☔ Weather
Bengaluru: ☁️ 21°C | AQI 60
Mysore: ☁️ 22°C | AQI 62
Mangalore: ☁️ 26°C | AQI 70
Bengaluru: ☁️ 21°C | AQI 60

BBK 13: ಮನಸ್ತಾಪ ಮರೆತು ಒಂದಾದ ಗಾನವಿ-ಗಗನ್; ದೊಡ್ಮನೆಯಲ್ಲಿ ಪಾಸಿಟಿವ್ ವೈಬ್

BBK 13: Ganavi And Gagan End Feud And Reconnect With Positive Vibes

BBK 13: ಕಳೆದ ಕೆಲ ದಿನಗಳಿಂದ ಭಾರಿ ಬಿರುಗಾಳಿ ಎದ್ದಿದ್ದ ಬಿಗ್‌ಬಾಸ್ (Bigg Boss) ಮನೆಯಲ್ಲಿ ಈಗ ಹೊಸದಾದ ಪಾಸಿಟಿವ್ ವೈಬ್ ಕಾಣಿಸುತ್ತಿದೆ. ವೈಯಕ್ತಿಕ ವಿಚಾರಗಳನ್ನು ಕೆದಕಿ ತೀವ್ರವಾಗಿ ಜಗಳ ಮಾಡಿಕೊಂಡಿದ್ದ ಗಾನವಿ (Ganavi) ಹಾಗೂ ಗಗನ್ (Gagan) ತಮ್ಮ ಹಳೆಯ ಮನಸ್ತಾಪಗಳನ್ನು ಸಂಪೂರ್ಣವಾಗಿ ಬದಿಗಿಟ್ಟಿದ್ದಾರೆ.

ಪರಸ್ಪರ ಮುನಿಸನ್ನು ಮರೆತು ಇಬ್ಬರೂ ಮತ್ತೆ ಸ್ನೇಹದ ಹಸ್ತ ಚಾಚಿದ್ದಾರೆ. ಇವರ ಈ ಹೊಸ ಬದಲಾವಣೆಯು ದೊಡ್ಮನೆಯ ವಾತಾವರಣವನ್ನೇ ಬದಲಾಯಿಸಿದ್ದು, ವೀಕ್ಷಕರ ಗಮನ ಸೆಳೆದಿದೆ. ಈ ಕುರಿತಾಗಿ ವಾಹಿನಿ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರ ನಡುವಿನ ಈ ಹೃದಯಸ್ಪರ್ಶಿ ಮಾತುಕತೆಯು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಗಗನ್ ಮತ್ತು ಗಾನವಿ ನಡುವಿನ ಭಾವುಕ ಮಾತುಕತೆ

ಪ್ರೋಮೋದಲ್ಲಿ ಗಗನ್ ಮಾತನಾಡುತ್ತಾ, ನಿನ್ನ ಜೊತೆ ಪ್ರತಿ ಸಲ ಮಾತನಾಡುವಾಗಲೂ ಆ ಹಳೆಯ ಘಟನೆ ನೆನಪಾಗಿ ನನಗೆ ಟ್ರಿಗರ್ ಆಗುತ್ತದೆ ಎಂದಿದ್ದಾರೆ. ಅದನ್ನೆಲ್ಲಾ ಮರೆತು ತಾನು ಇಲ್ಲಿಂದ ಖುಷಿಯಾಗಿ ಹೊರಹೋಗಬೇಕು ಎಂದು ಹೇಳುತ್ತಾ ಗಗನ್ ಭಾವುಕರಾಗಿದ್ದಾರೆ.

ಬಳಿಕ ಗಾನವಿ ಕೂಡ ಮಾತನಾಡುತ್ತಾ ತಮ್ಮ ತಪ್ಪನ್ನು ಮನಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ನಮ್ಮಿಬ್ಬರ ವೈಯಕ್ತಿಕ ಜಗಳದಲ್ಲಿ ನಿನ್ನ ಫ್ಯಾಮಿಲಿಯನ್ನು ಎಳೆದು ತಂದಿದ್ದು ನಾನು ಮಾಡಿದ ಅತಿ ದೊಡ್ಡ ತಪ್ಪು ಎಂದು ಪಶ್ಚಾತಾಪ ಪಟ್ಟಿದ್ದಾರೆ.

BBK 13: ಮನಸ್ಸಿನಿಂದ ಕ್ಷಮೆ ಕೋರಿ ಒಂದಾದ ಜೋಡಿ

ನಿಜವಾಗಿಯೂ ನಾನು ಮನಸ್ಸಿನಿಂದ ಕ್ಷಮೆ ಕೇಳ್ತೀನಿ ಎಂದು ಗಾನವಿ ಹೇಳಿ ಗಗನ್ ಬಳಿ ಸಾರಿ ಕೇಳಿದ್ದಾರೆ. ಈ ಮೂಲಕ ಹಿಂದಿನ ಎಲ್ಲಾ ಕಹಿ ನೆನಪುಗಳಿಗೆ ಇಬ್ಬರೂ ತೆರೆ ಎಳೆದಿದ್ದಾರೆ.

ಮಾತುಕತೆಯ ಕೊನೆಯಲ್ಲಿ ಇಬ್ಬರೂ ಪರಸ್ಪರ ಕೈಕುಲುಕಿ ಸ್ನೇಹದ ಹಾದಿಗೆ ಮರಳಿದ್ದಾರೆ. ಬಿಗ್‌ಬಾಸ್ ರಣಾಂಗಣದಲ್ಲಿ ಸದಾ ಜಗಳಗಳೇ ತುಂಬಿರುತ್ತವೆಯಾದರೂ, ಇಂತಹ ಭಾವನಾತ್ಮಕ ಕ್ಷಣಗಳು ಆಟಕ್ಕೆ ಹೊಸ ಮೆರುಗು ನೀಡಿವೆ.