☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

Daily Horoscope 25: ಇಂದಿನ ಮೇಷ, ವೃಷಭ ರಾಶಿ ಭವಿಷ್ಯ; ಯಾರಿಗೆ ಧನಲಾಭ? ಯಾರಿಗೆ ಸಂಕಷ್ಟ?

Daily Horoscope 25: Mesha, Vrishabha Rashi Today

Daily Horoscope 25: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಶುಕ್ರವಾರದಂದು ಹಿರಿಯರಿಗೆ ಉಡುಗೊರೆ, ಸಿಟ್ಟಿನ ಅವಗಡ, ವೈಯಕ್ತಿಕ ಲಾಭ, ವಿದೇಶದ ಮಾರುಕಟ್ಟೆಯ ಪರಿಚಯ, ರಾಜಕೀಯ ಅತಂತ್ರ ಹಾಗೂ ಜಿಜ್ಞಾಸೆಗೆ ಸಮಾಧಾನ ಸಿಗುವ ಯೋಗವಿದೆ.

ಮೇಷ ರಾಶಿ

ನಿಮ್ಮ ಅನೇಕ ದಿನಗಳ ಆಸೆಯನ್ನು ಪೂರೈಸಿಕೊಳ್ಳುವಿರಿ. ಬೇರೆ ಕಡೆಗೆ ತೆರಳಲು ಬಯಸುವಿರಿ. ಆರ್ಥಿಕ ಹಿನ್ನಡೆಯಿಂದಾಗಿ ಕೆಲಸಗಳು ಸ್ಥಗಿತಗೊಳ್ಳಬಹುದು. ಆಪ್ತರಿಂದ ಸಹಾಯ ಬಯಸುವಿರಿ. ವಿವಾಹಕ್ಕೆ ಎದುರಾಗುವ ಅಡೆತಡೆಗಳನ್ನು ತಿಳಿದುಕೊಂಡು ಪರಿಹಾರ ಮಾಡಿಕೊಳ್ಳುವುದು ಸೂಕ್ತ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ. ಅಪರಿಚಿತ ವ್ಯಕ್ತಿಗಳಿಂದ ಸಂತೋಷ ಸಿಗಲಿದೆ.

ವೃಷಭ ರಾಶಿ

ವೃತ್ತಿಯಲ್ಲಿ ಇನ್ನೊಬ್ಬರ ಮಾತಿಗೆ ಕಿವಿಗೊಟ್ಟು ಒಳ್ಳೆಯ ಅವಕಾಶ ಹಾಳು ಮಾಡಿಕೊಳ್ಳಬೇಡಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಸಮಯ ನಿಶ್ಚಯವಾಗಲಿದೆ. ಸ್ತ್ರೀಯರಿಂದ ಸಹಾಯ ಸಿಗಲಿದೆ. ಒತ್ತಡ ನಿವಾರಣೆಗೆ ಸುತ್ತಾಡಿ ಬರಲು ಮನಸ್ಸಾದೀತು. ಸ್ಥಗಿತಗೊಂಡ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಿ. ಉಪಾಯದಿಂದ ಕಾರ್ಯ ಸಾಧಿಸುವುದು ಉತ್ತಮ.

ಮಿಥುನ ರಾಶಿ

ನಿಮ್ಮ ವೈಯಕ್ತಿಕ ಕೆಲಸಗಳಿಗೆ ಸಮಯ ಕಡಿಮೆ ಸಿಗಲಿದೆ. ಯಾರೋ ಒತ್ತಾಯ ಮಾಡಿದರು ಎಂದು ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಆರ್ಥಿಕ ಹಾಗೂ ಸಮಯದ ನಷ್ಟವಾಗಿ ಬೇಸರವಾಗಬಹುದು. ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿಕೊಳ್ಳಿ. ಮಕ್ಕಳ ಕಾರಣಕ್ಕಾಗಿ ವಿದೇಶ ವಾಸ ಅನಿವಾರ್ಯವಾಗಬಹುದು. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ.

ಕರ್ಕಾಟಕ ರಾಶಿ

ಮಕ್ಕಳಿಂದ ಸಂತೋಷದ ವಾರ್ತೆ ಸಿಗಲಿದೆ. ಇಂದಿನ ಕೆಲಸ ಪೂರ್ಣವಾಗುವವರೆಗೆ ವಿಶ್ರಮಿಸುವುದಿಲ್ಲ. ಸಂಗಾತಿಯ ಜೊತೆ ಸಮಯ ಕಳೆಯುವ ಮನಸ್ಸಾಗುವುದು. ಮನೆ ಬಳಕೆಯ ವಸ್ತುವನ್ನು ಕಡಿಮೆ ಬೆಲೆಗೆ ಪಡೆಯುವಿರಿ. ವಿದೇಶಿ ಸ್ನೇಹಿತನ ಪರಿಚಯವಾಗಲಿದೆ. ರಾಜಕೀಯದಲ್ಲಿ ಕೆಲವು ಬದಲಾವಣೆಗಳು ಆಗಲಿವೆ.

ಸಿಂಹ ರಾಶಿ

ಇಂದು ನಿಮಗೆ ಪರೀಕ್ಷೆಯ ಕಾಲವಾಗಬಹುದು. ನೂತನ ವಸ್ತುವಿನ ಖರೀದಿಯಲ್ಲಿ ಮೋಸಹೋಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಜಮೀನು ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಗೆ ಬೇಕಾದುದನ್ನು ಕೊಡಿಸುವಿರಿ. ಸ್ನೇಹಿತರ ಜೊತೆ ಪ್ರವಾಸ ಯೋಜಿಸುವಿರಿ. ಸ್ವತಂತ್ರವಾಗಿ ಇರಲು ಬಯಸುವಿರಿ.

ಕನ್ಯಾ ರಾಶಿ

ನಿಮ್ಮ ಕೆಲಸದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಿರಿ. ಸಕಾಲಕ್ಕೆ ಹಣ ಸಿಗದೇ ವ್ಯವಹಾರದಲ್ಲಿ ಗೊಂದಲವಾದೀತು. ಹಿರಿಯರಿಂದ ಕೆಲಸದ ವಿಷಯವಾಗಿ ಬೈಗುಳ ಸಿಗಬಹುದು. ನಿತ್ಯದ ಕೆಲಸವನ್ನೇ ಹೊಸ ರೀತಿಯಲ್ಲಿ ಮಾಡಲು ಇಚ್ಛಿಸುವಿರಿ. ಆಲಸ್ಯತನದಿಂದ ಕೆಲಸ ಹೆಚ್ಚಾಗಬಹುದು. ವ್ಯವಹಾರದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.

ತುಲಾ ರಾಶಿ

ಇನ್ನೊಬ್ಬರ ಆಲೋಚನೆಯನ್ನು ಗೌರವಿಸಿ ಅವರ ಮನ ಗೆಲ್ಲುವಿರಿ. ಇನ್ನೊಬ್ಬರಿಗೆ ನೋವು ಕೊಟ್ಟು ನಂತರ ಪಶ್ಚಾತ್ತಾಪಪಡುವಿರಿ. ಹೆಚ್ಚಿನ ಆದಾಯದ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವಿರಿ. ಸಿಗದ ವಸ್ತುವಿನ ಬಗ್ಗೆ ದುಃಖ ಪಡಬೇಡಿ. ನಿಮ್ಮ ಸರಳತೆಯು ಇತರರಿಗೆ ಪ್ರೇರಣೆಯಾಗಲಿದೆ.

ವೃಶ್ಚಿಕ ರಾಶಿ

ಜನರ ವಿಶ್ವಾಸ ಗಳಿಸಲು ಪ್ರಯತ್ನಿಸುವಿರಿ. ಕೆಲವು ವಿಚಾರಗಳು ಮನಸ್ಸಿಗೆ ಕಿರಿಕಿರಿ ತರಬಹುದು. ಮಕ್ಕಳಿಂದ ಶ್ರೇಯಸ್ಸು ಸಿಗಲಿದೆ. ಅಸಹಜ ವರ್ತನೆಯಿಂದ ಆಪ್ತರಿಗೆ ಸಿಟ್ಟು ಬರಬಹುದು. ಮೇಲಧಿಕಾರಿಗಳ ಒತ್ತಡ ಹೆಚ್ಚಾಗಲಿದೆ. ಕೆಲವು ವಿಚಾರಗಳನ್ನು ನಿರ್ಲಕ್ಷ್ಯ ಮಾಡಿ ಉತ್ತಮ ಅವಕಾಶದಿಂದ ವಂಚಿತರಾಗಬೇಡಿ.

