‘ಟಾಕ್ಸಿಕ್’ 4 ನೇ ದಿನದ ಕಲೆಕ್ಷನ್ ಎಷ್ಟು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ 4 ನೇ ದಿನ (ಶನಿವಾರ) ಭಾರತದಲ್ಲಿ ₹24.50 ಕೋಟಿ ನೆಟ್ ಗಳಿಸಿದ್ದು, ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ ಬರೋಬ್ಬರಿ ₹254.75 ಕೋಟಿ ಗಡಿ ದಾಟಿದೆ.

TOXIC: 4 ನೇ ದಿನ ‘ಟಾಕ್ಸಿಕ್’ ಗಳಿಸಿದ್ದಷ್ಟು? ಕನ್ನಡ ಆವೃತ್ತಿಗೆ ಸಿಕ್ತು ಹೈಯೆಸ್ಟ್ ರೆಸ್ಪಾನ್ಸ್

4 ನೇ ದಿನ 'ಟಾಕ್ಸಿಕ್' ಗಳಿಸಿದ್ದಷ್ಟು?

Photo Credits: @the_moviedecoded (Instagram) ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾಗಿ ನಾಲ್ಕು ದಿನಗಳು ಕಳೆದಿವೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ನಾಲ್ಕು ದಿನಗಳಲ್ಲಿ ಈ ಚಿತ್ರ ಭಾರಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ ಸಿನಿಮಾ ಒಟ್ಟು 254.75 ಕೋಟಿ ರೂಪಾಯಿ ಗಳಿಸಿದೆ. ‘ಸಾಕ್ನಿಲ್ಕ್’ ವರದಿ ಈ ಮಾಹಿತಿಯನ್ನು ನೀಡಿದೆ.  ಮೊದಲ 4 ದಿನಗಳ ಕಲೆಕ್ಷನ್ ವಿವರ  ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದ ಗಳಿಕೆಯಲ್ಲಿ ಶೇಕಡ 9.9ರಷ್ಟು ಕುಸಿತ ಕಂಡುಬಂದಿದೆ. […]

ನೆಗೆಟಿವಿಟಿ ನಡುವೆಯೂ ₹200 ಕೋಟಿ ಕ್ಲಬ್ ಸೇರಿದ ‘ಟಾಕ್ಸಿಕ್’

ಟ್ರೋಲ್‌ಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾದ ಕೇವಲ 3 ದಿನಗಳಲ್ಲೇ ಜಾಗತಿಕವಾಗಿ ಬರೋಬ್ಬರಿ ₹221 ಕೋಟಿಗೂ ಅಧಿಕ ಗಳಿಕೆ ಕಂಡು ₹200 ಕೋಟಿ ಕ್ಲಬ್ ಸೇರಿದೆ.

‘ಟಾಕ್ಸಿಕ್’ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್ ದಿಗ್ಗಜರು

ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಸ್ಯಾಂಡಲ್‌ವುಡ್ ದಿಗ್ಗಜರಾದ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅವರು ‘ಟಾಕ್ಸಿಕ್’ ವಿಶ್ಯುವಲ್ ಮೇಕಿಂಗ್ ಹಾಗೂ ಯಶ್ ಅವರ ಸಾಹಸಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಪ್ರೊಫೈಲ್ ಬಯೋ ಮೂಲಕ ಟ್ರೋಲರ್‌ಗಳಿಗೆ ಟಾಂಗ್

‘ಟಾಕ್ಸಿಕ್’ ಸಿನಿಮಾಗೆ ನೆಗೆಟಿವ್ ಕಾಮೆಂಟ್‌ಗಳು ಬರುತ್ತಿದ್ದಂತೆ, ಯಶ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿರುವ “ನೀವು ನೀವಾಗಿಯೇ ಇರಿ, ಏಕೆಂದರೆ ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ” ಎಂಬ ಸಾಲುಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳು ಸೂಕ್ತ ಕೌಂಟರ್ ನೀಡುತ್ತಿದ್ದಾರೆ.

YASH BIO: ‘ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ’; ಟ್ರೋಲರ್ಸ್‌ ಬಾಯಿ ಮುಚ್ಚಿಸಿದ ಯಶ್ ಬಯೋ

'ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ'

Photo Credits: @thenameisyash (Instagram) ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಭರ್ಜರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ನೆಗೆಟಿವ್ ವಿಮರ್ಶೆ ಹಾಗೂ ಟ್ರೋಲ್‌ಗಳನ್ನು ಹರಿಬಿಡುತ್ತಿದ್ದಾರೆ. ಆದರೆ ಈ ಎಲ್ಲಾ ನೆಗೆಟಿವಿಟಿಗಳ ಮಧ್ಯೆ ಯಶ್ ಅವರ ಇನ್‌ಸ್ಟಾಗ್ರಾಮ್ ಬಯೋ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ನೆಗೆಟಿವ್ ಕಾಮೆಂಟ್ಸ್‌ಗಳಿಗೆ ಯಶ್ ಬಯೋ ಮೂಲಕವೇ ಫ್ಯಾನ್ಸ್ ಸಖತ್ ಕೌಂಟರ್ […]

