☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Darshan Case: ವಕೀಲರು ಸಮಯ ಕೇಳಿದ್ರೂ ಕರುಣೆ ತೋರಿಸದ ಸುಪ್ರೀಂ, ದರ್ಶನ್‌ಗೆ ಮತ್ತೊಂದು ಬಿಗ್ ಶಾಕ್

Darshan Case: Supreme Court Rejects Plea Against Maafi Sakshi

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನು ತಡೆಯಲು ಯತ್ನಿಸಿದ್ದ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಮ್ಮೆ ದೊಡ್ಡ ಹಿನ್ನಡೆಯಾಗಿದೆ. ಹೈಕೋರ್ಟ್ ಹಾಗೂ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶವನ್ನೇ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಮಾಫಿ ಸಾಕ್ಷಿ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಾದರೂ ತಮಗೆ ಸಮಾಧಾನಕರ ತೀರ್ಪು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ದರ್ಶನ್ ಬಳಗಕ್ಕೆ ಈಗ ತೀವ್ರ ನಿರಾಸೆಯಾಗಿದೆ.

ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿದ್ದು, ವಿಚಾರಣೆ ಮುಕ್ತಾಯದ ನಂತರ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದಾಗಿ ಪ್ರಕರಣದಲ್ಲಿ ನಟ ದರ್ಶನ್‌ಗೆ ಇದ್ದ ಮತ್ತೊಂದು ಕಾನೂನು ದಾರಿ ಸಂಪೂರ್ಣವಾಗಿ ಬಂದ್ ಆದಂತಾಗಿದೆ.

ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಆದೇಶವೇನು?

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಟ್ರಯಲ್ ಕೋರ್ಟ್‌ಗೆ ಮಾಫಿ ಸಾಕ್ಷಿ ಅರ್ಜಿಯನ್ನು ಪರಿಗಣಿಸುವ ಸಂಪೂರ್ಣ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿದೆ. ಆರೋಪಿಗಳಿಗೆ ಇದನ್ನು ನೇರವಾಗಿ ಪ್ರಶ್ನೆ ಮಾಡುವ ಅಧಿಕಾರ ಇರುವುದಿಲ್ಲ ಎಂದು ತಿಳಿಸಿದೆ.

ಆರೋಪಿಗಳ ಪರ ವಕೀಲರು ಬೇಕಿದ್ದರೆ ಸಾಕ್ಷಿಯನ್ನು ಕ್ರಾಸ್ ಎಕ್ಸಾಮಿನ್ (ಪಟಿ ಸವಾಲು) ಮಾಡಬಹುದು. ಅದನ್ನು ಬಿಟ್ಟು ಮಾಫಿ ಸಾಕ್ಷಿ ಅರ್ಜಿಯನ್ನೇ ವಜಾ ಮಾಡಿ ಎಂದು ಕೇಳಲು ಅಧಿಕಾರವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಕೋರ್ಟ್‌ನಲ್ಲಿ ವಕೀಲರ ವಾದ-ಪ್ರತಿವಾದ ಹೇಗಿತ್ತು?

ನಟ ದರ್ಶನ್ ಪರವಾಗಿ ಹಿರಿಯ ವಕೀಲ ನಾಗಮುತ್ತು ಹಾಜರಾಗಿದ್ದರೆ, ಪ್ರಾಸಿಕ್ಯೂಷನ್ ಪರವಾಗಿ ಸಿದ್ದಾರ್ಥ್ ಲೂಥ್ರಾ ವಾದ ಮಂಡನೆ ಮಾಡಿದ್ದರು. ವಾದದ ವೇಳೆ ಸಿದ್ದಾರ್ಥ್ ಲೂಥ್ರಾ ಅವರು ದರ್ಶನ್ ಪರ ವಕೀಲರ ವಾದವನ್ನು ಪ್ರಬಲವಾಗಿ ವಿರೋಧಿಸಿದರು.

ಅರ್ಜಿದಾರರು ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಕೃತ್ಯದಲ್ಲಿ ಅವರ ಪಾತ್ರವಿತ್ತು ಎಂಬುದನ್ನು ಅರ್ಜಿಯಲ್ಲೇ ಪರೋಕ್ಷವಾಗಿ ಉಲ್ಲೇಖಿಸಲಾಗಿದೆ ಎಂದು ಸಿದ್ದಾರ್ಥ್ ಲೂಥ್ರಾ ಪೀಠದ ಗಮನಕ್ಕೆ ತಂದರು.

Darshan Case: ‘ದಯವಿಟ್ಟು ಅವಕಾಶ ಕೊಡಿ’ ಎಂದಿದ್ದ ದರ್ಶನ್ ಪರ ಲಾಯರ್

ವಾದ ಮಂಡನೆ ವೇಳೆ ದರ್ಶನ್ ಪರ ವಕೀಲ ನಾಗಮುತ್ತು ಅವರು, “ನನಗೆ ಈ ವಿಚಾರದಲ್ಲಿ ವಾದ ಮಂಡಿಸಲು ಸ್ವಲ್ಪ ಹೆಚ್ಚುವರಿ ಸಮಯ ನೀಡಬೇಕು” ಎಂದು ಪೀಠಕ್ಕೆ ವಿನಂತಿ ಮಾಡಿಕೊಂಡಿದ್ದರು.

“ನನ್ನ ವಾದದಲ್ಲಿ ಎರಡು ಪ್ರಮುಖ ಅಂಶಗಳಿವೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಿಗೆ ಕ್ಷಮಾದಾನ ನೀಡುವ ಅಧಿಕಾರ ಇದೆಯೇ ಎಂಬುದು ಪ್ರಮುಖ ಪ್ರಶ್ನೆ. ಇದಕ್ಕೆ ಸಂಬಂಧಿಸಿದ ಕೆಲವು ಹಳೆಯ ತೀರ್ಪುಗಳನ್ನು ಉಲ್ಲೇಖಿಸಲು ಅವಕಾಶ ಕೊಡಿ” ಎಂದು ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.