TIPPU SULTAN: ಟಿಪ್ಪು ವಿಡಿಯೋಗೆ ಪಾಕ್ ಗೀತೆ – ಕೆಟ್ಟ ಕ್ರಿಮಿಗಳ ವಿರುದ್ಧ ದೇಶದ್ರೋಹ ಕೇಸ್ !

ಚಿಕ್ಕಮಗಳೂರು ನಗರ ಪೊಲೀಸರು ಪಾಕಿಸ್ತಾನ ಬೆಂಬಲಿತ ಹಾಡಿನೊಂದಿಗೆ ಟಿಪ್ಪು ಸುಲ್ತಾನ್ ಕಟೌಟ್ ವಿಡಿಯೋ ಹಾಕಿದ ಪ್ರಕರಣದಲ್ಲಿ ಸ್ವಯಂ ಪ್ರೇರಿತ ಎಫ್ಐಆರ್ ದಾಖಲಿಸಿದ್ದು ಪವರ್ ಟಿಪ್ಪು ಬಾಯ್ಸ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ವಿರುದ್ಧ ಕ್ರಮ ಜರುಗಿಸಿದ್ದಾರೆ. ಈದ್ ಮಿಲಾದ್ ಆಚರಣೆ ನಿಮಿತ್ತ ನಗರದ ಟಿಪ್ಪು ನಗರ ಬಡಾವಣೆಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರದ ಕಟೌಟ್ ಅಳವಡಿಸಲಾಗಿತ್ತು. ಅದೇ ಕಟೌಟಿನ ದೃಶ್ಯವನ್ನು ಸೆರೆಹಿಡಿದು ಪಾಕ್ ಪರ ಗೀತೆಯನ್ನು ಹಿನ್ನೆಲೆಯಾಗಿ ಸೇರಿಸಿ ಇನ್‌ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು […]
SIR : ಕರಡು ಮತದಾರರ ಪಟ್ಟಿ ಪ್ರಕಟ : ಕೋಟಿಗೂ ಅಧಿಕ ಹೆಸರುಗಳು ಔಟ್, ಲಕ್ಷಾಂತರ ಜನರಿಗೆ ನೋಟೀಸ್

ರಾಜ್ಯದ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಹೊಸ ಕರಡು ಮತದಾರರ ಪಟ್ಟಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಲಕ್ಷಾಂತರ ನಾಗರಿಕರ ನೊಂದಣಿಯ ಬಗ್ಗೆ ಆತಂಕ ಮೂಡಿಸಿದೆ. ರಾಜ್ಯಾದ್ಯಂತ ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಒಟ್ಟು 1.07 ಕೋಟಿಗೂ ಅಧಿಕ ಮತದಾರರ ಹೆಸರನ್ನು ಕೈಬಿಡಲು ನಿರ್ಧರಿಸಲಾಗಿದೆ. ಇವರನ್ನು ಸ್ಥಳಾಂತರಗೊಂಡವರು, ಮೃತರಾದವರು ಹಾಗೂ ನಕಲಿ ಮತದಾರರು ಎಂಬ ವಿವಿಧ ವಿಭಾಗಗಳಡಿಯಲ್ಲಿ ಗುರುತಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 43.8 ಲಕ್ಷ ಮತದಾರರಿಗೆ ಪ್ರತ್ಯೇಕವಾಗಿ ನೋಟೀಸ್ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಬೂತ್ ಮಟ್ಟದ […]
DK SHIVAKUMAR: ನಾನು ಕ್ರೈಸ್ತ ಶಾಲೆಯಲ್ಲೇ ಕಲಿತಿದ್ದು, ಧರ್ಮ ಬದಲಿಲಿಲ್ಲ – ಡಿಕೆ ಕ್ರೈಸ್ತ ಪ್ರೇಮ !

ಬೆಂಗಳೂರಿನ ಎಂ.ಜಿ. ರೈಲ್ವೆ ಕಾಲೋನಿಯಲ್ಲಿರುವ ಅಮಲೋದ್ಭವ ಮಾತೆಯ ದೇವಾಲಯದ 125ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಾವು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿಯೇ ಕಲಿತಿದ್ದು, ಆ ಅವಧಿಯಲ್ಲಿ ತಮ್ಮನ್ನು ಧರ್ಮ ಬದಲಿಸಲು ಯಾರೂ ಪ್ರೇರೇಪಿಸಲಿಲ್ಲ ಎಂಬ ಅನುಭವವನ್ನು ಹಂಚಿಕೊಂಡರು. ಎಲ್ಲ ಧರ್ಮಗಳ ಮೂಲ ಉದ್ದೇಶ ಭಕ್ತಿ ಮತ್ತು ಮಾನವ ಸೇವೆಯೇ ಆಗಿದ್ದು, ಪೂಜಾ ವಿಧಾನಗಳು ಬೇರೆ ಇದ್ದರೂ ಆತ್ಮಶುದ್ಧಿಯ ಗುರಿ ಒಂದೇ ಎಂದು ಅವರು ಅಭಿಪ್ರಾಯಪಟ್ಟರು. ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ಅವರು, ಮರಕ್ಕೆ ಬೇರು […]
PROTEST: ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ವಿಧಾನಸೌಧ ಚಲೋ – ನಿಷೇಧಾಜ್ಞೆ ಜಾರಿ

