☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

PM MODI : ಮೋದಿ ಕಾರ್ಯಕ್ರಮದಲ್ಲಿ ಕೃಷ್ಣಬೈರೇಗೌಡ ಭಾಷಣ ರದ್ದು ..!

Image of PM Modi
ಪ್ರಧಾನಿ ನರೇಂದ್ರ ಮೋದಿ (PM Modi) ಬೆಂಗಳೂರಿನಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣಬೈರೇಗೌಡ ಭಾಷಣವನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದೆ

ಮುಖ್ಯಾಂಶಗಳು

  • ಮೋದಿ ಮುಂದೆ ಮಾತಾಡಂಗಿಲ್ಲ..!
  • ಕೃಷ್ಣಬೈರೇಗೌಡರ ಭಾಷಣಕ್ಕೆ ಬ್ರೇಕ್ !
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಬೆಂಗಳೂರಿನಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಭಾಷಣವನ್ನು ಕೊನೆ ಕ್ಷಣದಲ್ಲಿ ಕೈಬಿಡಲಾಗಿದೆ ಎಂಬ ಆರೋಪ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮೊದಲು ಸಿದ್ಧಪಡಿಸಿದ್ದ ಸಭೆಯ ಕರಡು ಪಟ್ಟಿಯಲ್ಲಿ ಸಚಿವರ ಮಾತಿಗೆ ಅವಕಾಶ ನಿಗದಿಯಾಗಿತ್ತು. ಆದರೆ ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಹೆಸರೇ ಇರಲಿಲ್ಲ. ಇದನ್ನು ಸಚಿವರೇ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ, ಕರ್ನಾಟಕಕ್ಕೆ ನ್ಯಾಯ ಕೇಳಿದ್ದಕ್ಕೆ ತಮಗೆ ಸಿಕ್ಕ ಬಹುಮಾನವೇ ಇದು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಪಾಲು ತೀರಾ ಕಡಿಮೆ ಎಂದಿದ್ದ ಸಚಿವ..! ಇತ್ತೀಚೆಗೆ ಮೆಟ್ರೋ ಕಾಮಗಾರಿಗಳ ವಿಚಾರದಲ್ಲಿ ಕೃಷ್ಣಬೈರೇಗೌಡ ಅವರು ಪ್ರಮುಖ ಹೇಳಿಕೆಯೊಂದನ್ನು ನೀಡಿದ್ದರು. ಮೆಟ್ರೋ ಯೋಜನೆಗಳಿಗೆ ಬೇಕಾದ ಬಹುತೇಕ ಬಂಡವಾಳವನ್ನು ರಾಜ್ಯವೇ ಭರಿಸುತ್ತಿದ್ದು, ಕೇಂದ್ರದ ಪಾಲು ತೀರಾ ಕಡಿಮೆ ಇದೆ ಎಂದು ಅವರು ಹೇಳಿದ್ದರು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಸಿಗಬೇಕು ಎಂದು ಧ್ವನಿ ಎತ್ತಿದ್ದರಿಂದಲೇ ತಮ್ಮ ಭಾಷಣವನ್ನು ತೆಗೆದುಹಾಕಲಾಗಿದೆ ಎಂಬುದು ಅವರ ಅಸಮಾಧಾನ. ನೀವು ನನ್ನ ಮಾತನ್ನು ಕಟ್ ಮಾಡಬಹುದು, ಆದರೆ ಬೆಂಗಳೂರಿನ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ, ಇನ್ನೂ ಹೆಚ್ಚಿನ ಶ್ರಮದಿಂದ ದುಡಿಯುತ್ತೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ : ಮೋದಿ ಪೋಸ್ಟ್‌ಗೆ ಟಗರು ಹಾಡು, ಕಮೆಂಟ್‌ನಲ್ಲಿ ಕನ್ನಡಿಗರ ಭರಾಟೆ ಈ ಘಟನೆ ಕೇವಲ ಒಬ್ಬ ಸಚಿವರ ಭಾಷಣದ ಪ್ರಶ್ನೆಯಾಗಿ ಉಳಿದಿಲ್ಲ. ಕೇಂದ್ರ ಮತ್ತು ರಾಜ್ಯದ ನಡುವಿನ ಹಣಕಾಸು, ಪಾಲುದಾರಿಕೆ ಮತ್ತು ಗೌರವದ ಪ್ರಶ್ನೆಯಾಗಿ ಬೆಳೆದಿದೆ. ರಾಜ್ಯದ ಹಣ ಹೆಚ್ಚು ಖರ್ಚಾಗುತ್ತಿರುವ ಯೋಜನೆಯ ಉದ್ಘಾಟನಾ ವೇದಿಕೆಯಲ್ಲಿ ಆ ರಾಜ್ಯದ ಸಂಬಂಧಪಟ್ಟ ಸಚಿವರಿಗೇ ಮಾತನಾಡಲು ಅವಕಾಶ ಇಲ್ಲದಿರುವುದು ಸಹಜವಾಗಿಯೇ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದು ನಿಜವಾಗಿಯೂ ಪ್ರೋಟೋಕಾಲ್ ಕಾರಣದಿಂದಾದ ಬದಲಾವಣೆಯೇ ಅಥವಾ ರಾಜ್ಯದ ಧ್ವನಿಯನ್ನು ಮೌನಗೊಳಿಸುವ ಪ್ರಯತ್ನವೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಮೂಡಿದೆ. ಇಂತಹ ಬೆಳವಣಿಗೆಗಳು ಅಭಿವೃದ್ಧಿ ವಿಚಾರದಲ್ಲೂ ರಾಜಕೀಯ ಮೇಲುಗೈ ಸಾಧಿಸುವ ಪ್ರವೃತ್ತಿಯನ್ನು ತೋರಿಸುತ್ತವೆ. ಅಂತಿಮವಾಗಿ ಜನರಿಗೆ ಬೇಕಾಗಿರುವುದು ವೇದಿಕೆಯ ಮೇಲಿನ ಭಾಷಣವಲ್ಲ, ಯೋಜನೆಗಳು ಸಮಯಕ್ಕೆ ಮುಗಿದು ಸೌಲಭ್ಯ ಸಿಗುವುದೇ ಆಗಿದೆ.