☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Darshan Case: ಮಾಫಿ ಸಾಕ್ಷಿ ಮೇಲೆಯೇ ಸಂಶಯ; ದರ್ಶನ್ ಅಸ್ತ್ರಕ್ಕೆ ಸಿಗುತ್ತಾ ಜಯ?

Darshan Case: Darshan Petition Against Approver Pradosh In Renukaswamy Case

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರಂಭದಲ್ಲಿ ಆರೋಪಿಯಾಗಿದ್ದ ಪ್ರದೋಷ್, ಈಗ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಪ್ರದೋಷ್ ಅವರ ಹೇಳಿಕೆ ದಾಖಲಾಗಿದ್ದು, ಇಂದು ಮೂರನೇ ದಿನದ ಪ್ರಕ್ರಿಯೆ ನಡೆಯಲಿದೆ. 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಇಂದು ಮಾಫಿ ಸಾಕ್ಷಿಯ ಹೇಳಿಕೆ ದಾಖಲಾತಿ ಕ್ಲೈಮ್ಯಾಕ್ಸ್ ತಲುಪುವ ಸಾಧ್ಯತೆಯಿದೆ.

‘ನಿನ್ನೆ ಮರೆತಿದ್ದೆ, ಇವತ್ತು ಸೇರಿಸಿ’ ಎನ್ನಲು ಅವಕಾಶವಿಲ್ಲ

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಎವಿಡೆನ್ಸ್ ಆ್ಯಕ್ಟ್ ಅಡಿ ನಟ ದರ್ಶನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. “ನಿನ್ನೆ ಮರೆತಿದ್ದೆ, ಇಂದು ಅದನ್ನು ಸೇರಿಸುತ್ತೇನೆ” ಎಂದು ಮಾಫಿ ಸಾಕ್ಷಿ ಹೇಳಿಕೆ ನೀಡಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದಾರೆ. ದರ್ಶನ್ ಸಲ್ಲಿಸಿರುವ ಈ ಪ್ರಮುಖ ಅರ್ಜಿಯ ಕುರಿತು ಇಂದು 59ನೇ ಸಿಸಿಹೆಚ್ ಕೋರ್ಟ್ ಮಹತ್ವದ ಆದೇಶ ನೀಡಲಿದೆ.

ದರ್ಶನ್ ಅರ್ಜಿಗೆ ಕೋರ್ಟ್ ಅಸ್ತು ಎಂದರೆ ಪ್ರದೋಷ್‌ಗೆ ಸಂಕಷ್ಟ

ಮಾಫಿ ಸಾಕ್ಷಿ ಪ್ರದೋಷ್ ವಿರುದ್ಧ ದರ್ಶನ್ ಸಲ್ಲಿಸಿರುವ ಈ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದರೆ ಮಾಫಿ ಸಾಕ್ಷಿಗೆ ಹಿನ್ನಡೆಯಾಗಲಿದೆ. ಹೇಳಿಕೆ ದಾಖಲಿಸುವ ವೇಳೆ ಹಳೆಯ ವಿಚಾರಗಳನ್ನು ಮತ್ತೆ ತಂದು ಸೇರಿಸುವುದಕ್ಕೆ ತಡೆ ಬೀಳಲಿದೆ. ಈ ಬಾಣದ ಮೂಲಕ ಪ್ರದೋಷ್ ಅವರ ಹೇಳಿಕೆಯ ತೀವ್ರತೆಯನ್ನು ತಗ್ಗಿಸಲು ದರ್ಶನ್ ತಂಡ ತಂತ್ರ ರೂಪಿಸಿದೆ.

ಅಕ್ಟೋಬರ್ 7ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಅಂಗೀಕಾರವಾಗಿದ್ದು, ಅಕ್ಟೋಬರ್ 7ಕ್ಕೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ದರ್ಶನ್ ಸಲ್ಲಿಸಿದ್ದ ಅರ್ಜಿಗಳು ವಜಾಗೊಂಡಿದ್ದವು. ಹೀಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್ ಅವರಿಗೆ ಅಕ್ಟೋಬರ್ 7ರ ವಿಚಾರಣೆ ದೊಡ್ಡ ರಿಲೀಫ್ ತಂದಿದೆ.

Darshan Case: ಸುಪ್ರೀಂ ಕೋರ್ಟ್‌ನಲ್ಲಿ ಗೆಲ್ಲಲೇಬೇಕಾದ ಭಾರಿ ಒತ್ತಡ

ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿ ವಜಾಗೊಂಡರೆ ದರ್ಶನ್ ಅವರ ಮುಂದೆ ಬೇರೆ ಯಾವುದೇ ದಾರಿ ಉಳಿಯುವುದಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಈ ಬಾರಿ ಯಾರು ದರ್ಶನ್ ಪರ ವಾದ ಮಂಡಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಇನ್ನೊಂದೆಡೆ ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ.