ಹೊಸ ಆಪಲ್ ಐಫೋನ್: ಯಾವ ದೇಶದಲ್ಲಿ ಎಷ್ಟು ಬೆಲೆ?

ವಿಶ್ವದ ದೈತ್ಯ ಸ್ಮಾರ್ಟ್​​ಫೋನ್ ತಯಾರಿಕಾ ಸಂಸ್ಥೆಯಾಗಿರುವ ಆಪಲ್ ತನ್ನ ಹೊಸ ಐಫೋನ್ ಆಗಿರುವ ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್ ಮತ್ತು ಐಫೋನ್ ಡ್ಯುಯೊ (ಫೋಲ್ಡೆಬಲ್) ಅನ್ನು ಲಾಂಚ್ ಮಾಡಿದೆ. ಕಳೆದ ಹತ್ತು ವರ್ಷಗಳಿಂದಲೂ ಟಿಮ್ ಕುಕ್ ನೇತೃತ್ವದಲ್ಲಿ ಆಪಲ್ ತನ್ನ ಹೊಸ ಐಫೋನ್ ಲಾಂಚ್ ಮಾಡುತ್ತಾ ಬಂದಿತ್ತು. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಜಾನ್ ಟೆರ್ನಸ್ ಆಪಲ್ ಸಂಸ್ಥೆಯ ಹೊಸ ಸಿಇಓ ಆಗಿ ನೇಮಕ ಆಗಿದ್ದರು. ಅವರ ನೇತೃತ್ವದಲ್ಲಿ ಬಿಡುಗಡೆ ಆದ ಮೊದಲ ಐಫೋನ್ ಇದಾಗಿದೆ.

ಈಗ ಲಾಂಚ್ ಆಗಿರುವ ಆಪಲ್ ಡಿವೈಸ್​​ಗಳಲ್ಲಿ ಐಫೋನ್ ಡಿಯೋ ಬಹಳ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಆಪಲ್ ಸಂಸ್ಥೆಯು ಫೋಲ್ಡೆಬಲ್ ಫೋನನ್ನು ತಯಾರಿಸಿ ಬಿಡುಗಡೆ ಮಾಡಿದೆ. ಸ್ಯಾಮ್​​ಸಂಗ್ ಬಹಳ ವರ್ಷಗಳ ಹಿಂದೆಯೇ ಫೋಲ್ಡೆಬಲ್ ಫೋನನ್ನು ಬಿಡುಗಡೆ ಮಾಡಿತ್ತು. ಆದರೆ ಈಗ ಆಪಲ್ ಸಂಸ್ಥೆ, ಇನ್ನಷ್ಟು ಉನ್ನತೀಕರಿಸಿದ ಫೋಲ್ಡೆಬಲ್ ಫೋನನ್ನು ಬಿಡುಗಡೆ ಮಾಡಿದೆ. ಆದರೆ ಇದರ ಬೆಲೆ ಆಪಲ್​​ನ ಎಲ್ಲ ಫೋನುಗಳಿಗಿಂತಲೂ ಬಹಳ ದುಬಾರಿ ಆಗಿದೆ. ವಿಶೇಷವಾಗಿ ಭಾರತದಲ್ಲಿ ಈ ಫೋನಿನ ಬೆಲೆ ತುಸು ಹೆಚ್ಚೇ ಇದೆ. ಅಮೆರಿಕದಲ್ಲಿ 1999 ಡಾಲರ್ ಇರುವ ಐಫೋನ್ ಡ್ಯುಯೊ ಭಾರತದಲ್ಲಿ ಸುಮಾರು 3 ಲಕ್ಷ ರೂಪಾಯಿ ಇದೆ. ಅಂದರೆ ಅಮೆರಿಕೆದಲ್ಲಿ ಭಾರತಕ್ಕಿಂತಲೂ 1.10 ಲಕ್ಷ ರೂಪಾಯಿ ಕಡಿಮೆ ಬೆಲೆಗೆ ಸಿಗಲಿದೆ. ಅಮೆರಿಕ ಮಾತ್ರವೇ ಅಲ್ಲದೆ ವಿಶ್ವದ ಹಲವು ಪ್ರಮುಖ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಹೊಸ ಐಫೋನ್ ಬೆಲೆ ಬಲು ದುಬಾರಿ. ಭಾರತದಲ್ಲಿಯೇ ತಯಾರಾದರೂ ಸಹ ಇಲ್ಲಿ ಬೆಲೆ ದುಬಾರಿ ಆಗಿಯೇ ಇದೆ.

ಪ್ರಮುಖ ದೇಶಗಳಲ್ಲಿ ಐಫೋನ್ ಡ್ಯುಯೊ (250 ಜಿಬಿ) ಬೆಲೆ

ದೇಶಬೆಲೆಭಾರತೀಯ ರೂಪಾಯಿಯಲ್ಲಿ
ಅಮೆರಿಕ1999 ಡಾಲರ್1.90 ಲಕ್ಷ ರೂ.
ಭಾರತ2.99 ಲಕ್ಷ 2.99 ಲಕ್ಷ ರೂ.
ದುಬೈ8499 ದಿರಮ್2.20 ಲಕ್ಷ ರೂ.
ಕೆನಡಾ2999 ಕ್ಯಾಡ್2.06 ಲಕ್ಷ ರೂ.
ಜಪಾನ್3.64 ಲಕ್ಷ ಯೆನ್2.27 ಲಕ್ಷ ರೂ.
ಹಾಂಕಾಂಗ್17499 ಎಚ್​​ಕೆಡಿ2.12 ಲಕ್ಷ ರೂ.
ಚೀನಾ15999 ಯುವಾನ್2.27 ಲಕ್ಷ ರೂ.
ಸಿಂಗಪೂರ್3099 ಎಸ್​​ಡಿ2.33 ಲಕ್ಷ ರೂ.
ಬ್ರಿಟನ್1999 ಪೌಂಡ್2.57 ಲಕ್ಷ ರೂ.
ಜರ್ಮನಿ2299 ಯೂರೊ2.54 ಲಕ್ಷ ರೂ.
ಪಾಕಿಸ್ತಾನ5.54 ಲಕ್ಷ ಪಾಕ್ ರೂಪಾಯಿ1.89 ಲಕ್ಷ ರೂ.