BBK 13: ‘ಬಿಗ್ ಬಾಸ್’ ಮನೆಯಲ್ಲಿ ಪ್ರತಿದಿನ ಹೊಸ ಹೊಸ ಹಂಗಾಮಗಳು ನಡೆಯುತ್ತಲೇ ಇರುತ್ತವೆ. ಸ್ಪರ್ಧಿಗಳ ಸಹನೆ ಪರೀಕ್ಷಿಸಲು ಬಿಗ್ ಬಾಸ್ ಚಿತ್ರ-ವಿಚಿತ್ರ ಟಾಸ್ಕ್ಗಳನ್ನು ನೀಡುತ್ತಿರುತ್ತಾರೆ. ಈ ಬಾರಿಯೂ ಸಹ ಮನೆ ಸದಸ್ಯರು ಅತ್ಯಂತ ಜುಗುಪ್ಸಾಕರ ಹಾಗೂ ಕಠಿಣವಾದ ಟಾಸ್ಕ್ ಒಂದನ್ನು ಎದುರಿಸಬೇಕಾಗಿ ಬಂದಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಪರಸ್ಪರ ಸ್ಪರ್ಧಿಗಳ ಮೇಲೆ ಸಗಣಿ ನೀರು ಸುರಿಯುವ ಹಾಗೂ ಕಸದ ರಾಶಿ ಹಾಕುವ ವಿಚಿತ್ರ ಟಾಸ್ಕ್ ನೀಡಲಾಗಿದೆ.
ಸಗಣಿ ನೀರು, ಕಸದ ರಾಶಿ ಟಾಸ್ಕ್ ಪ್ರೋಮೊ ಔಟ್
ವಾಹಿನಿಯು ಈ ಕಠಿಣ ಹಾಗೂ ವಿಚಿತ್ರ ಟಾಸ್ಕ್ನ ಪ್ರೋಮೊವನ್ನು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡಿದೆ. ಪ್ರೋಮೊದಲ್ಲಿ ಸ್ಪರ್ಧಿಗಳು ಒಬ್ಬರ ತಲೆ ಮೇಲೆ ಮತ್ತೊಬ್ಬರು ಸಗಣಿ ನೀರು ಸುರಿಯುತ್ತಿದ್ದಾರೆ. ಅಷ್ಟೇ ಅಲ್ಲದೆ ಮೈಮೇಲೆ ಕಸದ ರಾಶಿಯನ್ನೇ ತಂದು ಹಾಕುತ್ತಿದ್ದಾರೆ. ಈ ಟಾಸ್ಕ್ನಿಂದಾಗಿ ಬಿಗ್ ಬಾಸ್ ಮನೆಯಲ್ಲಿ ವಾತಾವರಣ ತೀವ್ರ ಗಂಭೀರ ಹಾಗೂ ಬಿಸಿಯಾಗಿದೆ.
ಇದನ್ನು ಓದಿ: BBK 13: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗಾನವಿ ಗೌಡ ಧಮಾಕಾ; ಶಾಸ್ತ್ರಿ-ಯಶಸ್ ವಿಮಾನಕ್ಕೆ ಹೈಜಾಕ್
ಆಸಿಯಾ ಫಿರ್ದೋಸಾ ವಿರುದ್ಧ ಮೋಸದ ಆರೋಪ
ಈ ಕಠಿಣ ಟಾಸ್ಕ್ನಲ್ಲಿ ಸ್ಪರ್ಧಿ ಆಸಿಯಾ ಫಿರ್ದೋಸಾ ಅವರು ಮೋಸ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಆಸಿಯಾ ನಿಯಮ ಮೀರಿ ಆಟವಾಡಿದ್ದಾರೆ ಎಂದು ಗಗನ್ ಹಾಗೂ ಮನೆಯ ಇನ್ನೂ ಕೆಲ ಸದಸ್ಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆಸಿಯಾ ಅವರ ಈ ನಡೆಗೆ ಗಗನ್ ನೇರವಾಗಿಯೇ ಸವಾಲು ಹಾಕಿದ್ದು, ಇಬ್ಬರ ನಡುವೆ ಸಖತ್ ಗಲಾಟೆ ನಡೆದಿದೆ.
BBK 13: ಉಸ್ತುವಾರಿ ಮಂಜ ಸಖತ್ ಅಬ್ಬರ
ಈ ಗೊಂದಲದ ಟಾಸ್ಕ್ನ ಉಸ್ತುವಾರಿಯನ್ನು ಮನೆ ಸದಸ್ಯ ಮಂಜ ವಹಿಸಿಕೊಂಡಿದ್ದಾರೆ. ಆಟದಲ್ಲಿ ಮೋಸ ಹಾಗೂ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿದ್ದಂತೆ ಉಸ್ತುವಾರಿ ಮಂಜ ಕೂಡ ಸಖತ್ ಅಬ್ಬರಿಸಿದ್ದಾರೆ. ಮೋಸದಾಟವನ್ನು ಸಹಿಸುವುದಿಲ್ಲ ಎಂದು ಮಂಜ ಜೋರಾಗಿ ಕೂಗಾಡಿದ್ದು, ಬಿಗ್ ಬಾಸ್ ಮನೆಯಲ್ಲಿ ಮಾತಿನ ಚಕಮಕಿ ಜೋರಾಗಿದೆ.




