☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Daily Horoscope: ಇಂದು ಸ್ತ್ರೀಯರ ಜೊತೆ ವಾಗ್ವಾದ ಬೇಡ; ನಕಾರಾತ್ಮಕ ಪರಿಣಾಮ ಬೀರಬಹುದು

Daily Horoscope: Today Rashifal and Zodiac Predictions

Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿಯ ಶನಿವಾರದ ಈ ದಿನ ದುಡುಕಿನ ನಿರ್ಧಾರಗಳು, ಅಪ್ರಶಂಸೆಯಿಂದ ಬೇಸರ, ಸ್ನೇಹದಿಂದಲೇ ಶತ್ರುತ್ವ, ಅಹಂಕಾರಕ್ಕೆ ಸೋಲು ಹಾಗೂ ವ್ಯವಹಾರ ಮುಂದೂಡಿಕೆಗಳು ಎದುರಾಗಲಿವೆ. ಎಚ್ಚರಿಕೆಯಿಂದ ದಿನ ಕಳೆಯುವುದು ಒಳಿತು.

ಇಂದಿನ ಚಾಂದ್ರಮಾನ ಭಾದ್ರಪದ, ಸೌರಮಾನ ಕನ್ಯಾ ಮಾಸ, ಹಸ್ತಾ ಮಹಾನಕ್ಷತ್ರ ಹಾಗೂ ಹಸ್ತಾ ನಿತ್ಯನಕ್ಷತ್ರಗಳ ಶುಭ ಸಂಯೋಗವಿದೆ. ಐಂದ್ರ ಯೋಗ ಮತ್ತು ನಾಗವಾನ್ ಕರಣವಿದ್ದು, ಸೂರ್ಯೋದಯ ಬೆಳಿಗ್ಗೆ 06:10ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 06:02ಕ್ಕೆ ಆಗಲಿದೆ.

ಇಂದಿನ ಶುಭಾಶುಭ ಕಾಲಗಳನ್ನು ಗಮನಿಸುವುದಾದರೆ, ರಾಹು ಕಾಲ ಬೆಳಿಗ್ಗೆ 09:08 ರಿಂದ 10:38 ರವರೆಗೆ ಇರುತ್ತದೆ. ಯಮಗಂಡ ಕಾಲ ಮಧ್ಯಾಹ್ನ 01:36 ರಿಂದ 05:05 ಹಾಗೂ ಗುಳಿಕ ಕಾಲ ಬೆಳಿಗ್ಗೆ 06:10 ರಿಂದ 07:39 ರವರೆಗೆ ಇರಲಿದೆ.

ಮೇಷ ರಾಶಿ

ಅವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ವಿರೋಧಿಗಳಿಂದ ಕಿರಿಕಿರಿ ಮುಂದುವರಿಯಲಿದೆ. ಹಣ ವ್ಯರ್ಥವಾಗುವ ಸಾಧ್ಯತೆಯಿದ್ದು, ಕಾನೂನು ತೀರ್ಪು ಪೂರ್ಣ ಸಮಾಧಾನ ನೀಡುವುದಿಲ್ಲ. ಉದ್ಯೋಗ ಬದಲಾವಣೆಗೆ ಯೋಚಿಸುವಿರಿ.

ವೃಷಭ ರಾಶಿ

ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ಸಮಾರಂಭಗಳಿಗೆ ಆಹ್ವಾನ ಸಿಗಲಿದೆ. ಸಮಯ ಪಾಲನೆಯಲ್ಲಿ ನಿಷ್ಠುರರಾಗಿರಿ. ಕೆಲಸದಲ್ಲಿ ತೊಡಕಾದರೆ ಸಹೋದ್ಯೋಗಿಗಳ ಸಹಾಯ ಪಡೆಯಿರಿ. ವೃತ್ತಿ ಸ್ಥಳದಲ್ಲಿ ಉತ್ತಮ ಪ್ರದರ್ಶನ ನೀಡುವಿರಿ.

ಮಿಥುನ ರಾಶಿ

ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಭೋಗವಸ್ತುಗಳಿಂದ ಧನನಷ್ಟವಾಗಬಹುದು. ಪ್ರಯಾಣದಿಂದ ಆಯಾಸವಿರುತ್ತದೆ. ತಾಯಿಯೊಂದಿಗೆ ವಿವಾಹ ವಿಚಾರವಾಗಿ ಕಲಹ ಸಂಭವಿಸಬಹುದು. ಸಮಯವನ್ನು ಸರಿಯಾಗಿ ಯೋಜಿಸಿ ಬಳಸಿ.

ಕರ್ಕಾಟಕ ರಾಶಿ

ಅಧಿಕ ತಿರುಗಾಟದಿಂದ ಉತ್ಸಾಹ ಕುಗ್ಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕೆಲಸದ ಮೇಲೆ ಹೆಚ್ಚಿನ ಗಮನವಿರಲಿದೆ. ಸ್ಥಿರಾಸ್ತಿ ವಿಚಾರದಲ್ಲಿ ಮಧ್ಯಪ್ರವೇಶವಾಗಬಹುದು. ದೂರದ ಬಂಧುಗಳ ಭೇಟಿಯಾಗಲಿದ್ದು, ಜಾಣ್ಮೆಯಿಂದ ವರ್ತಿಸಿ.

