☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

Darshan Case: ಪ್ರದೋಶ್ ‘ಮಾಫಿ ಸಾಕ್ಷಿ’ ಯಲ್ಲಿ ಎಡವಟ್ಟು; ನಟ ದರ್ಶನ್‌ಗೆ ಒಲಿಯುತ್ತಾ ಬಿಗ್ ರಿಲೀಫ್?

Darshan Case: Will Pradosh Approval Order Help Actor Darshan Get Relief?

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ದಿನದಿಂದ ದಿನಕ್ಕೆ ಮಹತ್ವದ ಮತ್ತು ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಪ್ರಕರಣದ 14ನೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿ ಕೊಲೆಯ ಅಸಲಿ ರಹಸ್ಯಗಳನ್ನು ಕೋರ್ಟ್ ಮುಂದೆ ಬಿಚ್ಚಿಟ್ಟಿದ್ದಾರೆ. ಆದರೆ ಪ್ರದೋಶ್ ಮಾಡಿದ ಈ ಒಂದು ಎಡವಟ್ಟು ನಟ ದರ್ಶನ್ ಪಾಲಿಗೆ ದೊಡ್ಡ ಅಸ್ತ್ರವಾಗುತ್ತಾ ಎನ್ನುವ ಪ್ರಶ್ನೆ ತೀವ್ರ ಕುತೂಹಲ ಮೂಡಿಸಿದೆ.

108 ಪುಟಗಳು ಹಾಗೂ 175 ಪ್ಯಾರಾಗಳ ಸುದೀರ್ಘ ಸಾಕ್ಷ್ಯ ಸಲ್ಲಿಕೆ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 14ನೇ ಆರೋಪಿಯಾಗಿದ್ದ ಪ್ರದೋಷ್ ಮಾಫಿ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ 59ನೇ CCH ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಪ್ರದೋಷ್ ಬರೊಬ್ಬರಿ 108 ಪುಟ ಹಾಗೂ 175 ಪ್ಯಾರಾ ಸಾಕ್ಷ್ಯ ನುಡಿದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸಾಕ್ಷಿ ಹೇಳಿಕೆ ದಾಖಲಾಗಿದ್ದು, ಕೊಲೆಯ ಕರಾಳ ಸತ್ಯಗಳನ್ನು ಅವರು ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ.

ಸತತ 5ನೇ ದಿನವೂ ವಿಚಾರಣೆ; ಸಾಕ್ಷ್ಯಗಳ ಮಾರ್ಕಿಂಗ್ ಪ್ರಕ್ರಿಯೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಪ್ರದೂಷ್ ರಾವ್ ಅವರ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ಸುದೀರ್ಘವಾಗಿ ಮುಂದುವರಿಯಲಿದೆ. ಸತತ ಐದನೇ ದಿನವೂ ಹೇಳಿಕೆ ನೀಡುತ್ತಿದ್ದು, ಮೈಸೂರು ರಸ್ತೆಯಲ್ಲಿ ನಾಲ್ವರ ಬಂಧನವಾದ ಘಟನೆಯವರೆಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇಂದು ಹೇಳಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರದೂಷ್ ನೀಡಿದ ಹೇಳಿಕೆಗೆ ಆಧರಿಸಿ ಪ್ರಮುಖ ಸಾಕ್ಷ್ಯಗಳ ಮಾರ್ಕಿಂಗ್ ಕಾರ್ಯ ನಡೆಯಲಿದೆ.

Darshan Case: ಪ್ರದೋಶ್ ಮಾಡಿದ ಎಡವಟ್ಟು ದರ್ಶನ್ ಪಾಲಿಗೆ ಹೆಬ್ಬಾಗಿಲಾಗುತ್ತಾ?

ವಿಚಾರಣೆಯ ಸಂದರ್ಭದಲ್ಲಿ ಪ್ರದೋಷ್ ತನಗೆ ತಿಳಿದಿದ್ದ ಕೆಲವು ಪ್ರಮುಖ ಮಾಹಿತಿ ಹಾಗೂ ಕೃತ್ಯದ ವಿವರಗಳನ್ನು ಹೇಳಲು ಮರೆತಿದ್ದಾರೆ. ಇದರಿಂದಾಗಿ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಮತ್ತು ತನಿಖಾ ತಂಡಕ್ಕೆ ಕೋರ್ಟ್‌ನಲ್ಲಿ ತೀವ್ರ ಗೊಂದಲ ಉಂಟಾಗಿತ್ತು ಎನ್ನಲಾಗಿದೆ.

ಮಾಫಿ ಸಾಕ್ಷಿಯು ಕೋರ್ಟ್‌ನಲ್ಲಿ ಕೊನೆಯವರೆಗೂ ಒಂದೇ ಹೇಳಿಕೆಗೆ ಬದ್ಧನಾಗಿರಬೇಕು, ಇಲ್ಲವಾದರೆ ಉಲ್ಟಾ ಹೊಡೆದರೆ ಇಡೀ ಕೇಸ್‌ಗೆ ಎಡವಟ್ಟಾಗುತ್ತದೆ. ಈ ಸಣ್ಣ ಗೊಂದಲವೇ ಮುಂಬರುವ ದಿನಗಳಲ್ಲಿ ನಟ ದರ್ಶನ್ ಪರ ವಕೀಲರಿಗೆ ಪ್ರಬಲ ಅಸ್ತ್ರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.