☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Jagadhatri Serial: ಕಿರುತೆರೆಗೆ ಜಗದ್ಧಾತ್ರಿ ಎಂಟ್ರಿ; ಮೋಕ್ಷಿತಾ-ವಿಜಯ್ ಸೂರ್ಯ ಕಾಂಬಿನೇಷನ್‌ಗೆ ಪ್ರೇಕ್ಷಕರು ಫಿದಾ

Jagadhatri Serial: Mokshitha Pai and Vijay Surya's New Show Premieres Today

Jagadhatri Serial: ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಪ್ರತಿ ದಿನ ರಾತ್ರಿ 9 ಗಂಟೆಗೆ ಹೊಸ ಧಾರಾವಾಹಿ ‘ಜಗದ್ಧಾತ್ರಿ’ ಪ್ರಸಾರಗೊಳ್ಳಲಿದೆ. ವಿಭಿನ್ನ ಕಥೆಗಳನ್ನ ಪ್ರೇಕ್ಷಕರಿಗೆ ತಲುಪಿಸುತ್ತಿರುವ ಜೀ ಕನ್ನಡ, ಈ ಬಾರಿ ಅಂಡರ್‌ಕವರ್ ಮಹಿಳಾ ಪೊಲೀಸ್ ಅಧಿಕಾರಿಯ ವಿಭಿನ್ನ ಕಥಾಹಂದರದೊಂದಿಗೆ ಬಂದಿದೆ. 

ಈ ಧಾರಾವಾಹಿಯು ಕೌಟುಂಬಿಕ ಕಥೆಯ ಜೊತೆಗೆ ಆಕ್ಷನ್ ಥ್ರಿಲ್ಲರ್ ಕಥೆಯನ್ನೂ ಹೊಂದಿದೆ. ಧಾರಾವಾಹಿಯಲ್ಲಿ ಮೋಕ್ಷಿತಾ ಪೈ (Mokshitha Pai), ವಿಜಯ್ ಲಲಿತಾ ಸೂರ್ಯ (Vijay Surya) ಹಾಗೂ ಕವಿತಾ ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 

ಕೌಟುಂಬಿಕ ಹೌಸ್‌ಹೋಲ್ಡ್ ಡ್ರಾಮಾದ ಜೊತೆಗೆ ಭರ್ಜರಿ ಆಕ್ಷನ್ ದೃಶ್ಯಗಳು ಈ ಸೀರಿಯಲ್‌ನಲ್ಲಿ ಇರಲಿವೆ. ಕಿರುತೆರೆ ಪ್ರೇಕ್ಷಕರಿಗೆ ಇದು ಹೊಸ ಮಾದರಿಯ ಮನರಂಜನೆ ನೀಡಲಿದೆ. 

ಅಂಡರ್‌ಕವರ್ ಕಾಪ್ ಜಗದ್ಧಾತ್ರಿ: ತಾಯಿಯ ಮೇಲಿನ ಕಳಂಕ ಅಳಿಸುವ ಪಯಣ

ಮೋಕ್ಷಿತಾ ಪೈ ಅವರು ಮುಖ್ಯ ಪಾತ್ರವಾದ ಜಗದ್ಧಾತ್ರಿಗೆ ಜೀವ ತುಂಬಿದ್ದಾರೆ. ಕುಟುಂಬದೊಳಗೆ ಜವಾಬ್ದಾರಿಯುತ ಮಗಳಾಗಿ, ಹೊರಜಗತ್ತಿನಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಎರಡು ವಿಭಿನ್ನ ಆಯಾಮಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. 

ಅಪ್ಪಟ ದೇಶಭಕ್ತೆಯಾಗಿದ್ದ ತನ್ನ ತಾಯಿಯ ಮೇಲೆ ದೇಶದ್ರೋಹದ ಆರೋಪ ಬಂದಿರುತ್ತದೆ. ಮನೆಯವರ ಕಟುಮಾತುಗಳನ್ನು ಸಹಿಸಿಕೊಂಡು, ತಾಯಿಗೆ ನ್ಯಾಯ ದೊರಕಿಸಿಕೊಡುವ ಜಗದ್ಧಾತ್ರಿಯ ಪಯಣವೇ ಈ ಧಾರಾವಾಹಿಯ ಕೇಂದ್ರಬಿಂದುವಾಗಿದೆ. 

ಹಾಡಿನ ಹುಕ್ ಸ್ಟೆಪ್ ವೈರಲ್: ಮೋಕ್ಷಿತಾ-ವಿಜಯ್ ಜೋಡಿ ಸೂಪರ್

‘ಜಗದ್ಧಾತ್ರಿ’ ಧಾರಾವಾಹಿಯ ಡ್ಯುಯೆಟ್ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡಿನ ಹುಕ್ ಸ್ಟೆಪ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. 

ಮೋಕ್ಷಿತಾ ಪೈ ಮತ್ತು ವಿಜಯ್ ಸೂರ್ಯ ಜೋಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಬ್ಬರೂ ಈ ಧಾರಾವಾಹಿಯಲ್ಲಿ ಐಪಿಎಸ್ ಅಧಿಕಾರಿಗಳ ಪಾತ್ರದಲ್ಲಿದ್ದು, ಇವರ ನಡುವಿನ ಪ್ರೇಮಕಥೆಯೂ ಮತ್ತೊಂದು ಆಕರ್ಷಣೆಯಾಗಿದೆ. 

Jagadhatri Serial: ದೊಡ್ಡ ತಾರಾಗಣ ಹಾಗೂ ಧಮಾಕಾ ತಾಂತ್ರಿಕ ವರ್ಗ

ಗಿರಿಜಾ ಲೋಕೇಶ್, ಅರುಣಾ ಬಾಲರಾಜ್, ಲಕ್ಷ್ಮೀ ಸಿದ್ದಯ್ಯ, ಮೈಕೋ ಮಂಜು, ರವಿ ಭಟ್ ಸೇರಿದಂತೆ ದೊಡ್ಡ ತಾರಾಗಣವೇ ಈ ಧಾರಾವಾಹಿಯಲ್ಲಿದೆ. 

ಚಿತ್ರ ನಿರ್ದೇಶಕರಾದ ಮಹೇಶ್‌ರಾವ್ ಹಾಗೂ ಪ್ರಕಾಶ್ ಅವರ ನಿರ್ಮಾಣದಲ್ಲಿ, ಮಹೇಶ್ ಸಾರಂಗ್ ನಿರ್ದೇಶನದಲ್ಲಿ ಕೀರ್ತಿ ಅಕ್ಷಯ ನೆಟ್‌ವರ್ಕ್ ಬ್ಯಾನರ್ ಅಡಿಯಲ್ಲಿ ಈ ಧಾರಾವಾಹಿ ಮೂಡಿಬರುತ್ತಿದೆ. 

ಪ್ರತಿ ಮನೆಯ ಹೆಣ್ಣುಮಗಳು ಎದುರಿಸುತ್ತಿರುವ ಸವಾಲುಗಳನ್ನು ಕಥೆಯ ರೂಪದಲ್ಲಿ ತಲುಪಿಸುವುದೇ ಜೀ ಕನ್ನಡದ ಉದ್ದೇಶ ಎಂದು ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ತಿಳಿಸಿದ್ದಾರೆ.