☔ Weather
Bengaluru: ☀️ 20°C | AQI 89
Mysore: ☀️ 21°C | AQI 88
Mangalore: ☀️ 25°C | AQI 134
Bengaluru: ☀️ 20°C | AQI 89
☔ Weather
Bengaluru: ☀️ 20°C | AQI 89
Mysore: ☀️ 21°C | AQI 88
Mangalore: ☀️ 25°C | AQI 134
Bengaluru: ☀️ 20°C | AQI 89

SONIA GANDHI : ಸೋನಿಯಾ ಗಾಂಧಿ ಎಕ್ಸ್ ಗೆ ಪದಾರ್ಪಣೆ: ಮೊದಲ ಪೋಸ್ಟ್ ನಲ್ಲಿ ಕೇಂಬ್ರಿಡ್ಜ್ ಪ್ರೇಮಕಥೆಯ ನೆನಪು

Image of Sonia Gandhi
ನವದೆಹಲಿ: ಎಕ್ಸ್ ಖಾತೆಗೆ ಎಂಟ್ರಿ ಕೊಟ್ಟ ಸೋನಿಯಾ ಗಾಂಧಿ (Sonia Gandhi) ಮೊದಲ ಪೋಸ್ಟ್ ನಲ್ಲೇ ರಾಜೀವ್ ಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾರೆ.