ಬೆಂಗಳೂರಿನಲ್ಲಿ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಇಂದು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಭಾನುವಾರ ನಡೆದ ಜಂಟಿ ಸಭೆಯಲ್ಲಿ ಈ ನಿರ್ಧಾರವನ್ನು ಅಂತಿಮಗೊಳಿಸಲಾಗಿದ್ದು, ಸೋಮವಾರ ವಿಧಾನಸೌಧ ಚಲೋ ಕಾರ್ಯಕ್ರಮದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ಉಭಯ ಪಕ್ಷಗಳು ಮುಂದಾಗಿವೆ. ಈ ಮುತ್ತಿಗೆ ಹೋರಾಟದಲ್ಲಿ ಎರಡೂ ಪಕ್ಷಗಳ ಹಿರಿಯ ನಾಯಕರು, ಹಾಲಿ ಶಾಸಕರು, ಸಂಸದರು […]
RAHUL GANDHI : ಹೆಣ್ಣು ಯಾರ ಸ್ವತ್ತಲ್ಲ – ಮನುಸ್ಮೃತಿಯ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಪುಣೆಯಲ್ಲಿ ನಡೆದ ಮಹಿಳಾ ವಿಶೇಷ ಛಾತ್ರೋನ್ ಕಿ ಗೂಂಜ್ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾತನಾಡಿದರು. ದೇಶದ 70 ಕೋಟಿ ಮಹಿಳೆಯರೇ ಭಾರತದ ನಿಜವಾದ ಶಕ್ತಿ, ಅವರ ಪ್ರತಿಯೊಬ್ಬರ ಪಯಣ, ಕಲ್ಪನೆ ಮತ್ತು ಕನಸುಗಳು ವಿಭಿನ್ನವಾಗಿವೆ ಎಂದು ಬಣ್ಣಿಸಿದರು. ಸಹಜವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸೂಕ್ಷ್ಮ, ಸೌಮ್ಯ, ಸಹಾನುಭೂತಿಯುಳ್ಳ ಮತ್ತು ದೂರದೃಷ್ಟಿಯುಳ್ಳವರು ಎಂದು ಹೇಳಿದರು. ಮನುಸ್ಮೃತಿಯಲ್ಲಿ ಹೆಣ್ಣು ತಂದೆ, ಗಂಡ, ಮಗನಿಗೆ ಸೇರಿದವಳು ಎಂದಿರುವುದನ್ನು ಟೀಕಿಸಿದ ಅವರು, ಮಹಿಳೆ ಸ್ವತಂತ್ರಳು, ಆಕೆ ತಂದೆಗಾಗಲಿ, ಗಂಡನಿಗಾಗಲಿ, ಮಗನಿಗಾಗಲಿ […]
MALLIKARJUNA KHARGE: ವಂದೇ ಮಾತರಂ ವಿವಾದ – ಮೋದಿ ಆರೋಪಕ್ಕೆ ಖರ್ಗೆ ಟಕ್ಕರ್

ರಾಜ್ಯಸಭೆಯಲ್ಲಿ ನಡೆಯುತ್ತಿರುವ ವಂದೇ ಮಾತರಂ ನ 150 ವರ್ಷಗಳ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೇಲೆ ಮಾಡಿದ ಆರೋಪಗಳಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಮೊದಲ ಎರಡು ಪದ್ಯಗಳನ್ನು ಮಾತ್ರ ರಾಷ್ಟ್ರಗೀತೆಯಾಗಿ ಬಳಸುವ ನಿರ್ಧಾರ ನೆಹರು ಅವರೊಬ್ಬರದ್ದಲ್ಲ, ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್ ಸೇರಿದಂತೆ ಹಲವು ನಾಯಕರ ಸಾಮೂಹಿಕ ತೀರ್ಮಾನವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಪ್ರಧಾನಿ ಮೋದಿ, […]
DK SHIVAKUMAR: ಸಿಎಂ ಡಿಕೆ ಫುಲ್ ಸಾಫ್ಟ್ & ಸೈಲೆಂಟ್ – ಕೈಮುಗಿದು ಕೇಳಿಕೊಂಡಿದ್ದು ಯಾರಿಗೆ..?

