☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

DEEPAVALI: ಪಟಾಕಿ ಹಚ್ಚೋದು ದೇಶ ದ್ರೋಹ ಅಂತೆ ! – ಸೋನಿ ರಜ್ದಾನ್ ಗೆ ತಲೆ ಕೆಟ್ಟಿದ್ಯಾ..?

Image of Deepavali controversy
ದೀಪಾವಳಿಗೆ (Deepavali) ಪಟಾಕಿ ಸಿಡಿಸುವುದು ದೇಶವಿರೋಧಿ ಕೆಲಸ ಎಂದು ಹಿರಿಯ ನಟಿ ಸೋನಿ ರಜ್ದಾನ್ ಹೇಳಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಪಟಾಕಿ ಸಿಡಿಸಿದ್ರೆ ದೇಶದ್ರೋಹ..!
  • ನಟಿ ಉದ್ಧಟತನದ ಹೇಳಿಕೆ

ಮುಂಬೈ: ದೀಪಾವಳಿಗೆ (Deepavali) ಪಟಾಕಿ ಸಿಡಿಸುವುದು ದೇಶವಿರೋಧಿ ಕೆಲಸ ಎಂದು ಹಿರಿಯ ನಟಿ ಸೋನಿ ರಜ್ದಾನ್ ಹೇಳಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಾಲಿನ್ಯ ರಹಿತ ದೀಪಾವಳಿ ಆಚರಣೆಗೆ ಕರೆ ನೀಡಿದ್ದ ನಟಿ ದಿಯಾ ಮಿರ್ಜಾ ಅವರ ಜಾಗೃತಿ ವಿಡಿಯೋವನ್ನು ಮುಂಬೈ ಮಹಾನಗರ ಪಾಲಿಕೆ ತೆಗೆದುಹಾಕಿದ್ದಕ್ಕೆ ಬಾಂಬೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಸೋನಿ ರಜ್ದಾನ್ ಸಾಮಾಜಿಕ ಜಾಲತಾಣದಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಅವರು, ದೀಪಾವಳಿಯಂದು ಒಂದೇ ಒಂದು ಪಟಾಕಿ ಸಿಡಿಸಿದರೂ ಅದು ತಮ್ಮ ಪಾಲಿಗೆ ದೇಶವಿರೋಧಿ ಕೃತ್ಯಕ್ಕೆ ಸಮಾನ ಎಂದು ಬರೆದುಕೊಂಡಿದ್ದಾರೆ. ಅನಗತ್ಯ ವಿವಾದ ಮತ್ತು ಟೀಕೆಗಳಿಂದ ದೂರವಿರಲು ಕಮೆಂಟ್ ವಿಭಾಗವನ್ನು ಅವರು ಮುಚ್ಚಿದ್ದಾರೆ.

ವಾಯು ಮಾಲಿನ್ಯದ ನೇಪ..ಗೋಳಾಟ!

ವಾಯು ಮಾಲಿನ್ಯದಿಂದ ಸಣ್ಣ ಮಕ್ಕಳು ಅನುಭವಿಸುತ್ತಿರುವ ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಸೋನಿ ರಜ್ದಾನ್ ಈ ಮಾತುಗಳನ್ನಾಡಿದ್ದಾರೆ. ಶ್ವಾಸಕೋಶದ ತೊಂದರೆಯಿಂದಾಗಿ ಮಕ್ಕಳು ಶಾಲೆಗೆ ರಜೆ ಹಾಕುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ದೀಪಾವಳಿಗೆ ಒಂದು ಪಟಾಕಿ ಸಿಡಿಸುವುದು ಸರಿ ಎಂದು ಹೇಳುವುದು ಜೀವ ವಿರೋಧಿ, ಆರೋಗ್ಯ ವಿರೋಧಿ ಹಾಗೂ ಖಂಡಿತವಾಗಿಯೂ ದೇಶವಿರೋಧಿ ನಿರ್ಧಾರ ಎಂದು ಅವರು ಕಿಡಿಕಾರಿದ್ದಾರೆ. ಆರೋಗ್ಯವೆಂಬುದು ನಾವು ನಮಗಾಗಿ ಮತ್ತು ಮಕ್ಕಳಿಗಾಗಿ ಮಾಡಿಕೊಳ್ಳುವ ಆಯ್ಕೆಯಾಗಿದ್ದು, ಸರಿಯಾದ ನಿರ್ಧಾರ ತೆಗೆದುಕೊಳ್ಳೋಣ ಎಂದು ಅವರು ಕರೆ ನೀಡಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರ ಆಕ್ಷೇಪದ ಹಿನ್ನೆಲೆಯಲ್ಲಿ ಬಿಎಂಸಿ ತೆಗೆದುಹಾಕಿದ್ದ ದಿಯಾ ಮಿರ್ಜಾ ವಿಡಿಯೋವನ್ನು ತಕ್ಷಣ ಮತ್ತೆ ಅಪ್‌ಲೋಡ್ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ನಮ್ಮದು ಜಾತ್ಯತೀತ ದೇಶವಾಗಿದ್ದು, ಎಲ್ಲರೂ ಒಂದೇ ಗಾಳಿಯನ್ನು ಉಸಿರಾಡುತ್ತಿದ್ದೇವೆ. ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯದ ಜಾಗೃತಿ ವಿಡಿಯೋ ತೆಗೆದುಹಾಕುವುದು ಸರಿಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : 2029ರಲ್ಲೂ ಕಾಂಗ್ರೆಸ್ ಗೆ ಸೋಲು ಖಚಿತ – ರಾಹುಲ್ ಟೀಕಿಸಿದ ಅಮಿತ್ ಶಾ

ದೀಪಾವಳಿಯು ಕತ್ತಲೆಯ ಮೇಲೆ ಬೆಳಕಿನ ಗೆಲುವಿನ ಸಂಕೇತವಾಗಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಎಲ್ಲರೂ ಆರೋಗ್ಯಕರವಾಗಿ ಹಬ್ಬ ಆಚರಿಸಲಿ ಎಂಬ ಉದ್ದೇಶದಿಂದಲೇ ಈ ವಿಡಿಯೋ ಮಾಡಲಾಗಿತ್ತು ಎಂದು ದಿಯಾ ಮಿರ್ಜಾ ಸ್ಪಷ್ಟಪಡಿಸಿದ್ದಾರೆ. ಈ ಜಾಗೃತಿ ವಿಡಿಯೋದಲ್ಲಿ ಮಾಧುರಿ ದೀಕ್ಷಿತ್ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ ಕೂಡ ಭಾಗವಹಿಸಿದ್ದರು. ಆದರೆ ಇತರರ ವಿಡಿಯೋಗಳನ್ನು ಉಳಿಸಿಕೊಂಡು ದಿಯಾ ಮಿರ್ಜಾ ಅವರದ್ದನ್ನು ಮಾತ್ರ ತೆಗೆದುಹಾಕಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಟಾಕಿ ವಿಚಾರದಲ್ಲಿ ಸೋನಿ ರಜ್ದಾನ್ ಬಳಸಿದ ದೇಶವಿರೋಧಿ ಎಂಬ ಪದವೇ ಈಗ ಚರ್ಚೆಯ ಕೇಂದ್ರಬಿಂದುವಾಗಿದೆ. ಪರಿಸರ ಕಾಳಜಿಯನ್ನು ವ್ಯಕ್ತಪಡಿಸಲು ಇಂತಹ ತೀಕ್ಷ್ಣ ಪದಗಳ ಬಳಕೆ ಅಗತ್ಯವಿತ್ತೇ ಎಂಬುದು ಒಂದು ಕಡೆ ಚರ್ಚೆಯಾದರೆ, ಹಬ್ಬದ ಆಚರಣೆಯ ಹೆಸರಿನಲ್ಲಿ ಮಕ್ಕಳ ಆರೋಗ್ಯವನ್ನು ಬಲಿಕೊಡುವುದು ಸರಿಯೇ ಎಂಬುದು ಮತ್ತೊಂದು ಕಡೆ ಪ್ರಶ್ನೆಯಾಗಿದೆ. ಹಬ್ಬದ ಸಂಭ್ರಮ ಮತ್ತು ಆರೋಗ್ಯದ ರಕ್ಷಣೆಯ ನಡುವೆ ಸಮತೋಲನ ಸಾಧಿಸುವುದು ಈಗ ಎಲ್ಲರ ಮುಂದಿರುವ ಸವಾಲಾಗಿದೆ.