☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

BBK 13: ಈ ವಾರ ಮಂಜು ಎಲಿಮಿನೇಟ್ ಫಿಕ್ಸ್?

BBK 13: Will Kiccha Sudeep Eliminate Manju This Week?

BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಈ ವಾರ ಸ್ಪರ್ಧಿ ಮಂಜು ಎಲಿಮಿನೇಟ್ ಆಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಕಿಚ್ಚ ಸುದೀಪ್ ತಮ್ಮ ವಿಶೇಷ ಅಧಿಕಾರ ಬಳಸಿ ಮಂಜು ಅವರನ್ನು ಮನೆಯಿಂದ ಹೊರಗೆ ಕಳುಹಿಸುತ್ತಾರಾ ಎಂಬ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಬಿಗ್ ಬಾಸ್ ಮನೆಯಲ್ಲಿ ನಡೆದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್ ವೇಳೆ ಮಂಜು ನಡೆದುಕೊಂಡ ರೀತಿ ವೀಕ್ಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಟಾಸ್ಕ್‌ನಲ್ಲಿ ಅತಿಯಾದ ಅಶ್ಲೀಲ ಪದಗಳನ್ನು ಬಳಸಿ, ಪ್ರಾಪರ್ಟಿ ಹಾನಿಗೊಳಿಸಿದ್ದು ಅವರ ಮೇಲೆ ಕೆಟ್ಟ ಪರಿಣಾಮ ಬೀರಿದೆ.

ಅಶಿಸ್ತು ಮತ್ತು ಅವಾಚ್ಯ ಶಬ್ದಗಳ ಬಳಕೆಯಿಂದಾಗಿ ಮಂಜು ಈ ವಾರವೇ ಬಿಗ್ ಬಾಸ್ ಮನೆಯಿಂದ ಹೊರಬೀಳಲಿದ್ದಾರೆ ಎಂದು ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸತತವಾಗಿ ಪೋಸ್ಟ್ ಮಾಡುತ್ತಿದ್ದಾರೆ.

ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್‌ನಲ್ಲಿ ನಡೆದಿದ್ದೇನು?

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ರಾಕ್ಷಸರು ಹಾಗೂ ಗಂಧರ್ವರು ಎಂಬ ಟಾಸ್ಕ್ ನೀಡಲಾಗಿತ್ತು. ಆರಂಭದಲ್ಲಿ ಮಂಜು ರಾಕ್ಷಸರ ತಂಡದಲ್ಲಿದ್ದರೆ, ಯಶಸ್ ಗಂಧರ್ವರ ತಂಡದಲ್ಲಿದ್ದರು. ಈ ವೇಳೆ ಮಂಜು, ಯಶಸ್ ಅವರಿಗೆ ‘ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ’ ಎಂದು ಕರೆದಿದ್ದರು.

ನಂತರ ತಂಡಗಳು ಬದಲಾದಾಗ, ರಾಕ್ಷಸರ ಪಡೆಯಲ್ಲಿದ್ದ ಯಶಸ್ ಅವರು ಮಂಜು ಅವರನ್ನು ಪದೇ ಪದೇ ‘ನಾಯಿ’ ಎಂದು ಹಂಗಿಸಲು ಆರಂಭಿಸಿದರು. ಯಶಸ್ ಅವರ ಈ ವರ್ತನೆಯನ್ನು ಮಂಜು ಒಂದಷ್ಟು ಸಮಯ ಸಹಿಸಿಕೊಂಡು ಶಾಂತವಾಗಿದ್ದರು.

ಪ್ರಾಪರ್ಟಿ ಧ್ವಂಸ ಹಾಗೂ ಅವಾಚ್ಯ ಶಬ್ದಗಳ ಬಳಕೆ

ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಮಂಜು ಟಾಸ್ಕ್ ವೇಳೆ ಸಿಡಿದೆದ್ದರು. ಕೋಪದಲ್ಲಿ ಬಿಗ್ ಬಾಸ್ ಮನೆಯ ಪ್ರಾಪರ್ಟಿಗಳನ್ನು ನಾಶ ಮಾಡಲು ಶುರು ಮಾಡಿದರು. ಅಷ್ಟೇ ಅಲ್ಲದೆ, ಯಶಸ್ ಅವರನ್ನು ‘ಕಾಮುಕ’ ಎಂದು ನಿಂದಿಸಿ ಅತಿಯಾದ ಅವಾಚ್ಯ ಶಬ್ದಗಳನ್ನು ಬಳಸಿದರು.

ಅವರು ಬಳಸಿದ ಬೂದಿ ಮಾತುಗಳು ಯಾವ ಹಂತಕ್ಕೆ ಹೋದವು ಎಂದರೆ, ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರ ಮಾಡುವಾಗ ಸುದೀರ್ಘವಾಗಿ ‘ಬೀಪ್’ ಸೌಂಡ್ ಹಾಕಬೇಕಾಯಿತು. ಟಾಸ್ಕ್ ಮುಗಿದ ಮೇಲೆಯೂ ಮಂಜು ತಮ್ಮ ಕೋಪವನ್ನು ನಿಯಂತ್ರಿಸದೆ ಕೆಟ್ಟ ಪದಗಳ ಬಳಕೆಯನ್ನು ಮುಂದುವರಿಸಿದರು.

BBK 13: ಸುದೀಪ್ ವಿಶೇಷ ಅಧಿಕಾರ ಬಳಸಿ ಎಲಿಮಿನೇಟ್ ಮಾಡ್ತಾರಾ?

ಬಿಗ್ ಬಾಸ್ ನಿಯಮಗಳ ಪ್ರಕಾರ ಇತರರ ಮೇಲೆ ಹಲ್ಲೆ ಮಾಡುವುದು ಎಷ್ಟು ದೊಡ್ಡ ತಪ್ಪೋ, ಅತಿಯಾದ ಅಶ್ಲೀಲ ಪದ ಬಳಸಿ ವೀಕ್ಷಕರಿಗೆ ಅಸಹ್ಯ ಹುಟ್ಟಿಸುವುದು ಕೂಡ ಅಷ್ಟೇ ದೊಡ್ಡ ಅಪರಾಧ. ಹೀಗಾಗಿ ಮಂಜು ಅವರ ವರ್ತನೆಗೆ ಕಠಿಣ ಶಿಕ್ಷೆ ಸಿಗಲೇಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಬರುವ ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಮಂಜು ಅವರನ್ನು ರೆಡ್ ಕಾರ್ಡ್ ನೀಡಿ ಎಲಿಮಿನೇಟ್ ಮಾಡಬೇಕು ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ.