ದಿನಭವಿಷ್ಯ: ಇಂದು ಈ ರಾಶಿಯವರು ಅತಿ ವಿಷಕಾರಿ ಸಂದರ್ಭವನ್ನೂ ಜೀರ್ಣಮಾಡಿಕೊಳ್ಳುವರು; ನಿಮ್ಮ ರಾಶಿ ಫಲ ಹೇಗಿದೆ?

ದಿನಭವಿಷ್ಯ

Photo Credits: AI Generated

ಆಗಸ್ಟ್ 23, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು, ಸಂಬಂಧಗಳಲ್ಲಿ ಸುಧಾರಣೆ, ಮತ್ತು ದಿನದ ಶುಭ-ಅಶುಭ ಕಾಲದ ಕುರಿತು ಮಾರ್ಗದರ್ಶನ ನೀಡುತ್ತದೆ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಏಕಾದಶೀ ತಿಥಿಯ ಭಾನುವಾರದಂದು ಹೊಸಬರ ಸ್ನೇಹ, ಮಾತಿಗೆ ಬದ್ಧತೆ, ಅಚಾತುರ್ಯ, ಪರರಿಂದ ದುಃಖ, ಅಸ್ಥೈರ್ಯ, ನಾಯಕರ ಗತ್ತು, ಸಹಯೋಗದಿಂದ ಹೊಸ ಉದ್ಯೋಗ ಇವೆಲ್ಲ ಈ ದಿನದ ವಿಶೇಷ.

ಗ್ರಹಗಳ ಪ್ರಭಾವವು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ದಿನದ ಶುಭ ಮತ್ತು ಅಶುಭ ಸಮಯಗಳ ಬಗ್ಗೆ ಮಾಹಿತಿ ಪಡೆಯಿರಿ. ಯಾವ ರಾಶಿಯವರು ಇಂದು ಜಾಗ್ರತೆ ವಹಿಸಬೇಕು ಎಂದು ಈ ಕೆಳಗೆ ತಿಳಿಯಿರಿ.

ಮೇಷ ರಾಶಿ…

ಸಾಮಾಜಿಕ ಮನ್ನಣೆ ಸಿಗುವ ದಿನ. ನಿಮ್ಮ ನೋವನ್ನು ಶತ್ರುಗಳು ಸಕಾರಾತ್ಮಕವಾಗಿ ತೆಗೆದುಕೊಳ್ಳಬಹುದು. ಬೇಕಾದುದನ್ನು ಪಡೆಯಲು ದಾಕ್ಷಿಣ್ಯ ಅಡ್ಡ ಬರುತ್ತದೆ. ಇದ್ದಕ್ಕಿದ್ದಂತೇ ಏನನ್ನಾದರೂ ಆಲೋಚಿಸುತ್ತೀರಿ. ಮನಸ್ಸಿನ ತೀರ್ಮಾನಕ್ಕೆ ತಕ್ಕಂತೆ ನಡೆದಿರಿ. ಕೆಲಸಗಳು ಮಂದಗತಿಯಲ್ಲಿ ಸಾಗಬಹುದು. ಹೂಡಿಕೆ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಿರಿ.

ವೃಷಭ ರಾಶಿ…

ಅನಿರೀಕ್ಷಿತ ಧನಲಾಭವಾಗುತ್ತದೆ. ಸುರಕ್ಷಿತ ಸ್ಥಳದಲ್ಲಿದ್ದು ಬೇಸರವಾಗುತ್ತದೆ. ಉದ್ಯೋಗಕ್ಕೆ ಸೇರಲು ತಯಾರಿಯಲ್ಲಿರುತ್ತೀರಿ. ಏಕಾಂತವನ್ನು ಬಯಸುತ್ತೀರಿ. ಹಣ ಸಂಗ್ರಹಕ್ಕಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗುತ್ತೀರಿ. ಯಾರದೋ ಜೊತೆ ಸುಮ್ಮನೇ ಚರ್ಚೆಗಿಳಿದು ಸೋಲುತ್ತೀರಿ. ಕುಟುಂಬದಲ್ಲಿ ಕಿಮ್ಮತ್ತು ಕಡಿಮೆ ಎಂದು ಅನ್ನಿಸುವುದು.

ಮಿಥುನ ರಾಶಿ…

ನಿಮ್ಮ ದುರ್ಗುಣಗಳು ನಿಮಗೆ ಅರ್ಥವಾಗುತ್ತವೆ. ಸಿದ್ಧ ವಸ್ತುಗಳ ವ್ಯಾಪಾರದಿಂದ ಲಾಭವಾಗುತ್ತದೆ. ಸಾಮರ್ಥ್ಯ ಅಳೆಯುವ ಸಮಯ ಬರಬಹುದು. ಧಾರ್ಮಿಕ ವಿಚಾರ ತಿಳಿದವರ ಬಳಿ ಮಾತನಾಡಬಹುದು. ಕಚೇರಿಯಲ್ಲಿ ಯಾರನ್ನೋ ಮೆಚ್ಚಿಸಲು ಹೋಗಿ ಅಪಹಾಸ್ಯಕ್ಕೆ ಸಿಕ್ಕಿಕೊಳ್ಳಬಹುದು. ವೇತನ ಹೆಚ್ಚಾಗುವ ಸಾಧ್ಯತೆ ಇದೆ.

ಕರ್ಕಾಟಕ ರಾಶಿ…

ಯಾವುದೇ ಆಮಿಷಕ್ಕೂ ಸುಲಭವಾಗಿ ಒಪ್ಪುವುದಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಬೇಕಾಗುತ್ತದೆ. ಸಂಗಾತಿಯ ಮಾತು ಕೋಪ ತರಿಸಬಹುದು. ಬಂಧನದ ಭೀತಿಯಿಂದ ಮನಸ್ಸು ಖಿನ್ನವಾಗುತ್ತದೆ. ಭೂಮಿ ವ್ಯವಹಾರದಲ್ಲಿ ಅಧಿಕ ಲಾಭ ಸಿಗಬಹುದು. ಗುಪ್ತ ಸಮಾಲೋಚನೆ ಬಯಲಾಗಬಹುದು.

ಸಿಂಹ ರಾಶಿ…

ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುತ್ತೀರಿ. ಮನೆಯ ಮತ್ತು ಕಚೇರಿ ಕೆಲಸ ಸರಿದೂಗಿಸುವುದು ಕಷ್ಟ. ಅನಾಯಾಸವಾಗಿ ಲಾಭ ಪಡೆಯುವ ಜಾಡ್ಯ ಬರಬಹುದು. ಗೊತ್ತಿರುವ ವಿಚಾರ ಸತ್ಯವೋ ಸುಳ್ಳೋ ಪ್ರಸ್ತುತಿ ಸರಿಯಾಗಿ ಮಾಡುತ್ತೀರಿ. ಬದಲಾವಣೆ ಅನಿರೀಕ್ಷಿತ ಎನಿಸಬಹುದು. ಇತರ ಕೆಲಸದಲ್ಲಿ ಮುಖ್ಯ ಕೆಲಸ ನಿಂತುಹೋಗಬಹುದು.

ಕನ್ಯಾ ರಾಶಿ…

ಸಜ್ಜನರ ಸೇವೆಯ ಅವಕಾಶ ಸಿಗುತ್ತದೆ. ಕಚೇರಿಯಲ್ಲಿ ಕಲಹವಾಗಬಹುದು. ಹೊಸ ಉದ್ಯಮ ಆರಂಭಿಸಲು ಸಂಪೂರ್ಣ ಧೈರ್ಯ ಸಾಕಾಗುವುದಿಲ್ಲ. ಸಮಾಜದಲ್ಲಿ ಉತ್ತಮ ಕಾರ್ಯ ಮಾಡಲು ಬಯಸುತ್ತೀರಿ. ಅನ್ವೇಷಣೆಗೆ ಹೊಸ ದಿಕ್ಕು ಕಾಣಿಸುವುದು. ಸ್ನೇಹಿತರ ಜೊತೆ ಸೇರಿಕೊಳ್ಳುತ್ತೀರಿ.

ತುಲಾ ರಾಶಿ…

ಬಂಧುಗಳ ಬಗ್ಗೆ ಕನಿಕರ ಬರುತ್ತದೆ. ಅಮೂಲ್ಯವಾದ ವಸ್ತು ಕಳೆದುಕೊಳ್ಳುವ ಸಾಧ್ಯತೆ ಇದೆ. ವಾಹನ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ಉದ್ಯೋಗದಲ್ಲಿ ಅನಿಶ್ಚಿತತೆ ಇರುತ್ತದೆ. ವಿಶ್ವಾಸ ಪಡೆಯಲು ಶ್ರಮಿಸಿ, ಸೋಲಬಹುದು. ತಂದೆಯ ಆಸೆಯನ್ನು ಪೂರ್ಣ ಮಾಡುತ್ತೀರಿ.

ವೃಶ್ಚಿಕ ರಾಶಿ…

ಉದ್ಯೋಗದಲ್ಲಿ ಸ್ಥಳಾಂತರ ಅನಿವಾರ್ಯವಾಗುತ್ತದೆ. ವಿವಾಹ ಜೀವನದಲ್ಲಿ ಕೆಲವು ಅಸ್ಪಷ್ಟವಾದ ನಡತೆಯಿಂದ ದಿಗ್ಭ್ರಾಂತರಾಗುವ ಸಾಧ್ಯತೆ ಇದೆ. ಕ್ಷಮಾಪಣೆ ಕೇಳಿದರೆ ಕ್ಷಮಿಸಿ. ವಾಹನದಿಂದ ಬಿದ್ದು ಪೆಟ್ಟುಮಾಡಿಕೊಳ್ಳಬಹುದು. ಜಾಗರೂಕತೆಯಿಂದ ವಾಹನ ಚಲಾಯಿಸಿ.

ಧನು ರಾಶಿ…

ಯೋಜನೆಗೆ ಕುಟುಂಬದ ಸಹಾಯ ಸಿಗುತ್ತದೆ. ದೈವಾನುಗ್ರಹಕ್ಕೆ ಕಠಿಣವಾದ ಕಾರ್ಯ ಮಾಡುತ್ತೀರಿ. ಆರೋಗ್ಯ ವಿಚಾರಿಸಲು ಬಂಧುಗಳು ಬರುತ್ತಾರೆ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುತ್ತೀರಿ. ಸಂಗಾತಿಯ ಮನಸ್ತಾಪ ಸರಿಮಾಡುವೀರಿ. ಕಾರ್ಯ ಸ್ಥಳದಲ್ಲಿ ವ್ಯವಸ್ಥಾಪಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವಿರಿ.

ಮಕರ ರಾಶಿ…

ಉದ್ಯೋಗಕ್ಕೆ ವಿದಾಯ ಹೇಳುವ ಸಂದರ್ಭ ಬರಬಹುದು. ನೆಚ್ಚಿನವರ ಭೇಟಿಯಾಗುವ ಸಂದರ್ಭ ತಪ್ಪಿಹೋಗಬಹುದು. ಗೌರವ ಸಿಗಬಹುದು. ಶಿಸ್ತನ್ನು ಬಿಡದೇ ಪಾಲಿಸಿ. ಕೆಲಸಗಳಿಗೆ ಪ್ರಶಂಸೆ ಸಿಗುತ್ತದೆ. ಅತಿಯಾದ ವೈಭವೀಕರಣ ಬೇಡ.

ಕುಂಭ ರಾಶಿ…

ಆರ್ಥಿಕವಾಗಿ ಸುಧಾರಣೆ ಕಾಣಲು ಆಲಸ್ಯದಿಂದ ಹೊರಬರಬೇಕು. ಉತ್ಸಾಹದ ಕೊರತೆ ಇರುತ್ತದೆ. ಅಧಿಕಾರದ ಮಾತು ಇಂದು ನಡೆಯುವುದಿಲ್ಲ. ವೇತನ ಹೆಚ್ಚಿಸಲು ವಿನಂತಿ ಮಾಡಿಕೊಳ್ಳಿ. ಸಜ್ಜನರಿಗೆ ಭೋಜನ ಹಾಕಿ.

ಮೀನ ರಾಶಿ…

ಹೂಡಿಕೆಯ ಹಣ ಧೈರ್ಯ ಕೊಡುತ್ತದೆ. ಅತಿಯಾದ ಉತ್ಸಾಹ ಯಾರಾದರೂ ನೋಡಿ ಆಡಿಕೊಳ್ಳಬಹುದು. ಆರೋಪ ಪ್ರತ್ಯಾರೋಪಕ್ಕೆ ವೃತ್ತಿಯಲ್ಲಿ ಅವಕಾಶ ತೆರೆಯುವುದು. ಮಿತ್ರರಿಗೋಸ್ಕರ ಸ್ವಲ್ಪ ತ್ಯಾಗಮಾಡುವಿರಿ. ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ.

ಇಂದಿನ ಪಂಚಾಂಗ (23 ಆಗಸ್ಟ್ 2026)…

ಸಂವತ್ಸರ: ಪರಾಭವ

ಅಯನ: ದಕ್ಷಿಣಾಯನ | ಋತು: ವರ್ಷ ಋತು

ಮಾಸ: ಶ್ರಾವಣ (ಮಾಸ) | ಪಕ್ಷ: ಶುಕ್ಲ ಪಕ್ಷ

ತಿಥಿ: ಏಕಾದಶೀ | ವಾರ: ಭಾನುವಾರ

ನಕ್ಷತ್ರ: ಪೂರ್ವಾಷಾಢ | ಯೋಗ: ವೈಧೃತಿ | ಕರಣ: ಕೌಲವ

ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:35

ರಾಹು ಕಾಲ: 17:02 – 18:35

ಯಮಗಂಡ ಕಾಲ: 12:22 – 13:55

ಗುಳಿಕ ಕಾಲ: 15:29 – 17:02