☔ Weather
Bengaluru: ☀️ 23°C | AQI 115
Mysore: ☀️ 21°C | AQI 108
Mangalore: ☀️ 26°C | AQI 162
Bengaluru: ☀️ 23°C | AQI 115
☔ Weather
Bengaluru: ☀️ 23°C | AQI 115
Mysore: ☀️ 21°C | AQI 108
Mangalore: ☀️ 26°C | AQI 162
Bengaluru: ☀️ 23°C | AQI 115

RAHUL GANDHI : ಹೆದರಬೇಡಿ, ಚರ್ಚೆಗೆ ಬನ್ನಿ: ಪ್ರಧಾನಿ ಮೋದಿಗೆ ಗುಲಾಬಿ ಹಿಡಿದು ರಾಹುಲ್ ಗಾಂಧಿ ಸವಾಲು

Image of Rahul Gandhi
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸವಾಲು ಎಸೆದಿದ್ದಾರೆ.

ಮುಖ್ಯಾಂಶಗಳು

  • ಮತ್ತೆ ಮೋದಿಗೆ ರಾಹುಲ್ ಸವಾಲ್
  • ಗುಲಾಬಿ ಹಿಡಿದು ವಿಡಿಯೋ ಮಾಡಿದ ರಾಹುಲ್

ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸವಾಲು ಎಸೆದಿದ್ದಾರೆ. ವಿರೋಧ ಪಕ್ಷಗಳನ್ನು ದೇಶವಿರೋಧಿಗಳು ಎಂದು ಪದೇ ಪದೇ ಕರೆಯುವುದಾದರೆ ಯಾವುದೇ ವೇದಿಕೆ ಆಯ್ಕೆ ಮಾಡಿಕೊಂಡು ತಮ್ಮ ಎದುರು ಮುಖಾಮುಖಿ ಚರ್ಚೆಗೆ ಬರುವಂತೆ ಅವರು ಆಗ್ರಹಿಸಿದ್ದಾರೆ. ಸವಾಲು ಹಾಕಿ 24 ಗಂಟೆ ಕಳೆದರೂ ಪ್ರಧಾನಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿರುವ ಅವರು ಹೆದರಬೇಡಿ, ಚರ್ಚೆಗೆ ಬನ್ನಿ ಎಂದು ಕರೆ ನೀಡಿದ್ದಾರೆ. ಮಾಧ್ಯಮಗಳು ಮತ್ತು ದೇಶದ ಯುವಜನರ ಮುಂದೆ ಈ ಚರ್ಚೆ ನಡೆಯಬೇಕು ಎಂದು ಅವರು ಬಯಸಿದ್ದಾರೆ. ಒಂದು ಮೇಜಿನ ಎರಡು ಬದಿಯಲ್ಲಿ ಇಬ್ಬರೂ ಕುಳಿತುಕೊಳ್ಳೋಣ, ತೀರ್ಪುಗಾರರಾಗಿ ನಿಮಗೆ ಇಷ್ಟ ಬಂದವರನ್ನು ಆಯ್ಕೆ ಮಾಡಿ, ಬೇಕಿದ್ದರೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೇ ಅಧ್ಯಕ್ಷರನ್ನಾಗಿ ಕೂರಿಸಿ ಎಂದು ಅವರು ಹೇಳಿದ್ದಾರೆ. ದೇಶದ್ರೋಹಿ ಯಾರು, ವಿದೇಶಿ ಶಕ್ತಿಗಳ ಜತೆ ಯಾರಿಗೆ ಹೇಂತಹ ಸಂಪರ್ಕವಿದೆ ಎಂಬುದನ್ನು ಇಡೀ ದೇಶದ ಮುಂದೆ ಬಹಿರಂಗವಾಗಿ ತೀರ್ಮಾನಿಸೋಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಧೈರ್ಯವಿದ್ದರೆ ನನ್ನ ಮೇಲೆ ಕೇಸ್ ಹಾಕಿ ..!

ಈ ಚರ್ಚೆಯಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಮತ್ತು ಆರ್ಥಿಕ ರಚನೆ ಕುರಿತು ಪ್ರಶ್ನೆಗಳು ಬರಲಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಜತೆಗಿನ ಒಪ್ಪಂದ ಹೇಗೆ ನಡೆಯಿತು, ಏಕೆ ನಡೆಯಿತು, ಅಷ್ಟು ತರಾತುರಿಯಲ್ಲಿ ಏಕೆ ಮಾಡಲಾಯಿತು, ಪ್ರಧಾನಿ ಒಬ್ಬರೇ ಏಕೆ ನಿರ್ಧಾರ ತೆಗೆದುಕೊಂಡರು, ಸಚಿವ ಸಂಪುಟಕ್ಕೆ ಏಕೆ ಮಾಹಿತಿ ನೀಡಲಿಲ್ಲ ಎಂಬುದನ್ನು ಚರ್ಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅದಾನಿ ಪ್ರಕರಣದ ತನಿಖೆಯನ್ನು ಏಕಾಏಕಿ ಮುಕ್ತಾಯಗೊಳಿಸಿದ್ದು ಏಕೆ, ಎಪ್‌ಸ್ಟೀನ್ ಪ್ರಕರಣ ಸೇರಿದಂತೆ ಇನ್ನೂ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಹಾಲು ಹಾಲು, ನೀರು ನೀರು ಮಾಡೋಣ ಎಂದು ಅವರು ಹೇಳಿದ್ದಾರೆ. ತಮ್ಮ ವಿರುದ್ಧ ಬೇರೆ ಬೇರೆ ವಿಷಯಗಳಿಗೆ ಸುಮಾರು 45 ಮಾನನಷ್ಟ ಮೊಕದ್ದಮೆಗಳನ್ನು ಹಾಕಲಾಗಿದೆ ಎಂದು ನೆನಪಿಸಿದ ಅವರು, ವಿದೇಶಿ ಸಂಪರ್ಕದ ವಿಷಯದಲ್ಲಿ ಮಾತ್ರ ಇದುವರೆಗೆ ಏಕೆ ಮಾನನಷ್ಟ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಧೈರ್ಯವಿದ್ದರೆ ಈ ವಿಷಯದಲ್ಲೂ ಕೇಸ್ ಹಾಕಿ, ಅದನ್ನು ನ್ಯಾಯಾಲಯದಲ್ಲೂ ಚರ್ಚಿಸೋಣ ಎಂದು ಅವರು ಸವಾಲು ಹಾಕಿದ್ದಾರೆ. ಸಂದೇಶದ ಕೊನೆಯಲ್ಲಿ ಪ್ರಧಾನಿ ಮೋದಿಜಿ ಅವರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ : ದೇವಾಲಯದ ಒಳಗೆ ಅರ್ಚಕರು ಅ*ತ್ಯಾಚಾರ ಮಾಡ್ತಾರೆ – ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಕೆಂಡ

ಈ ಸವಾಲು ಕೇವಲ ರಾಜಕೀಯ ಮಾತಿನ ಚಕಮಕಿಯಾಗಿ ಉಳಿಯದೆ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ನಂಬಿಕೆ, ಪಾರದರ್ಶಕತೆ ಮತ್ತು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ವಿದೇಶಿ ಸಂಪರ್ಕ, ಆರ್ಥಿಕ ಒಪ್ಪಂದಗಳು ಮತ್ತು ದೊಡ್ಡ ಉದ್ಯಮಿಗಳ ಪ್ರಕರಣಗಳಂತಹ ಸೂಕ್ಷ್ಮ ವಿಷಯಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಚರ್ಚಿಸಿದರೆ ಜನರಲ್ಲಿ ಸ್ಪಷ್ಟತೆ ಮೂಡಬಹುದು. ಆದರೆ ಇಂತಹ ಚರ್ಚೆಗಳು ಆರೋಪ ಪ್ರತ್ಯಾರೋಪಗಳಿಗೆ ಸೀಮಿತವಾಗದೆ ಸಾಕ್ಷ್ಯ ಮತ್ತು ದಾಖಲೆಗಳ ಆಧಾರದಲ್ಲಿ ನಡೆದರೆ ಮಾತ್ರ ಅರ್ಥಪೂರ್ಣವಾಗುತ್ತವೆ. ಇಲ್ಲದಿದ್ದರೆ ಇದು ಚುನಾವಣಾ ವಾತಾವರಣದಲ್ಲಿ ಭಾವನಾತ್ಮಕ ಪ್ರಚಾರವಾಗಿ ಬದಲಾಗುವ ಸಾಧ್ಯತೆ ಇದೆ. ಪ್ರಧಾನಿ ಈ ಸವಾಲನ್ನು ಸ್ವೀಕರಿಸುತ್ತಾರೋ ಅಥವಾ ಮೌನ ಮುಂದುವರಿಸುತ್ತಾರೋ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಗೆ ದಿಕ್ಕು ತೋರಿಸಲಿದೆ.