☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

KEA PG Dental 2026: ಸ್ನಾತಕೋತ್ತರ ದಂತ ವೈದ್ಯಕೀಯ 3ನೇ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ

KEA PG Dental 2026: Round 3 Seat Allotment Schedule Released

KEA PG Dental 2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026ರ ಸಾಲಿನ ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮುಖ್ಯ ಮಾಹಿತಿಯೊಂದನ್ನು ಹಂಚಿಕೊಂಡಿದೆ. PG Dental 3ನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಇಚ್ಛೆಯುಳ್ಳ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ.

ಈ ಸುತ್ತಿನಲ್ಲಿ ಭಾಗವಹಿಸಲು ಕಾಷನ್ ಡೆಪಾಸಿಟ್ ಪಾವತಿಸುವುದು ಕಡ್ಡಾಯವಾಗಿದೆ. ಡೆಪಾಸಿಟ್ ಪಾವತಿಸಲು ಹಾಗೂ ಆಪ್ಷನ್ ಎಂಟ್ರಿ ದಾಖಲಿಸಲು ಅಕ್ಟೋಬರ್ 13ರವರೆಗೆ ಅವಕಾಶ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ನಿಯಮಾವಳಿಗಳಂತೆ ಶುಲ್ಕವನ್ನು ಪಾವತಿಸಿ ತಮ್ಮ ಆದ್ಯತೆಗಳನ್ನು ನಮೂದಿಸಬಹುದು.

ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ, ಶುಲ್ಕ ಪಾವತಿ ಹಾಗೂ ಕಾಲೇಜು ಪ್ರವೇಶಾತಿ ದಿನಾಂಕಗಳ ಸಂಪೂರ್ಣ ವಿವರಗಳನ್ನು ಕೆಇಎ ಬಿಡುಗಡೆ ಮಾಡಿದೆ. ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಎಲ್ಲಾ ಹಂತಗಳನ್ನು ತಪ್ಪದೇ ಪಾಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್.ಪ್ರಸನ್ನ ಐಎಎಸ್ ತಿಳಿಸಿದ್ದಾರೆ.

ಕಾಷನ್ ಡೆಪಾಸಿಟ್ ವಿವರಗಳು

  • ಸಾಮಾನ್ಯ ಮತ್ತು ಇತರ ವರ್ಗದ ಅಭ್ಯರ್ಥಿಗಳು: 4 ಲಕ್ಷ ರೂಪಾಯಿ ಕಾಷನ್ ಡೆಪಾಸಿಟ್ ಪಾವತಿಸಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST): 1 ಲಕ್ಷ ರೂಪಾಯಿ ಕಟ್ಟಲು ಅವಕಾಶ ನೀಡಲಾಗಿದೆ.

KEA PG Dental 2026: ಮುಖ್ಯ ದಿನಾಂಕಗಳು ಮತ್ತು ವೇಳಾಪಟ್ಟಿ

  • ಆಪ್ಷನ್ಸ್ ದಾಖಲಿಸಲು ಕೊನೆಯ ದಿನ: ಅಕ್ಟೋಬರ್ 13
  • ತಾತ್ಕಾಲಿಕ ಫಲಿತಾಂಶ: ಅಕ್ಟೋಬರ್ 14 (ಬೆಳಿಗ್ಗೆ 11 ಗಂಟೆಗೆ)
  • ಅಂತಿಮ ಫಲಿತಾಂಶ ಪ್ರಕಟಣೆ: ಅಕ್ಟೋಬರ್ 14 (ಸಂಜೆ 6 ಗಂಟೆಗೆ)
  • ಬಾಕಿ ಶುಲ್ಕ ಪಾವತಿ: ಅಕ್ಟೋಬರ್ 15 ರಿಂದ ಅಕ್ಟೋಬರ್ 16 ರವರೆಗೆ
  • ಮೂಲ ದಾಖಲೆ ಸಲ್ಲಿಕೆ (KEA ಕಚೇರಿ): ಅಕ್ಟೋಬರ್ 16 ಮತ್ತು 17
  • ಕಾಲೇಜು ಪ್ರವೇಶಕ್ಕೆ ಕೊನೆಯ ದಿನ: ಅಕ್ಟೋಬರ್ 19

ವಿದ್ಯಾರ್ಥಿಗಳು ಕಾಷನ್ ಡೆಪಾಸಿಟ್ ಹೊಂದಾಣಿಕೆ ಮಾಡಿದ ನಂತರ ಬಾಕಿ ಇರುವ ಪ್ರವೇಶ ಶುಲ್ಕವನ್ನು ನಿಗದಿತ ಸಮಯದೊಳಗೆ ಪಾವತಿಸಬೇಕು. ತದನಂತರ ಕೆಇಎ ಕಚೇರಿಯಲ್ಲಿ ಒರಿಜಿನಲ್ ಡಾಕ್ಯುಮೆಂಟ್ಸ್ ಸಲ್ಲಿಸಿ, ಪ್ರವೇಶ ಆದೇಶ (Admission Order) ಡೌನ್‌ಲೋಡ್ ಮಾಡಿಕೊಂಡು ಅಕ್ಟೋಬರ್ 19ರೊಳಗೆ ನಿಯೋಜಿತ ಕಾಲೇಜಿನಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕು.