☔ Weather
Bengaluru: 🌧️ 26°C | AQI 59
Mysore: ☁️ 30°C | AQI 63
Mangalore: ☁️ 34°C | AQI 74
Bengaluru: 🌧️ 26°C | AQI 59

Jailer 2: ಉತ್ತರ ಭಾರತದ ಮಲ್ಟಿಪ್ಲೆಕ್ಸ್‌ನಲ್ಲಿ ‘ಜೈಲರ್ 2’ ಯೇಕಿಲ್ಲ?

Jailer 2: Why Rajinikanth's Jailer 2 Didn't Release in North India PVR-Inox Multiplexes?

Jailer 2: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ತಮಿಳಿನ ಮೊಟ್ಟ ಮೊದಲ 1000 ಕೋಟಿ ರೂ. ಗಳಿಸಿದ ಸಿನಿಮಾ ಆಗಲಿದೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ಆದರೆ ಈ ದೊಡ್ಡ ದಾಖಲೆಗೆ ಉತ್ತರ ಭಾರತದ ಪಿವಿಆರ್ ಹಾಗೂ ಐನಾಕ್ಸ್ ಮಲ್ಟಿಪ್ಲೆಕ್ಸ್‌ಗಳಿಂದ ಭಾರಿ ತೊಡಕು ಉಂಟಾಗಿದೆ.

ಒಟಿಟಿ ನಿಯಮದ ವಿವಾದ ಮತ್ತು ಮಲ್ಟಿಪ್ಲೆಕ್ಸ್ ನಿರ್ಧಾರ

ದಕ್ಷಿಣ ಭಾರತದಲ್ಲಿ ಪಿವಿಆರ್-ಐನಾಕ್ಸ್ ಸೇರಿದಂತೆ ಎಲ್ಲಾ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಜೈಲರ್ 2’ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಉತ್ತರ ಭಾರತದಲ್ಲಿ ಮಾತ್ರ ಮಲ್ಟಿಪ್ಲೆಕ್ಸ್‌ಗಳು ಈ ಸಿನಿಮಾವನ್ನು ಬಿಡುಗಡೆ ಮಾಡಲು ಒಪ್ಪಿಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ಬಳಿಕವೇ ಒಟಿಟಿಗೆ ನೀಡಬೇಕು ಎಂಬುದು ಮಲ್ಟಿಪ್ಲೆಕ್ಸ್ ಮಾಲೀಕರ ನಿಯಮವಾಗಿದೆ. ಆದರೆ ‘ಜೈಲರ್ 2’ ನಿರ್ಮಾಪಕರು 4 ವಾರಗಳಲ್ಲೇ ಒಟಿಟಿಗೆ ನೀಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಉತ್ತರ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿಲ್ಲ.

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಜೈಲರ್ 2’ ಹವಾ

ಮಲ್ಟಿಪ್ಲೆಕ್ಸ್‌ಗಳಲ್ಲಿ ರಿಲೀಸ್ ಆಗದಿದ್ದರೂ ಉತ್ತರ ಭಾರತದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ‘ಜೈಲರ್ 2’ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶೇಷವೆಂದರೆ ಉತ್ತರ ಭಾರತದಲ್ಲಿ ಮಧ್ಯರಾತ್ರಿ ಶೋಗಳನ್ನು ಪಡೆದುಕೊಂಡ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಜೈಲರ್ 2’ ಪಾತ್ರವಾಗಿದೆ. ಸಿನಿಮಾದಲ್ಲಿ ಹೃತಿಕ್ ರೋಷನ್, ವಿದ್ಯಾ ಬಾಲನ್, ಮಿಥುನ್ ಚಕ್ರವರ್ತಿ ಹಾಗೂ ನೋರಾ ಫತೇಹಿ ಅವರಂತಹ ಬಾಲಿವುಡ್ ಸ್ಟಾರ್‌ಗಳು ನಟಿಸಿರುವುದರಿಂದ ಹಿಂದಿ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Jailer 2: 550 ಕೋಟಿ ರೂ. ದಾಟಿದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್

ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಹಾಗೂ ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾ ಈಗಾಗಲೇ ವಿಶ್ವಾದ್ಯಂತ 550 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. 2023ರಲ್ಲಿ ತೆರೆಕಂಡ ಸೂಪರ್ ಹಿಟ್ ‘ಜೈಲರ್’ ಸಿನಿಮಾದ ಸೀಕ್ವೆಲ್ ಇದಾಗಿದ್ದು, ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಒಂದು ವೇಳೆ ಉತ್ತರ ಭಾರತದ ಮಲ್ಟಿಪ್ಲೆಕ್ಸ್‌ಗಳಲ್ಲೂ ಸಿನಿಮಾ ಬಿಡುಗಡೆಯಾಗಿದ್ದರೆ, ಕಲೆಕ್ಷನ್ ಮೊತ್ತ ಇನ್ನಷ್ಟು ದುಪ್ಪಟ್ಟಾಗುತ್ತಿತ್ತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.