ಆಧುನಿಕ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಕಲುಶಿತ ಗಾಳಿ, ನೀರು, ಕಲಬೆರೆಕೆ ಆಹಾರ, ವೃತ್ತಿಯಲ್ಲಿ ಒತ್ತಡ ಹೀಗೆ ಅನಾರೋಗ್ಯಕ್ಕೆ ಹಲವಾರು ಕಾರಣಗಳು ನಮ್ಮ ಸುತ್ತಲೂ ಇವೆ. ಆದರೆ ಆರೋಗ್ಯ ಕಾಪಾಡಿಕೊಳ್ಳುವುದು ಈ ಸಮಯದಲ್ಲಿ ಬಲು ದುಬಾರಿ ಬಾಬತ್ತಿನ ವಿಷಯವಾಗಿದೆ. ಆಸ್ಪತ್ರೆಗಳು, ಮೆಡಿಕಲ್ ಚೆಕಪ್ಪುಗಳು, ಔಷಧಿಗಳು, ಸಪ್ಲಿಮೆಂಟುಗಳು ಹಿಂದೆಂದಿಗಿಂತಲೂ ಬಲು ದುಬಾರಿ ಆಗಿವೆ. ಆದರೆ ನೀವು ಮನೆಯಲ್ಲೇ ಕೂತು, ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ಪಡೆಯಬಹುದು, ಅದೂ ಉಚಿತವಾಗಿ.
ಯಾವುದೇ ವ್ಯಕ್ತಿಯು ತನ್ನ ಆರೋಗ್ಯದ ಬಗ್ಗೆ ಒಂದು ‘ಸಾಮಾನ್ಯ’ ಮಾಹಿತಿಯನ್ನು ಮನೆಯಲ್ಲೇ ಕೂತು ಪಡೆಯಬಹುದು. ಮಾತ್ರವಲ್ಲದೆ ಹೀಗೆ ಉಚಿತವಾಗಿ ಪಡೆಯುವ ಆರೋಗ್ಯ ಮಾಹಿತಿ ವಿಧಾನವನ್ನು ವಿಶ್ವದಾದ್ಯಂತ ವೈದ್ಯರು ಮತ್ತು ಮೆಡಿಕಲ್ ಕೌನ್ಸಿಲ್ಗಳು ಅಂಗೀಕರಿಸುತ್ತವೆ. ಮತ್ತು ಬಳಸುತ್ತವೆ ಸಹ. ಈ ವಿಧಾನವನ್ನು ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) (BMI Calculator) ಎನ್ನಲಾಗುತ್ತದೆ.
ಬಿಎಂಐ, ವ್ಯಕ್ತಿಯ ದೇಹದಲ್ಲಿ ಎಷ್ಟು ಕೊಬ್ಬಿನ ಅಂಶ ಇದೆ ಎಂಬುದನ್ನು ಯಾವುದೇ ಪರೀಕ್ಷೆಗಳ ನೆರವು ಇಲ್ಲದೆ ಪತ್ತೆ ಮಾಡುತ್ತದೆ. ಈ ಬಿಎಂಐ ಸೂತ್ರವನ್ನು ವಿಶ್ವದಾದ್ಯಂತ ಬಳಸಲಾಗುತ್ತದೆ. ಬಿಎಂಐ ಕಂಡು ಹಿಡಿಯಲು ಬೇಕಾಗಿರುವುದು ವ್ಯಕ್ತಿಯ ವಯಸ್ಸು, ತೂಕ ಮತ್ತು ಎತ್ತರ ಇಷ್ಟೆ. ಇದರಿಂದ ಆ ವ್ಯಕ್ತಿಯಲ್ಲಿ ಎಷ್ಟು ಕೊಬ್ಬಿನ ಅಂಶವಿದೆ, ಆತನ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಅಂದಾಜು ದೊರಕಿ ಬಿಡುತ್ತದೆ.
BMI Calculator :ಬಿಎಂಐ ಲೆಕ್ಕಾಚಾರ ಹೇಗೆ?