CHIKKANNA RECEPTION: ಮೈಸೂರಿನಲ್ಲಿ ಅದ್ಧೂರಿ ರಿಸೆಪ್ಷನ್; ಕಣ್ಣುಕೋರೈಸಿದ ಚಿಕ್ಕಣ್ಣ-ಪಾವನಾ ಜೋಡಿ

ಮೈಸೂರಿನಲ್ಲಿ ಅದ್ಧೂರಿ ರಿಸೆಪ್ಷನ್

Photo Credits: @chittaramedia (Instagram) ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯನಟ ಚಿಕ್ಕಣ್ಣ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ನಟ ಚಿಕ್ಕಣ್ಣ ಮತ್ತು ಪಾವನಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಂಪೂರ್ಣವಾಗಿ ಸಜ್ಜಾಗಿದೆ. ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ನಡೆದ ಅದ್ಧೂರಿ ಆರತಕ್ಷತೆ ಸಮಾರಂಭದಲ್ಲಿ ನವಜೋಡಿ ಕಣ್ಣುಕೋರೈಸುವಂತೆ ಮಿಂಚಿದ್ದಾರೆ. ಸಿನಿಮಾರಂಗದ ಗಣ್ಯರು, ಆಪ್ತರು ಹಾಗೂ ಕುಟುಂಬಸ್ಥರು ಈ ವೈಭವದ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವವಧು-ವರರಿಗೆ ಹೃತ್ಪೂರ್ವಕ ಶುಭಕೋರಿದ್ದಾರೆ. ಇಂದು ಶ್ರೀರಂಗಪಟ್ಟಣದ ಹುಡುಗಿ ಪಾವನಾ ಜೊತೆ ಚಿಕ್ಕಣ್ಣ […]

ದಿನಭವಿಷ್ಯ: ಇಂದು ಈ ರಾಶಿಯವರು ಎಲ್ಲದಕ್ಕೂ ಹೇಳಿಸಿಕೊಂಡು ಕಾರ್ಯ ಮಾಡುವರು; ಯಾರಿಗೆ ಶುಭ?

ಇಂದು ಈ ರಾಶಿಯವರು ಎಲ್ಲದಕ್ಕೂ ಹೇಳಿಸಿಕೊಂಡು ಕಾರ್ಯ ಮಾಡುವರು

Photo Credits: AI Generated ಆಗಸ್ಟ್ 30, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಭಾನುವಾರದಂದು […]

TOXIC: ‘ಟಾಕ್ಸಿಕ್’ ಆಕ್ಷನ್ ಸೀಕ್ರೆಟ್ ಔಟ್; ಯಶ್ ಡೆಡಿಕೇಷನ್‌ಗೆ ಹಾಲಿವುಡ್ ಡೈರೆಕ್ಟರ್ ಫಿದಾ

'ಟಾಕ್ಸಿಕ್' ಆಕ್ಷನ್ ಸೀಕ್ರೆಟ್ ಔಟ್

Photo Credits: @jjlocoperry (Instagram) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಆಕ್ಷನ್ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿವೆ. ಅತ್ಯಂತ ಅದ್ಧೂರಿ ಹಾಗೂ ವಿಭಿನ್ನವಾಗಿ ಮೂಡಿಬಂದಿರುವ ಈ ಸಾಹಸ ದೃಶ್ಯಗಳನ್ನು ಹಾಲಿವುಡ್‌ನ ಜನಪ್ರಿಯ ಆಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ನಿರ್ದೇಶಿಸಿದ್ದಾರೆ. ಪ್ರೇಕ್ಷಕರು ಸಿನಿಮಾದ ಮೇಕಿಂಗ್, ಯಶ್ ನಟನೆ ಮತ್ತು ಕ್ಲೈಮ್ಯಾಕ್ಸ್ ಟ್ವಿಸ್ಟ್‌ಗಳಿಗೆ ಸಂಪೂರ್ಣವಾಗಿ ಮನಸೋತಿದ್ದಾರೆ. ಇದೀಗ ಕೆವಿಎನ್ ಸಂಸ್ಥೆಯು ಆಕ್ಷನ್ ಸೀನ್ಗಳ ಚಿತ್ರೀಕರಣದ ವಿಶೇಷ ವಿಡಿಯೋ […]

‘ಟಾಕ್ಸಿಕ್’ ಸಿನಿಮಾ ಬಗ್ಗೆ ಮುಂಬೈನಲ್ಲಿ ಶಿವಣ್ಣ ಹೇಳಿದ್ದೇನು?

‘ಒರಿಜಿನಲ್ ಮಾನ್ಸ್ಟರ್’ ಮೋಷನ್ ಪೋಸ್ಟರ್ ಲಾಂಚ್‌ಗಾಗಿ ಮುಂಬೈಗೆ ತೆರಳಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಮಾಧ್ಯಮದವರು ‘ಟಾಕ್ಸಿಕ್’ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶಿವಣ್ಣ, “ಚಿತ್ರದಲ್ಲಿ ಏನೋ ಹೊಸ ವಿಚಾರ ಹೇಳಲು ಪ್ರಯತ್ನಿಸಿದ್ದು ಹಲವರಿಗೆ ಇಷ್ಟವಾಗಿದೆ. ಬಿಡುವು ಮಾಡಿಕೊಂಡು ಖಂಡಿತ ಸಿನಿಮಾ ನೋಡುತ್ತೇನೆ” ಎಂದಿದ್ದಾರೆ.