ಮುಖ್ಯಾಂಶಗಳು

  • ಎಕ್ಸ್ ಗೆ ಎಂಟ್ರಿ ಕೊಟ್ಟ ಸೋನಿಯಾ ಗಾಂಧಿ
  • ರಾಜೀವ್ ಗಾಂಧಿ ನೆನೆಪು
ನವದೆಹಲಿ: ಎಕ್ಸ್ ಖಾತೆಗೆ ಎಂಟ್ರಿ ಕೊಟ್ಟ ಸೋನಿಯಾ ಗಾಂಧಿ (Sonia Gandhi) ಮೊದಲ ಪೋಸ್ಟ್ ನಲ್ಲೇ ರಾಜೀವ್ ಗಾಂಧಿ ಅವರನ್ನು ನೆನಪಿಸಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ ವೇದಿಕೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದು, ತಮ್ಮ ಚೊಚ್ಚಲ ಪೋಸ್ಟ್ ನಲ್ಲಿ ಸುಮಾರು ಎರಡು ನಿಮಿಷಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ತಮ್ಮ ನೂತನ ಪುಸ್ತಕ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಕೃತಿಯ ಕೆಲವು ತುಣುಕುಗಳನ್ನು ಪರಿಚಯಿಸಿರುವ ಅವರು, ಇಂಗ್ಲೆಂಡ್ ನ ಕೇಂಬ್ರಿಡ್ಜ್ ನಲ್ಲಿ ವಿದ್ಯಾರ್ಥಿಯಾಗಿದ್ದಾಗ ತಮ್ಮ ಜೀವನದಲ್ಲಿ ಆರಂಭವಾದ ಪ್ರೇಮಪಯಣವನ್ನು ಮೆಲುಕು ಹಾಕಿದ್ದಾರೆ. ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಸೋನಿಯಾ ಗಾಂಧಿ ಬರೆದ ಮೊದಲ ಪುಸ್ತಕ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಈ ಪುಸ್ತಕದಲ್ಲಿ ಅವರ ವೈಯಕ್ತಿಕ ಬದುಕು, ಯೌವನದ ದಿನಗಳು ಹಾಗೂ ರಾಜೀವ್ ಗಾಂಧಿ ಅವರೊಂದಿಗಿನ ಅಪರೂಪದ ನೆನಪುಗಳನ್ನು ದಾಖಲಿಸಲಾಗಿದೆ. ಕೇಂಬ್ರಿಡ್ಜ್ ನಲ್ಲಿದ್ದಾಗ ಇಂಗ್ಲೆಂಡ್ ಆಹಾರ ರುಚಿಸದ ಕಾರಣ ಇಟಾಲಿಯನ್ ಊಟಕ್ಕಾಗಿ ಹುಡುಕಾಡುತ್ತಿದ್ದಾಗ ವರ್ಸಿಟಿ ರೆಸ್ಟೋರೆಂಟ್ ಎಂಬ ಚಿಕ್ಕ ಗ್ರೀಕ್ ರೆಸ್ಟೋರೆಂಟ್ ಪರಿಚಯವಾಗಿತ್ತು ಎಂದು ಅವರು ಹೇಳಿದ್ದಾರೆ. ಯುರೋಪಿಯನ್ ಮತ್ತು ಭಾರತೀಯ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಿದ್ದ ಅದೇ ರೆಸ್ಟೋರೆಂಟ್ ನಲ್ಲಿ ಸಾಮಾನ್ಯ ಸ್ನೇಹಿತರ ಮೂಲಕ ರಾಜೀವ್ ಗಾಂಧಿ ಅವರ ಪರಿಚಯವಾಗಿತ್ತು. ಮೊದಲ ನೋಟದಲ್ಲೇ ಅವರ ಸೌಮ್ಯ ಸ್ವಭಾವ ಮನಸ್ಸಿಗೆ ತಟ್ಟಿತು, ಇವರೊಂದಿಗೇ ಬದುಕು ಸಾಗಿಸಬೇಕು ಎಂಬ ಭಾವನೆ ಮೂಡಿತು ಎಂದು ಸೋನಿಯಾ ತಿಳಿಸಿದ್ದಾರೆ. ಆ ಪರಿಚಯ ಸ್ನೇಹವಾಗಿ, ಬಳಿಕ ಪ್ರೇಮವಾಗಿ ಬೆಳೆದು 1968ರ ಫೆಬ್ರವರಿ 25ರಂದು ವಿವಾಹದಲ್ಲಿ ಕೊನೆಗೊಂಡಿತ್ತು. ಇದನ್ನೂ ಓದಿ : ಸ್ಟಿಂಗ್ ಆಪರೇಷನ್ ಹಿಂದೆ ರಾಜಕೀಯ ಸಂಚು – ಸರ್ಕಾರಕ್ಕೆ ಡ್ಯಾಮೇಜ್ : ಪ್ರಿಯಾಂಕ್ ಖರ್ಗೆ ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರೂ ವೈಯಕ್ತಿಕ ವಿಚಾರಗಳಲ್ಲಿ ಅಂತರ ಕಾಯ್ದುಕೊಂಡಿದ್ದ ಸೋನಿಯಾ ಗಾಂಧಿ ಅವರು ಇದೀಗ ನೇರವಾಗಿ ಸಾಮಾಜಿಕ ಜಾಲತಾಣಕ್ಕೆ ಬಂದಿರುವುದು ಹಾಗೂ ತಮ್ಮ ಪ್ರೇಮಕಥೆಯನ್ನು ಪುಸ್ತಕ ರೂಪದಲ್ಲಿ ತೆರೆದಿಡುತ್ತಿರುವುದು ರಾಜಕೀಯವಾಗಿಯೂ ಸಾಕಷ್ಟು ಕುತೂಹಲ ಮೂಡಿಸಿದೆ. ರಾಜಕಾರಣಿ ಎಂಬುದಕ್ಕಿಂತ ಒಬ್ಬ ಸಂಗಾತಿ, ಒಬ್ಬ ಮಹಿಳೆಯಾಗಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಮೂಲಕ ಅವರು ಜನರಿಗೆ ಮತ್ತೊಂದು ಮುಖವನ್ನು ಪರಿಚಯಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಾಯಕರು ತಮ್ಮ ಖಾಸಗಿ ಕಥನಗಳ ಮೂಲಕ ಜನರೊಂದಿಗೆ ಭಾವನಾತ್ಮಕ ಸಂಪರ್ಕ ಬೆಳೆಸುವ ಪ್ರವೃತ್ತಿ ಹೆಚ್ಚಾಗಿದ್ದು, ಸೋನಿಯಾ ಅವರ ಈ ಹೆಜ್ಜೆ ಕೂಡ ಅದೇ ದಿಕ್ಕಿನಲ್ಲಿ ಸಾಗಿದೆ ಎಂದು ಹೇಳಬಹುದು. ಆದರೆ ಈ ಪುಸ್ತಕ ಕೇವಲ ಪ್ರೇಮಕಥೆಯಾಗದೆ, ರಾಜೀವ್ ಅವರೊಂದಿಗಿನ ಬದುಕು, ದೇಶದ ರಾಜಕೀಯದ ಒಳನೋಟಗಳು ಹಾಗೂ ಕುಟುಂಬದ ಸವಾಲುಗಳನ್ನು ಎಷ್ಟು ಮುಕ್ತವಾಗಿ ತೆರೆದಿಡುತ್ತದೆ ಎಂಬುದರ ಮೇಲೆ ಇದರ ಮಹತ್ವ ನಿರ್ಧಾರವಾಗಲಿದೆ.