☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Vishal Thakkar: 10 ವರ್ಷಗಳಿಂದ ‘ಮುನ್ನಾಭಾಯ್ MBBS‌’ ನಟ ಮಿಸ್ಸಿಂಗ್; ಗೆಳತಿನೂ ಸಾವು.. ಅಷ್ಟಕ್ಕೂ ಆ ಮಧ್ಯಾಹ್ನ ಏನಾಯ್ತು?

Vishal Thakkar: Munna Bhai Actor Vishal Thakkar Missing For 10 Years: Mother Still Waits For His Return

Vishal Thakkar: ‘ಮುನ್ನಾ ಭಾಯ್ M.B.B.S.’ ಸಿನಿಮಾದಲ್ಲಿ ನಟಿಸಿದ್ದ ನಟ ವಿಶಾಲ್ ಠಕ್ಕರ್ ಕಳೆದ 10 ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಜನವರಿ 1, 2016 ರಂದು ಮುಂಬೈನ ತಮ್ಮ ಮನೆಯಿಂದ ಹೋದವರು ಇದುವರೆಗೆ ಮರಳಿ ಬಂದೇ ಇಲ್ಲ. “ಒಂದು ದಿನ ನನ್ನ ಮಗ ಖಂಡಿತ ವಾಪಸ್ ಬರುತ್ತಾನೆ” ಎಂದು ಅವರ ತಾಯಿ ದುರ್ಗಾ ಠಕ್ಕರ್ ಇಂದಿಗೂ ಕಾಯುತ್ತಿದ್ದಾರೆ. 

ಸಿನಿಮಾ ನೋಡಲು ಹೋಗಿ ನಾಪತ್ತೆಯಾದ ನಟ

ವಿಶಾಲ್ ಠಕ್ಕರ್ ಅವರು ಮುಂಬೈನ ಮುಲುಂಡ್‌ನಲ್ಲಿರುವ ತಮ್ಮ ಮನೆಯಿಂದ ಹೋದವರು ಮತ್ತೆ ಹಿಂತಿರುಗಲಿಲ್ಲ. ಅಂದು ‘ಸ್ಟಾರ್ ವಾರ್ಸ್’ ಸಿನಿಮಾ ನೋಡಲು ತಾಯಿಯನ್ನು ಕೂಡ ಜೊತೆಗೆ ಕರೆದಿದ್ದರು. ಆದರೆ ತಾಯಿಗೆ ಸುಸ್ತಾಗಿದ್ದ ಕಾರಣ ಅವರು ಬರಲಿಲ್ಲ. ನಂತರ ತಾಯಿಯಿಂದ ₹500 ಪಡೆದು ವಿಶಾಲ್ ಒಬ್ಬರೇ ಹೊರಟಿದ್ದರು. 

ಫೇಸ್‌ಬುಕ್ ಪೋಸ್ಟ್ ನಂತರ ಸ್ವಿಚ್ ಆಫ್ ಆದ ಫೋನ್

ಹೊರಡುವ ಮುನ್ನ ವಿಶಾಲ್ ತಮ್ಮ ಫೇಸ್‌‌ಬುಕ್ ಖಾತೆಯಲ್ಲಿ ‘ಹ್ಯಾಪಿ ನ್ಯೂ ಇಯರ್’ ಎಂದು ಪೋಸ್ಟ್ ಮಾಡಿದ್ದರು. ಅದುವೇ ಅವರ ಕೊನೆಯ ಡಿಜಿಟಲ್ ಹೆಜ್ಜೆ ಗುರುತಾಗಿತ್ತು. ಅದರ ಬೆನ್ನಲ್ಲೇ ಅವರ ಮೊಬೈಲ್ ಫೋನ್ ಶಾಶ್ವತವಾಗಿ ಸ್ವಿಚ್ ಆಫ್ ಆಗಿತ್ತು. 

ಕರಿಯರ್ ಮೇಲೆ ಬಿದ್ದಿತ್ತು ದೊಡ್ಡ ಪೆಟ್ಟು

ನಾಪತ್ತೆಯಾಗುವ ಮೂರು ತಿಂಗಳ ಮುನ್ನ ವಿಶಾಲ್ ವಿರುದ್ಧ ಅವರ ಗೆಳತಿ ಅತ್ಯಾಚಾರದ ದೂರು ನೀಡಿದ್ದರು. ನಂತರ ಆ ವಿಷಯ ಬಗೆಹರಿದು ದೂರು ವಾಪಸ್ ಪಡೆಯಲಾಗಿತ್ತು. ಆದರೆ ಈ ಘಟನೆಯಿಂದ ಅವರ ನಟನಾ ವೃತ್ತಿಗೆ ತೀವ್ರ ಧಕ್ಕೆಯಾಗಿ, ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. 

Vishal Thakkar: ಪೊಲೀಸರ ತನಿಖೆಯಲ್ಲೂ ಸಿಗಲಿಲ್ಲ ಯಾವುದೇ ಸುಳಿವು

ಮುಂಬೈ ಪೊಲೀಸರು ವಿಶಾಲ್ ಅವರ ಬ್ಯಾಂಕ್ ಖಾತೆಗಳು ಹಾಗೂ ಕಾಲ್ ರೆಕಾರ್ಡ್‌ಗಳನ್ನು ಪರಿಶೀಲಿಸಿದ್ದರು. ಆ ದಿನದ ನಂತರ ಅವರ ಖಾತೆಯಿಂದ ಯಾವುದೇ ಹಣದ ವಹಿವಾಟು ನಡೆದಿಲ್ಲ. ಯಾವುದೇ ಬೆದರಿಕೆ ಕರೆಗಳು ಬರಲಿಲ್ಲ ಮತ್ತು ಅವರ ಸುಳಿವು ಕೂಡ ಇದುವರೆಗೆ ಸಿಕ್ಕಿಲ್ಲ.