ಧನು ರಾಶಿ

ದಾನ ಧರ್ಮ ಮಾಡುವ ವಿಷಯದಲ್ಲಿ ಕೊಂಚ ಹಿಂದೇಟು ಹಾಕುವಿರಿ. ಕಚೇರಿಯಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿಬಂದರೂ ಮೌನವಾಗಿರಿ. ಕೃಷಿಕರು ತಮ್ಮ ಕಾರ್ಯದಲ್ಲಿ ಮಗ್ನರಾಗುವರು. ಮಕ್ಕಳಿಗೆ ಸಮಯ ನೀಡಲು ಸಾಧ್ಯವಾಗದಿರಬಹುದು. ಕೃಷಿಯಲ್ಲಿ ಏನನ್ನಾದರೂ ಸಾಧಿಸುವ ಛಲ ಬರಲಿದೆ.

ಮಕರ ರಾಶಿ

ಆಪ್ತರ ಮೇಲೆಯೂ ನಂಬಿಕೆ ಇಡುವುದು ಕಷ್ಟವಾಗಬಹುದು. ಹೊಸದನ್ನು ಕಲಿಯುವ ಹಂಬಲ ಕಡಿಮೆಯಾಗಲಿದೆ. ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗಬಹುದು. ಮನಸ್ಸಿನ ಸ್ಥಿರತೆ ತಂದುಕೊಳ್ಳುವುದು ಮುಖ್ಯ. ಯಾರನ್ನೂ ಎದುರಿಸುವ ಧೈರ್ಯವನ್ನು ಇಂದು ತೋರಿಸುವಿರಿ.

ಕುಂಭ ರಾಶಿ

ನಿಮ್ಮ ಬೆಳವಣಿಗೆಯನ್ನು ಕಂಡು ಇತರರು ಹೊಟ್ಟೆಕಿಚ್ಚು ಪಡಬಹುದು. ನ್ಯಾಯಾಲಯದ ವಿಚಾರಗಳಲ್ಲಿ ಜಯ ಸಿಗಲಿದೆ. ಗೆಳೆಯರ ಸಹವಾಸವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಖರ್ಚಿಗಾಗಿ ತಂದೆಯಿಂದ ಹಣ ಪಡೆಯುವಿರಿ. ಇಂದು ಸೌಂದರ್ಯ ಮತ್ತು ಅಲಂಕಾರಕ್ಕೆ ಹೆಚ್ಚಿನ ಸಮಯ ನೀಡುವಿರಿ.

ಮೀನ ರಾಶಿ

ಭೇಟಿಯಾಗಲು ಬಂದವರನ್ನು ಗೌರವದಿಂದ ಕಾಣಿ. ಅನಿವಾರ್ಯ ಕಾರಣಗಳಿಂದ ಇಂದಿನ ಯೋಜನೆಯನ್ನು ಬದಲಿಸಬೇಕಾಗಬಹುದು. ಬೆಳಗಿನಿಂದಲೇ ಮಾನಸಿಕ ಕಿರಿಕಿರಿ ಇರಲಿದೆ. ಸಿಟ್ಟು ಬಂದಾಗ ನಿಯಂತ್ರಣ ಕಳೆದುಕೊಳ್ಳಬೇಡಿ. ಕೆಲಸದ ಒತ್ತಡದಿಂದ ಹೊರಬರಲು ಸ್ನೇಹಿತರ ಜೊತೆ ವಾಯುವಿಹಾರ ನಡೆಸುವಿರಿ.

ಇಂದಿನ ಪಂಚಾಂಗ (Daily Horoscope 25)

ಸಂವತ್ಸರ: ಪರಾಭವ

ಆಯನ/ಋತು: ದಕ್ಷಿಣಾಯನ, ವರ್ಷ ಋತು

ಮಾಸ/ಪಕ್ಷ: ಭಾದ್ರಪದ ಮಾಸ, ಶುಕ್ಲ ಪಕ್ಷ

ತಿಥಿ: ಚತುರ್ದಶೀ

ನಕ್ಷತ್ರ: ಪೂರ್ವಾಭಾದ್ರ

ಯೋಗ/ಕರಣ: ಶೂಲಿ ಯೋಗ, ವಣಿಜ ಕರಣ

ಸೂರ್ಯೋದಯ/ಸೂರ್ಯಾಸ್ತ: ಬೆಳಿಗ್ಗೆ 06:09 – ಸಂಜೆ 06:12

ರಾಹು ಕಾಲ: 10:41 AM – 12:11 PM

ಯಮಗಂಡ ಕಾಲ: 03:12 PM – 04:42 PM

ಗುಳಿಕ ಕಾಲ: 07:40 AM – 09:11 AM