☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113
☔ Weather
Bengaluru: ☀️ 24°C | AQI 113
Mysore: ☀️ 22°C | AQI 110
Mangalore: ☀️ 27°C | AQI 172
Bengaluru: ☀️ 24°C | AQI 113

ಕರ್ನಾಟಕದ ಏಕೀಕರಣ – ಕಲ್ಯಾಣ ಕರ್ನಾಟಕ

  • ಕರ್ನಾಟಕ (ಈ ಸಂಸ್ಥಾನದಲ್ಲಿ ಬೀದರ ಕೂಡಾ ಸೇರ್ಪಡೆಯಾಗಿತ್ತು) ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳು ಇದ್ದು, ಆ ಎಲ್ಲ ಸಂಸ್ಥಾನಗಳನ್ನು ರಾಜ ಮಹಾರಾಜರು, ಅವರ ಮಾಂಡಲೀಕರು ಆಳುತಿದ್ದರು. ಬ್ರಿಟೀಷರು ಈ ದೇಶ ಬಿಟ್ಟು ಹೋಗುವಾಗ ಆ ಎಲ್ಲ ಸಂಸ್ಥಾನಗಳಿಗೆ ಒಂದು ಆಹ್ವಾನವನ್ನು ನೀಡಿದ್ದರು.
  • ಯಾವುದೇ ಸಂಸ್ಥಾನಗಳು ತಾವು ಇಚ್ಚೆಪಟ್ಟರೇ ಭಾರತ ಒಕ್ಕೂಟದಲ್ಲಿ ಸೇರಬಹುದು ಅಥವಾ ಪಾಕಿಸ್ತಾನಕ್ಕೆ ಸೇರಬಹುದು ಇಲ್ಲದಿದ್ದರೆ ಪ್ರತ್ಯೇಕವಾಗಿ ಉಳಿಯಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ರಾಜರಲ್ಲೇ ಅಧಿಕಾರದ ಆಸೆ ಬಿತ್ತಿ ಹೋದರು.
  • ಈ ಹಿನ್ನಲೆಯಲ್ಲಿ ಭಾರತದ ಅವಿಭಾಜ್ಯ ಅಂಗವಾಗಿರುವ ಜಮು-ಕಾಶ್ಮೀರದ ರಾಜ ಹರಿಸಿಂಗ್, ಪಂಜಾಬ್ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್ ಮಹಾಬಾತ್ ಕಣಜಿ-ಖಖಖ ಹಾಗೂ ಹೈದ್ರಾಬಾದ ಸಂಸ್ಥಾನದ ನಿಜಾಮರಾದ ಮೀರ್ ಉಸ್ಮಾನ ಅಲೀ ಖಾನ ಇವರುಗಳು ಆಗಸ್ಟ್ 15, 1947 ರಂದು ಭಾರತ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ಪ್ರತ್ಯೇಕವಾಗಿ ಉಳಿಯಲು ನಿರ್ದರಿಸಿದರು.
  • ಕಾಲ ಕ್ರಮೇಣ ಜಮ್ಮು ಕಾಶ್ಮೀರ ಸಂಸ್ಥಾನವು ಕೆಲವು ಶರತ್ತುಗಳನ್ನು ಒಡ್ಡಿ ಸಂವಿಧಾನದ ಅನುಛ್ಚೇದ 370ರ ಅಡಿಯಲ್ಲಿ ರಕ್ಷಣೆಯನ್ನು ಪಡೆದು ಭಾರತ ಒಕ್ಕೂಟದಲ್ಲಿ ಸೇರಿತು.ಅದೇ ರೀತಿ ಜುನಾಗಡ ಸಂಸ್ಥಾನವುಕೂಡ 24 ನೇ ಫೆಬ್ರವರಿ 1948ರಂದು ಭಾರತ ಒಕ್ಕೂಟದಲ್ಲಿ ಸೇರಲು ಒಪ್ಪಿಕೂಂಡಿತು.
  • ಆದರೆ ಹೈದ್ರಾಬಾದ ಸಂಸ್ಥಾನದ ನಿಜಾಮರು ಪ್ರತ್ಯೇಕವಾಗಿ ಉಳಿಯುವ ಯೋಚನೆಯೂಂದಿಗೆ ಭಾರತ ಸರಕಾರಕ್ಕೆ ಒಂದು ವರ್ಷಗಳ ಕಾಲವಕಾಶವನ್ನು ‘ಶ್ಡ್ಯಾಂಡ್ ಸ್ಡಿಲ್ ಅಗ್ರೀಮೆಂಟ್’ ಮುಖಾಂತರ ಕೋರಿದರು. ಹಾಗಾಗಿ ಇಡೀ ದೇಶಕ್ಕೆ 15 ಆಗಷ್ಟ್ 1947 ರಂದು ಸ್ವಾತಂತ್ರ್ಯ ಸಿಕ್ಕರೂ ಈ ಸಂಸ್ಥಾನದ ಜನರಿಗೆ ಆ ಭಾಗ್ಯ ದೊರೆಯಲಿಲ್ಲ.
  • ಆಗಸ್ಟ್ 15,1947 ರಂದು ದೇಶದಲ್ಲೆಡೆ ಜನ ಭಾರತದ ತ್ರೀವರ್ಣ ದ್ವಜವನ್ನು ಹಾರಿಸುತ್ತ ಸ್ವಾತಂತ್ರ್ಯದ ಸಂತೋಷವನ್ನು ಅನುಭವಿಸುತ್ತಿದ್ದರೆ, ಹೈದ್ರಾಬಾದ ರಾಜ್ಯದ ಪ್ರಜೆಗಳು ಅದನ್ನು ನೋಡುತ್ತ ತಮಗಾದ ನೋವನ್ನು ನುಂಗಿಕೂಂಡು ಕುಳಿತರು. ಇದರಿಂದ ಈ ಸಂಸ್ಥಾನದ ಜನರು ಮತ್ತೂಂದು ಸ್ವತಂತ್ರ್ಯ ಸಂಗ್ರಾಮಕ್ಕೆ ತಯಾರಾಗುವದು ಅನಿವಾರ್ಯವಾಯಿತು.
  • ಈ ಪ್ರದೇಶದ ಅನೇಕ ರಾಷ್ಟ್ರೀಯ ನಾಯಕರು ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ಸೇರಿಸಬೇಕು ಎಂದು ಎಲ್ಲ ರೀತಿಯ ಹೋರಾಟ ಮಾಡುತ್ತ ಬಂದರು, ಆ ಹೋರಾಟದ ಫಲವಾಗಿ ಹೈದ್ರಾಬಾದ ಸಂಸ್ಥಾನವನ್ನು ಭಾರತ ಸರಕಾರ ಪೋಲಿಸ್ ಕಾರ್ಯಚರಣೆಯನ್ನು ‘ಆಪರೇಶನ್ ಪೋಲೋ’ ಎಂಬ ಹೆಸರಿನಿಂದ 13-09-1948 ರಂದು ಪ್ರಾರಂಭಿಸಿ ಕೇವಲ ನಾಲ್ಕುದಿನಗಳಲ್ಲಿ 19-09-1948 ರಂದು ಹೈದ್ರಾಭಾದ ನಗರಕ್ಕೆ ಮುತ್ತಿಗೆ ಹಾಕಲಾಯಿತು