ವಿಧಾನಸಭೆಯಲ್ಲಿ ನಾಗೇಂದ್ರ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸತತ ನಾಲ್ಕು ದಿನ ಕಲಾಪಕ್ಕೆ ಅಡ್ಡಿಪಡಿಸಿರುವ ಬೆನ್ನಲ್ಲೇ, ‘ದ್ವೇಷ ರಾಜಕಾರಣ ಮಾಡುವುದಿಲ್ಲ, ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಎಲ್ಲರ ಸಹಕಾರ ಪಡೆಯುತ್ತೇನೆ’ ಎಂದು ಡಿ.ಕೆ. ಶಿವಕುಮಾರ್ ಕೈಮುಗಿದು ಮನವಿ ಮಾಡಿದ್ದಾರೆ. ಆದರೆ ಅವರ ಈ ಮನವಿ ಯಾರನ್ನು ಉದ್ದೇಶಿಸಿತ್ತು ಎಂಬ ಪ್ರಶ್ನೆ ಇದೀಗ ಕಾಂಗ್ರೆಸ್ ವಲಯದಲ್ಲೇ ಚರ್ಚೆಗೆ ಕಾರಣವಾಗಿದೆ. ಸುಗಮವಾಗಿ ಕಲಾಪ ನಡೆದಿದ್ದರೆ ಸರ್ಕಾರದ ಹಲವು ಲೋಪಗಳು ಪ್ರತಿಪಕ್ಷಗಳ ಚರ್ಚೆಗೆ ಸಿಲುಕುತ್ತಿದ್ದವು. ಹೊಸದಾಗಿ ಸಚಿವರಾಗಿರುವ ಒಂಬತ್ತು ಮಂದಿಗೂ ಇಲಾಖೆಗಳ ಬಗ್ಗೆ ಸಂಪೂರ್ಣ ಹಿಡಿತ […]
SIDDARAMAIAH: ಸಂಪುಟ ವಿಸ್ತರಣೆ ಅತೃಪ್ತಿ – ಕೆ.ಸಿ. ವೇಣುಗೋಪಾಲ್ ಮುಂದೆ ಸಿದ್ದು ಗರಂ

ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸಂಪುಟ ರಚನೆ ಬಗ್ಗೆ ತಮ್ಮ ಅಸಮಾಧಾನವನ್ನು ತಿಳಿಸಿದ್ದಾರೆ. ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ನೀಡದಿರುವುದು ಅವರ ಆಕ್ಷೇಪಕ್ಕೆ ಮುಖ್ಯ ಕಾರಣವಾಗಿದೆ. ಸಿದ್ದರಾಮಯ್ಯ ಅವರು ಶಿವಣ್ಣನವರ ಅವರನ್ನು ಸಂಪುಟಕ್ಕೆ ಸೇರಿಸುವಂತೆ ಬಲವಾಗಿ ಒತ್ತಾಯಿಸಿದ್ದರು. ಆದರೆ ಹೈಕಮಾಂಡ್ ಮಹಿಳಾ ಕೋಟಾದಡಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಸಚಿವರನ್ನಾಗಿ […]
PRIYANK KHARGE : ಸಾಕ್ಷ್ಯವಿದ್ದರೆ ಸದನದಲ್ಲಿ ಚರ್ಚಿಸಿ, ಬೀದಿ ನಾಟಕ ಬೇಡ ಬಿಜೆಪಿ ಪಾದಯಾತ್ರೆಗೆ ಪ್ರಿಯಾಂಕ್ ಟಾಂಗ್

ಸಚಿವ ಬಿ ನಾಗೇಂದ್ರ ರಾಜೀನಾಮೆ ಒತ್ತಾಯಿಸಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ವಿಪಕ್ಷಗಳ ಬಳಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆ ಅಥವಾ ಪುರಾವೆ ಇಲ್ಲದೆ ಕೇವಲ ರಾಜಕೀಯ ಲಾಭಕ್ಕಾಗಿ ಈ ಹೋರಾಟವನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇದು ನಾಯಕತ್ವ ಪ್ರದರ್ಶನದ ನಾಟಕ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಸಿಬಿಐ ತನಿಖೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವುದೇ ಪ್ರಕರಣವನ್ನು ಸಿಬಿಐಗೆ ವಹಿಸುವ ಮುನ್ನ ರಾಜ್ಯ ಸರ್ಕಾರದ […]
IAS : ಇಡಿ ದಾಳಿ ಬೆನ್ನಲ್ಲೇ ಐಎಎಸ್ ಅಧಿಕಾರಿ ನಿಗೂಢ ಕಣ್ಮರೆ – ಕೆಪಿಎಸ್‌ಸಿ ಮಾಜಿ ಅಧಿಕಾರಿ ಹುಡುಕಾಟದಲ್ಲಿ ಪೊಲೀಸರು

ಬೆಂಗಳೂರಿನಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ದಿಢೀರನೆ ಕಾಣೆಯಾಗಿರುವ ಘಟನೆ ಆಡಳಿತ ಮತ್ತು ಪೊಲೀಸ್ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಅಧಿಕಾರಿ ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ದಾಳಿಯ ನಂತರವೇ ಅವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜ್ಞಾನೇಶ್ ಕುಮಾರ್ ಕುಟುಂಬದ ಜತೆಗೂ ಸಂಪರ್ಕ ಕಡಿದುಕೊಂಡಿರುವ ಅವರನ್ನು ಪತ್ತೆ ಮಾಡುವಂತೆ ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ನಗರ […]