☔ Weather
Bengaluru: ☁️ 21°C | AQI 57
Mysore: ☁️ 24°C | AQI 62
Mangalore: 🌤️ 27°C | AQI 78
Bengaluru: ☁️ 21°C | AQI 57

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್ ಮುಂದೆ ಸಾಕ್ಷ್ಯ ನುಡಿದ ನಟರಾದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ

Darshan Case: Actors Chikkanna and Yashas Surya Testify In Court

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟರಾದ ದರ್ಶನ್, ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ವಿಚಾರಣೆ ಮುಂದುವರಿದಿದೆ. ಇಂದು ಕೋರ್ಟ್‌ಗೆ ಹಾಜರಾದ ನಟರು ತಮ್ಮ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ.

ಕೊಲೆಗೂ ಮೊದಲು ನಡೆದ ಬೆಳವಣಿಗೆಗಳು ಮತ್ತು ಸ್ಟೋನಿ ಬ್ರೂಕ್ ಪಾರ್ಟಿಯ ಕುರಿತು ತನಿಖೆ ನಡೆಯುತ್ತಿದೆ. ಪಾರ್ಟಿಯಲ್ಲಿ ದರ್ಶನ್ ಜೊತೆ ನಡೆದ ಚರ್ಚೆಗಳ ಬಗ್ಗೆ ನಟರು ಸಾಕ್ಷಿ ನುಡಿಯುತ್ತಿದ್ದಾರೆ. ಈ ವಿಚಾರಣೆಯು ಪ್ರಕರಣದ ದಿಕ್ಕನ್ನು ಬದಲಿಸುವ ಸಾಧ್ಯತೆಯಿದೆ. ಕೋರ್ಟ್‌ನಲ್ಲಿ ನಡೆದ ಇಂದಿನ ಪ್ರಮುಖ ಬೆಳವಣಿಗೆಗಳ ಸಂಪೂರ್ಣ ವಿವರ ಇಲ್ಲಿದೆ.

ಯಶಸ್ ಸೂರ್ಯ ಸಾಕ್ಷ್ಯ ಹಾಗೂ ಎಸ್‌ಪಿಪಿ ವಾದ

ದರ್ಶನ್ ಪರವಾಗಿ ನಟ ಯಶಸ್ ಸೂರ್ಯ ಸಾಕ್ಷ್ಯ ನುಡಿದಿದ್ದಾರೆ. ಅವರು ನೀಡಿದ ಹೇಳಿಕೆಯು ಭಾಗಶಃ ಪರವಾಗಿಲ್ಲದ ಕಾರಣ, ಅವರನ್ನು ‘ಹಾಸ್ಟೈಲ್ ವಿಟ್ನೆಸ್’ ಎಂದು ಪರಿಗಣಿಸುವಂತೆ ಎಸ್‌ಪಿಪಿ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಯಶಸ್ ಸೂರ್ಯ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಎಸ್‌ಪಿಪಿ ವಾದಿಸಿದ್ದಾರೆ. ಅಲ್ಲದೆ, ಕ್ರಾಸ್ ಎಕ್ಸಾಮಿನ್ ಮಾಡಲು ಅವಕಾಶ ಕೋರಿದ್ದು, ಕೋರ್ಟ್ ಅದಕ್ಕೆ ಸಮ್ಮತಿಸಿದೆ.

ಸ್ಟೋನಿ ಬ್ರೂಕ್ ಪಾರ್ಟಿ ಮತ್ತು ಪರಿಚಯದ ವಿವರ

ದರ್ಶನ್ ಪರಿಚಯ ಹಾಗೂ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಊಟದ ಬಗ್ಗೆ ಯಶಸ್ ಸೂರ್ಯ ಹೇಳಿಕೆ ದಾಖಲಿಸಿದ್ದಾರೆ. ದರ್ಶನ್, ಪ್ರದೂಷ್, ಚಿಕ್ಕಣ್ಣ, ನಾಗರಾಜ್ ಮತ್ತು ವಿನಯ್ ಅಲ್ಲಿ ಇದ್ದೆವು ಎಂದು ಅವರು ತಿಳಿಸಿದ್ದಾರೆ.

ಆದರೆ ಆರೋಪಿ ಪವನ್ ಅಲ್ಲಿ ಬಂದಿದ್ದೇ ತನಗೆ ಗೊತ್ತಿಲ್ಲ ಎಂದು ಯಶಸ್ ಸೂರ್ಯ ಸ್ಪಷ್ಟಪಡಿಸಿದ್ದಾರೆ. ತಾನು ಹೊರಗಡೆ ಇದ್ದೆ ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.

Darshan Case: ನಟ ಚಿಕ್ಕಣ್ಣ ಹೇಳಿಕೆ ಹಾಗೂ ಕೋರ್ಟ್ ಸೂಚನೆ

ಸಾಕ್ಷಿ ಹೇಳಿಕೆ ದಾಖಲಿಸುವ ವೇಳೆ ನಟ ಚಿಕ್ಕಣ್ಣ ಪದೇ ಪದೇ ಟೆನ್ಷನ್ ಆಗಿದ್ದಾರೆ. ಇದನ್ನು ಗಮನಿಸಿದ ಎಸ್‌ಪಿಪಿ, ನೀವೇನು ಕ್ರೈಂ ಮಾಡಿಲ್ಲ ಎಂದು ಸಮಾಧಾನ ಪಡಿಸಿದ್ದಾರೆ.

ಚಿಕ್ಕಣ್ಣ ತಡಬಡಾಯಿಸುತ್ತಿದ್ದ ಕಾರಣ ಜಡ್ಜ್ 10 ನಿಮಿಷ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಸದ್ಯ ಇಬ್ಬರ ಹೇಳಿಕೆ ಅರ್ಧ ಮಾತ್ರ ದಾಖಲಾಗಿದ್ದು, ಮುಂದಿನ ವಿಚಾರಣೆಗೆ ಮತ್ತೊಂದು ದಿನ ನಿಗದಿಯಾಗಲಿದೆ.