☔ Weather
Bengaluru: 🌤️ 24°C | AQI 156
Mysore: ☀️ 22°C | AQI 122
Mangalore: ☀️ 26°C | AQI 144
Bengaluru: 🌤️ 24°C | AQI 156
☔ Weather
Bengaluru: 🌤️ 24°C | AQI 156
Mysore: ☀️ 22°C | AQI 122
Mangalore: ☀️ 26°C | AQI 144
Bengaluru: 🌤️ 24°C | AQI 156

BBK 13: ಮೊನ್ನೆಯಷ್ಟೇ ‘ಮಂಜಿ’ ಎಂದು ಕಾಲೆಳೆದಿದ್ದ ಕಿಚ್ಚ; ಈಗ ಮಂಜನನ್ನೇ ನಾಮಿನೇಟ್ ಮಾಡಿ ಶಾಕ್ ಕೊಟ್ಟ ಗಾನವಿ

BBK 13: Ganavi Nominates Manju Pours Cow Dung Water Twist Update
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಯುವ ರಾಣಿ ಗಾನವಿ ತಮ್ಮ ಆಪ್ತ ಸ್ನೇಹಿತ ಮಂಜನನ್ನೇ ನಾಮಿನೇಟ್ ಮಾಡಿ ತಲೆ ಮೇಲೆ ಸಗಣಿ ನೀರು ಸುರಿದಿರುವುದು ಮನೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮುಖ್ಯಾಂಶಗಳು

  • ಮಂಜನನ್ನು ನಾಮಿನೇಟ್ ಮಾಡಿದ ಗಾನವಿ.
  • ತಲೆ ಮೇಲೆ ಸಗಣಿ ನೀರು ಸುರಿದು ಟ್ವಿಸ್ಟ್.
  • ದೊಡ್ಮನೆಯಲ್ಲಿ ಬದಲಾದ ಸ್ನೇಹದ ಲೆಕ್ಕಾಚಾರ.

BBK 13: ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಮನೆಯೊಳಗಿನ ಸ್ಪರ್ಧಿಗಳ ಸ್ನೇಹ, ಜಗಳ ಹಾಗೂ ನಾಮಿನೇಷನ್‌ ಪ್ರಕ್ರಿಯೆಗಳು ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿವೆ.

ಈ ನಡುವೆ ನಾಮಿನೇಷನ್‌ ವಿಚಾರದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಯುವ ರಾಣಿ ಪಟ್ಟ ಅಲಂಕರಿಸಿರುವ ಗಾನವಿ ಅವರು ತಮ್ಮ ವಿಶೇಷ ಅಧಿಕಾರವನ್ನು ಬಳಸಿಕೊಂಡಿದ್ದಾರೆ.

ತಮ್ಮ ಆಪ್ತ ಸ್ನೇಹಿತ ಮಂಜನನ್ನೇ ಅವರು ಈ ಬಾರಿ ನಾಮಿನೇಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಂಜನ ತಲೆಯ ಮೇಲೆ ಸಗಣಿ ನೀರು ಸುರಿದು ನಾಮಿನೇಟ್ ಮಾಡಿರುವುದು ಮನೆಯೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ.

ಮೂವರು ಯುವ ರಾಣಿಯರಿಗೆ ಸಿಕ್ಕಿತು ವಿಶೇಷ ಅಧಿಕಾರ

ಬಿಗ್‌ ಬಾಸ್‌ ಕನ್ನಡ ಸೀಸನ್‌ 13ರಲ್ಲಿ ನಾಮಿನೇಷನ್‌ ಪ್ರಕ್ರಿಯೆಗೆ ಈ ಬಾರಿ ವಿಶೇಷ ತಿರುವು ನೀಡಲಾಗಿದೆ. ಮನೆಯ ಮೂವರು ಯುವ ರಾಣಿಯರಾದ ಆಸಿಯಾ, ಸೌಂದರ್ಯ ಹಾಗೂ ಗಾನವಿಗೆ ಬಿಗ್‌ ಬಾಸ್‌ ವಿಶೇಷ ಅಧಿಕಾರ ನೀಡಿದ್ದಾರೆ.

ಈ ಅಧಿಕಾರದ ಮೂಲಕ ಕೆಲವು ಸ್ಪರ್ಧಿಗಳನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶ ಅವರಿಗೆ ಲಭಿಸಿತ್ತು. ಈ ವಿಶೇಷ ಅಧಿಕಾರವನ್ನು ಯಾರು ಹೇಗೆ ಬಳಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲತ್ತು.

ಅದರಲ್ಲೂ ನಾಮಿನೇಷನ್‌ ಅಧಿಕಾರ ಪಡೆದ ಗಾನವಿ ಯಾರ ಹೆಸರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು. ಆದರೆ ಗಾನವಿ ತೆಗೆದುಕೊಂಡ ನಿರ್ಧಾರ ಮಾತ್ರ ಎಲ್ಲರಿಗೂ ದೊಡ್ಡ ಅಚ್ಚರಿ ಮೂಡಿಸಿದೆ.

ಇದನ್ನು ಓದಿ: BBK 13: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸೋನಿಕಾ ಎಲಿಮಿನೇಷನ್; ಸೇಫ್ ಆದ ಜಗ್ಗ ಮಮ್ಮಿ ಹಾಗೂ ಪ್ರಶಾಂತ್

ಆಪ್ತ ಸ್ನೇಹಿತನ ಮೇಲೆಯೇ ಮುನಿಸು ತೋರಿದ ಗಾನವಿ

ಬಿಗ್‌ ಬಾಸ್‌ ಮನೆಯಲ್ಲಿ ಗಾನವಿ ಮತ್ತು ಮಂಜನ ನಡುವಿನ ಆತ್ಮೀಯತೆ ಹಲವು ಸಂದರ್ಭಗಳಲ್ಲಿ ಗಮನ ಸೆಳೆದಿತ್ತು. ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದು, ಅವರ ಸ್ನೇಹದ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿತ್ತು.

ಹೀಗಿರುವಾಗ ನಾಮಿನೇಷನ್‌ ಅಧಿಕಾರ ಸಿಕ್ಕಾಗ ಗಾನವಿ ಮಂಜನ ಹೆಸರನ್ನೇ ಆಯ್ಕೆ ಮಾಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಆದರೆ ಯಾವುದೇ ಹಿಂಜರಿಕೆ ತೋರದೆ ಗಾನವಿ ಮಂಜನನ್ನೇ ನೇರವಾಗಿ ನಾಮಿನೇಟ್ ಮಾಡಿದರು.

ನಾಮಿನೇಷನ್‌ ಪ್ರಕ್ರಿಯೆಯ ವೇಳೆ ಮಂಜನ ತಲೆಯ ಮೇಲೆ ಸಗಣಿ ನೀರು ಸುರಿದಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಈ ಮೂಲಕ ಗಾನವಿ ಸ್ನೇಹಕ್ಕಿಂತ ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ.

BBK 13: ಕಿತಾಪತಿ ಹಾಗೂ ಕಿಚ್ಚ ಸುದೀಪ್ ತಮಾಷೆ

ಇನ್ನು ಭಾನುವಾರದ ಸಂಚಿಕೆಯಲ್ಲಿ ಗಾನವಿ ಮತ್ತು ಮಂಜನ ಸ್ನೇಹದ ವಿಚಾರ ಮುನ್ನೆಲೆಗೆ ಬಂದಿತ್ತು. ನಿರೂಪಕ ಕಿಚ್ಚ ಸುದೀಪ್‌ ಅವರು ಗಾನವಿಯನ್ನು ‘ಮಂಜಿ’ ಎಂದು ಕರೆದು ತಮಾಷೆ ಮಾಡಿದ್ದರು.

ಮನೆಯೊಳಗಿನ ಇಬ್ಬರ ಆತ್ಮೀಯತೆಯ ಬಗ್ಗೆ ಸುದೀಪ್ ಪರೋಕ್ಷವಾಗಿ ಕಾಲೆಳೆದಿದ್ದರು. ಆದರೆ ಅದೇ ಆಪ್ತ ಸ್ನೇಹಿತನನ್ನು ಗಾನವಿ ಈಗ ನಾಮಿನೇಟ್ ಮಾಡಿರುವುದು ಎಲ್ಲರಿಗೂ ಶಾಕ್ ನೀಡಿದೆ.

ಸ್ನೇಹ ಮತ್ತು ಆಟದ ನಡುವೆ ಸ್ಪರ್ಧಿಗಳು ಹೇಗೆ ಸಮತೋಲನ ಕಾಯ್ದುಕೊಳ್ಳುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಗಾನವಿಯ ಈ ನಿರ್ಧಾರವನ್ನು ಮಂಜ ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕಿದೆ.