☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Daily Horoscope: ಇಂದಿನ ನಿಮ್ಮ ಅದೃಷ್ಟ ಹೇಗಿದೆ?

Daily Horoscope: Today Rashifal and Navratri Predictions

Daily Horoscope: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಸೋಮವಾರದ ಈ ದಿನ ಅನಪೇಕ್ಷಿತ ಖರ್ಚು, ವಿರೋಧ ಹಾಗೂ ಆಪ್ತರ ಜೊತೆ ವಾಯುವಿಹಾರದ ಸೂಚನೆಗಳಿವೆ. ಬೇಡದುದರ ತ್ಯಾಗ, ಹಸ್ತಕ್ಷೇಪಕ್ಕೆ ಬೇಸರ, ದಾಂಪತ್ಯ ಕಲಹ ಹಾಗೂ ಧಾರ್ಮಿಕ ಆಚರಣೆಗಳು ಇಂದಿನ ವಿಶೇಷವಾಗಿರಲಿದೆ. ಜಾಗರೂಕರಾಗಿ ದಿನ ಕಳೆಯುವುದು ಒಳಿತು.

ಶರನ್ನವರಾತ್ರದ ಎರಡನೇ ದಿನವಾದ ಇಂದು ಜಗನ್ಮಾತೆಯ ಆರಾಧನೆಯಿಂದ ಸಕಲರಿಗೂ ಶುಭವಾಗಲಿ. ಬ್ರಹ್ಮಚಾರಿಣಿಯಾಗಿ ಬಂದು ತಾಯಿ ಸಕಲರ ಸಂಕಟವನ್ನೂ ಸಂಹರಿಸಿ ಕ್ಷೇಮವನ್ನು ಕರುಣಿಸಲಿ. ಇಂದಿನ ಪಂಚಾಂಗದಂತೆ ಸ್ವಾತಿ ನಿತ್ಯನಕ್ಷತ್ರ, ವಿಷ್ಕಂಭ ಯೋಗ ಹಾಗೂ ಕೌಲವ ಕರಣವಿದೆ. ಸೂರ್ಯೋದಯ ಬೆಳಿಗ್ಗೆ 06:10ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 06:01ಕ್ಕೆ ಆಗಲಿದೆ. ರಾಹು ಕಾಲ ಬೆಳಿಗ್ಗೆ 07:39 ರಿಂದ 09:08ರವರೆಗೆ ಇರಲಿದೆ.

ಮೇಷ ರಾಶಿ

ಕಾನೂನಿನ ವಿಚಾರದಲ್ಲಿ ಸಕಾರಾತ್ಮಕ ಬೆಳವಣಿಗೆ ಇರಲಿದೆ. ಮಕ್ಕಳ ಜೊತೆ ವಾಗ್ವಾದ ಸಂಭವಿಸಬಹುದು. ಸಹೋದ್ಯೋಗಿಗಳ ವರ್ತನೆಗೆ ಸಿಟ್ಟಾಗುವಿರಿ.

ವೃಷಭ ರಾಶಿ

ವಿದ್ಯಾಭ್ಯಾಸ ಮುಂದುವರಿಸುವುದು ಕಷ್ಟವಾಗಬಹುದು. ನಿಮ್ಮ ಉದಾರ ಸ್ವಭಾವದಿಂದ ಇತರರ ನೆರವು ಸಿಗಲಿದೆ. ಅಪರಿಚಿತರೊಂದಿಗೆ ಎಚ್ಚರದಿಂದಿರಿ.

ಮಿಥುನ ರಾಶಿ

ನಿಮ್ಮ ಸಾಮರ್ಥ್ಯದಿಂದ ಎಲ್ಲರನ್ನೂ ಅಚ್ಚರಿಗೊಳಿಸುವಿರಿ. ಆದಾಯದ ಮೂಲವನ್ನು ಎಲ್ಲರ ಬಳಿ ಹಂಚಿಕೊಳ್ಳಬೇಡಿ. ಉದ್ಯೋಗದಲ್ಲಿ ಆರಂಭಿಕ ತೊಂದರೆ ಎದುರಾಗಬಹುದು.

ಕರ್ಕಾಟಕ ರಾಶಿ

ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ದೈವಭಕ್ತಿ ಹೆಚ್ಚಾಗಲಿದೆ. ಬಂಧುಗಳ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ.

ಸಿಂಹ ರಾಶಿ

ಪ್ರಶಸ್ತಿಗಳ ಬಗ್ಗೆ ಯೋಚಿಸದೆ ಕಠಿಣ ಪರಿಶ್ರಮ ಪಡುವಿರಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಮಾತು ಸಂತೋಷ ತರಲಿದೆ.

ಕನ್ಯಾ ರಾಶಿ

ನಿಮ್ಮ ಆಲೋಚನೆಗಳಿಗೆ ಉತ್ತಮ ಪ್ರಶಂಸೆ ಸಿಗಲಿದೆ. ಅಪರಿಚಿತರು ನೀಡುವ ವಸ್ತುಗಳಿಂದ ದೂರವಿರಿ. ಮುಂದಾಳತ್ವ ವಹಿಸುವ ಅವಕಾಶ ಒದಗಿಬರಲಿದೆ.

ತುಲಾ ರಾಶಿ

ಕಚೇರಿಯಲ್ಲಿ ಸಹೋದ್ಯೋಗಿಗಳ ಪರಸ್ಪರ ಸಹಕಾರದಿಂದ ಕೆಲಸ ಮುಗಿಯಲಿದೆ. ಭೂಮಿ ವ್ಯವಹಾರಸ್ಥರಿಗೆ ನಷ್ಟವಾಗುವ ಸಂಭವವಿದೆ. ಸಂಗಾತಿಯ ಭೇಟಿಗೆ ತೆರಳುವಿರಿ.

ವೃಶ್ಚಿಕ ರಾಶಿ

ಸಿಕ್ಕ ಅವಕಾಶಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಬರುವ ಹಣವನ್ನು ಭವಿಷ್ಯಕ್ಕಾಗಿ ಉಳಿಸಿ. ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ.

ಧನು ರಾಶಿ

ಸಮಯ ಕಳೆಯಲು ಬೇರೆ ದಾರಿ ಹುಡುಕುವಿರಿ. ಒಂಟಿಯಾಗಿರುವುದು ಕಷ್ಟವೆನಿಸಬಹುದು. ಅನಿರೀಕ್ಷಿತ ಆರೋಗ್ಯ ವ್ಯತ್ಯಾಸದಿಂದ ಕೊಂಚ ವಿಚಲಿತರಾಗುವಿರಿ.

ಮಕರ ರಾಶಿ

ಮಕ್ಕಳ ವಿಚಾರದಲ್ಲಿ ನಿಮ್ಮ ಧೋರಣೆ ಬದಲಾಗಲಿದೆ. ಕಚೇರಿ ಕೆಲಸದಲ್ಲಿ ಹೆಚ್ಚಿನ ಆಸ್ಥೆ ವಹಿಸುವಿರಿ. ದೈವಿಕ ಸಹಾಯದಿಂದ ಕಷ್ಟಗಳು ದೂರಾಗಲಿವೆ.

ಕುಂಭ ರಾಶಿ

ಧಾರ್ಮಿಕ ಆಚರಣೆಗಳಲ್ಲಿ ಕೃತಕತೆ ಎನಿಸಬಹುದು. ಶೀತಲ ಸಂಘರ್ಷ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಾಡಲಿದೆ.

ಮೀನ ರಾಶಿ

ಅನಗತ್ಯ ಸನ್ನಿವೇಶಗಳಿಂದ ದೂರವಿರಿ. ಕಾರ್ಯದ ಸ್ಥಳ ಬದಲಾವಣೆಯಾಗುವ ಸಂಭವವಿದೆ. ಅನಿವಾರ್ಯ ಕಾರಣಗಳಿಂದ ಆಸ್ಪತ್ರೆಗೆ ಅಲೆಯಬೇಕಾಗಬಹುದು.