ಕನ್ನಡ ಕಿರುತೆರೆಯ ಅತ್ಯಂತ ದುಬಾರಿ ರಿಯಾಲಿಟಿ ಶೋ ‘ಬಿಗ್ ಬಾಸ್’ 13ನೇ ಸೀಸನ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಆಗಲೇ ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿರುವ ಸ್ಪರ್ಧಿಗಳ ಯಾರು ಅಂತ ವೀಕ್ಷಕರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ ಆಗುವುದನ್ನೇ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡದ 12ನೇ ಸೀಸನ್ಗಿಂತಲೂ 13ನೇ ಸೀಸನ್ ಬಾರಿ ಕುತೂಹಲ ಮೂಡಿಸಿದೆ. ಅದಕ್ಕೆ ಪ್ರಮುಖ ಕಾರಣ ಈ ಬಾರಿ ಸೋಶಿಯಲ್ ಮೀಡಿಯಾ ಇನ್ಫ್ಯುಯೆನ್ಸರ್ ಕೂಡ ಸೆಲೆಬ್ರೆಟಿಗಳ ಜೊತೆ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಈ ಸೀಸನ್ ಅನ್ನು ಹೇಗೆ ಟೇಕಾಫ್ ಮಾಡುತ್ತಾರೆಂಬ ಕಾತುರ ಹೆಚ್ಚಾಗಿದೆ.
2 ಚಾನೆಲ್ನಲ್ಲಿ ‘ಬಿಗ್ ಬಾಸ್ ಕನ್ನಡ 13’
ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಬಾರಿ ‘ಬಿಗ್ ಬಾಸ್ ಕನ್ನಡ’ ಕೇವಲ ಕಲರ್ಸ್ ಕನ್ನಡದಲ್ಲಷ್ಟೇ ಅಲ್ಲ, ಸುವರ್ಣ ಪ್ಲಸ್ನಲ್ಲಿಯೂ ಪ್ರಸಾರ ಆಗಲಿದೆ. ವಯಾಕಾಮ್ 18 ಹಾಗೂ ಸ್ಟಾರ್ ಒಟ್ಟಿಗೆ ಸೇರಿಕೊಂಡ ಬಳಿಕ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹಾಗಂತ ಬಿಗ್ ಬಾಸ್ ಕನ್ನಡ 13ರ ಸೀಸನ್ ಎರಡೂ ಚಾನೆಲ್ನಲ್ಲಿ ಒಟ್ಟಿಗೆ ಪ್ರಸಾರ ಆಗುವುದಿಲ್ಲ. ಇಲ್ಲೊಂದು ಚಿಕ್ಕ ಟ್ವಿಸ್ಟ್ ಇದೆ.
ಇದನ್ನೂ ಓದಿ: Bigg Boss: ಬಿಗ್ಬಾಸ್ 13: ಈ ಬಾರಿ ಮನೆ ಒಳಗೆ ಹೋಗುವವರು ಯಾರು?
ಸೆಪ್ಟೆಂಬರ್ 6ರಿಂದ ಕಲರ್ಸ್ ಕನ್ನಡದಲ್ಲಿ ಅದ್ಧೂರಿಯಾಗಿ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಕಲರ್ಸ್ ಕನ್ನಡದಲ್ಲಿ ಫ್ರೆಶ್ ಎಪಿಸೋಡ್ಗಳು ಪ್ರಸಾರ ಆದರೆ, ಮಾರನೇ ದಿನ ಬೆಳಗ್ಗೆ 7 ಗಂಟೆಗೆ ಸುವರ್ಣ ಪ್ಲಸ್ನಲ್ಲಿ ಗ್ರ್ಯಾಂಡ್ ಓಪನಿಂಗ್ನಿಂದ ಪ್ರತಿದಿನ ಎಪಿಸೋಡ್ಗಳು ಪ್ರಸಾರ ಆಗಲಿವೆ. ಹೀಗಾಗಿ ಈ ಬಾರಿ ವೀಕ್ಷಕರಿಗೆ ಬಿಗ್ ಬಾಸ್ ಅನ್ನು ಎರಡು ಚಾನೆಲ್ನಲ್ಲಿ ನೋಡಬಹುದಾಗಿದೆ.

ಏನಿದು ಲೆಕ್ಕಾಚಾರ?
ಬಿಗ್ ಬಾಸ್ ಕನ್ನಡ ಸೀಸನ್ 12 ಕಲರ್ಸ್ ಕನ್ನಡಕ್ಕೆ ಒಳ್ಳೆಯ ಟಿಆರ್ಪಿಯನ್ನು ತಂದುಕೊಟ್ಟಿತ್ತು. ಕಳೆದ ಎಲ್ಲಾ ಸೀಸನ್ಗಳಿಗಿಂತಲೂ ಅತೀ ಹೆಚ್ಚು ರೇಟಿಂಗ್ ಕೊಟ್ಟಿತ್ತು. ಹೀಗಾಗಿ ಈ ಬಾರಿ ಇನ್ನಷ್ಟು ಅದ್ಧೂರಿಯಾಗಿ ಬಿಗ್ ಬಾಸ್ ಶೋ ಅನ್ನು ತರಲಾಗುತ್ತಿದೆ. ಜೊತೆಗೆ ಕಲರ್ಸ್ ಕನ್ನಡ ಹಾಗೂ ಸ್ಟಾರ್ ಸುವರ್ಣ ಎರಡೂ ಒಂದಾಗಿದ್ದರಿಂದ ಅದರದ್ದೇ ಇನ್ನೊಂದು ಚಾನೆಲ್ ಸುವರ್ಣ ಪ್ಲಸ್ನಲ್ಲಿ ಮರು ಪ್ರಸಾರ ಮಾಡಲಾಗುತ್ತಿದೆ. ಸದ್ಯ ಇಲ್ಲಿ ಸಿನಿಮಾವನ್ನು ಡಬ್ಬಿಂಗ್ ಸೀರಿಯಲ್ಗಳನ್ನು ಪ್ರಸಾರ ಮಾಡಲಾಗುತ್ತಿತ್ತು.
ಸದ್ಯ ಸುವರ್ಣ ಪ್ಲಸ್ನಲ್ಲಿ ಬೆಳಗ್ಗೆ 7 ಗಂಟೆಗೆ ‘ರಾಧಾ ಕೃಷ್ಣ’ ಡಬ್ಬಿಂಗ್ ಸೀರಿಯಲ್ ಅನ್ನು ಪ್ರಸಾರ ಮಾಡಲಾಗುತ್ತಿದೆ. ಈಗ ಅದೇ ಸಮಯದಲ್ಲಿ ‘ಬಿಗ್ ಬಾಸ್ ಕನ್ನಡ 13’ ಮರುಪ್ರಸಾರ ಮಾಡಲಾಗುತ್ತಿದೆ. ಹೀಗಾಗಿ ‘ಬಿಗ್ ಬಾಸ್’ ಮುಗಿಯುವವರೆಗೂ ‘ರಾಧಾ ಕೃಷ್ಣ’ ಡಬ್ಬಿಂಗ್ ಧಾರಾವಾಹಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.




