☔ Weather
Bengaluru: ☀️ 21°C | AQI 90
Mysore: ☀️ 22°C | AQI 91
Mangalore: 🌤️ 26°C | AQI 139
Bengaluru: ☀️ 21°C | AQI 90
☔ Weather
Bengaluru: ☀️ 21°C | AQI 90
Mysore: ☀️ 22°C | AQI 91
Mangalore: 🌤️ 26°C | AQI 139
Bengaluru: ☀️ 21°C | AQI 90

BBK 13: ತಾಂಡವ್-ಗಗನ್ ಸ್ನೇಹಕ್ಕೆ ಸುದೀಪ್ ಟಾಂಗ್; ‘ನೀವು ಆ ಗೆಳೆತನಕ್ಕೆ ಅರ್ಹರಲ್ಲ’ ಎಂದ ಕಿಚ್ಚ

BBK 13: Sudeep Slams Gagan Over One Way Friendship With Tandav

ಮುಖ್ಯಾಂಶಗಳು

  • ಸೌಂದರ್ಯಾ ತಾಂಡವ್ಗೆ ‘ಡಂಬ್’ ಎಂದಾಗ ಮೌನವಾಗಿದ್ದ ಗಗನ್ಗೆ ಸುದೀಪ್ ತರಾಟೆಗೆ ತೆಗೆದುಕೊಂಡರು
  • ‘ನೀವು ತಾಂಡವ್ ಗೆಳೆತನಕ್ಕೆ ಅರ್ಹರಲ್ಲ’ಎಂದು ಗಗನ್ಗೆ ಕಿಚ್ಚ ಖಡಕ್ ಎಚ್ಚರಿಕೆ ನೀಡಿದರು
  • ಈ ಘಟನೆಯನ್ನು ಇಬ್ಬರ ನಡುವಿನ 'ಒನ್ ವೇ ಫ್ರೆಂಡ್ ಶಿಪ್' ಎಂದು ಸುದೀಪ್ ತಿಳಿಸಿದರು

BBK 13: ಬಿಗ್ ಬಾಸ್ ಕನ್ನಡ ಸೀಸನ್ 13ರ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆ ಈಗ ಭಾರಿ ಕುತೂಹಲ ಮೂಡಿಸಿದೆ. ಈ ಬಾರಿಯ ಪಂಚಾಯತಿಯಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳ ಪ್ರತಿಯೊಂದು ನಡೆಗೂ ಕನ್ನಡಿ ಹಿಡಿದಿದ್ದಾರೆ. ಮುಖ್ಯವಾಗಿ ತಾಂಡವ್ ರಾಮ್ ಹಾಗೂ ಗಗನ್ ಅವರ ಸ್ನೇಹದ ವಿಚಾರ ಸಖತ್ ಸದ್ದು ಮಾಡುತ್ತಿದೆ.

 

ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಸಮೀಕರಣಗಳು ಬದಲಾಗುತ್ತಿರುತ್ತವೆ. ಕೆಲವರ ಸ್ನೇಹ ಗಟ್ಟಿಯಾಗಿದ್ದರೆ, ಇನ್ನು ಕೆಲವರ ಆಟ ಕೇವಲ ಮುಖವಾಡ ಎಂಬುದು ಸಾಬೀತಾಗುತ್ತಿದೆ. ಈ ವಾರ ಕಿಚ್ಚ ಸುದೀಪ್ ಅವರು ಗಗನ್ ಹಾಗೂ ತಾಂಡವ್ ನಡುವಿನ ‘ಒನ್ ವೇ ಫ್ರೆಂಡ್ ಶಿಪ್’ ಬಗ್ಗೆ ಗಂಭೀರ ಪ್ರಶ್ನೆ ಎತ್ತಿದ್ದಾರೆ.

 

ಸೌಂದರ್ಯಾ ಅವರು ತಾಂಡವ್‌ಗೆ ‘ಡಂಬ್’ ಎಂದು ನಿಂದಿಸಿದಾಗ ಗಗನ್ ಮೌನವಾಗಿದ್ದರು. ಸ್ನೇಹಿತನಿಗೆ ಅಪಮಾನವಾದರೂ ಸುಮ್ಮನಿದ್ದ ಗಗನ್ ನಡೆಗೆ ಸುದೀಪ್ ಕೆಂಡಾಮಂಡಲರಾಗಿದ್ದಾರೆ. “ನೀವು ತಾಂಡವ್ ಗೆಳೆತನಕ್ಕೆ ಅರ್ಹರಲ್ಲ” ಎಂದು ನೇರವಾಗಿಯೇ ಸುದೀಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

 

ಸೌಂದರ್ಯಾ ನೀಡಿದ ‘ಡಂಬ್’ ಪಟ್ಟ

ಕಳೆದ ವಾರ ಸೌಂದರ್ಯಾ ಅವರು ಗಗನ್ ಜೊತೆ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ತಾಂಡವ್ ರಾಮ್ ಅವರನ್ನು ‘ಡಂಬ್’ ಎಂದು ಕರೆದಿದ್ದರು. ಈ ವಿಡಿಯೋ ತುಣುಕನ್ನು (VT) ವಾರದ ಕತೆಯಲ್ಲಿ ಸುದೀಪ್ ಎಲ್ಲರ ಎದುರು ಪ್ರದರ್ಶಿಸಿದರು.

