☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Deva Dead: ತಮಿಳು ಚಿತ್ರರಂಗದ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಇನ್ನಿಲ್ಲ

Deva Dead: Legendary Tamil Composer Dies at Chennai Hospital

Image: chakravarthychandrachud/Instagram

Deva Dead: ತಮಿಳು ಚಲನಚಿತ್ರ ರಂಗದ ಹಿರಿಯ ಸಂಗೀತ ಸಂಯೋಜಕ ದೇವಾ ಅವರು ವಿಧಿವಶರಾಗಿದ್ದಾರೆ. ತಮ್ಮ ಜನಪ್ರಿಯ ಸಂಗೀತದ ಮೂಲಕ ಅವರು ಕೋಟ್ಯಂತರ ಅಭಿಮಾನಿಗಳ ಮನಗೆದ್ದಿದ್ದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿರುವುದು ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. 

ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರು

ನಕ್ಕೀರನ್ ವರದಿಯ ಪ್ರಕಾರ, ಅಕ್ಟೋಬರ್ 17ರ ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ದೇವಾ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ. ಅವರಿಗೆ ಹೃದಯಾಘಾತವಾಗಿತ್ತು ಎಂದು ವರದಿಯಾಗಿದೆ. ಹಿರಿಯ ಸಂಗೀತ ಸಂಯೋಜಕರ ಹಠಾತ್ ಅಗಲಿಕೆಯಿಂದ ತಮಿಳು ಚಿತ್ರರಂಗದಲ್ಲಿ ತೀವ್ರ ಶೋಕ ಮಡುಗಟ್ಟಿದೆ. 

ತಮಿಳು ಚಿತ್ರರಂಗಕ್ಕೆ ‘ಗಾನಾ’ ಸಂಗೀತ ಪರಿಚಯಿಸಿದ ದಿಗ್ಗಜ

ದೇವಾ ಅವರು ತಮ್ಮ ವಿಶಿಷ್ಟ ಸಂಗೀತ ಶೈಲಿಯಿಂದ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ‘ಗಾನಾ’ ಮ್ಯೂಸಿಕ್ ಅನ್ನು ಮೇನ್‌ಸ್ಟ್ರೀಮ್ ತಮಿಳು ಸಿನಿಮಾಗಳಿಗೆ ಪರಿಚಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಜಾನಪದ ಶೈಲಿ, ಗಾನಾ ಮತ್ತು ಮಧುರ ಸಂಯೋಜನೆಗಳ ಸುಂದರ ಸಮ್ಮಿಲನ ಅವರ ಹಾಡುಗಳ ವಿಶೇಷತೆಯಾಗಿತ್ತು. ಇದು ದೇವಾ ಅವರನ್ನು ತಮಿಳು ಸಂಗೀತ ಲೋಕದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಅಭಿಮಾನಿಗಳು ಮತ್ತು ಗಣ್ಯರು ಅವರ ಅಗಲಿಕೆಗೆ ಕಂಬನಿ ಮಿಡಿದ್ದಾರೆ. 

Deva Dead: ರಜನಿಕಾಂತ್, ವಿಜಯ್ ಸೇರಿದಂತೆ ಸ್ಟಾರ್ ನಟರ ಜೊತೆ ಕೆಲಸ

ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ದೇವಾ ಅನೇಕ ಸೂಪರ್‌ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ‘ಬಾಷಾ’, ‘ಅಣ್ಣಾಮಲೈ’, ‘ನಟ್ಟಮೈ’, ‘ಆಸೈ’, ‘ಕಾದಲ್ ಕೊಟ್ಟೈ’ ಮತ್ತು ‘ನೆರುಕ್ಕು ನೇರ್’ ಚಿತ್ರಗಳು ಇವರ ಸಂಗೀತದಿಂದಲೇ ಭರ್ಜರಿ ಯಶಸ್ಸು ಕಂಡಿದ್ದವು. ಸೂಪರ್‌ಸ್ಟಾರ್ ರಜನಿಕಾಂತ್, ದಳಪತಿ ವಿಜಯ್ ಹಾಗೂ ಅಜಿತ್ ಸೇರಿದಂತೆ ಹಲವು ಪ್ರಮುಖ ನಟರ ಸಿನಿಮಾಗಳಿಗೆ ಅವರು ಕೆಲಸ ಮಾಡಿದ್ದಾರೆ. ‘ಬಾಷಾ’ ಚಿತ್ರದ ‘ರಾ ರಾ ರಾಮಯ್ಯ’ ಹಾಗೂ ‘ಕಾದಲ್ ಕೊಟ್ಟೈ’ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.