☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

RSS : ಅಮೆರಿಕದಲ್ಲಿ ಆರ್‌ಎಸ್‌ಎಸ್ ಹವಾ – ಸಂಘಟನೆ ನೋಂದಣಿ!

Image of RSS in America
ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಹೊಂದಿಕೊಂಡಿರುವ ಹೊಸ ಸಂಘಟನೆಯೊಂದು ಮಹತ್ವದ ಕಾನೂನುಬದ್ಧ ಹೆಜ್ಜೆಯಿಟ್ಟಿದೆ.

ಮುಖ್ಯಾಂಶಗಳು

  • ಅಮೆರಿಕದಲ್ಲಿ ಆರ್.ಎಸ್.ಎಸ್ ಆಕ್ಟಿವ್
  • ಯುಎಸ್ನೋಂ ನಲ್ಲೂ ದಣಿ ಮಾಡಿಕೊಂಡ ಸಂಘಟನೆ

ಅಮೆರಿಕ : ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಹೊಂದಿಕೊಂಡಿರುವ ಹೊಸ ಸಂಘಟನೆಯೊಂದು ಮಹತ್ವದ ಕಾನೂನುಬದ್ಧ ಹೆಜ್ಜೆಯಿಟ್ಟಿದೆ. ಆರ್‌ಎಸ್‌ಎಸ್ ಫ್ರೆಂಡ್ಸ್ ಎಂಬ ಹೆಸರಿನ ಈ ಗುಂಪು ಅಮೆರಿಕದ ನ್ಯಾಯಾಂಗ ಇಲಾಖೆಯ ಮುಂದೆ ವಿದೇಶಿ ಏಜೆಂಟ್‌ಗಳ ನೋಂದಣಿ ಕಾಯ್ದೆಯಡಿ ಅಧಿಕೃತವಾಗಿ ತನ್ನ ಹೆಸರನ್ನು ದಾಖಲಿಸಿಕೊಂಡಿದೆ. ಅಮೆರಿಕದ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಈ ನಡೆ, ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸುವುದಕ್ಕೂ ಕೆಲವೇ ದಿನಗಳ ಮೊದಲು ನಡೆದಿರುವುದು ವಿಶೇಷ ಕುತೂಹಲಕ್ಕೆ ಕಾರಣವಾಗಿದೆ.

ಭಾರತದಲ್ಲಿ ತೀವ್ರ ವಾದ-ವಿವಾದ

ಕಳೆದ ವರ್ಷ ಅಂದರೆ 2025ರ ನವೆಂಬರ್‌ನಲ್ಲಿ ಈ ವಿಚಾರ ಈಗಾಗಲೇ ಒಮ್ಮೆ ಸದ್ದು ಮಾಡಿತ್ತು. ಆ ಸಂದರ್ಭದಲ್ಲಿ ಸ್ವೈರ್ ಪಾಟನ್ ಬಾಗ್ಸ್ ಎಂಬ ಪ್ರಸಿದ್ಧ ಲಾಬಿ ಸಂಸ್ಥೆಯ ಮೂಲಕ ಅಮೆರಿಕದ ಉನ್ನತ ನಾಯಕರ ಮುಂದೆ ಸಂಘವನ್ನು ಪರಿಚಯಿಸುವ ಪ್ರಯತ್ನ ನಡೆದಿದೆ ಎಂಬ ಸುದ್ದಿ ಹೊರಬಿದ್ದಿತ್ತು. ಆ ಕೆಲಸಕ್ಕಾಗಿ ಲಕ್ಷಾಂತರ ಡಾಲರ್ ಹಣ ಸಂದಾಯವಾಗಿದೆ ಎಂಬ ದಾಖಲೆಗಳು ಬೆಳಕಿಗೆ ಬಂದಾಗ ಭಾರತದಲ್ಲಿ ತೀವ್ರ ವಾದ-ವಿವಾದ ಎದ್ದಿತ್ತು. ಆದರೆ ಅಮೆರಿಕದಲ್ಲಿ ಲಾಬಿ ನಡೆಸಲು ಯಾವುದೇ ಸಂಸ್ಥೆಯನ್ನು ತಾವು ನೇಮಿಸಿಲ್ಲ ಎಂದು ಆಗ ಆರ್‌ಎಸ್‌ಎಸ್ ಸ್ಪಷ್ಟಪಡಿಸಿತ್ತು. ನಂತರ ಆ ಒಪ್ಪಂದವನ್ನು ಹಿಂದಕ್ಕೆ ಪಡೆಯಲಾಯಿತು. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಆ ಬೆಳವಣಿಗೆಯನ್ನು ತೀವ್ರವಾಗಿ ಪ್ರಶ್ನಿಸಿದ್ದರು. ಇದೀಗ ಹೊಸ ಸಂಘಟನೆಯ ನೋಂದಣಿಯೊಂದಿಗೆ ಆ ಹಳೆಯ ಪ್ರಯತ್ನ ಮುಂದುವರಿದಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಹಿಂದೆ ಸಂಘದ ಎರಡನೇ ನಾಯಕ ದತ್ತಾತ್ರೇಯ ಹೊಸಬಾಳೆ ಅವರು ಅಮೆರಿಕ ಪ್ರವಾಸ ಮಾಡಿ ಸಂಘದ ಧ್ಯೇಯೋದ್ದೇಶಗಳ ಬಗ್ಗೆ ಪ್ರಮುಖ ವ್ಯಕ್ತಿಗಳೊಂದಿಗೆ ಚರ್ಚೆ ನಡೆಸಿದ್ದರು.

