☔ Weather
Bengaluru: ☁️ 21°C | AQI 59
Mysore: 🌤️ 22°C | AQI 63
Mangalore: ☁️ 26°C | AQI 69
Bengaluru: ☁️ 21°C | AQI 59

INTERVIEW: 7 ವರ್ಷಗಳ ನಂತರ ಕನ್ನಡಕ್ಕೆ ದಿವ್ಯಾ ಶ್ರೀಧರ್ ಕಂಬ್ಯಾಕ್; ‘ಆನಂದ ನಿಲಯ’ದ ಸುಧಾ ಹೇಳಿದ್ದೇನು?

INTERVIEW: Akashadeepa Fame Divya Sridhar Makes Comeback To Kannada Serial

INTERVIEW: ‘ಆಕಾಶದೀಪ’ ಧಾರಾವಾಹಿಯ (Akashadeepa Serial) ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ದಿವ್ಯಾ ಶ್ರೀಧರ್ (Divya Shridhar), ಸುದೀರ್ಘ 7 ವರ್ಷಗಳ ನಂತರ ಸುವರ್ಣ ವಾಹಿನಿಯ ‘ಆನಂದ ನಿಲಯ’ ಧಾರಾವಾಹಿಯ (Ananda Nilaya Serial) ‘ಸುಧಾ’ ಪಾತ್ರದ ಮೂಲಕ ಕನ್ನಡ ಕಿರುತೆರೆಗೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ತಮಿಳು ಕಿರುತೆರೆಯಲ್ಲಿ ಸಕ್ಸಸ್‌ಫುಲ್ ಧಾರಾವಾಹಿಗಳನ್ನು ಮುಗಿಸಿ, ತವರು ಮನೆಗೆ ಮರಳಿರುವ ಅವರು, ಜಂಟಿ ಕುಟುಂಬವನ್ನು ಮುನ್ನಡೆಸುವ ಹಿರಿ ಸೊಸೆಯಾಗಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದ್ದಾರೆ. ತಮ್ಮ ಕಂಬ್ಯಾಕ್, ಕುಟುಂಬದ ಬೆಂಬಲ ಹಾಗೂ ಹೊಸ ಪಾತ್ರದ ಬಗ್ಗೆ ನಟಿ ದಿವ್ಯಾ ಶ್ರೀಧರ್ ಮನಬಿಚ್ಚಿ ಮಾತನಾಡಿದ ವಿಶೇಷ ಸಂದರ್ಶನ ಇಲ್ಲಿದೆ.

13 ವರ್ಷಗಳ ಹಿಂದೆ ‘ಆಕಾಶದೀಪ’, ಈಗ ‘ಆನಂದ ನಿಲಯ’… ಸುವರ್ಣ ವಾಹಿನಿಗೆ ಈ ಕಂಬ್ಯಾಕ್ ಫೀಲಿಂಗ್ ಹೇಗಿದೆ? 

ದಿವ್ಯಾ ಶ್ರೀಧರ್: ತುಂಬಾನೇ ಚೆನ್ನಾಗಿದೆ. ತುಂಬಾ ಖುಷಿಯಾಗ್ತಾ ಇದೆ. 7 ವರ್ಷ ಆಯ್ತು ನಾನು ಕನ್ನಡ ಪ್ರಾಜೆಕ್ಟ್ ಮಾಡಿ, ಮತ್ತೆ ಕನ್ನಡ ಇಂಡಸ್ಟ್ರಿಗೆ ಬಂದಿದ್ದು. ಅದೂ ಸುವರ್ಣ ಟಿವಿಗೆ (Star Suvarna) ಬಂದಿದ್ದು ತುಂಬಾನೇ ಖುಷಿಯಾಗ್ತಾ ಇದೆ. ಇನ್ನೊಂದು, ಟೈಟಲ್ ‘ಆಕಾಶದೀಪ’. ಇದು ‘ಆನಂದ ನಿಲಯ’. ಎರಡೂ ‘ಆ’ ಇಂದಾನೇ ಸ್ಟಾರ್ಟ್ ಆಗ್ತಾ ಇದೆ. ಸ್ಟಾರ್ಟಿಂಗೇ ಒಂಥರಾ ಪಾಸಿಟಿವ್ ವೈಬ್.

‘ಅಮ್ಮ’ ಸೀರಿಯಲ್ ಆದಮೇಲೆ 10 ವರ್ಷ ಗ್ಯಾಪ್ ಇತ್ತು.. ಮತ್ತೆ ಕನ್ನಡಕ್ಕೆ ಬರೋಕೆ ಈ ‘ಸುಧಾ’ ಪಾತ್ರವೇ ಕಾರಣವಾಯಿತಾ? 

ದಿವ್ಯಾ ಶ್ರೀಧರ್: ‘ಅಮ್ಮ’ ಸೀರಿಯಲ್ ಆದಮೇಲೆ ನಾನು ‘ಕಣ್ಮಣಿ’ ಮಾಡಿದ್ದೆ, ಉದಯದಲ್ಲಿ. 2018 ರಲ್ಲಿ ಮಾಡಿದ್ದೆ. ಅದಾದಮೇಲೆ ಇದೆ. ‘ಅಮ್ಮ’ ಸೀರಿಯಲ್.. ನಾನು ಇವಾಗ ನೀವು ಹೇಳಿದ ಹಾಗೆ ಇವಾಗ ಇದುವರೆಗೂ ನನ್ನ ಎಲ್ಲರೂ ಕರೀತಾ ಇರೋದು ‘ಆಕಾಶದೀಪ’ ಅಂತಾನೇ. ‘ದೀಪ’, ‘ದೀಪ’ ಅಂತಾನೇ ಎಲ್ಲರೂ ಕರೀತಾ ಇದ್ದಿದ್ದು. ‘ಅಮ್ಮ’ ಸೀರಿಯಲ್ ನಾವು ಮಾಡಿದ್ದು.. ‘ಅಮ್ಮ’ ಮತ್ತೆ ‘ಕಣ್ಮಣಿ’ ಮಾಡಿದ್ರೂ, ಅದು ಅಷ್ಟೊಂದು ನನಗೆ ಹೆಸರು ಕೊಟ್ಟಿಲ್ಲ.

‘ಆಕಾಶದೀಪ’ ದೀಪ ಪಾತ್ರ ಕೊಟ್ಟಷ್ಟು ಹೆಸರು ಕೊಟ್ಟಿಲ್ಲ. ಅದು ಹಿಟ್ ಆಗಿತ್ತು, ‘ಅಮ್ಮ’ ಸೀರಿಯಲ್ ಗೆ ಒಳ್ಳೆ ರೇಟಿಂಗ್ ಎಲ್ಲಾ ಬರ್ತಾ ಇತ್ತು. ‘ಕಣ್ಮಣಿ’ನೂ ಚೆನ್ನಾಗಿತ್ತು. ಆದ್ರೆ ‘ದೀಪ’ ಅಂತ ಒಂದು ಪಾತ್ರ ಆಡಿಯನ್ಸ್‌ಗೆ ರೀಚ್ ಆಗುತ್ತಲ್ಲ… ಇವಾಗಲೂ ತುಂಬಾ ಜನ ನನ್ನ ಹತ್ರ ಮಾತಾಡೋವರೆಲ್ಲ ಹೇಳ್ತಾರೆ, ನೀವು ‘ಆಕಾಶದೀಪ’ ನೋಡ್ತಾ ಇದ್ರಲ್ಲ, ದೀಪ ನನಗೆ ತುಂಬಾ ಇಷ್ಟ ಆಗಿತ್ತು, ‘ಆಕಾಶದೀಪ’ ತುಂಬಾ ಇಷ್ಟ ಆಗಿತ್ತು. ನಾವು ನಿಮಗೋಸ್ಕರನೇ ಈ ಸೀರಿಯಲ್ ನೋಡೋಕೆ ಸ್ಟಾರ್ಟ್ ಮಾಡಿದ್ದೀವಿ, ದೀಪ ಮಾಡ್ತಾ ಇದ್ದಾರೆ ಅಂತ. ತುಂಬಾ ಜನ ಹಂಗೆ ಹೇಳಿದ್ದಾರೆ, ದೀಪ ಮಾಡ್ತಾ ಇದ್ದಾರೆ ಅಂತ ನೋಡೋಕೆ ಸ್ಟಾರ್ಟ್ ಮಾಡಿದ್ವಿ, ತುಂಬಾ ಚೆನ್ನಾಗಿ ಬರ್ತಾ ಇದೆ ಅಂತ.

ಈ ಸೀರಿಯಲ್‌ನಲ್ಲಿ ನಿಮ್ಮ ‘ಸುಧಾ’ ಕ್ಯಾರೆಕ್ಟರ್‌ನ ಮೇನ್ ಹೈಲೈಟ್ ಏನು? INTERVIEW

ದಿವ್ಯಾ ಶ್ರೀಧರ್: ‘ಸುಧಾ’ ಅಂದ್ರೆ, ಒಂದು ಲೆಕ್ಕದಲ್ಲಿ ಹೇಳಿದ್ರೆ ಈ ಮನೆ ಪಿಲ್ಲರ್ ಅಂತಾನೇ ಹೇಳಬಹುದು, ‘ಆನಂದ ನಿಲಯ’ದ್ದು. ಯಾಕಂದ್ರೆ ಎಲ್ಲಾ ಸಂಸಾರನಾ ಎಲ್ಲೂ ಬಿಟ್ಟುಕೊಡದೆ, ಸಂಸಾರ ಕಾಪಾಡ್ಕೊಂಡು ಹೋಗುವಂತ ಕ್ಯಾರೆಕ್ಟರ್. ದೊಡ್ಡ ಸೊಸೆಯಾಗಿರೋ ಜವಾಬ್ದಾರಿ. ಜಾಯಿಂಟ್ ಫ್ಯಾಮಿಲಿ ಇರುವಂತ ಸ್ಟೋರಿ ಇದು. ಅದು ಒಂದು ಕುಟುಂಬ, ಒಂದು ಹ್ಯಾಪಿ ಫ್ಯಾಮಿಲಿ ಒಡೆಯದೆ ಇರೋ ತರ ನೋಡ್ಕೊಂಡು ಹೋಗೋ ದೊಡ್ಡ ಜವಾಬ್ದಾರಿ ಇರುವಂತ ಪಾತ್ರ.

ಸ್ವಂತ ಮಕ್ಕಳನ್ನೇ ಮಾಡಿಕೊಳ್ಳದೆ, ಮೈದುನರನ್ನೇ ಮಕ್ಕಳಂತೆ ಸಾಕೋ ಈ ತ್ಯಾಗಮಯಿ ರೋಲ್ ಒಪ್ಪಿಕೊಳ್ಳೋಕೆ ಏನು ಅನಿಸಿತು? 

ದಿವ್ಯಾ ಶ್ರೀಧರ್: ಸ್ಟಾರ್ಟಿಂಗ್‌ನಲ್ಲಿ ನನಗೆ… ಅವರು ಆಲ್ರೆಡಿ ತಮಿಳಿನಲ್ಲಿ ಬಂದಿತ್ತು, ರೀಮೇಕ್ ಸೀರಿಯಲ್. ಅದರಲ್ಲಿ ಆ ಆರ್ಟಿಸ್ಟ್ ಸ್ವಲ್ಪ ಏಜ್ಡ್ ಆಗಿರೋ ಆರ್ಟಿಸ್ಟ್. ಅದನ್ನ ನನಗೆ ಫಸ್ಟ್ ಅವರು ಎಕ್ಸ್‌ಪ್ಲೇನ್ ಮಾಡಿದಾಗ, ಇಲ್ಲ, ಆ ತರ ಇರೋದಿಲ್ಲ. ನಮ್ಮ ನೇಟಿವ್, ನಮಗೆ ಇದು ಯಾವ ತರ ಕಥೆ ಯಾವ ತರ ಇದಾಗುತ್ತೋ, ನಾವು ಆ ತರ ಮಾಡ್ಕೊಂಡು ಹೋಗ್ತೀವಿ. ಅದಕ್ಕೋಸ್ಕರ ಸ್ವಲ್ಪ ಯಂಗ್ ಆಗಿರೋರನ್ನ ತಗೊಳ್ತಾ ಇದ್ದೀವಿ. ಅಷ್ಟೊಂದು ಏಜ್ಡ್ ಆಗಿರೋರನ್ನ ತಗೊಳ್ತಾ ಇಲ್ಲ. ನಿಮಗೊಂದು 20 ಇಯರ್ಸ್‌ನಲ್ಲೇ ಮದುವೆಯಾಗಿ ಬಂದಿರ್ತೀರಾ, ಅವಾಗ ಒಂದು 10 ವರ್ಷ ಆಗಿದೆ ಮದುವೆಯಾಗಿ. ಆ ತರದ್ದು. ನೀವು ಮಕ್ಕಳು ಮಾಡಿಕೊಳ್ಳೋದು ಬೇಡ… ಮೈದುನರು ತುಂಬಾ ಚಿಕ್ಕವರಾಗಿರ್ತಾರೆ. ಗಂಡ ಆ ತರ ಹೇಳಬೇಕಾದ್ರೆ ನೀವು ಅದಕ್ಕೆ ಒಪ್ಕೊಳ್ತೀರಾ.

ಅಲ್ಲಿ ತಮಿಳಿನಲ್ಲಿ ತುಂಬಾ ಸೂಪರ್-ಡೂಪರ್ ಹಿಟ್ ಸೀರಿಯಲ್ ಅದು. ಯಾಕಂದ್ರೆ ನನಗೆ ಗೊತ್ತಿದೆ, ನಾನು ನೋಡಲಿಲ್ಲ, ಆದ್ರೆ ಫಾಲೋ ಮಾಡ್ತಾ ಇದ್ದೆ. ಎಲ್ಲರೂ ಹೇಳ್ತಾ ಇದ್ರು, ತುಂಬಾ ಚೆನ್ನಾಗಿ ಬರ್ತಾ ಇದೆ ಅಂತ. ಆಲ್ಮೋಸ್ಟ್ ಒಂದು 1500–2000 ಎಪಿಸೋಡ್ ಆಗಿದೆ ಅದು. ಮತ್ತೆ ಆ ಪಾತ್ರ ಮಾಡಿದ್ದಕ್ಕೆ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಸಿಕ್ಕಿತ್ತು ತಮಿಳಿನಲ್ಲಿ. ತುಂಬಾ ಚೆನ್ನಾಗಿ ಬಂದಿತ್ತು. ಅದು ಒಂದು ಮೇನ್ ರೀಸನ್ ಆಗಿತ್ತು, ಸ್ಟೋರಿನೂ ತುಂಬಾ ಚೆನ್ನಾಗಿತ್ತು. ಮತ್ತೆ ಆಸ್ ಇಟ್ ಈಸ್ ತಮಿಳಿನಲ್ಲಿ ಹೇಗಿದೆಯೋ ಹಂಗೆ ಮಾಡಿಲ್ಲ. ನಮ್ಮ ಕರ್ನಾಟಕಕ್ಕೆ ಯಾವ ತರ ಬೇಕೋ ಸ್ವಲ್ಪ ಚೇಂಜಸ್ ಮಾಡ್ಕೊಂಡಿದ್ದೀವಿ.

ಇನ್ನೊಂದು ಏನು ಅಂತ ಹೇಳಿದ್ರೆ ನನಗೆ ಪ್ರೊಡಕ್ಷನ್ ಹೌಸ್, ಸುಬ್ಬು ಸರ್ ಮತ್ತೆ ಕೃಷ್ಣ ಸರ್. ಕೃಷ್ಣ ಸರ್ ನನ್ನ ಫಸ್ಟ್ ಈ ಸೀರಿಯಲ್‌ಗೆ ಅಪ್ರೋಚ್ ಮಾಡಿದ್ದು. ಅವರು ಮಾತಾಡಿದ ರೀತಿ ಆಗಿರಬಹುದು… ಯಾಕಂದ್ರೆ ನಾನು ಕಮ್‌ಬ್ಯಾಕ್ ಕೊಡ್ತಾ ಇದ್ದೀನಿ ಅಂತ ಹೇಳಿದ್ರೆ, ಮತ್ತೆ ಪ್ರಾಜೆಕ್ಟ್ ಹಾಗೇ ಇರಬೇಕಲ್ಲ, ಸುಮ್ನೆ ಯಾವುದೋ ಒಂದು ಮಾಡೋಕ್ಕೂ ಆಗೋದಿಲ್ಲವಲ್ಲ. ಎಲ್ಲರೂ ‘ದೀಪ’ ಅಂತ ಕರೀತಾ ಇದ್ದಾರೆ, ನೆಕ್ಸ್ಟ್ ‘ಸುಧಾ’ ಅಂತ ಕರಿಯೋ ಹಾಗೆ ಆಗಬೇಕು. ‘ದೀಪ’ ಅನ್ನೋ ಹೆಸರು ಮರೀಬೇಕು, ಆ ತರ ಇರಬೇಕು ನೆಕ್ಸ್ಟ್ ಪ್ರಾಜೆಕ್ಟ್ ಅಂತ ಅನ್ಕೊಂಡಿದ್ದೆ. ಅದೇ ತರ ಪ್ರಾಜೆಕ್ಟ್ ಸಿಕ್ಕಿದೆ, ಪ್ರೊಡಕ್ಷನ್ ಹೌಸ್ ಮೇನ್ ರೀಸನ್ ನನಗೆ ಈ ಪ್ರಾಜೆಕ್ಟ್ ಒಪ್ಕೊಳ್ಳೋದಕ್ಕೆ.

ಅಣ್ಣ-ಅತ್ತಿಗೆನೇ ಮೇನ್ ಇರೋ ಈ ಕೂಡು ಕುಟುಂಬವನ್ನ ನಿಭಾಯಿಸೋದು ಎಷ್ಟು ಚಾಲೆಂಜಿಂಗ್ ಅನಿಸ್ತಿದೆ? 

ದಿವ್ಯಾ ಶ್ರೀಧರ್: ಚಾಲೆಂಜಿಂಗ್ ಅಂತ ಹೇಳಿದ್ರೆ… ಸೀನ್ ಪೇಪರ್ ಹೇಗಿರುತ್ತೋ ಅದನ್ನೆಲ್ಲ ನನಗೆ… ಅದು ಹೇಳೋಕೆ ಗೊತ್ತಾಗ್ತಾ ಇಲ್ಲ. ಸೀನ್ ಪೇಪರ್ ಹೇಗಿರುತ್ತೆ, ಡೈಲಾಗ್ಸ್ ಹೇಗಿರುತ್ತೋ ಹಾಗೆ ಹೇಳ್ಕೊಂಡು ಹೋಗ್ತೀವಿ, ಡೈರೆಕ್ಟರ್ ಏನು ಹೇಳಿಕೊಡ್ತಾರೋ ಹಾಗೆ ಮಾಡ್ಕೊಂಡು ಹೋಗ್ತಾ ಇದ್ದೀನಿ, ಅಷ್ಟೇ. ಅದಲ್ದೆ ಅದನ್ನ ಬಿಟ್ಟು ಸ್ಪೆಷಲ್ ಆಗಿ ನಾನೇನು ಇದ್ಮಾಡಿಕೊಳ್ಳೋ ಆ ತರ ಏನೂ ಇಲ್ಲ. ಆದ್ರೆ ಪ್ರತಿದಿನ ಎಲ್ಲಾ ಸೀನ್ಸ್‌ನಲ್ಲೂ ನಂಗಿರುತ್ತೆ. ಎಲ್ಲಾ ಸೀನ್ಸ್‌ನಲ್ಲೂ ಇರ್ತೀನಿ. ಎಲ್ಲಾ ದಿನ, ಶೂಟಿಂಗ್ ಎಷ್ಟು ದಿನ ಇರುತ್ತೋ ಅಷ್ಟು ದಿನ ನಂಗೆ ಡೇಟ್ಸ್ ಇರುತ್ತೆ. ಅದರಲ್ಲೇ ನಿಮಗೆ ಗೊತ್ತಾಗುತ್ತೆ ಎಷ್ಟು ಇಂಪಾರ್ಟೆನ್ಸ್ ಇದೆ ಈ ಪಾತ್ರಕ್ಕೆ ಅಂತ.

Image: Divya Shridhar/Instagram

ತಮಿಳು ಸೀರಿಯಲ್ಸ್ ಹಾಗೂ ಸಿನಿಮಾಗಳ ನಂತ್ರ ಮತ್ತೆ ಕನ್ನಡ ಕಿರುತೆರೆಗೆ ಬಂದಾಗ ಸಿಕ್ಕ ವೆಲ್ಕಮ್ ಹೇಗಿತ್ತು? 

ದಿವ್ಯಾ ಶ್ರೀಧರ್: ತುಂಬಾ ಚೆನ್ನಾಗಿದೆ. ತುಂಬಾನೇ ಚೆನ್ನಾಗಿದೆ. ಯಾಕಂದ್ರೆ ಇನ್ನೊಂದು, ನಾನು ತಮಿಳು ಮಾಡಬೇಕಾದ್ರೆ ಕನ್ನಡ ಮಾಡ್ತಾನೇ ಇರ್ಲಿಲ್ಲ. ನನ್ನ ಫ್ಯಾನ್ಸ್ ಆಗಲಿ, ತುಂಬಾ ಜನ ಕೇಳ್ತಾ ಇದ್ರು, ಯಾಕೆ ನೀವು ಕನ್ನಡ ಮಾಡ್ತಾ ಇಲ್ಲ, ನಿಮಗೆ ಕನ್ನಡ ಇಂಡಸ್ಟ್ರಿಗೆ ಬರೋಕೆ ಇಷ್ಟ ಇಲ್ವಾ? ಅಂತ. ಇಷ್ಟ ಇಲ್ಲದೆ ನಾನು ತಮಿಳು ಮಾಡ್ತಾ ಇರ್ಲಿಲ್ಲ. ಯಾಕಂದ್ರೆ ನಾನು ಅಲ್ಲಿ ಬ್ಯುಸಿ ಇರೋದ್ರಿಂದ, ನನಗೆ ಅಟ್ ಎ ಟೈಮ್ ಎರಡು ಪ್ರಾಜೆಕ್ಟ್ ಮಾಡೋದು ಕಷ್ಟ ಆಗುತ್ತೆ. ಫ್ಯಾಮಿಲಿನೂ ಇದೆ, ಅದಕ್ಕೂ ಟೈಮ್ ಕೊಡಬೇಕಲ್ವಾ? ಸೋ ಒಂದೇ ಪ್ರಾಜೆಕ್ಟ್. ನಾನು ಇದುವರೆಗೂ ನನ್ನ ಕೆರಿಯರ್‌ನಲ್ಲಿ ಮಾಡಿದ್ದೆಲ್ಲಾ ಒಂದು ಪ್ರಾಜೆಕ್ಟ್ ಕಮಿಟ್ ಆದ್ರೆ ಇನ್ನೊಂದು ಪ್ರಾಜೆಕ್ಟ್ ಮಾಡಿದ್ದೇ ಇಲ್ಲ, ಎರಡು ಪ್ರಾಜೆಕ್ಟ್ ಮಾಡ್ಕೊಂಡು ಹೋಗಿದ್ದೇ ಇಲ್ಲ.

ನಾನು ತಮಿಳಿನಲ್ಲಿ ಎರಡು ಸೀರಿಯಲ್ ಮಾಡಿದ್ದೀನಿ, ಎರಡೂ 1000 ಎಪಿಸೋಡ್ಸ್ ಆಗಿರೋದ್ರಿಂದ ನನಗೆ ಆ 7 ಇಯರ್ಸ್ ಕರೆಕ್ಟ್ ಆಯ್ತು. ಅದು ತಮಿಳು ಸೀರಿಯಲ್ ಮುಗಿಯೋ ಟೈಮ್‌ಗೆ ಇವರು ನನಗೆ ಹೇಳಿದ್ರ. ಓಕೆ, ಮತ್ತೆ ನನ್ನ ಡ್ಯಾಡೂ ಅಷ್ಟೇ, ಅವರು ತುಂಬಾ ಟೈಮ್‌ಯಿಂದ ಹೇಳ್ತಾ ಇದ್ರು ಕನ್ನಡ ಸೀರಿಯಲ್ ಮಾಡು ಅಂತ, ನಮ್ಮ ರಿಲೇಟಿವ್ಸ್ ಎಲ್ಲಾ ಕರ್ನಾಟಕದಲ್ಲೇ ಇರೋದ್ರಿಂದ. ತಮಿಳು ಜಾಸ್ತಿ… ತಮಿಳು ಅಂದ್ರೂ ನನ್ನ ಫ್ಯಾಮಿಲಿ ಮಾತ್ರ ನೋಡ್ತಾರೆ, ಬೇರೆ ಯಾರೂ ಅಷ್ಟಾಗಿ ನೋಡೋದಿಲ್ಲ, ಫ್ರೆಂಡ್ಸ್ ಆಗಲಿ ಯಾರೂ ಅಷ್ಟು ನೋಡೋದಿಲ್ಲ ಅಲ್ವಾ? ಕನ್ನಡ ಮಾಡು, ಮಾಡು” ಅಂತ ಹೇಳ್ತಾ ಇದ್ರು. ಓಕೆ, ಇದು ಒಳ್ಳೆ ಆಪರ್ಚುನಿಟಿ, ಮಿಸ್ ಮಾಡ್ಕೋಬಾರದು ಅಂತ ಬಂದೆ.

‘ಆಕಾಶದೀಪ’ದ ದೀಪ ಮತ್ತು ‘ಆನಂದ ನಿಲಯ’ದ ಸುಧಾ… ಇವೆರಡರಲ್ಲಿ ನಿಮ್ಮ ರಿಯಲ್ ಲೈಫ್‌ಗೆ ಹತ್ತಿರ ಅನಿಸೋ ಪಾತ್ರ ಯಾವುದು? 

ದಿವ್ಯಾ ಶ್ರೀಧರ್: ರಿಯಲ್ ಲೈಫ್‌ಗೆ ‘ಆಕಾಶದೀಪ’ ಅದರಲ್ಲಿ ಐಪಿಎಸ್ ಆಫೀಸರ್. ಅದು ದೊಡ್ಡ ಮನೆ ಸೊಸೆ, ಮನೆಗೆ ಹಿರಿ ಸೊಸೆ. ಇದರಲ್ಲೂ ಅಷ್ಟೇ, ಈ ಮನೆ ಹಿರಿ ಸೊಸೆ. ಎರಡೂ ಸೀರಿಯಲ್‌ನಲ್ಲೂ ನಾನು ಹಿರಿ ಸೊಸೆಯಾಗಿ ಮಾಡಿರೋದು. ಅದು ಸೇಮ್ ಇದೆ. ರಿಯಲ್ ಲೈಫ್‌ಗೆ ಖಂಡಿತ ‘ಆಕಾಶದೀಪ’… ಸೊಸೆ ಅಂತ ಹೇಳಿದ್ರೆ ಆಗಲ್ಲ, ಐಪಿಎಸ್ ಆಫೀಸರ್ ಅಂತೂ ಅಲ್ವೇ ಅಲ್ಲ ಬಿಡಿ, ನನಗೆ ಅದಕ್ಕೂ ರಿಯಲ್ ಲೈಫ್‌ಗೂ ಸಂಬಂಧನೇ ಇಲ್ಲ. ಆ ಸೊಸೆ ಒಂದು… ಮನೆಯಲ್ಲಿ ಒಂದು ಗೃಹಿಣಿಯಾಗಿ ಹೆಂಗಿರ್ತಾರೋ, ಮನೆ ಹೇಗೆ ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಾರೋ, ಎರಡು ಸೀರಿಯಲ್‌ನಲ್ಲೂ ಹಾಗೇನೇ ಇದೆ. ಮನೆ ನೋಡ್ಕೊಂಡು ಹೋಗೋದು, ಮನೆ ಜವಾಬ್ದಾರಿ ಎರಡರಲ್ಲೂ ಇತ್ತು. ಅದರಲ್ಲೂ ಹಿರಿ ಸೊಸೆ ಮನೆ ಜವಾಬ್ದಾರಿ ಜೊತೆಗೆ ಐಪಿಎಸ್ ಆಫೀಸರ್ ಆಗ್ತಾಳೆ, ಅದು ಓದೋ ಕನಸಿತ್ತು. ಇದರಲ್ಲಿ ಹಿರಿ ಸೊಸೆಯಾಗಿ ಮನೆ ನೋಡ್ಕೊಳ್ಳೋ ಜವಾಬ್ದಾರಿ.

ಪ್ರೋಮೋ ನೋಡಿ ವೀಕ್ಷಕರಿಂದ ಹಾಗೂ ನಿಮ್ಮ ಫ್ಯಾನ್ಸ್‌ನಿಂದ ಸಿಗ್ತಿರೋ ರೆಸ್ಪಾನ್ಸ್ ಹೇಗಿದೆ? 

ದಿವ್ಯಾ ಶ್ರೀಧರ್: ತುಂಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿದೆ ಅಂತ ಎಲ್ಲಾ ಹೇಳ್ತಾ ಇದ್ದಾರೆ. ಇನ್ನೊಂದು ಏನು ಅಂತ ಹೇಳಿದ್ರೆ, ಎಲ್ಲಾ ಫ್ಯಾಮಿಲಿ, ಎಲ್ಲಾ ಚಿಕ್ಕ ಮಕ್ಕಳಿಂದನೂ ಕೂತ್ಕೊಂಡು ನೋಡಬಹುದು.

ಮನೆಗೆ ಹೊಸ ಸೊಸೆಯಂದಿರು ಬಂದಮೇಲೆ ‘ಆನಂದ ನಿಲಯ’ ಆನಂದವಾಗಿಯೇ ಉಳಿಯುತ್ತಾ ಅಥವಾ ಒಡೆದು ಹೋಗುತ್ತಾ? 

ದಿವ್ಯಾ ಶ್ರೀಧರ್: ಆನಂದ ನಿಲಯ’ದಲ್ಲಿ ಆನಂದ ಒಡೆದು ಹೋಗೋಕೆ ಸುಧಾ ಅಂತೂ ಬಿಡೋದಿಲ್ಲ. ಸುಧಾ ಧರ್ಮ ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ. ಮತ್ತೆ ತಮ್ಮಂದಿರೂ ಅಷ್ಟೇ, ಅವರಿಗೆ ಫ್ಯಾಮಿಲಿನೇ ಫಸ್ಟ್ ಪ್ರಿಫರೆನ್ಸ್ ಕೊಡ್ತಾರೆ. ಇನ್ನೊಂದು ಏನು ಅಂತ ಹೇಳಿದ್ರೆ ಹೊಸದಾಗಿ ಒಂದು ಸೊಸೆ ಬರಬೇಕಾದ್ರೆ ಅವರಿಗೂ ಈ ಮನೆಗೆ ಅಡ್ಜಸ್ಟ್ ಆಗೋಕೆ ಸ್ವಲ್ಪ ಟೈಮ್ ಬೇಕಾಗುತ್ತೆ. ನಾವು ಸ್ಟಾರ್ಟಿಂಗ್‌ನಲ್ಲೇ ಫೋರ್ಸ್ ಮಾಡೋಕೆ ಆಗಲ್ಲ ಅಲ್ವಾ? ನಮ್ಮ ಫ್ಯಾಮಿಲಿ ಹೀಗಿದೆ, ನೀವು ಹಿಂಗೇ ಇರಬೇಕು ಅಂತ ಹೇಳೋಕೆ ಆಗಲ್ಲ, ಅವರಿಗೂ ಸ್ವಲ್ಪ ಟೈಮ್ ಬೇಕಾಗುತ್ತೆ. ಪ್ರತಿಯೊಬ್ಬರ ಕ್ಯಾರೆಕ್ಟರ್ ಹೇಗಿದೆ ಅಂತ ಅರ್ಥ ಮಾಡಿಕೊಳ್ಳೋಕೆ ಸ್ವಲ್ಪ ದಿನಗಳು ಬೇಕಾಗುತ್ತೆ. ಅವಾಗ ಸ್ವಲ್ಪ ಮನಸ್ತಾಪಗಳೆಲ್ಲ ಆಗುತ್ತೆ, ಅದೆಲ್ಲಾ ಮನೆಗಳಲ್ಲೂ ಆಗುತ್ತೆ. ಅದೊಂದು ಆ ಸ್ಪೇಸ್ ಅವರಿಗೆ ಕೊಡಬೇಕು. ಕೊಟ್ಟಾದಮೇಲೆ ಖಂಡಿತ ಇದು ‘ಆನಂದ ನಿಲಯ’ದಲ್ಲಿ ಆನಂದ ಉಳ್ಕೊಳ್ಳುತ್ತೆ.

ನಿಮ್ಮ ಫ್ಯಾಮಿಲಿ ಸಪೋರ್ಟ್ ಎಲ್ಲಾ ಹೇಗಿದೆ?

ದಿವ್ಯಾ ಶ್ರೀಧರ್: ತುಂಬಾನೇ ಚೆನ್ನಾಗಿದೆ. ನನ್ನ ಮಗುನೆಲ್ಲ ನನ್ನ ಡ್ಯಾಡ್ ನೋಡ್ಕೊಳ್ತಾ ಇರ್ತಾರೆ ಶೂಟಿಂಗ್ ಬರಬೇಕಾದ್ರೆ ತುಂಬಾ ಸಪೋರ್ಟ್ ಇದೆ. ಇಲ್ಲದಿದ್ರೆ ಬಂದು ಒಂದು… ಒಬ್ಬ ಲೇಡಿಯಾಗಿ ಬಂದು ಹೊರಗಡೆ ಬೆಳಿಗ್ಗೆ 7:30 ಗೆ ಹೊರಟ್ರೆ ನೈಟ್ 10:00 ಕ್ಲಾಕ್‌ವರೆಗೂ ಮನೆಯಿಂದ ಹೊರಗಡೆ ಇದ್ದು ಕೆಲಸ ಮಾಡ್ಕೊಂಡು ಹೋಗಬೇಕು ಅಂತ ಹೇಳಿದ್ರೆ ಫ್ಯಾಮಿಲಿ ಸಪೋರ್ಟ್ ತುಂಬಾ ಇಂಪಾರ್ಟೆಂಟ್ ಅಲ್ವಾ? ನಮ್ಮ ಕಿಡ್ಸ್ ಎಲ್ಲಾ ಮನೆ ಬಿಟ್ಟು ಬಂದಿದ್ದೀವಿ, ಧೈರ್ಯವಾಗಿ ಇಲ್ಲಿದ್ದೀವಿ, ಇಲ್ಲಿ ವರ್ಕ್ ಮಾಡ್ತಾ ಇದ್ದೀವಿ ಅಂತ ಹೇಳಿದ್ರೆ ಫ್ಯಾಮಿಲಿ ಸಪೋರ್ಟ್ ಇದ್ರೆ ಮಾತ್ರ ಸಾಧ್ಯ.

ಕೊನೆಯದಾಗಿ, ನಿಮ್ಮನ್ನ ಮತ್ತೆ ತೆರೆಮೇಲೆ ನೋಡಿ ಖುಷಿಪಡ್ತಿರೋ ಅಭಿಮಾನಿಗಳಿಗೆ ಏನು ಹೇಳ್ತೀರಾ?

ದಿವ್ಯಾ ಶ್ರೀಧರ್: ನನ್ನ ಅಭಿಮಾನಿಗಳಿಗೆಲ್ಲ ಏನು ಹೇಳೋದು ಅಂದ್ರೆ, ತುಂಬಾ ಥ್ಯಾಂಕ್ ಯು ಸೋ ಮಚ್. ಅವರ ಸಪೋರ್ಟ್ ಇರೋದಕ್ಕೆ ನಾನು ಇದುವರೆಗೂ ತೆರೆಮೇಲೆ ಕಾಣಿಸಿಕೊಳ್ತಾನೆ ಇದ್ದೀನಿ. ಇಷ್ಟು ವರ್ಷ ಆದ್ರೂನು, 7 ಇಯರ್ಸ್ ಆಗಿ ಕಮ್‌ಬ್ಯಾಕ್ ಆದ್ರೂನು ಎಲ್ಲರೂ ನನ್ನ ತುಂಬಾ ಪ್ರೀತಿಯಿಂದ, ತುಂಬಾ ಬರಮಾಡಿಕೊಂಡಿದ್ದಾರೆ. ತುಂಬಾ ಪ್ರೀತಿ, ಆಶೀರ್ವಾದ ಖಂಡಿತ ನನಗಿದೆ. ಯಾಕಂದ್ರೆ ಆ ಪ್ರೀತಿ ಇಲ್ಲದೆ ಇದ್ದಿದ್ರೆ ನಾನು ಯಾವುದೋ ಕಾಲಕ್ಕೆ ರಿಟೈರ್‌ಮೆಂಟ್ ತಗೋಬೇಕಿತ್ತು. ಅಲ್ವಾ? ರಿಟೈರ್ಡ್ ಆಗ್ತಾ ಇದ್ದೆ, ಈಗಲೂ ನಾನು ಫ್ರೇಮ್‌ನಲ್ಲಿದ್ದೀನಿ ಅಂತ ಹೇಳಿದ್ರೆ ಅವರ ಪ್ರೀತಿಯೊಂದೇ ಕಾರಣ. ಯಾವಾಗ್ಲೂ ನನ್ನ ಮೇಲೆ ಹಾಗೇ ಇರ್ಲಿ, ನನ್ನ ಮೇಲೆ ಮತ್ತೆ ‘ಆನಂದ ನಿಲಯ’ದ ಮೇಲೆ ಇರ್ಲಿ.