ಸಿಂಹ ರಾಶಿ

ಉಳಿಸಿಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದರ ಬಗ್ಗೆಯೇ ಹೆಚ್ಚು ಯೋಚಿಸುವಿರಿ. ಮನೆಯ ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡುವಿರಿ. ವಿವಾಹ ವಿಳಂಬಕ್ಕೆ ಹಲವು ಕಾರಣಗಳಿರಬಹುದು. ಉತ್ತಮ ಭೂಮಿ ಖರೀದಿಸಲು ಮುಂದಾಗುವಿರಿ.

ಕನ್ಯಾ ರಾಶಿ

ಮಹಿಳಾ ಕಲಾವಿದರಿಗೆ ಪ್ರಶಂಸೆ ಸಿಗಲಿದೆ. ಸಾಲದ ಬಾಧೆ ಕಡಿಮೆ ಮಾಡಲು ಹಣ ಸಂಗ್ರಹಿಸುವಿರಿ. ಮರೆವಿನಿಂದ ಉದ್ಯೋಗದಲ್ಲಿ ಹಿನ್ನಡೆಯಾಗಬಹುದು. ವಿವಾಹ ಯೋಗ ಕೂಡಿಬಂದಿದ್ದು, ಕೃಷಿ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.

ತುಲಾ ರಾಶಿ

ಎಲ್ಲರ ಮೆಚ್ಚುಗೆ ಗಳಿಸುವಿರಿ. ಹಿರಿಯರ ಮಾತು ಕೇಳಿ ತೊಂದರೆಯಿಂದ ಪಾರಾಗಿ. ಇಷ್ಟವಸ್ತುಗಳನ್ನು ಖರೀದಿಸುವ ಸುದಿನವಿದು. ಹಣ ಸಂಪಾದನೆಗೆ ಆರಿಸಿಕೊಂಡ ಮಾರ್ಗ ಸರಿಯೆನಿಸದೆ ಇರಬಹುದು. ಜಾಗರೂಕರಾಗಿರಿ.

ವೃಶ್ಚಿಕ ರಾಶಿ

ಹಿತಶತ್ರುಗಳಿಂದ ಧನನಷ್ಟವಾಗಬಹುದು. ಉದ್ಯೋಗದ ಹೆಚ್ಚಿದ ಜವಾಬ್ದಾರಿಯಿಂದ ಕುಟುಂಬಕ್ಕೆ ಸಮಯ ನೀಡಲು ಕಷ್ಟವಾಗಲಿದೆ. ರಕ್ಷಣಾ ವ್ಯವಸ್ಥೆಯಲ್ಲಿರುವವರಿಗೆ ಎಚ್ಚರವಿರಲಿ. ಸ್ನೇಹಿತರೊಂದಿಗೆ ಮೋಜಿನಲ್ಲಿ ಕಾಲ ಕಳೆಯುವಿರಿ.

ಧನು ರಾಶಿ

ಹೊಸ ಯೋಜನೆಗಳನ್ನು ನಿಮ್ಮದಾಗಿಸಿಕೊಳ್ಳುವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಕಾಡಬಹುದು. ಬೇರೆಯವರ ಮೇಲಿನ ಸಿಟ್ಟನ್ನು ಇನ್ಯಾರದೋ ಮೇಲೆ ತೋರಿಸಬೇಡಿ. ಹೂಡಿಕೆಯಿಂದ ನಿರೀಕ್ಷಿತ ಆದಾಯ ಸಿಗದು.

ಮಕರ ರಾಶಿ

ಇಂದಿನ ವಿಫಲತೆ ನಿಮಗೆ ಹೊಸ ಛಲ ತರಲಿದೆ. ಕಚೇರಿಯಲ್ಲಿ ಒತ್ತಡವಿದ್ದರೂ ಆರಾಮಾಗಿ ಇರುವಿರಿ. ಮಾತಿನಿಂದ ಎಲ್ಲರ ಮನಸ್ಸು ಗೆಲ್ಲುವಿರಿ. ಕೋಪವನ್ನು ಮಕ್ಕಳ ಮೇಲೆ ತೋರಿಸಬೇಡಿ. ಅಪವಾದಗಳನ್ನು ನಿರ್ಲಕ್ಷಿಸಿ.

ಕುಂಭ ರಾಶಿ

ವ್ಯಾಪಾರದಲ್ಲಿ ಲಾಭ ಕೊಂಚ ಕಡಿಮೆಯಿರಲಿದೆ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಹೆಚ್ಚಲಿದೆ. ಅಧಿಕ ಒತ್ತಡದಿಂದ ಆರೋಗ್ಯ ಹದಗೆಡಬಹುದು. ರಹಸ್ಯಗಳನ್ನು ಎಲ್ಲರ ಬಳಿ ಹೇಳಿಕೊಳ್ಳಬೇಡಿ. ನೇರ ಮಾತಿನಿಂದ ವ್ಯಾಪಾರಕ್ಕೆ ತೊಂದರೆಯಾಗಬಹುದು.

ಮೀನ ರಾಶಿ (Daily Horoscope)

ಸಾಮಾಜಿಕ ಮನ್ನಣೆ ಸಿಕ್ಕರೂ ಅದನ್ನು ನಿರಾಕರಿಸುವಿರಿ. ಅಧ್ಯಯನದಲ್ಲಿ ಹೆಚ್ಚಿನ ಸಮಯ ಕಳೆಯುವಿರಿ. ಸಂಪತ್ತಿನ ಮೇಲೆ ಇತರರ ದೃಷ್ಟಿ ಬೀಳಬಹುದು. ಬರಬೇಕಾದ ಹಣ ವಿಳಂಬವಾಗಲಿದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಲಿವೆ.