Childcare Center: ಮೈಸೂರು ನ್ಯಾಯಾಲಯದ ಆವರಣದಲ್ಲಿ ಹೊಸದಾಗಿ ಆರಂಭವಾಗಲಿರುವ ಮಕ್ಕಳ ಆರೈಕೆ ಕೇಂದ್ರದ ನಿರ್ವಹಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮಹಿಳಾ ಸಂಸ್ಥೆಗಳು ಮತ್ತು ಸ್ವ-ಸಹಾಯ ಸಂಘಗಳಿಂದ ಅಧಿಕೃತವಾಗಿ ಅರ್ಜಿಗಳನ್ನು ಕೋರಲಾಗಿದೆ.
ನೀವು ಮಹಿಳಾ ಪರ ಸಂಘಟನೆ ಅಥವಾ ಸ್ವ-ಸಹಾಯ ಸಂಘವನ್ನು ನಡೆಸುತ್ತಿದ್ದರೆ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಮಕ್ಕಳ ಆರೈಕೆ ಕೇಂದ್ರ (ಶಿಶು ಪಾಲನಾ ಕೇಂದ್ರ) ನಿರ್ವಹಿಸಲು ಆಸಕ್ತಿ ಇರುವವರು ತಕ್ಷಣವೇ ಅರ್ಜಿ ಸಲ್ಲಿಸಬಹುದು.
ಸಂಸ್ಥೆಗಳು ಅಗತ್ಯ ಅರ್ಹತೆಗಳನ್ನು ಹೊಂದಿರಬೇಕು. ಅಕ್ಟೋಬರ್ 16, 2026ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಮುಖ್ಯ ಅರ್ಹತೆಗಳು
5 ವರ್ಷದ ಅನುಭವ ಕಡ್ಡಾಯ: ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು. ಸಕ್ಷಮ ಪ್ರಾಧಿಕಾರದಿಂದ ಪಡೆದ ಸೇವಾ ಪ್ರಮಾಣಪತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿದೆ.
ಮಹಿಳಾ ಸಿಬ್ಬಂದಿ ಲಭ್ಯತೆ: ಮಕ್ಕಳ ಆರೈಕೆಯಲ್ಲಿ ಸೂಕ್ತ ವಿದ್ಯಾರ್ಹತೆ ಮತ್ತು ಅನುಭವವಿರುವ ಮಹಿಳಾ ಸಿಬ್ಬಂದಿ ಹೊಂದಿರುವ ಸಂಘಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಆರ್ಥಿಕ ಸದೃಢತೆ: ಸಂಸ್ಥೆಯು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರಬೇಕು. ಕಳೆದ 3 ವರ್ಷಗಳ ಆದಾಯ ತೆರಿಗೆ ಸಲ್ಲಿಕೆಯ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದೆ.
ಮೂಲಸೌಕರ್ಯ ಮತ್ತು ಸಿಬ್ಬಂದಿ: ಕೇಂದ್ರವನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯವಿರುವ ಅರ್ಹ ಸಿಬ್ಬಂದಿ ಮತ್ತು ಮೂಲಸೌಕರ್ಯ ಹೊಂದಿರುವ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿ: Job Vacancy 2026: ಪದವೀಧರರಿಗೆ ಸುವರ್ಣ ಅವಕಾಶ; ಮಂಡ್ಯ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇದೆ ಬಂಪರ್ ಕೆಲಸ
ಅರ್ಜಿ ಪಡೆಯುವುದು ಮತ್ತು ಸಲ್ಲಿಸುವ ವಿಳಾಸ
ಅರ್ಜಿ ದೊರೆಯುವ ಸ್ಥಳ: ಮೈಸೂರಿನ ವಿಜಯನಗರ 2ನೇ ಹಂತದ ಕೃಷ್ಣದೇವರಾಯ ವೃತ್ತದಲ್ಲಿರುವ ಸ್ತ್ರೀಶಕ್ತಿ ಭವನಕ್ಕೆ ಭೇಟಿ ನೀಡಿ.
ಕಚೇರಿಯ ವಿವರ: ಸ್ತ್ರೀಶಕ್ತಿ ಭವನದ ಮೊದಲ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿಗಳು ಲಭ್ಯವಿರುತ್ತವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 16, 2026ರ ಸಂಜೆ 5:೦೦ ಗಂಟೆಯೊಳಗೆ ಅದೇ ಕಚೇರಿಗೆ ತಲುಪಿಸಬೇಕು.
Childcare Center: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಈ ಪ್ರಕ್ರಿಯೆಯ ಕುರಿತು ಯಾವುದೇ ಸಂದೇಹಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು.
ಸಂಪರ್ಕಿಸಬೇಕಾದ ಕಚೇರಿ: ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು.
ದೂರವಾಣಿ ಸಂಖ್ಯೆ: 0821-2495432
ಅರ್ಹ ಹಾಗೂ ಆಸಕ್ತ ಮಹಿಳಾ ಸಂಘಟನೆಗಳು ತಡಮಾಡದೆ ಇಂದೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿ.




