☔ Weather
Bengaluru: 🌤️ 19°C | AQI 93
Mysore: ☀️ 20°C | AQI 85
Mangalore: ☀️ 24°C | AQI 130
Bengaluru: 🌤️ 19°C | AQI 93
☔ Weather
Bengaluru: 🌤️ 19°C | AQI 93
Mysore: ☀️ 20°C | AQI 85
Mangalore: ☀️ 24°C | AQI 130
Bengaluru: 🌤️ 19°C | AQI 93

Vijayalakshmi Darshan: ನಟ ಧನ್ವೀರ್ ತಂದೆಯಿಂದ ವಿಜಯಲಕ್ಷ್ಮಿ ವಿರುದ್ಧ ಗಂಭೀರ ದೂರು ದಾಖಲು

Vijayalakshmi Darshan: Dhanveer’s Father Files Police Complaint Against Her

ಮುಖ್ಯಾಂಶಗಳು

  • ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ತಂದೆ ದೂರು ನೀಡಿದ್ದಾರೆ
  • ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ
  • ದರ್ಶನ್ ಆಪ್ತರ ಈ ಕಲಹ ಸಂಚಲನ ಮೂಡಿಸಿದೆ

Vijayalakshmi Darshan: ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ವಿವಾದ ಈಗ ಬೀದಿಗೆ ಬಂದಿದೆ. ಧನ್ವೀರ್ ತಂದೆ ತಿಮ್ಮ ಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮಿ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಮನೆಗೆ ನುಗ್ಗಿ ದಾಂಧಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

 

ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲು

ನಟ ದರ್ಶನ್ ಜೈಲಿನಲ್ಲಿರುವ ಸಮಯದಲ್ಲೇ ಅವರ ಆಪ್ತ ವಲಯದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ. ಧನ್ವೀರ್ ತಂದೆ ತಿಮ್ಮ ಗೌಡ ಅವರು ವಿಜಯಲಕ್ಷ್ಮಿ ದರ್ಶನ್, ಪಿ.ಎ. ನಾಗರಾಜು, ಭೋಜ ಹಾಗೂ ಬಾಟಲಿ ಪ್ರಮೋದ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ (NCR) ದಾಖಲಾಗಿದೆ. ಪೊಲೀಸರು ಶೀಘ್ರದಲ್ಲೇ ವಿಜಯಲಕ್ಷ್ಮಿ ಹಾಗೂ ಇತರರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ. ಇಬ್ಬರ ನಡುವಿನ ಈ ಜಗಳ ಈಗ ಸ್ಯಾಂಡಲ್‌ವುಡ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ.

 

ದೂರಿನಲ್ಲಿರುವ ಅಚ್ಚರಿಯ ವಿವರಗಳು ಮತ್ತು ಘಟನೆಯ ಹಿನ್ನೆಲೆ

ಅಕ್ಟೋಬರ್ 21ರಂದು ವಿಜಯಲಕ್ಷ್ಮಿ ಮತ್ತು ದರ್ಶನ್ ಪಿಎ ನಾಗರಾಜು ಧನ್ವೀರ್ ಮನೆಗೆ ತೆರಳಿದ್ದರು. ಆ ಸಮಯದಲ್ಲಿ ಧನ್ವೀರ್ ಮನೆಯಲ್ಲಿ ಇಲ್ಲದೆ ಮೈಸೂರಿಗೆ ಹೋಗಿದ್ದರು. ಆಗ ಧನ್ವೀರ್ ತಂದೆಯ ಬಳಿ ಮಾತನಾಡಲು ಮುಂದಾಗಿದ್ದು, ಈ ವೇಳೆ ವಾಗ್ವಾದ ನಡೆದಿದೆ. ನಾಗರಾಜು ಅವರು ಗೌರವ್ ಶೆಟ್ಟಿ ಎಂಬಾತನಿಗೆ ಫೋನ್ ಮಾಡಿ ಬೋಜಣ್ಣ ಹಾಗೂ ಬಾಟಲಿ ಪ್ರಮೋದ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಮನೆಗೆ ನುಗ್ಗಿದ ಆ ವ್ಯಕ್ತಿಗಳು ಜೋರು ಧ್ವನಿಯಲ್ಲಿ ಮಾತನಾಡುತ್ತಾ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಇದನ್ನು ಓದಿ: http://Darshan: ದರ್ಶನ್ ಹೆಸರು ದುರ್ಬಳಕೆ ಬೇಡ ಎಂದ ವಿಜಯಲಕ್ಷ್ಮಿ

Vijayalakshmi Darshan: ಮುಸುಕಿನ ಗುದ್ದಾಟದಿಂದ ಬಹಿರಂಗ ಜಗಳಕ್ಕೆ ತಿರುಗಿದ ವೈಷಮ್ಯ

ದರ್ಶನ್ ಜೈಲಿಗೆ ಹೋದ ಬಳಿಕ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಒಟ್ಟಾಗಿ ಹಲವು ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಇವರ ನಡುವೆ ಮನಸ್ತಾಪ ಹಾಗೂ ಬಿರುಕು ಮೂಡಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಪರಸ್ಪರ ಪರೋಕ್ಷ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಈಗ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.