ಇದನ್ನೂ ಓದಿ : ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಿಗ್ ಜೀರೋ, ಮೋದಿ ವ್ಯಂಗ್ಯಾಸ್ತ್ರ

ಅಮೆರಿಕದ ನಿಯಮಗಳ ಪ್ರಕಾರ ವಿದೇಶಿ ಮೂಲದ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಅಲ್ಲಿ ರಾಜಕೀಯ ಅಥವಾ ಸಾರ್ವಜನಿಕ ಸಂಪರ್ಕದ ಕೆಲಸ ಮಾಡಬೇಕಾದರೆ ಈ ರೀತಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ. ಹೀಗಾಗಿ ಈಗಿನ ನೋಂದಣಿ ಕಾನೂನು ಚೌಕಟ್ಟಿನೊಳಗೆ ನಡೆದಿದೆ ಎಂಬುದು ಸ್ಪಷ್ಟ. ಆದರೆ ಇದರ ಹಿಂದೆ ಸಂಘದ ದೂರಗಾಮಿ ಕಾರ್ಯತಂತ್ರವಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅಮೆರಿಕದಂತಹ ಪ್ರಭಾವಶಾಲಿ ದೇಶದಲ್ಲಿ ತನ್ನ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ರೂಪಿಸುವುದು, ನೀತಿ ನಿರೂಪಕರೊಂದಿಗೆ ನಿರಂತರ ಸಂವಾದ ಇಟ್ಟುಕೊಳ್ಳುವುದು ಮತ್ತು ಭಾರತೀಯ ಮೂಲದ ಜನರಲ್ಲಿ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿರಬಹುದು. ಮುಂದಿನ ದಿನಗಳಲ್ಲಿ ಈ ಗುಂಪು ಸಲ್ಲಿಸುವ ವರದಿಗಳಿಂದ ಅಮೆರಿಕದಲ್ಲಿ ಸಂಘದ ನಿಜವಾದ ಕಾರ್ಯವೈಖರಿ ಏನಿರುತ್ತದೆ ಎಂಬುದು ಬಯಲಾಗಲಿದೆ. ಅಂತರರಾಷ್ಟ್ರೀಯ ರಾಜತಾಂತ್ರಿಕ ವಲಯದಲ್ಲಿ ಇದು ದೊಡ್ಡ ಚರ್ಚೆಗೆ ದಾರಿಮಾಡಿಕೊಡುವುದು ಖಚಿತ.