Rachita Ram: ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ, ಈ ಬಾರಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ವಿಶೇಷ ದಿನದಂದು ನಟಿಯ ನಿವಾಸದ ಬಳಿ ಅಭಿಮಾನಿಗಳ ದೊಡ್ಡ ದಂಡೇ ನೆರೆದಿತ್ತು.
ರಾಜರಾಜೇಶ್ವರಿ ನಗರದ ನಿವಾಸದ ಬಳಿ ಜಮಾಯಿಸಿದ ಫ್ಯಾನ್ಸ್
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿರುವ ರಚಿತಾ ರಾಮ್ ನಿವಾಸದ ಬಳಿ ಮಧ್ಯರಾತ್ರಿಯೇ ಅಭಿಮಾನಿಗಳು ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟಿಯನ್ನು ಹತ್ತಿರದಿಂದ ಕಣ್ತುಂಬಿಕೊಂಡು ಶುಭಾಶಯ ತಿಳಿಸಲು ರಾಜ್ಯದ ವಿವಿಧೆಡೆಗಳಿಂದ ಫ್ಯಾನ್ಸ್ ಬಂದಿದ್ದರು. ರಚಿತಾ ರಾಮ್ ಕೂಡ ಪ್ರೀತಿಯಿಂದ ಎಲ್ಲರ ಶುಭಾಶಯ ಸ್ವೀಕರಿಸಿ, ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡರು.
ಪ್ರೀತಿಯಿಂದ ಕೆನ್ನೆ ಗಿಂಡಿದ ಅಭಿಮಾನಿ
ಅಭಿಮಾನಿಗಳಿಗೆ ನಿರಾಸೆ ಮಾಡದ ರಚಿತಾ ರಾಮ್ ಪ್ರತಿಯೊಬ್ಬರ ಜೊತೆಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ನೀಡುತ್ತಿದ್ದರು. ಈ ವೇಳೆ ಅಭಿಮಾನಿಯೊಬ್ಬ ನಟಿಯ ಹತ್ತಿರ ಬಂದು ಸೆಲ್ಫಿ ತೆಗೆದುಕೊಂಡ ನಂತರ, ಪ್ರೀತಿಯಿಂದ ಅವರ ಕೆನ್ನೆಯನ್ನು ಗಿಂಡಿದ್ದಾನೆ. ಧಿಡೀರ್‌ನೆ ನಡೆದ ಈ ಘಟನೆಯಿಂದ ರಚಿತಾ ರಾಮ್ ಒಂದು ಕ್ಷಣ ಶಾಕ್ ಆದರೂ, ತುಸು ಕೋಪದಲ್ಲಿಯೇ ನಕ್ಕು ಸುಮ್ಮನಾಗಿದ್ದಾರೆ.
Rachita Ram: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅಭಿಮಾನಿಗಳು, “ಕೋಪದಲ್ಲೂ ನಮ್ಮ ಡಿಂಪಲ್ ಕ್ವೀನ್ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ನೆಟ್ಟಿಗರು ಹಾಗೂ ಅಭಿಮಾನಿಗಳು ಈ ವಿಡಿಯೋಗೆ ಸಾಲು ಸಾಲು ಕಾಮೆಂಟ್ ಮಾಡುವ ಮೂಲಕ ರಚಿತಾ ರಾಮ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.




