☔ Weather
Bengaluru: ☁️ 20°C | AQI 35
Mysore: ☁️ 22°C | AQI 33
Mangalore: 🌤️ 27°C | AQI 96
Bengaluru: ☁️ 20°C | AQI 35
☔ Weather
Bengaluru: ☁️ 20°C | AQI 35
Mysore: ☁️ 22°C | AQI 33
Mangalore: 🌤️ 27°C | AQI 96
Bengaluru: ☁️ 20°C | AQI 35

Renukaswamy Murder Case: ಪಟ್ಟಣಗೆರೆ ಶೆಡ್ನ ನಾಲ್ವರು ಕೆಲಸಗಾರರು ಉಲ್ಟಾ; ಪ್ರಾಸಿಕ್ಯೂಷನ್ಗೆ ಮತ್ತೆ ಶಾಕ್ ನೀಡಿದ ಪ್ರತ್ಯಕ್ಷದರ್ಶಿಗಳು

Renukaswamy Murder Case Twist Two More Pattanagere Shed Workers Turn Hostile In Court
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಪಟ್ಟಣಗೆರೆ ಶೆಡ್ನ ಮತ್ತಿಬ್ಬರು ಕೆಲಸಗಾರರಾದ ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಕೋರ್ಟ್ನಲ್ಲಿ ಉಲ್ಟಾ ಹೊಡೆದು ಪ್ರತಿಕೂಲ ಸಾಕ್ಷಿಗಳಾಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದ ಪಟ್ಟಣಗೆರೆ ಶೆಡ್‌ನ ಇಬ್ಬರು ಕೆಲಸಗಾರರು ಕೋರ್ಟ್‌ನಲ್ಲಿ ಉಲ್ಟಾ ಹೊಡೆದಿದ್ದಾರೆ.

ಪೊಲೀಸರ ಮುಂದೆ ನೀಡಿದ್ದ ತಮ್ಮ ಮೊದಲಿನ ಹೇಳಿಕೆಯಿಂದ ಇವರು ಹಿಂದೆ ಸರಿದಿದ್ದಾರೆ. ಈ ಮೂಲಕ ಪ್ರತಿಕೂಲ ಸಾಕ್ಷಿಗಳಾಗಿ (Hostile Witnesses) ಬದಲಾಗಿ ಪ್ರಾಸಿಕ್ಯೂಷನ್‌ಗೆ ಶಾಕ್ ನೀಡಿದ್ದಾರೆ.

ಪಟ್ಟಣಗೆರೆ ಶೆಡ್‌ನ ಮಲ್ಲಿಕಾರ್ಜುನ್ ಹಾಗೂ ವಿಜಯ್ ಕುಮಾರ್ ಇಂದು ನ್ಯಾಯಾಲಯದಲ್ಲಿ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಕೋರ್ಟ್ ವಿಚಾರಣೆಯಲ್ಲಿ ನಡೆದ ಸಂಪೂರ್ಣ ವಿವರ ಇಲ್ಲಿದೆ.

ನ್ಯಾಯಾಲಯದಲ್ಲಿ ಸಾಕ್ಷಿಗಳು ಹೇಳಿದ್ದೇನು?

ಪಟ್ಟಣಗೆರೆ ಶೆಡ್‌ನಲ್ಲಿ ಪಾರ್ಕಿಂಗ್ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷದರ್ಶಿ ಮಲ್ಲಿಕಾರ್ಜುನ್ ವಿಚಾರಣೆಗೆ ಹಾಜರಾಗಿದ್ದರು. ಕೃತ್ಯ ನಡೆದ ದಿನ ತಾನು ಶೆಡ್‌ನಲ್ಲಿ ಏನನ್ನೂ ನೋಡಿಲ್ಲ ಎಂದು ಅವರು ಹೇಳಿದ್ದಾರೆ.

ನನಗೆ ಈ ಘಟನೆಯ ಬಗ್ಗೆ ಏನೂ ಗೊತ್ತಿಲ್ಲ ಎಂದು ಮಲ್ಲಿಕಾರ್ಜುನ್ ಕೋರ್ಟ್ ಮುಂದೆ ಉಲ್ಟಾ ಹೊಡೆದಿದ್ದಾರೆ. ಇವರ ಜೊತೆಗೆ ಶೆಡ್‌ನಲ್ಲಿ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ವಿಜಯ್ ಕುಮಾರ್ ಕೂಡ ಇದೇ ಹಾದಿ ಹಿಡಿದಿದ್ದಾರೆ.

ನನಗೇನೂ ಗೊತ್ತಿಲ್ಲ, ನಾನು ಕಚೇರಿಯಿಂದ ಹೊರಗೆ ಬಂದೇ ಇಲ್ಲ ಎಂದು ವಿಜಯ್ ಕುಮಾರ್ ಹೇಳಿದ್ದಾರೆ. ಹೊರಗೆ ನಡೆದ ಘಟನೆಯ ಅರಿವಿಲ್ಲ, ನಾನ್ಯಾರನ್ನೂ ನೋಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಒಟ್ಟು ನಾಲ್ವರು ಶೆಡ್ ಕೆಲಸಗಾರರು ಉಲ್ಟಾ

ಈ ಇಬ್ಬರ ಹೇಳಿಕೆಯೊಂದಿಗೆ ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ನಾಲ್ವರು ಸಾಕ್ಷಿಗಳು ಉಲ್ಟಾ ಹೊಡೆದಂತಾಗಿದೆ. ಈ ಹಿಂದೆಯೂ ಕೆಲವು ಪ್ರಮುಖ ಸಾಕ್ಷಿಗಳು ಇದೇ ರೀತಿ ಹೇಳಿಕೆ ಬದಲಿಸಿದ್ದರು.

ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪುನೀತ್, ಕಿರಣ್ ಹಾಗೂ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಕೂಡ ಹಿಂದೆ ಸರಿದಿದ್ದರು. ಶೆಡ್‌ನಲ್ಲಿ ಏನೂ ನಡೆದಿಲ್ಲ ಎಂದು ಹೇಳುವ ಮೂಲಕ ಪ್ರತಿಕೂಲ ಸಾಕ್ಷಿಗಳಾಗಿದ್ದರು. ಇದೀಗ ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಕೂಡ ಅದೇ ಹಾದಿ ಹಿಡಿದಿದ್ದಾರೆ. ಇದು ಪ್ರಕರಣದ ವಿಚಾರಣೆಯಲ್ಲಿ ಹೊಸ ತಿರುವು ನೀಡಿದೆ.

Renukaswamy Murder Case: ಡಿಸೆಂಬರ್ 3ರಂದು ಪಾಟಿಸವಾಲಿಗೆ ಅವಕಾಶ

ಮಲ್ಲಿಕಾರ್ಜುನ್ ಮತ್ತು ವಿಜಯ್ ಕುಮಾರ್ ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ಸಾಕ್ಷ್ಯ ನುಡಿದಿದ್ದಾರೆ. ಹೀಗಾಗಿ ಇಬ್ಬರನ್ನೂ ಪ್ರತಿಕೂಲ ಸಾಕ್ಷಿಗಳು ಎಂದು ಪರಿಗಣಿಸಲು ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ.

ಎಸ್‌ಪಿಪಿ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಪ್ರತಿಕೂಲ ಸಾಕ್ಷಿಗಳ ಪಾಟಿಸವಾಲಿಗೆ (Cross-examination) ಡಿಸೆಂಬರ್ 3ರಂದು ಅವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ.