ದಿನಭವಿಷ್ಯ: ಇಂದು ಈ ರಾಶಿಯವರು ಕಳೆದುಕೊಂಡಿದ್ದನ್ನು ಅನ್ಯಮಾರ್ಗದಿಂದ ಪಡೆಯುವರು; ನಿಮ್ಮ ರಾಶಿ ಫಲ ಹೇಗಿದೆ?

ಇಂದಿನ ಪಂಚಾಂಗ (04 ಸೆಪ್ಟೆಂಬರ್ 2026)

Photo Credits: AI Generated

ಸೆಪ್ಟೆಂಬರ್ 04, 2026 ರ ನಿತ್ಯ ಭವಿಷ್ಯವು ನಿಮ್ಮ ರಾಶಿ ಫಲವನ್ನು ವಿವರವಾಗಿ ತಿಳಿಸುತ್ತದೆ. ಮೇಷದಿಂದ ಮೀನದವರೆಗಿನ ಎಲ್ಲಾ 12 ರಾಶಿಗಳಿಗೆ ಇಂದು ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಸವಾಲುಗಳನ್ನು ಎದುರಿಸುವ ಧೈರ್ಯ, ನಿರ್ಧಾರಗಳು ಹಾಗೂ ದಿನದ ಆರ್ಥಿಕ ಸ್ಥಿತಿಯ ಕುರಿತು ಮಾರ್ಗದರ್ಶನ ಇಲ್ಲಿದೆ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಸಪ್ತಮೀ ತಿಥಿಯ ಶುಕ್ರವಾರದಂದು ಕಲೆಗೆ ಯೋಗ್ಯ ಬೆಲೆ, ಅಪವಾದದ ಭಯ, ಸಕಾರಾತ್ಮಕ ನಿರೀಕ್ಷೆ, ಅಪೂರ್ಣ ಪ್ರೇಮ, ಚಿಕಿತ್ಸೆಯಿಂದ ಕಷ್ಟ, ಅಲ್ಪ ಆದಾಯ, ಅನಾರೋಗ್ಯದಿಂದ ನಿರುತ್ಸಾಹ, ಕಾನೂನು ಸಮರ ಇವೆಲ್ಲ ಇಂದಿನ ಭವಿಷ್ಯ.

ಗ್ರಹಗಳ ಪ್ರಭಾವವು ನಿಮ್ಮ ರಾಶಿಗಳ ಮೇಲೆ ಬೀರುವ ಪರಿಣಾಮವನ್ನು ತಿಳಿದುಕೊಳ್ಳಿ. ದಿನದ ಶುಭ ಹಾಗೂ ಅಶುಭ ಸಮಯಗಳ ಪಂಚಾಂಗ ವಿವರಗಳು ಇಲ್ಲಿವೆ. ಯಾವ ರಾಶಿಯವರು ಇಂದು ಮುನ್ನೆಚ್ಚರಿಕೆ ವಹಿಸಬೇಕು ಎಂದು ಈ ಕೆಳಗೆ ನೋಡಿ.

ಮೇಷ ರಾಶಿ

ಶ್ರಮಕ್ಕೆ ತಕ್ಕಂತೆ ಅನಿರೀಕ್ಷಿತ ಧನಲಾಭವಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಕೊಂಚ ಓಡಾಟ ಹೆಚ್ಚಾಗಬಹುದು. ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ ಮೂಡಲಿದೆ. ಉದ್ಯಮದ ನಿರ್ಧಾರಗಳನ್ನು ಆತುರದಿಂದ ತಗೊಳ್ಳದೆ ಶಾಂತವಾಗಿ ಚಿಂತಿಸಿ.

ವೃಷಭ ರಾಶಿ

ಪ್ರಾಮಾಣಿಕ ಸೇವೆಗೆ ಮೇಲಾಧಿಕಾರಿಗಳಿಂದ ಸೂಕ್ತ ಪ್ರಶಂಸೆ ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಚಂಚಲ ನಿರ್ಧಾರಗಳನ್ನು ತಗೊಳ್ಳಬೇಡಿ. ಅನಗತ್ಯ ಸಾಲದ ವಿಚಾರಗಳಿಂದ ದೂರವಿರುವುದು ಉತ್ತಮ. ಮಿತ್ರರ ವಿಚಾರದಲ್ಲಿ ಜಾಗರೂಕರಾಗಿರಿ.

ಮಿಥುನ ರಾಶಿ

ತಾಳ್ಮೆಯಿಂದ ಮನೆಯ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಿ. ಭಾವನಾತ್ಮಕ ವಿಚಾರಗಳಲ್ಲಿ ಗೊಂದಲಗಳಿಗೆ ಒಳಗಾಗದೆ ಸಕಾರಾತ್ಮಕವಾಗಿ ಯೋಚಿಸಿ. ಹಳೆಯ ನೆನಪುಗಳು ಮನಸ್ಸನ್ನು ಕಾಡಬಹುದು, ಕಾರ್ಯಕ್ಷೇತ್ರದತ್ತ ಗಮನ ಹರಿಸಿ.

ಕರ್ಕಾಟಕ ರಾಶಿ

ವಹಿಸಿಕೊಂಡ ಕೆಲಸವನ್ನು ನಿಷ್ಠೆಯಿಂದ ಪೂರ್ಣಗೊಳಿಸುವಿರಿ. ವೃತ್ತಿ ನಿಮಿತ್ತ ಪ್ರಯಾಣ ಬೆಳೆಸಬೇಕಾಗಬಹುದು. ಖಾಸಗಿ ಉದ್ಯೋಗಿಗಳಿಗೆ ಕೆಲಸದ ಒತ್ತಡವಿರಲಿದೆ. ನೆರೆಹೊರೆಯವರೊಂದಿಗೆ ಸೌಹಾರ್ದತೆಯಿಂದ ಇರಿ.

ಸಿಂಹ ರಾಶಿ

ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳಲು ಶ್ರಮಿಸುವಿರಿ. ವ್ಯಾಪಾರ-ಉದ್ಯಮ ವಿಸ್ತರಣೆಗೆ ಸೂಕ್ತ ಯೋಜನೆ ರೂಪಿಸುವಿರಿ. ಹಿರಿಯರ ಜ್ಞಾನ ಹಾಗೂ ಮಾರ್ಗದರ್ಶನದಿಂದ ಒಳಿತಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ.

ಕನ್ಯಾ ರಾಶಿ

ಸಿಬ್ಬಂದಿ ಮತ್ತು ನೌಕರರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವಿರಿ. ತಂದೆ-ತಾಯಿಯ ಆರೈಕೆಯಲ್ಲಿ ಸಂತೋಷ ಕಾಣುವಿರಿ. ಮನೆಗೆ ಆಗಮಿಸಿದ ಅತಿಥಿಗಳನ್ನು ಆದರದಿಂದ ಸತ್ಕರಿಸುವಿರಿ. ನೂತನ ಯೋಜನೆಗೆ ಚಿಂತನೆ ನಡೆಸುವಿರಿ.

ತುಲಾ ರಾಶಿ

ವೃತ್ತಿ ರಂಗದಲ್ಲಿ ಚುರುಕುತನದಿಂದ ಕಾರ್ಯನಿರ್ವಹಿಸುವುದು ಅಗತ್ಯ. ಆರ್ಥಿಕ ವಿಚಾರಗಳಲ್ಲಿ ಅನಗತ್ಯ ಅಪವಾದ ಬರಂದಂತೆ ಎಚ್ಚರ ವಹಿಸಿ. ನಿಮ್ಮ ಗೌಪ್ಯ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ವೃಶ್ಚಿಕ ರಾಶಿ

ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ವ್ಯಾಪಾರ-ವಹಿವಾಟಿನಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ಮಕ್ಕಳಿಗೆ ಸೂಕ್ತ ಸಮಯ ನೀಡಿ ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಿ. ಹೊಸ ಜವಾಬ್ದಾರಿಗಳು ಹುಡುಕಿ ಬರಲಿವೆ.

ಧನು ರಾಶಿ

ವ್ಯಾಪಾರದಲ್ಲಿ ಜಾಗರೂಕತೆ ವಹಿಸಿ, ನಿರ್ಲಕ್ಷ್ಯದಿಂದ ನಷ್ಟವಾಗದಂತೆ ನೋಡಿಕೊಳ್ಳಿ. ಸೃಜನಶೀಲ ಕೆಲಸಗಳಿಗೆ ಆಧ್ಯತೆ ನೀಡಿ. ಅನಗತ್ಯ ಮಾತುಗಳಿಂದ ದೂರವಿದ್ದು ಸ್ವಂತ ಪ್ರಗತಿಯತ್ತ ಗಮನ ಹರಿಸುವುದು ಒಳಿತು.

ಮಕರ ರಾಶಿ

ನಿಂತುಹೋಗಿದ್ದ ಗೃಹ ಕೆಲಸಗಳು ಮತ್ತೆ ಚುರುಕುಗೊಳ್ಳಲಿವೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಮನಸ್ಸು ಮಾಡುವರು. ಸಂಗಾತಿಯೊಂದಿಗೆ ನೂತನ ಉದ್ಯಮ ಅಥವಾ ಯೋಜನೆಯ ಆಲೋಚನೆ ನಡೆಸುವಿರಿ.

ಕುಂಭ ರಾಶಿ

ಕೆಲಸದಲ್ಲಿ ವಿಳಂಬ ಮಾಡದೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ಯಶಸ್ಸಿಗೆ ಅಡ್ಡ ದಾರಿ ಹುಡುಕದೆ ಶ್ರಮಕ್ಕೆ ಆದ್ಯತೆ ನೀಡಿ. ಕುಟುಂಬದ ಹಿರಿಯರ ಸಲಹೆಯಿಂದ ಉತ್ತಮ ಪ್ರಯೋಜನ ಸಿಗಲಿದೆ.

ಮೀನ ರಾಶಿ

ಆತ್ಮವಿಶ್ವಾಸದಿಂದ ಕಷ್ಟದ ಸನ್ನಿವೇಶಗಳನ್ನು ಎದುರಿಸಿ ಮುನ್ನಡೆಯಿರಿ. ಸಂಗಾತಿಯ ಬೆಂಬಲದಿಂದ ಕೆಲಸದ ಒತ್ತಡ ಕಡಿಮೆಯಾಗಲಿದೆ. ಬಹುದಿನಗಳ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ಹೊಸ ಉದ್ಯೋಗಾವಕಾಶಗಳು ಕಾಯುತ್ತಿವೆ.

ಇಂದಿನ ಪಂಚಾಂಗ (04 ಸೆಪ್ಟೆಂಬರ್ 2026)

ಸಂವತ್ಸರ: ಪರಾಭವ

ಅಯನ: ದಕ್ಷಿಣಾಯನ | ಋತು: ವರ್ಷ ಋತು

ಮಾಸ: ಶ್ರಾವಣ (ಮಾಸ) | ಪಕ್ಷ: ಕೃಷ್ಣ ಪಕ್ಷ

ತಿಥಿ: ಸಪ್ತಮೀ | ವಾರ: ಶುಕ್ರವಾರ

ನಕ್ಷತ್ರ: ಭರಣೀ | ಯೋಗ: ಹರ್ಷಣ | ಕರಣ: ಬಾಲವ

ಸೂರ್ಯೋದಯ: ಬೆಳಿಗ್ಗೆ 06:09 | ಸೂರ್ಯಾಸ್ತ: ಸಂಜೆ 06:27

ರಾಹು ಕಾಲ: 10:46 AM – 12:19 PM

ಯಮಗಂಡ ಕಾಲ: 03:23 PM – 04:55 PM

ಗುಳಿಕ ಕಾಲ: 07:42 AM – 09:14 AM