ದಿನಭವಿಷ್ಯ: ಇಂದು ಈ ರಾಶಿಯವರು ಎಲ್ಲದಕ್ಕೂ ಹೇಳಿಸಿಕೊಂಡು ಕಾರ್ಯ ಮಾಡುವರು; ಯಾರಿಗೆ ಶುಭ?

ಇಂದು ಈ ರಾಶಿಯವರು ಎಲ್ಲದಕ್ಕೂ ಹೇಳಿಸಿಕೊಂಡು ಕಾರ್ಯ ಮಾಡುವರು

Photo Credits: AI Generated

ಆಗಸ್ಟ್ 30, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಭಾನುವಾರದಂದು ತಾತ್ಸಾರದ ಕೋಪ, ಧಾರ್ಮಿಕ ಒಲವು, ಉದಾತ್ತ ಮನೋಭಾವ, ವ್ಯಾಪಾರದಲ್ಲಿ ರೂಪಾಂತರ, ಹಣಕ್ಕೆ ಒತ್ತಾಯ ಇವೆಲ್ಲ ಇಂದಿನ ಭವಿಷ್ಯ.

ಗ್ರಹಗಳ ಪ್ರಭಾವವು ನಿಮ್ಮ ರಾಶಿಗಳ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಳ್ಳಿ. ದಿನದ ಶುಭ ಹಾಗೂ ಅಶುಭ ಸಮಯಗಳ ಪಂಚಾಂಗ ವಿವರಗಳು ಇಲ್ಲಿವೆ. ಯಾವ ರಾಶಿಯವರು ಇಂದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಈ ಕೆಳಗೆ ನೋಡಿ.

ಮೇಷ ರಾಶಿ

ಸಾಮರಸ್ಯದ ಕೊರತೆಯಿಂದ ಮನಸ್ಸು ಉದ್ವೇಗಕ್ಕೆ ಒಳಗಾಗಬಹುದು. ಯಾವುದನ್ನಾದರೂ ಪರಸ್ಪರ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಒಳಿತು. ಅಪೇಕ್ಷಿತ ವ್ಯಕ್ತಿಗಳಿಂದ ಬೆಂಬಲ ದೊರೆಯಲಿದೆ. ತಾಳ್ಮೆಯಿಂದ ದಿನದ ಕಾರ್ಯಗಳನ್ನು ನಿರ್ವಹಿಸಿ.

ವೃಷಭ ರಾಶಿ

ಯಾರದೋ ಮೂಲಕ ಅಪಾಯದ ಸೂಚನೆ ಬರಬಹುದು, ಎಚ್ಚರಿಕೆ ಇರಲಿ. ನಿಮ್ಮ ನಿಷ್ಪಕ್ಷಪಾತ ನಿಲುವು ಕೆಲವರಿಗೆ ಇಷ್ಟವಾಗದಿರಬಹುದು. ಬರುವ ಜವಾಬ್ದಾರಿಗಳನ್ನು ಜಾಣತನದಿಂದ ನಿರ್ವಹಿಸಿ. ನಿರ್ಮಾಣ ಹಂತದ ಕೆಲಸಗಳಲ್ಲಿ ಕೊಂಚ ವಿಳಂಬವಾಗಬಹುದು.

ಮಿಥುನ ರಾಶಿ

ಸ್ನೇಹಿತರಿಗೆ ಧನಸಹಾಯ ಮಾಡುವ ಸಂದರ್ಭ ಬರಬಹುದು. ಪ್ರಸಿದ್ಧ ವ್ಯಕ್ತಿಗಳನ್ನು ಅನಿರೀಕ್ಷಿತವಾಗಿ ಭೇಟಿಯಾಗುವಿರಿ. ಮಾತಿನಲ್ಲಿ ಅಹಂಕಾರವಿರದಿರಲಿ. ಪೂರ್ವಪುಣ್ಯದಿಂದ ದೊಡ್ಡ ಸವಾಲೊಂದರಿಂದ ಪಾರಾಗುವಿರಿ.

ಕರ್ಕಾಟಕ ರಾಶಿ

ಪಾಲುದಾರಿಕೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ, ಅನಗತ್ಯ ಕಲಹಗಳಿಗೆ ಆಸ್ಪದ ನೀಡಬೇಡಿ. ವೃತ್ತಿಪರರು ಕಛೇರಿಯಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ನಿಮ್ಮದಲ್ಲದ ವಸ್ತು ಅಥವಾ ವಿಚಾರಗಳಿಗೆ ವಾದ ಮಾಡಲು ಹೋಗದಿರುವುದು ಒಳಿತು.

ಸಿಂಹ ರಾಶಿ

ಸಮಯ ಪರಿಪಾಲನೆ ವೃತ್ತಿಜೀವನಕ್ಕೆ ಅತ್ಯಗತ್ಯ, ಆಲಸ್ಯದಿಂದ ಕೆಲಸದಲ್ಲಿ ವಿಳಂಬ ಮಾಡಬೇಡಿ. ಯೋಗ್ಯ ಹಾಗೂ ಸೌಹಾರ್ದಯುತ ಮಾತುಗಳಿಂದ ಕಾರ್ಯ ಯಶಸ್ವಿಯಾಗಲಿದೆ. ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಸಾಧಾರಣ ಲಾಭವಿರಲಿದೆ.

ಕನ್ಯಾ ರಾಶಿ

ನಿಮ್ಮ ಶುದ್ಧ ನಡತೆ ಮತ್ತು ನಂಬಿಕೆ ಗೌರವ ತರಲಿದೆ. ಸಂಗಾತಿಯಿಂದ ಅಚ್ಚರಿಯ ಉಡುಗೊರೆ ಲಭ್ಯವಾಗಲಿದೆ. ಭೂಮಿಗೆ ಸಂಬಂಧಿಸಿದ ದಾಖಲೆಗಳ ವಿಚಾರದಲ್ಲಿ ಕೊಂಚ ಶ್ರಮ ಅಗತ್ಯ. ಕುಟುಂಬದಲ್ಲಿ ಮದುವೆ ವಿಚಾರಗಳು ಚರ್ಚೆಗೆ ಬರಲಿವೆ.

ತುಲಾ ರಾಶಿ

ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದು, ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ. ಕೂಡಿಟ್ಟ ಹಣ ಕೈಸೇರಿ ಆರ್ಥಿಕ ಸಮಾಧಾನ ತರಲಿದೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಮನಸ್ಸನ್ನು ಶಾಂತವಾಗಿರಿಸಿ.

ವೃಶ್ಚಿಕ ರಾಶಿ

ಸ್ವಾವಲಂಬಿಯಾಗಲು ಎಲ್ಲ ರೀತಿಯ ಪ್ರಯತ್ನ ಮಾಡುವಿರಿ. ಹೊಸ ವಿಷಯಗಳನ್ನು ತಿಳಿಯುವ ಹಂಬಲವಿರಲಿದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಪ್ರಗತಿ ಕಾಣಲಿದ್ದಾರೆ. ಮನಸ್ಸಿನ ಏಕಾಗ್ರತೆಯನ್ನು ಕಾಯ್ದುಕೊಳ್ಳುವುದು ಒಳಿತು.

ಧನು ರಾಶಿ

ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಪ್ರಭಾವಿ ವ್ಯಕ್ತಿಗಳ ಪರಿಚಯವಾಗಲಿದೆ. ಚಂಚಲ ಮನಸ್ಸನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಕೆಲಸದತ್ತ ಗಮನ ಹರಿಸಿ. ನಿಮ್ಮ ಕಷ್ಟಕ್ಕೆ ನೆರವಾದವರನ್ನು ಗೌರವಿಸಿ.

ಮಕರ ರಾಶಿ

ಒತ್ತಡ ಪರಿಹರಿಸಿಕೊಳ್ಳಲು ಕಿರು ಪ್ರಯಾಣ ಬೆಳೆಸುವಿರಿ. ಅನುಭವಿ ವ್ಯಕ್ತಿಗಳ ಸಲಹೆ ನಿಮ್ಮ ವೃತ್ತಿಗೆ ಪ್ರಯೋಜನಕಾರಿಯಾಗಲಿದೆ. ಸಣ್ಣ ವಿಚಾರಗಳ ನಿರ್ಲಕ್ಷ್ಯ ಬೇಡ. ಕುಟುಂಬದಲ್ಲಿ ತಂದೆಯವರ ಪ್ರೀತಿ ಮತ್ತು ಬೆಂಬಲ ಸಿಗಲಿದೆ.

ಕುಂಭ ರಾಶಿ

ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಕಾಲ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸಲಿದೆ. ಸರಳ ಸನ್ನಿವೇಶಗಳನ್ನು ಗೊಂದಲಮಯ ಮಾಡಿಕೊಳ್ಳದೆ ಶಾಂತವಾಗಿ ಯೋಚಿಸಿ ನಿರ್ಧಾರ ತಗೊಳ್ಳಿ.

ಮೀನ ರಾಶಿ

ಆಸ್ತಿ ಅಥವಾ ಹಣಕಾಸಿನ ಹೂಡಿಕೆ ಭವಿಷ್ಯದಲ್ಲಿ ಉತ್ತಮ ಪ್ರಯೋಜನ ನೀಡಲಿದೆ. ಸಹೋದರರೊಂದಿಗೆ ಬಾಂಧವ್ಯ ಹಾಳಾಗದಂತೆ ನೋಡಿಕೊಳ್ಳಿ. ಸಾಲದ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಾಗಲಿದೆ.

ಇಂದಿನ ಪಂಚಾಂಗ (30 ಆಗಸ್ಟ್ 2026)

ಸಂವತ್ಸರ: ಪರಾಭವ

ಅಯನ: ದಕ್ಷಿಣಾಯನ | ಋತು: ವರ್ಷ ಋತು

ಮಾಸ: ಶ್ರಾವಣ (ಮಾಸ) | ಪಕ್ಷ: ಕೃಷ್ಣ ಪಕ್ಷ

ತಿಥಿ: ದ್ವಿತೀಯಾ | ವಾರ: ಭಾನುವಾರ

ನಕ್ಷತ್ರ: ಶತಭಿಷಾ | ಯೋಗ: ಧೃತಿ | ಕರಣ: ಗರಜ

ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:31

ರಾಹು ಕಾಲ: 04:58 PM – 06:31 PM

ಯಮಗಂಡ ಕಾಲ: 12:20 PM – 01:53 PM

ಗುಳಿಕ ಕಾಲ: 03:25 PM – 04:58 PM