Jailer 2: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾದ ಟಿಕೆಟ್ ಬೆಲೆ ಏರಿಕೆ ಎರಡನೇ ವಾರದಲ್ಲೂ ಮುಂದುವರಿದಿದೆ. ಕರ್ನಾಟಕದ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಬೆಲೆ 500 ರೂ.ಗಳಿಂದ ಆರಂಭವಾಗುತ್ತಿದ್ದು, ಪ್ರೇಕ್ಷಕರಿಗೆ ಹೊರೆಯಾಗಿದೆ. ಆದರೆ ತಮಿಳುನಾಡಿನಲ್ಲಿ ಕೇವಲ 190 ರೂ. ಗರಿಷ್ಠ ಮಿತಿ ಇದ್ದು, ನಮ್ಮಲ್ಲಿ ನಡೆಯುತ್ತಿರುವ ಈ ಸುಲಿಗೆಗೆ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ನಿಯಂತ್ರಣ; ಕರ್ನಾಟಕದಲ್ಲಿ ಮಿತಿಯಿಲ್ಲದ ದರ ಏರಿಕೆ
ತಮಿಳುನಾಡಿನಲ್ಲಿ ಚಿತ್ರಮಂದಿರಗಳ ಟಿಕೆಟ್ ದರಕ್ಕೆ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಿವೆ. ಅಲ್ಲಿ ಸಿನಿಮಾ ಟಿಕೆಟ್ ದರ 190 ರೂಪಾಯಿ ದಾಟುವಂತಿಲ್ಲ. ಆದರೆ ಕರ್ನಾಟಕದಲ್ಲಿ ಈ ರೀತಿ ಯಾವುದೇ ಮಿತಿಯಿಲ್ಲದಿರುವುದು ಪ್ರೇಕ್ಷಕರಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಸಾಮಾನ್ಯವಾಗಿ ಮೊದಲ ವಾರ ದರ ಹೆಚ್ಚಿಸುವುದು ಸರಿ, ಆದರೆ ಎರಡನೇ ವಾರವೂ ಈ ದರ ಏರಿಕೆ ಮುಂದುವರಿದಿರುವುದು ಸಿನಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ದುಬಾರಿ ಟಿಕೆಟ್ ದರದಿಂದ ಥಿಯೇಟರ್‌ಗೆ ಬರಲು ಹಿಂದೇಟು ಹಾಕ್ತಿದ್ದಾರೆ ಕುಟುಂಬಗಳು
ಮಲ್ಟಿಪ್ಲೆಕ್ಸ್‌ಗಳಲ್ಲಿ ವಾರದ ದಿನಗಳಲ್ಲೂ ಟಿಕೆಟ್ ದರ ದುಬಾರಿಯಾಗಿಯೇ ಮುಂದುವರಿದಿದೆ. ‘ರಾಮಾಯಣ’ ಸಿನಿಮಾ ಬಿಡುಗಡೆಯಾಗುವವರೆಗೆ ಟಿಕೆಟ್ ದರ ಹೀಗೆಯೇ ಗಗನಮುಖಿಯಾಗಿ ಮುಂದುವರಿಯುವ ಸಾಧ್ಯತೆಯಿದೆ. ಟಿಕೆಟ್ ದರ ಕಡಿಮೆ ಇದ್ದರೆ ಇಡೀ ಕುಟುಂಬ ಸಮೇತ ಸಿನಿಮಾ ನೋಡಲು ಬರುವ ಜನರು, ಇದೀಗ ದುಬಾರಿ ದರದಿಂದಾಗಿ ಥಿಯೇಟರ್‌ಗೆ ಬರಲು ಸಂಪೂರ್ಣವಾಗಿ ಹಿಂದೇಟು ಹಾಕುತ್ತಿದ್ದಾರೆ.
Jailer 2: ಬಾಕ್ಸ್ ಆಫೀಸ್‌ನಲ್ಲಿ ‘ಜೈಲರ್ 2’ ಸಿನಿಮಾದ ಭರ್ಜರಿ ಕಲೆಕ್ಷನ್ ವಿವರ
ಅತಿಯಾದ ಟಿಕೆಟ್ ದರದ ನಡುವೆಯೂ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಚಿತ್ರದ ಒಟ್ಟು ವಿಶ್ವಾದ್ಯಂತ ಗ್ರಾಸ್ ಕಲೆಕ್ಷನ್ ಬರೋಬ್ಬರಿ 582.45 ಕೋಟಿ ರೂಪಾಯಿ ತಲುಪಿದೆ. ಭಾರತದಲ್ಲಿ ಒಟ್ಟು ನೆಟ್ ಕಲೆಕ್ಷನ್ 317.20 ಕೋಟಿ ರೂಪಾಯಿ ಹಾಗೂ ಗ್ರಾಸ್ ಕಲೆಕ್ಷನ್ 371.45 ಕೋಟಿ ರೂಪಾಯಿ ಆಗಿದೆ. ವಿದೇಶದಲ್ಲೂ ಈ ಚಿತ್ರ 211.00 ಕೋಟಿ ರೂ. ಗಳಿಸಿದ್ದು, 7ನೇ ದಿನ ಭಾರತದಲ್ಲಿ 28.15 ಕೋಟಿ ನೆಟ್ ಕಲೆಕ್ಷನ್ ಮಾಡಿದೆ.




