☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

RRB Recruitment 2026: 3,548 ಪದವೀಧರ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಂತಿಮ ದಿನಾಂಕ ಯಾವಾಗ?

RRB Recruitment 2026: Apply Online for 3548 Graduate Posts

RRB Recruitment 2026: ಕೇಂದ್ರ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಯುವಜನತೆಗೆ ರೈಲ್ವೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿಯು (RRB) ನಾನ್-ಟೆಕ್ನಿಕಲ್ ಪಾಪ್ಯುಲರ್ ಕ್ಯಾಟಗರಿ (NTPC) ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಚಾಲನೆ ನೀಡಿದೆ.

ಈ ಬಾರಿಯ ನೇಮಕಾತಿಯಲ್ಲಿ ಒಟ್ಟು ಹುದ್ದೆಗಳ ಸಂಖ್ಯೆಯನ್ನು 3,548 ಕ್ಕೆ ಹೆಚ್ಚಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಕುರಿತಾದ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.

ಯಾವ ಯಾವ ಹುದ್ದೆಗಳು ಲಭ್ಯವಿವೆ?

ನೇಮಕಾತಿಯಲ್ಲಿ ದೇಶಾದ್ಯಂತ ಒಟ್ಟು 3,548 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅವುಗಳ ವಿವರ ಹೀಗಿದೆ:

  • ಗೂಡ್ಸ್ ಟ್ರೈನ್ ಮ್ಯಾನೇಜರ್: 2,750 ಹುದ್ದೆಗಳು
  • ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್: 371 ಹುದ್ದೆಗಳು
  • ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್: 300 ಹುದ್ದೆಗಳು
  • ಚೀಫ್ ಕಮರ್ಷಿಯಲ್-ಕಮ್-ಟಿಕೆಟ್ ಸೂಪರ್‌ವೈಸರ್: 127 ಹುದ್ದೆಗಳು

ಬೆಂಗಳೂರು ಆರ್‌ಆರ್‌ಬಿ (RRB Bengaluru) ವಲಯ ಒಂದಕ್ಕೇ ಒಟ್ಟು 346 ಹುದ್ದೆಗಳು ಮೀಸಲಾಗಿವೆ. ಇದರಲ್ಲಿ ಗೂಡ್ಸ್ ಟ್ರೈನ್ ಮ್ಯಾನೇಜರ್ 301, ಸೀನಿಯರ್ ಕ್ಲರ್ಕ್ 32, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ 10 ಹಾಗೂ ಚೀಫ್ ಕಮರ್ಷಿಯಲ್ ಸೂಪರ್‌ವೈಸರ್ 3 ಹುದ್ದೆಗಳಿವೆ.

ವಯೋಮಿತಿ ಮತ್ತು ಶೈಕ್ಷಣಿಕ ಅರ್ಹತೆ

01 ಜನವರಿ 2027 ರ ವೇಳೆಗೆ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ರಿಂದ ಗರಿಷ್ಠ 33 ವರ್ಷಗಳ ಒಳಗಿರಬೇಕು. ನಿಯಮಾವಳಿ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಸಿಗಲಿದೆ.

ಅರ್ಜಿ ಶುಲ್ಕದ ವಿವರ

ಸಾಮಾನ್ಯ, ಒಬಿಸಿ ಮತ್ತು EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹500 ನಿಗದಿಪಡಿಸಲಾಗಿದೆ. CBT-1 ಪರೀಕ್ಷೆಗೆ ಹಾಜರಾದ ನಂತರ ಇದರಲ್ಲಿ ₹400 ರೀಫಂಡ್ ಆಗಲಿದೆ.

ಎಸ್‌ಸಿ, ಎಸ್‌ಟಿ, ಮಹಿಳೆಯರು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ₹250 ಇರಲಿದೆ. ಮೊದಲ ಹಂತದ ಪರೀಕ್ಷೆ ಬರೆದ ನಂತರ ಈ ಪೂರ್ಣ ಹಣ ಹಿಂತಿರುಗಿಸಲಾಗುತ್ತದೆ.

RRB Recruitment 2026: ಆಯ್ಕೆ ಪ್ರಕ್ರಿಯೆ ಮತ್ತು ಪ್ರಮುಖ ದಿನಾಂಕಗಳು

ಈ ಬಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಟೈಪಿಂಗ್ ಅಥವಾ ಆಪ್ಟಿಟ್ಯೂಡ್ ಟೆಸ್ಟ್ ತೆಗೆದುಹಾಕಲಾಗಿದೆ.

ಆಯ್ಕೆಯು CBT 1 ಮತ್ತು CBT 2 ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಮೂಲಕ ನಡೆಯಲಿದೆ. ಎರಡೂ ಪರೀಕ್ಷೆಗಳಲ್ಲಿ 1/3 ನೆಗೆಟಿವ್ ಅಂಕಗಳಿರುತ್ತವೆ.

ಅರ್ಜಿ ಸಲ್ಲಿಕೆ ಅಕ್ಟೋಬರ್ 8, 2026 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 6, 2026 ಕೊನೆಯ ದಿನವಾಗಿದೆ. ಆಸಕ್ತರು RRB ಯ ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು.