Daily Horoscope: ಶಾಲಿವಾಹನ ಶಕವರ್ಷ 1949ರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿ ಬುಧವಾರದ ದಿನ ಭವಿಷ್ಯ ಇಲ್ಲಿದೆ. ಇಂದು ಅಧ್ಯಯನದಲ್ಲಿ ಆಸಕ್ತಿ ಮತ್ತು ಶಿಕ್ಷಣದ ಆಲೋಚನೆ ಹೆಚ್ಚಿರಲಿದೆ. ಸಾತ್ತ್ವಿಕ ಆಹಾರ ಸೇವನೆ ಮತ್ತು ಕೃಷಿಯಿಂದ ಉತ್ತಮ ಆದಾಯ ಈ ದಿನದ ವಿಶೇಷ.
ಇಂದಿನ ರಾಶಿಫಲವನ್ನು ಪ್ರತಿಯೊಂದು ರಾಶಿಗೆ ಅನುಗುಣವಾಗಿ ಕೆಳಗೆ ನೀಡಲಾಗಿದೆ. ನಿಮ್ಮ ದಿನವು ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಿ. ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗುವ ರಾಶಿ ಯಾವುದು? 12 ರಾಶಿಗಳ ಸಂಪೂರ್ಣ ವಿವರ ಇಲ್ಲಿದೆ.
ಮೇಷ ರಾಶಿ
ನಿಮಗೆ ದೇವತಾರಾಧನೆಯಲ್ಲಿ ಶ್ರದ್ಧೆ ಹೆಚ್ಚಾಗಲಿದೆ. ಕೋಪ ಬರುವ ಸನ್ನಿವೇಶದಲ್ಲೂ ಶಾಂತವಾಗಿ ಇರುವಿರಿ. ಮನೆಯ ಕೆಲಸಗಳಲ್ಲಿ ಮಗ್ನರಾಗುವಿರಿ. ನಿಮ್ಮ ಕರ್ತವ್ಯ ಪ್ರಜ್ಞೆಗೆ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಹಳೆಯ ಕಾಯಿಲೆಯಿಂದ ತೊಂದರೆ ಉಂಟಾಗಬಹುದು. ಬೇಡವಾದ ವಸ್ತು ಮಾರಿ ಹಣ ಪಡೆಯುವಿರಿ. ಹಣದ ಲೆಕ್ಕಾಚಾರದಲ್ಲಿ ಮೋಸವಾಗಿದ್ದು ತಿಳಿಯಲಿದೆ.
ವೃಷಭ ರಾಶಿ
ಸಂಗಾತಿಯ ನಡವಳಿಕೆಯಿಂದ ಮನಸ್ಸಿಗೆ ಬೇಸರವಾಗಲಿದೆ. ಅವರ ಮಾತು ನಿಮಗೆ ಸಿಟ್ಟು ತರಿಸಬಹುದು. ಉದ್ಯಮದಲ್ಲಿ ನಿಮ್ಮನ್ನು ಕನಿಷ್ಠವಾಗಿ ಕಾಣಬಹುದು. ಯಾವುದೇ ಅಪೇಕ್ಷೆ ಇಲ್ಲದೆ ಹೊಸ ಸ್ನೇಹಿತರನ್ನು ಮಾಡುವಿರಿ. ನಿವೃತ್ತ ಹಣ ಪಡೆಯಲು ತೊಂದರೆ ಎದುರಾಗಬಹುದು. ನಿಮ್ಮ ನಿಯಮಗಳನ್ನು ನೀವೇ ಮುರಿಯುವಿರಿ. ಮಕ್ಕಳ ಅಶಿಸ್ತಿಗೆ ಸಿಟ್ಟಾಗುವಿರಿ.
ಮಿಥುನ ರಾಶಿ
ಸಂಗಾತಿಯ ಜೊತೆಗಿನ ಕಲಹದಿಂದ ಕೆಲಸಗಳು ಅಸ್ತವ್ಯಸ್ತವಾಗಬಹುದು. ವಿಶ್ವಾಸಘಾತದಿಂದ ಮನಸ್ಸಿಗೆ ದುಃಖವಾಗಲಿದೆ. ಆಹಾರದ ಕೊರತೆಯಿಂದ ಸಂಕಟ ಎದುರಾಗಬಹುದು. ದುಡಿಮೆಯ ಜೊತೆಗೆ ಸಂಬಂಧಗಳಿಗೆ ಗೌರವ ನೀಡಿ. ವಿಶೇಷ ಕೆಲಸಕ್ಕೆ ಹೋಗುವಾಗ ಕುಲದೇವರನ್ನು ಸ್ಮರಿಸಿ. ನೇರ ನುಡಿಯಿಂದ ಇತರರಿಗೆ ಬೇಸರವಾಗಬಹುದು.
ಕರ್ಕಾಟಕ ರಾಶಿ
ಹಣ ಖರ್ಚು ಮಾಡಲು ಹಿಂದೇಟು ಹಾಕುವಿರಿ. ಧನಲಾಭ ನಿರೀಕ್ಷಿಸದೆ ಕೆಲಸ ಆರಂಭಿಸಿ. ನಿಮ್ಮ ವೇಗದ ಕೆಲಸ ಎಲ್ಲರಿಗೂ ಇಷ್ಟವಾಗಲಿದೆ. ಮಕ್ಕಳನ್ನು ತಿದ್ದುವ ಕೆಲಸದಲ್ಲಿ ಸಮಯ ಕಳೆಯುವಿರಿ. ನಿಮ್ಮ ಒಳ್ಳೆಯತನ ದುರುಪಯೋಗವಾಗಬಹುದು. ಸತ್ತ್ವಯುತ ಆಹಾರ ಸೇವಿಸಿ. ಯಾರಿಂದಲೂ ಅತಿಯಾಗಿ ನಿರೀಕ್ಷಿಸಬೇಡಿ. ಮಾತಿನಿಂದ ಆತ್ಮೀಯರನ್ನು ದೂರ ಮಾಡಿಕೊಳ್ಳಬೇಡಿ.
ಸಿಂಹ ರಾಶಿ
ವಿದ್ಯಾಭ್ಯಾಸದಲ್ಲಿ ಪ್ರಗತಿಯ ಜೊತೆಗೆ ಶತ್ರುಗಳು ಹೆಚ್ಚಾಗುವರು. ಇಂದು ನೀವು ಅಪರಿಚಿತರ ಜಾಲಕ್ಕೆ ಸಿಕ್ಕಿ ಮೋಸ ಹೋಗಬಹುದು. ಜಾಗರೂಕರಾಗಿರಿ. ಆರ್ಥಿಕ ಬಲ ನೋಡಿ ಮುಂದುವರಿಯಿರಿ. ಸ್ನೇಹಿತರು ಹಣದ ಸಹಾಯ ಕೇಳಬಹುದು. ವೃತ್ತಿಯಲ್ಲಿ ಹೊಸತನ ತರಲು ಯೋಚಿಸುವಿರಿ. ಪ್ರಾಮಾಣಿಕತೆಯು ನಿಮಗೆ ಇಂದು ವರದಾನವಾಗಲಿದೆ.
ಕನ್ಯಾ ರಾಶಿ
ಕಲಾತ್ಮಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ನಿಮ್ಮ ನಿರ್ಧಾರವನ್ನು ಇತರರ ಮೇಲೆ ಹೇರಬೇಡಿ. ಎಲ್ಲರನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ. ಮನಸ್ಸಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಹೊಸ ಸಂಬಂಧ ಉತ್ಸಾಹ ನೀಡಲಿದೆ. ಮಾತಿನಲ್ಲಿ ಹಿಡಿತವಿದ್ದರೆ ಇಂದು ಕ್ಷೇಮ.
ತುಲಾ ರಾಶಿ
ಮೇಲಧಿಕಾರಿಗಳ ಕಿರುಕುಳ ಸಹಿಸುವುದು ಕಷ್ಟವಾಗಬಹುದು. ಹಳೆಯ ವಿಚಾರಕ್ಕೆ ಸಂಗಾತಿಯೊಡನೆ ಜಗಳವಾಗಬಹುದು. ಒಬ್ಬರು ಸುಮ್ಮನಿದ್ದರೆ ಕಲಹ ಶಾಂತವಾಗಲಿದೆ. ಶ್ರೇಷ್ಠ ವಸ್ತುಗಳ ಲಾಭವಿದ್ದರೂ ಉಳಿಸಿಕೊಳ್ಳುವುದು ಕಷ್ಟ. ತಪ್ಪಿಗೆ ಕ್ಷಮೆ ಕೇಳಿ ದೊಡ್ಡವರಾಗಿ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಸನ್ಮಾನ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ
ಇಂದು ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ಪ್ರಾಮಾಣಿಕತೆ ನಿಮಗೆ ವರವಾಗಲಿದೆ. ಸರಳ ಸ್ವಭಾವವು ಧನಾತ್ಮಕ ಫಲ ನೀಡಲಿದೆ. ಸ್ತ್ರೀಯರಿಂದ ಸಂತೋಷ ಅನುಭವಿಸುವಿರಿ. ಒಳ್ಳೆಯ ಮನಸ್ಸಿನವರ ಒಡನಾಟ ಸಿಗಲಿದೆ. ಬೆಂಕಿಯ ಬಗ್ಗೆ ಎಚ್ಚರಿಕೆಯಿಂದಿರಿ. ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ.
ಧನು ರಾಶಿ
ಯಾರ ಮೇಲೂ ದ್ವೇಷ ಸಾಧಿಸಲು ಹೋಗಬೇಡಿ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಜಾಗರೂಕರಾಗಿರಿ. ಹಣವನ್ನು ತಪ್ಪಾದ ಕಡೆ ಹೂಡಿಕೆ ಮಾಡಬೇಡಿ. ಸುಮ್ಮನೆ ಎಲ್ಲದಕ್ಕೂ ಒಪ್ಪಿಗೆ ನೀಡಬೇಡಿ. ಅಧ್ಯಯನದಿಂದ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ. ಸಾಹಸ ಕೆಲಸಗಳಿಗೆ ಕೈಹಾಕಬೇಡಿ. ಮಕ್ಕಳ ನಡುವೆ ವಾದ ಬೆಳೆಯಬಹುದು.
ಮಕರ ರಾಶಿ
ದೇವರ ಮೇಲೆ ಭರವಸೆ ಇಟ್ಟು ಕಾರ್ಯ ಆರಂಭಿಸಿ. ಪ್ರೇಮ ವಿಚಾರದಲ್ಲಿ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತು ಕಿರಿಕಿರಿ ತರಬಹುದು. ಸುಲಭದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳಬೇಡಿ. ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಬಂಧುಗಳ ಆಗಮನ ಖುಷಿ ನೀಡಲಿದೆ. ಕಲ್ಯಾಣದ ಮಾತುಕತೆಗಳು ಮುಂದುವರಿಯಲಿವೆ.
ಕುಂಭ ರಾಶಿ
ಮನಸ್ಸಿನ ನೆಮ್ಮದಿಗೆ ಸ್ವಂತ ಸೂತ್ರ ಅನುಸರಿಸುವಿರಿ. ಕೆಟ್ಟ ಅಭ್ಯಾಸಗಳನ್ನು ಬಿಡಲು ನಿರ್ಧರಿಸುವಿರಿ. ಸ್ನೇಹಿತರ ಜೊತೆ ಹೆಚ್ಚಿನ ಸಮಯ ಕಳೆಯುವಿರಿ. ಸಂಸಾರ ನಿಭಾಯಿಸುವ ಕಲೆ ತಿಳಿಯಲಿದೆ. ಉದ್ಯೋಗದ ವಿಚಾರವನ್ನು ಸಹೋದರರ ಜೊತೆ ಚರ್ಚಿಸಿ. ಅನಗತ್ಯ ವಸ್ತು ಖರೀದಿಸಿ ಹಣ ಪೋಲು ಮಾಡಬೇಡಿ. ಹಿರಿಯರ ಸಲಹೆ ಪಾಲಿಸಿ.
ಮೀನ ರಾಶಿ
ಸಾಮಾಜಿಕ ಕಳಕಳಿಯನ್ನು ಹೆಚ್ಚಿಸಿಕೊಳ್ಳುವಿರಿ. ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕವಾಗಬಹುದು. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಆಕಸ್ಮಿಕ ವಾರ್ತೆಯನ್ನು ಸಮಾಧಾನದಿಂದ ಸ್ವೀಕರಿಸಿ. ನಿಮ್ಮ ಕೆಲಸಕ್ಕೆ ಸೂಕ್ತ ಪ್ರಶಂಸೆ ಸಿಗಲಿದೆ. ಸಹೋದರರು ಕಷ್ಟದಲ್ಲಿ ಭಾಗಿಯಾಗುವರು. ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಿ.
Daily Horoscope
ಸಂವತ್ಸರ: ಪರಾಭವ ಸಂವತ್ಸರ
ಅಯನ / ಋತು: ದಕ್ಷಿಣಾಯನ, ವರ್ಷ ಋತು
ಮಾಸ / ಪಕ್ಷ: ಭಾದ್ರಪದ ಮಾಸ, ಕೃಷ್ಣ ಪಕ್ಷ
ತಿಥಿ / ವಾರ: ಚತುರ್ಥೀ ತಿಥಿ, ಬುಧವಾರ
ನಕ್ಷತ್ರ: ಕೃತ್ತಿಕಾ | ಯೋಗ: ಹರ್ಷಣ | ಕರಣ: ಬಾಲವ
ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:09
ರಾಹು ಕಾಲ: 12:10 PM – 01:39 PM
ಯಮಗಂಡ ಕಾಲ: 07:40 AM – 09:10 AM
ಗುಳಿಕ ಕಾಲ: 10:40 AM – 12:10 PM