ಬಿಎಂಐ ಅನ್ನು ಲೆಕ್ಕಾಚಾರ ಹಾಕುವುದು ಬಹಳ ಸುಲಭ. ವ್ಯಕ್ತಿಯ ತೂಕವನ್ನು ಆ ವ್ಯಕ್ತಿಯ ಎತ್ತರದ ಎರಡು ಪಟ್ಟಿನಿಂದ ಭಾಗಿಸಬೇಕು. ಸೂತ್ರದ ಮೂಲಕ ಹೇಳುವುದಾದರೆ ಬಿಎಂಐ= ತೂಕ/(ಎತ್ತರ)2. ಈ ಸೂತ್ರದ ಮೂಲಕ ಲೆಕ್ಕ ಹಾಕಿದರೆ ಸಿಗುವ ಸಂಖ್ಯೆಯಲ್ಲಿ ವ್ಯಕ್ತಿಯ ಆರೋಗ್ಯದ ಗುಟ್ಟು ಅಡಗಿರುತ್ತದೆ. ಆನ್ಲೈನ್ನಲ್ಲಿ ಹಲವಾರು ಬಿಎಂಐ ಕ್ಯಾಲ್ಕುಲೇಟರ್ಗಳು ಉಚಿತವಾಗಿ ಲಭ್ಯವಿವೆ. ಆ ಕ್ಯಾಲ್ಕುಲೇಟರ್ ಗೆ ನಿಮ್ಮ ತೂಕ, ಎತ್ತರ, ವಯಸ್ಸಿನ ಮಾಹಿತಿ ಕೊಟ್ಟರೆ ಅದೇ ಲೆಕ್ಕ ಹಾಕಿ ಮಾಹಿತಿ ನೀಡುತ್ತದೆ.
ಬಿಎಂಐ ಹೇಳುವುದೇನು?
ನಿಮ್ಮ ಬಿಎಂಐ 18.5 ಕ್ಕಿಂತಲೂ ಕಡಿಮೆ ಬಂತೆಂದರೆ ನಿಮಗೆ ಅನೀಮಿಯಾ, ದುರ್ಬಲ ರೋಗನಿರೋಧಕ ಶಕ್ತಿ, ಅಗತ್ಯ ನ್ಯೂಟ್ರೀಯೆಂಟ್ಸ್ಗಳ ಕೊರತೆ ಇದೆಯೆಂದು ಅರ್ಥ. ಒಂದೊಮ್ಮೆ ನಿಮ್ಮ ಬಿಎಂಐ 18 ರಿಂದ 25ರ ಒಳಗೆ ಬಂದಂತೆ ಆರೋಗ್ಯವಾಗಿದ್ದೀರೆಂದು ಅರ್ಥ. ಒಂದೊಮ್ಮೆ 25 ರಿಂದ 30ರ ಒಳಗೆ ಬಂತೆಂದರೆ ಅನಾರೋಗ್ಯದ ಕಡೆಗೆ ವಾಲುತ್ತಿದ್ದೀರಿ, ಫ್ಯಾಟ್ ಅಂಶ ಹೆಚ್ಚಾಗುತ್ತಿದೆ. ರಕ್ತದೊತ್ತಡ ಹೆಚ್ಚಾಗಿದೆ, ಡಯಾಬಿಟೀಸ್ಗೆ ಹತ್ತಿರ ಆಗುತ್ತಿದ್ದೀರ ಎಂದರ್ಥ. ಒಂದೊಮ್ಮೆ 30 ರಿಂದ 40 ಒಳಗೆ ಬಿಎಂಐ ಬಂದರೆ ನೀವು ಒಬೀಸ್ ಆಗಿದ್ದೀರಿ, ಕೂಡಲೇ ನಿಮಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆಯೆಂದು ಅರ್ಥ.
ಈ ಬಿಎಂಐ ಮಾಹಿತಿಯನ್ನು ವಿಶ್ವದಾದ್ಯಂತ ಬಳಸಲಾಗುತ್ತದೆ. ಆರೋಗ್ಯದ ಬಗ್ಗೆ ಅಂದಾಜು ಮಾಹಿತಿ ಪಡೆಯುವ ಸಾಧನ ಈ ಬಿಎಂಐ. ವಿಶ್ವದಾದ್ಯಂತ ಇದನ್ನು ಬಳಸಲಾಗುತ್ತದೆ. ಆನ್ಲೈನ್ನಲ್ಲಿ ಹಲವಾರು ಬಿಎಂಐ ಕ್ಯಾಲ್ಕುಲೇಟರ್ಗಳು ಲಭ್ಯವಿವೆ. ಜೊತೆಗೆ ಯಾವುದೇ ಎಐಗೆ ಸಹ ನಿಮ್ಮ ತೂಕ, ಎತ್ತರ, ವಯಸ್ಸು, ಲಿಂಗ ಹೇಳಿದರೆ ಅದೇ ನಿಮ್ಮ ಬಿಎಂಐ ಪತ್ತೆ ಮಾಡಿ ಸಲಹೆಗಳನ್ನು ಸಹ ನೀಡುತ್ತದೆ.




