☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

PM MODI : ಬೆಂಗಳೂರಿನಲ್ಲಿ ಮೋದಿ ಭೇಟಿ ವೇಳೆ ಘೋಷಣೆಗಳ ಕದನ : ಬಿಜೆಪಿ-ಕಾಂಗ್ರೆಸ್ ಪೈಪೋಟಿ

Image of PM Modi
ಪ್ರಧಾನಿ ನರೇಂದ್ರ ಮೋದಿ (PM Modi) ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ನಗರದ ರಾಜಕೀಯ ವಾತಾವರಣ ಒಮ್ಮೆಲೇ ಬಿಸಿಯಾಗಿದೆ.

ಮುಖ್ಯಾಂಶಗಳು

  • ಬೆಂಗಳೂರಲ್ಲಿ ಜೈಕಾರದ ಜಟಾಪಟಿ
  • ಡಿಕೆ & ಮೋದಿ ಫ್ಯಾನ್ಸ್ ಘೋಷಣೆ ಪೈಪೋಟಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ನಗರದ ರಾಜಕೀಯ ವಾತಾವರಣ ಒಮ್ಮೆಲೇ ಬಿಸಿಯಾಗಿದೆ. ಬಿಳೇಕಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಂದೇ ಜಾಗದಲ್ಲಿ ಸೇರಿದ್ದು, ಪರಸ್ಪರ ಘೋಷಣೆಗಳ ಮೂಲಕ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದಾರೆ. ಬಿಜೆಪಿ ಬೆಂಬಲಿಗರು ಮೋದಿ ಮೋದಿ ಎಂದು ಕೂಗಿದರೆ, ಅದಕ್ಕೆ ಉತ್ತರವಾಗಿ ಕಾಂಗ್ರೆಸ್ ಬೆಂಬಲಿಗರು ಡಿಕೆ ಡಿಕೆ ಎಂದು ಧ್ವನಿ ಎತ್ತಿದ್ದಾರೆ. ಕೆಲ ಹೊತ್ತು ಆ ಪ್ರದೇಶದಲ್ಲಿ ಎರಡೂ ಪಕ್ಷಗಳ ಘೋಷಣೆಗಳೇ ಪ್ರತಿಧ್ವನಿಸಿದ್ದು, ಪ್ರಧಾನಿ ಭೇಟಿಯ ದಿನ ರಾಜಕೀಯ ಕಾವನ್ನು ಮತ್ತಷ್ಟು ಹೆಚ್ಚಿಸಿದೆ.

ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ..!

ಪ್ರಧಾನಿ ಮೋದಿ ವಿಶೇಷ ವಿಮಾನದಲ್ಲಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಜಿಗಣಿಯ ಪ್ರಶಾಂತಿ ಕುಟೀರ ತಲುಪಿದ್ದಾರೆ. ಅಲ್ಲಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯ ಐವತ್ತನೇ ವರ್ಷದ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಆ ಕಾರ್ಯಕ್ರಮ ಮುಗಿದ ಬಳಿಕ ಅವರು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ತೆರಳಲಿದ್ದಾರೆ. ತಾವರೆಕೆರೆ ಮೆಟ್ರೋ ನಿಲ್ದಾಣದಿಂದ ಕಾಳೇನ ಅಗ್ರಹಾರದವರೆಗಿನ ಮಾರ್ಗವನ್ನು ಅವರು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ.

ಇದನ್ನೂ ಓದಿ : ಮೋದಿ ಜೊತೆ ಸೀಕ್ರೆಟ್ ಮಾತುಕತೆಗೆ ಡಿಕೆ ಮನವಿ, ವಿಚಾರ ರಿವೀಲ್ ಮಾಡದ ಸಿಎಂ

ಇಂತಹ ಘೋಷಣೆ ಯುದ್ಧಗಳು ಬೆಂಗಳೂರಿಗೆ ಹೊಸದಲ್ಲ. ಅಭಿವೃದ್ಧಿ ಕಾರ್ಯಕ್ರಮವೊಂದು ಉದ್ಘಾಟನೆಯಾದಾಗಲೆಲ್ಲ ಅದು ಯಾರ ಕ್ರೆಡಿಟ್ ಎಂಬ ಚರ್ಚೆ ಮುನ್ನೆಲೆಗೆ ಬರುತ್ತದೆ. ಮೆಟ್ರೋದಂತಹ ಸಾರ್ವಜನಿಕ ಸೌಲಭ್ಯ ಜನರಿಗೆ ತಲುಪಬೇಕಾದ ವಿಚಾರವಾದರೂ, ಅದರ ಸುತ್ತಲೂ ಪಕ್ಷಗಳ ನಡುವೆ ಮಾಲೀಕತ್ವದ ಸ್ಪರ್ಧೆ ನಡೆಯುವುದು ಸಾಮಾನ್ಯವಾಗಿದೆ. ಬಿಜೆಪಿಗೆ ಇದು ಕೇಂದ್ರ ನಾಯಕನ ವರ್ಚಸ್ಸನ್ನು ತೋರಿಸುವ ವೇದಿಕೆ ಆದರೆ, ಕಾಂಗ್ರೆಸ್‌ಗೆ ರಾಜ್ಯದಲ್ಲಿ ತನ್ನ ನಾಯಕತ್ವದ ಬಲವನ್ನು ಪ್ರದರ್ಶಿಸುವ ಅವಕಾಶ. ಆದರೆ ಘೋಷಣೆಗಳ ಅಬ್ಬರದಲ್ಲಿ ಅಸಲಿ ಪ್ರಶ್ನೆಗಳು ಮರೆಯಾಗಬಾರದು. ಪಿಂಕ್ ಲೈನ್ ಆರಂಭದಿಂದ ದಕ್ಷಿಣ ಬೆಂಗಳೂರಿನ ಪ್ರಯಾಣಿಕರಿಗೆ ಎಷ್ಟು ಅನುಕೂಲವಾಗುತ್ತದೆ, ಉಳಿದ ಮಾರ್ಗಗಳು ಯಾವಾಗ ಪೂರ್ಣಗೊಳ್ಳುತ್ತವೆ ಎಂಬುದರ ಬಗ್ಗೆ ಜನರಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ.