BBK 13: ಬಿಗ್ಬಾಸ್ ಕನ್ನಡ ಸೀಸನ್ 13ರ ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳ ಆಟವನ್ನು ಮುಕ್ತವಾಗಿ ಪರಾಮರ್ಶಿಸಿದ್ದಾರೆ. ಈ ವಾರ ತಾಂಡವ್ ರಾಮ್ ಹಾಗೂ ಸೌಂದರ್ಯ ಶೆಟ್ಟಿ ಪ್ರದರ್ಶನಕ್ಕೆ ಸುದೀಪ್ ಚಪ್ಪಾಳೆ ತಟ್ಟಿದ್ದಾರೆ.
ವೈಯಕ್ತಿಕ ವೈಮನಸ್ಸು ಬದಿಗೊತ್ತಿ ತಂಡಕ್ಕೆ ಗೆಲುವು
ಮನೆಯಲ್ಲಿ ನಡೆದ ಲೂಟಿಕೋರರು ಹಾಗೂ ರಕ್ಷಕರು ಟಾಸ್ಕ್ ವೀಕ್ಷಕರ ಗಮನ ಸೆಳೆದಿತ್ತು. ಮ್ಯೂಸಿಯಂ ಮಾದರಿಯ ಟಾಸ್ಕ್‌ನಲ್ಲಿ ಬೆಲೆಬಾಳುವ ವಸ್ತುಗಳನ್ನು ಕಾಯುವುದು ಮತ್ತು ಕದಿಯುವುದು ಸವಾಲಾಗಿತ್ತು. ಇತ್ತೀಚೆಗೆ ತಾಂಡವ್ ಮತ್ತು ಸೌಂದರ್ಯ ನಡುವೆ ಭಾರೀ ಮಾತಿನ ಚಕಮಕಿ ನಡೆದಿತ್ತು. ಆದರೆ ಟಾಸ್ಕ್ ಆರಂಭವಾದಾಗ ಇಬ್ಬರೂ ತಮ್ಮ ವೈಯಕ್ತಿಕ ಅಹಂ ಬದಿಗಿಟ್ಟು ಒಂದಾಗಿ ಆಡಿದರು. ವಜ್ರ ಮತ್ತು ಕಿರೀಟವನ್ನು ಕದ್ದು ಲೂಟಿಕೋರರ ತಂಡಕ್ಕೆ ಗೆಲುವು ತಂದಿಟ್ಟರು. ಇವರ ಈ ಒಗ್ಗಟ್ಟಿನ ಆಟವನ್ನು ಸುದೀಪ್ ವಾರಾಂತ್ಯದ ಸಂಚಿಕೆಯಲ್ಲಿ ಬಹಿರಂಗವಾಗಿ ಶ್ಲಾಘಿಸಿದ್ದಾರೆ.
ಇದನ್ನು ಓದಿ: BBK 13: ಆಸಿಯಾ ಹಾಗೂ ಸೌಂದರ್ಯಾ ನಡುವೆ ತೀವ್ರ ಪೈಪೋಟಿ; ಬಿಗ್ ಬಾಸ್ ಮನೆಯ ಮುಂದಿನ ಕ್ಯಾಪ್ಟನ್ ಯಾರು?
ಕ್ಯಾಪ್ಟನ್ಸಿ ಆಟದಲ್ಲೂ ಸೌಂದರ್ಯ ಶೆಟ್ಟಿ ಸಖತ್ ಕಮಾಲ್
ಟಾಸ್ಕ್ ಗೆಲುವಿನ ಜೊತೆಗೆ ಸೌಂದರ್ಯ ಶೆಟ್ಟಿ ಕ್ಯಾಪ್ಟನ್ಸಿ ಸ್ಪರ್ಧೆಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮನೆಯೊಳಗಿನ ತೀವ್ರ ಪೈಪೋಟಿಯ ನಡುವೆ ತಮ್ಮ ಚಾಣಾಕ್ಷ ಆಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ತಮ್ಮ ಆಟದ ಮೇಲೆ ಗಮನ ಹರಿಸಿದ್ದಕ್ಕೆ ಸುದೀಪ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಸೌಂದರ್ಯ ಅವರ ಈ ವಾರದ ನಾಯಕತ್ವ ಮತ್ತು ಮನರಂಜನೆ ವೀಕ್ಷಕರಿಗೂ ಇಷ್ಟವಾಗಿದೆ.
BBK 13: ಮುಂದಿನ ದಿನಗಳಲ್ಲಿ ಸಾಗಲಿದೆ ಇವರ ಗೇಮ್ ಪ್ಲಾನ್
ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್ ನೀಡಿದ ಈ ಕಿಚ್ಚನ ಚಪ್ಪಾಳೆ ಇಬ್ಬರಿಗೂ ಹೊಸ ಆನೆಬಲ ತಂದಿದೆ. ತಮ್ಮ ಅಹಂ ಬದಿಗಿಟ್ಟು ತಂಡಕ್ಕಾಗಿ ಆಡಿದ ರೀತಿ ಬಿಗ್‌ಬಾಸ್ ಮನೆಯ ಇತರ ಸ್ಪರ್ಧಿಗಳಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ತಾಂಡವ್ ಹಾಗೂ ಸೌಂದರ್ಯ ನಡುವಿನ ಬಾಂಧವ್ಯ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ. ಇಬ್ಬರೂ ಇದೇ ರೀತಿ ಒಟ್ಟಾಗಿ ಆಡುತ್ತಾರಾ ಅಥವಾ ಮತ್ತೆ ವೈಮನಸ್ಸು ಮೂಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. ಬಿಗ್‌ಬಾಸ್ ಆಟ ಈಗ ಮತ್ತಷ್ಟು ಕಾವು ಪಡೆದುಕೊಂಡಿದೆ.




