ಇಂಧನ ಬೆಲೆ ಇಳಿಕೆಯಾಗದಿದ್ದರೂ ಸಾರಿಗೆ ನಿಗಮಗಳನ್ನು ಉಳಿಸಲು ದೀರ್ಘಕಾಲೀನ ಸುಧಾರಣೆ, ವೆಚ್ಚ ನಿಯಂತ್ರಣ ಮತ್ತು ಆದಾಯ ಹೆಚ್ಚಿಸುವ ಸ್ಪಷ್ಟ ಯೋಜನೆ ಅಗತ್ಯ. ಹಾಲಿನ ಬೆಲೆ ಮತ್ತು ರಾಜಮನೆತನದ ವಿಚಾರದಲ್ಲಿ ಮುಖ್ಯಮಂತ್ರಿ ನೀಡಿರುವ ಸ್ಪಷ್ಟನೆಗಳು ವಿವಾದವನ್ನು ತಣ್ಣಗಾಗಿಸುವ ಪ್ರಯತ್ನವಾಗಿವೆ. ಒಟ್ಟಾರೆಯಾಗಿ ಈ ವಿಷಯದಲ್ಲಿ ಕೇಂದ್ರ-ರಾಜ್ಯ ಸಮನ್ವಯವೇ ಪ್ರಯಾಣಿಕರಿಗೆ ಪರಿಹಾರ ನೀಡಬಲ್ಲದು.