 

ಈ ವೀಡಿಯೋ ನೋಡಿದ ತಾಂಡವ್ ರಾಮ್ ಗೆ ತೀವ್ರ ಕೋಪ ಬಂದಿತ್ತು. ಆದರೂ ಅವರು ಆ ಕ್ಷಣದಲ್ಲಿ ಯಾವುದೇ ದೊಡ್ಡ ಗಲಾಟೆ ಮಾಡದೆ ಸೈಲೆಂಟ್ ಆಗಿದ್ದರು. ಆದರೆ ತಮ್ಮ ಆತ್ಮೀಯ ಸ್ನೇಹಿತ ಗಗನ್ ಈ ವಿಚಾರದಲ್ಲಿ ತನಗೆ ಬೆಂಬಲವಾಗಿ ನಿಲ್ಲಲಿಲ್ಲ ಎಂಬ ಬೇಸರ ಅವರಿಗೆ ಒಳಗೊಳಗೇ ಕಾಡಿತ್ತು.

 

ಇದನ್ನು ಓದಿ: BBK 13: ತಾಂಡವ್-ಸೌಂದರ್ಯ ಆಟಕ್ಕೆ ಕಿಚ್ಚ ಫುಲ್ ಫಿದಾ: ಸಿಕ್ಕಿತು ಶಭಾಷ್ಗಿರಿ

ತರಾಟೆಗೆ ತೆಗೆದುಕೊಂಡ ಕಿಚ್ಚ ಸುದೀಪ್

ಈ ಇಡೀ ಘಟನೆಯನ್ನು ವೇದಿಕೆಯ ಮೇಲೆ ಪ್ರಸ್ತಾಪಿಸಿದ ಸುದೀಪ್, ಗಗನ್ ಕಡೆ ತಿರುಗಿ ನೇರ ಪ್ರಶ್ನೆ ಹಾಕಿದರು. ಸೌಂದರ್ಯಾ ಆ ರೀತಿ ನಿಮ್ಮ ಸ್ನೇಹಿತನಿಗೆ ನಿಂದಿಸಿದಾಗ ನೀವು ಯಾಕೆ ಸುಮ್ಮನಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

 

ಸ್ನೇಹಿತನಿಗೆ ಅಪಮಾನವಾದಾಗ ಸುಮ್ಮನೆ ಮೌನವಾಗಿರುವುದರ ಅರ್ಥವೇನು ಎಂದು ಸುದೀಪ್ ಕೇಳಿದರು. ತಾಂಡವ್ ನಿಮ್ಮನ್ನು ನಿಜವಾದ ಸ್ನೇಹಿತನೆಂದು ನಂಬಿದ್ದಾರೆ. ಆದರೆ ನಿಮ್ಮ ಕಡೆಯಿಂದ ಆ ಪ್ರಾಮಾಣಿಕತೆ ಕಾಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

BBK 13: ‘ತಾಂಡವ್ ಗೆಳೆತನಕ್ಕೆ ನೀವು ಅರ್ಹರಲ್ಲ’

ಮಾತು ಮುಂದುವರಿಸಿದ ಸುದೀಪ್, ಇದು ಕೇವಲ ‘ಒನ್ ವೇ ಫ್ರೆಂಡ್ ಶಿಪ್’ ಎಂದು ಹೇಳಿದರು. ಗಗನ್, ನೀವು ತಾಂಡವ್ ರಾಮ್ ತೋರಿಸುತ್ತಿರುವ ನಿಜವಾದ ಗೆಳೆತನಕ್ಕೆ ಅರ್ಹರಲ್ಲ ಎಂದು ಖಡಕ್ ಆಗಿ ಹೇಳಿದರು.

 

ಕಿಚ್ಚನ ಈ ಮಾತು ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳಿಗೂ ಶಾಕ್ ನೀಡಿದೆ. ಸುದೀಪ್ ಅವರ ಈ ಮಾತಿನ ನಂತರ ಗಗನ್ ಹಾಗೂ ತಾಂಡವ್ ನಡುವಿನ ಸ್ನೇಹ ಮುಂದಕ್ಕೆ ಹೇಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.