☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

BBK 13: ಮಂಜು ಮಾಡಿದ ತಪ್ಪಿಗೆ ಇಡೀ ಮನೆಗೆ ಶಿಕ್ಷೆ

BBK 13: Manju Rule Violation Causes 50 Percent Ration Cut

BBK 13: ಬಿಗ್‌ಬಾಸ್ ಮನೆಯಲ್ಲಿ ನಡೆದ ‘ನಿಶ್ಶಬ್ದ’ ಟಾಸ್ಕ್‌ನಲ್ಲಿ ಕಾವ್ಯ ಹಾಗೂ ಮಂಜುನಾಥ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ನಿಯಮ ಮೀರಿ ಆಟವಾಡಿದ ಕಾರಣಕ್ಕಾಗಿ ಇಬ್ಬರೂ ಸ್ಪರ್ಧಿಗಳನ್ನು ಬಿಗ್‌ಬಾಸ್ ಆಟದಿಂದ ಅನರ್ಹಗೊಳಿಸಿದ್ದಾರೆ. ಈ ತಪ್ಪಿಗಾಗಿ ಬಿಗ್‌ಬಾಸ್ ಇಡೀ ಮನೆಯ ವಾರದ ರೇಷನ್‌ನಲ್ಲಿ ಶೇಕಡಾ 50% ಸಾಮಗ್ರಿಗಳನ್ನು ಕಟ್ ಮಾಡಿದ್ದಾರೆ.

ಗ್ರೋಸರಿ ಪಡೆಯಲು ಬಿಗ್‌ಬಾಸ್ ನೀಡಿದ್ದ ಕಠಿಣ ಟಾಸ್ಕ್

ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಗ್ರೋಸರಿ ಪಡೆಯಲು ವಿಶೇಷ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಆಟದಲ್ಲಿ ನೀಡಲಾದ ದಾರಿಯಲ್ಲಿ ಯಾವುದೇ ಶಬ್ದವಾಗದಂತೆ ಅತ್ಯಂತ ಎಚ್ಚರಿಕೆಯಿಂದ ಸಾಗಬೇಕಿತ್ತು. ದಾರಿಯಲ್ಲಿ ಇಡಲಾದ ವಸ್ತುಗಳು ಮತ್ತು ಗಂಟೆಗಳಿಗೆ ತಾಗದಂತೆ ತಲುಪಿ ಬಜರ್ ಒತ್ತಬೇಕಾಗಿತ್ತು.

ನಿಯಮ ಉಲ್ಲಂಘಿಸಿ ಆಟದಿಂದ ಅನರ್ಹರಾದ ಕಾವ್ಯ-ಮಂಜು

ಸಣ್ಣ ಶಬ್ದವಾದರೂ ಕಪ್ಪುಹಲಗೆಯ ಮೇಲೆ ಮಾರ್ಕ್ ಹಾಕಿ ನಿಯಮಗಳನ್ನು ಕಟ್ಟುನಿಟ್ಟಾಗಿ ವೀಕ್ಷಿಸಲಾಗುತ್ತಿತ್ತು. ಆದರೆ ಕಾವ್ಯ ಹಾಗೂ ಮಂಜುನಾಥ್ ಸಾಲಿನಿಂದ ಹೊರಗೆ ಕಾಲಿಟ್ಟು, ಶಬ್ದ ಮಾಡಿ ನಿಯಮ ಉಲ್ಲಂಘಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಗ್‌ಬಾಸ್, ಇಬ್ಬರನ್ನೂ ಆಟದಿಂದ ಅನರ್ಹಗೊಳಿಸಿ ಆದೇಶಿಸಿದರು.

ಇಡೀ ದೊಡ್ಮನೆಗೆ ಬಿಗ್‌ಬಾಸ್ ನೀಡಿದ ಭಾರಿ ಆಘಾತ

ಸ್ಪರ್ಧಿಗಳು ಮಾಡಿದ ಈ ಸಣ್ಣ ತಪ್ಪಿನಿಂದಾಗಿ ಇಡೀ ಮನೆಗೆ ಬಿಗ್‌ಬಾಸ್ ಕಠಿಣ ಶಿಕ್ಷೆ ವಿಧಿಸಿದರು. ವಾರದ ದಿನಸಿ ಸಾಮಗ್ರಿಗಳಲ್ಲಿ ಶೇಕಡಾ 50% ರಷ್ಟು ರೇಷನ್ ಕಟ್ ಮಾಡಿ ಮುಟ್ಟುಗೋಲು ಹಾಕಿಕೊಂಡರು. ಅರ್ಧದಷ್ಟು ರೇಷನ್ ಕಡಿಮೆಯಾಗಿದ್ದರಿಂದ ಇಡೀ ದೊಡ್ಮನೆ ಸದಸ್ಯರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಯಿತು.

BBK 13: ಮಂಜುನಾಥ್ ವಿರುದ್ಧ ತಿರುಗಿಬಿದ್ದ ಮನೆಯ ಸದಸ್ಯರು

ಶಿಕ್ಷೆಯ ನಂತರ ಮನೆಯಲ್ಲಿ ಆಕ್ರೋಶ ವ್ಯಕ್ತವಾದರೂ ಮಂಜುನಾಥ್ ಮಾತ್ರ ನಗುತ್ತಾ ನಿಂತಿದ್ದರು. “ನಿನ್ನ ತಪ್ಪಿನಿಂದ ನಮಗೆ ಸಿಗಬೇಕಿದ್ದ ಊಟ ಹೋಯಿತು, ಆ ಅಪರಾಧಪ್ರಜ್ಞೆ ಇರಲಿ” ಎಂದು ಮನೆಯವರು ಕಿಡಿಕಾರಿದರು. ಸಹ-ಸ್ಪರ್ಧಿಗಳ ಮಾತಿಗೆ ಮಂಜುನಾಥ್ ಕಣ್ಣೀರಿಡುವಂತೆ ನಾಟಕ ಮಾಡಿ ಹಳೆಯ ಫಾರ್ಮ್‌ಗೆ ಮರಳಿದ್ದಾರೆ.

ಗ್ರೋಸರಿ ಪಡೆಯಲು ಬಿಗ್‌ಬಾಸ್ ನೀಡಿದ್ದ ಕಠಿಣ ಟಾಸ್ಕ್

ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಗ್ರೋಸರಿ ಪಡೆಯಲು ವಿಶೇಷ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಆಟದಲ್ಲಿ ನೀಡಲಾದ ದಾರಿಯಲ್ಲಿ ಯಾವುದೇ ಶಬ್ದವಾಗದಂತೆ ಅತ್ಯಂತ ಎಚ್ಚರಿಕೆಯಿಂದ ಸಾಗಬೇಕಿತ್ತು. ದಾರಿಯಲ್ಲಿ ಇಡಲಾದ ವಸ್ತುಗಳು ಮತ್ತು ಗಂಟೆಗಳಿಗೆ ತಾಗದಂತೆ ತಲುಪಿ ಬಜರ್ ಒತ್ತಬೇಕಾಗಿತ್ತು.