☔ Weather
Bengaluru: 🌤️ 22°C | AQI 90
Mysore: ☀️ 22°C | AQI 109
Mangalore: 🌤️ 27°C | AQI 140
Bengaluru: 🌤️ 22°C | AQI 90
☔ Weather
Bengaluru: 🌤️ 22°C | AQI 90
Mysore: ☀️ 22°C | AQI 109
Mangalore: 🌤️ 27°C | AQI 140
Bengaluru: 🌤️ 22°C | AQI 90

Interview: ವಿಲನ್ ಟು ವರ್ಸಟೈಲ್ ನಟನ ಪಯಣ

Interview: From Villain to Versatile Actor's Journey

Interview: ನಟ ವಿಠ್ಠಲ್ ಕಾಮತ್ ಅವರು ತಮ್ಮ ನಟನಾ ಪಯಣ, ‘ಮರ್ಯಾದೆ ರಾಮಣ್ಣ’ ಧಾರಾವಾಹಿಯಲ್ಲಿ ಗೌತಮ್ ಪಾತ್ರ ಸಿಗಲು ‘ಗೌರಿಶಂಕರ’ ಸೀರಿಯಲ್‌ನ ‘ರುದ್ರ’ ಪಾತ್ರ ಹೇಗೆ ಕಾರಣವಾಯಿತು ಎಂಬುದನ್ನು ವಿವರಿಸಿದ್ದಾರೆ. ನೆಗೆಟಿವ್ ಶೇಡ್ ಪಾತ್ರಗಳಿಗೆ ಸಿಗುವ ಮಿತಿಗಳು, ‘ರಾಜಾರಾಣಿ’ ರಿಯಾಲಿಟಿ ಶೋನಲ್ಲಿ ಹೆಂಡತಿಯೊಂದಿಗೆ ಭಾಗವಹಿಸಿದ ಮರೆಯಲಾಗದ ಅನುಭವಗಳು ಹಾಗೂ ವೃತ್ತಿಜೀವನದಲ್ಲಿ ಎದುರಾದ ಸವಾಲುಗಳು ಮತ್ತು ಯಶಸ್ಸಿನ ಬಗ್ಗೆ ಅವರು ಈ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

 

‘ಮರ್ಯಾದೆ ರಾಮಣ್ಣ’ ಸೀರಿಯಲ್‌ನಲ್ಲಿ ವಿಠ್ಠಲ್ ಕಾಮತ್ ಅವರಿಗೆ ಗೌತಮ್ ಪಾತ್ರ ಸಿಕ್ಕಿದ್ದು ಹೇಗೆ?

ವಿಠ್ಠಲ್ ಕಾಮತ್: ‘ಮರ್ಯಾದೆ ರಾಮಣ್ಣ’ ಸೀರಿಯಲ್‌ನಲ್ಲಿ ಗೌತಮ್ ಪಾತ್ರ ಸಿಗೋದಕ್ಕೆ ಮುಖ್ಯ ಕಾರಣವೇ ‘ರುದ್ರ’ ಪಾತ್ರ. ಯಾಕಂದ್ರೆ ನಾನು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ‘ಗೌರಿಶಂಕರ’ ಸೀರಿಯಲ್‌ನಲ್ಲಿ ರುದ್ರ ಅನ್ನೋ ಪಾತ್ರ ಮಾಡಿದ್ದೆ. ಆ ಪ್ರಾಜೆಕ್ಟ್ ಮಾಡಲಿಕ್ಕೆ ನನಗೆ ಫಸ್ಟ್ ಓಕೆ ಇರಲಿಲ್ಲ, ಯಾಕಂದ್ರೆ ಅದು ನೆಗೆಟಿವ್ ಶೇಡ್ ಇತ್ತು. ಆ ಪಾತ್ರ ಎಷ್ಟು ಮಟ್ಟಿಗೆ ಲೆಜಿಟಿಮೇಟ್ ಆಗಿದೆ ಅಂತ ನನಗೆ ಗೊತ್ತಿರಲಿಲ್ಲ. ಇನಿಷಿಯಲಿ ಅವರು ಆ ಪಾತ್ರಕ್ಕೆ ಆಡಿಷನ್‌ಗೆ ಕರೆದಾಗ, ಬೇಡ ಮಾಡೋದು ಬೇಡ ಅಂತಾನೆ ಅನ್ಕೊಂಡಿದ್ದೆ.

 

ಯೂಶಲಿ ಏನಾಗುತ್ತೆ ಸೀರಿಯಲ್‌ನಲ್ಲಿ ನೆಗೆಟಿವ್ ಅಂದಾಗ ಮೇಲ್ ಕ್ಯಾರೆಕ್ಟರ್‌ಗಳಿಗೆ ನೆಗೆಟಿವ್ ಪಾತ್ರ ಸ್ವಲ್ಪ ಕಮ್ಮಿನೇ ಇರುತ್ತೆ, ಯೂಶಲಿ ಫೀಮೇಲ್ ಓರಿಯೆಂಟೆಡ್ ಇರುತ್ತೆ. ಮೇಲ್ ಗೆ ಅಷ್ಟೊಂದು ಇಂಪಾರ್ಟೆನ್ಸ್ ಇರಲ್ಲ. ಬಟ್ ಸೀರಿಯಲ್‌ನಲ್ಲಿ ಫೀಮೇಲ್ ಜಾಸ್ತಿ ಪ್ರಾಜೆಕ್ಟ್ ಮಾಡ್ತಾರೆ ವಿಲನ್ ಅಂತ. ಸೋ ತಗೊಂಡ್ರುವೆ ನಮಗೆ ಹೆಂಗಿರುತ್ತೆ ಅಂದ್ರೆ ನಾವು ವಿಲನ್ ಅಂತ ಇದ್ರ್ರೂ ನಮಗೊಂದೆರಡು ಮಾತು ಇರುತ್ತೆ ಬಿಟ್ರೆ ನಮಗೆ ಜಾಸ್ತಿ ಪ್ಲೇ ಮಾಡೋಕೆ ಅವಕಾಶ ಇರಲ್ಲ. ಬಟ್ ತುಂಬಾ ಫೋರ್ಸ್‌ಫುಲ್ ಆಗಿ ಇಲ್ಲ ಮಾಡ್ಲೇಬೇಕು ಬನ್ನಿ ಅಂತ ಒಂದು ಸತಿ ಬಂದು ಹೋಗಿ ಅಂದ್ರು, ಇಷ್ಟ ಇಲ್ಲದೆ ಒಪ್ಪಿಕೊಂಡಿದ್ದ ಪಾತ್ರ ಅದು ರುದ್ರ ಅನ್ನೋ ಪಾತ್ರ.

 

ಆದರೆ ಅದು ಹೇಗಾಯಿತು ಅಂತಂದ್ರೆ ಇನಿಷಿಯಲಿ ಏನು ಇರಲಿಲ್ಲ, ಬೇರೆಯವರದೇ ಬರ್ತಾ ಇತ್ತು. ಬಟ್ ಒನ್ ಪಾಯಿಂಟ್ ಆಫ್ ಟೈಮ್‌ನಲ್ಲಿ ಅವರು ಪಾತ್ರಕ್ಕೆ ಏನು ಶೇಡ್ ಕೊಟ್ಟಿದ್ರೋ ಅದಕ್ಕೆ ನಾನು ಒಂದು ಚೂರು ಕಾಮಿಡಿ ಟಚ್ ಕೊಟ್ಟು, ವಿಲನ್ ಆಗಿದ್ರ್ರೂ ಒಂದು ಚೂರು ಕಾಮಿಡಿ ಟಚ್ ಕೊಡಲಿಕ್ಕೆ ಪ್ರಯತ್ನ ಪಟ್ಟೆ. ಸೋ ಅದು ಕ್ಲಿಕ್ ಆಯ್ತು. ಅದಾದ್ಮೇಲಿಂದ ಸ್ಟೋರಿ ನನ್ನ ಕಡೆಗೆ ತಿರುಗಲಿಕ್ಕೆ ಸ್ಟಾರ್ಟ್ ಆಯ್ತು. ಡೈರೆಕ್ಟರ್ ಕೂಡ ತುಂಬಾ ಚೆನ್ನಾಗಿ ನನಗೆ ಸ್ಪೇಸ್ ಕೊಟ್ರು, ನೀವು ಮಾಡಿ ನೀವೇನು ಮಾಡ್ತೀರಾ ಮಾಡಿ ಅಂತ ಒಂದು ಫ್ರೀ ಹ್ಯಾಂಡ್ ಕೊಟ್ರು. ಹಂಗಾಗಿ ನನಗೆ ಹೇಗೆ ಬೇಕಾಗಿತ್ತೋ ಹಾಗೆ ಆ ಪಾತ್ರನ ಒಂದು ಚೂರು ಬ್ಲೆಂಡ್ ಮಾಡಲಿಕ್ಕೆ ಸ್ಟಾರ್ಟ್ ಮಾಡಿದೆ. ಅದು ವರ್ಕ್ ಆಯ್ತು, ಅದು ವರ್ಕ್ ಆಗಿದ್ದೆ ಆಕ್ಚುಲಿ ‘ಮರ್ಯಾದೆ ರಾಮಣ್ಣ’ ಗೌತಮ್ ಪಾತ್ರ ಸಿಗಲಿಕ್ಕೆ ರುದ್ರ ಪಾತ್ರ ಕಾರಣ, ನಾನು ಕಾರಣ ಅಂತ ಹೇಳಲ್ಲ ಅದಕ್ಕೆ ರುದ್ರನೇ ಕಾರಣ.

 

ಗೌತಮ್‌ನಂತಹ ನೆಗೆಟಿವ್ ಶೇಡ್ ಪಾತ್ರದಲ್ಲಿ ನಟಿಸುವುದು ಹೇಗೆನಿಸುತ್ತಿದೆ?

ವಿಠ್ಠಲ್ ಕಾಮತ್: ಆಕ್ಚುಲಿ ಖುಷಿ ಕೊಡುತ್ತೆ, ಯಾಕೆ ಅಂದ್ರೆ ನನಗೆ ಪರ್ಸನಲಿ ಏನಾಗುತ್ತೆ ಅಂತಂದ್ರೆ ನಾನು ಗೌತಮ್ ಏನು ಪಾತ್ರ ಇದೆಯಲ್ಲ ಅದಕ್ಕೆ ಕಂಪ್ಲೀಟ್ ಆಗಿ ಆಪೋಸಿಟ್ ಆಗಿದ್ದೀನಿ. ನಾನು ಹೇಗೆ ಅಂತಂದ್ರೆ ನಂದು ಸ್ವಲ್ಪ ಈ ನೇಚರ್ ಈ ಕಡೆ ಸ್ವಲ್ಪ ಜಾಸ್ತಿ ಅಂದ್ರೆ ನನಗೆ ವಸ್ತು ಆಮೋಹ ಇದೆಲ್ಲ ಯಾವುದು ಅಂದ್ರೆ ಆ ತರ ಜಾಸ್ತಿ ಇಲ್ಲ ನನಗೆ, ಬೇಸಿಕಲಿ ನಾನು ಆ ತರ ಒಬ್ಬ ವ್ಯಕ್ತಿ. ಬಟ್ ಈ ಗೌತಮ್ ಪಾತ್ರ ಬಂದು ಹೇಗಿದೆ ಅಂತಂದ್ರೆ ಅವನಿಗೆ ಆಸ್ತಿ ಬೇಕು, ಅಂದ್ರೆ ಅವನಿಗೆ ಐಶ್ವರ್ಯ ಮೇಲೆ ಏನು ಅಂತ ಏನು ಲವ್ ಆಗಲಿ ಆತರ ಪ್ರೀತಿ ಆಗಲಿ ಇಲ್ಲ, ಬಟ್ ಐಶ್ವರ್ಯ ಪಡ್ಕೋಬೇಕು ಅಂತ ಇರೋದು ಏನಿಕ್ಕೆ ಅಂತಂದ್ರೆ ಐಶ್ವರ್ಯ ಹತ್ರ ಐಶ್ವರ್ಯ ಇದೆ ಅಂತ.

 

ಸೋ ಹಾಗಾಗಿ ಒಂದು ಕಾನ್ಫ್ರಸ್ಟ್ ಇದೆ ಅಂದ್ರೆ ನನ್ನ ರಿಯಲ್ ಲೈಫ್‌ಗೂ ಮತ್ತೆ ಆ ಪಾತ್ರ ನಿಭಾಯಿಸ್ತಾ ಇರೋದಕ್ಕೂ, ಸೋ ಒಂತರ ಚಾಲೆಂಜಿಂಗ್ ಅದರ ಜೊತೆಗೆ ಒಂದು ಫನ್ ಇದೆ ಅಂದ್ರೆ ನಾವು ಕೆಲವು ಸತಿ ನಾವು ರಿಯಲ್ ಲೈಫ್‌ನಲ್ಲಿ ಏನು ಮಾಡೋಕೆ ಆಗಲ್ಲ, ಅದನ್ನ ಏನು ಆನ್ ಸ್ಕ್ರೀನ್ ತರಲಿಕ್ಕೆ ಒಂದು ಎಫರ್ಟ್ ಆಗಲಿ ಪ್ರಯತ್ನಗಳು ಇರ್ತವಲ್ಲ. ಸೋ ಅದು ಒಂದಷ್ಟು ಖುಷಿ ಕೊಡುತ್ತೆ ಮತ್ತೆ ಒಂದಷ್ಟು ಎಕ್ಸ್‌ಪ್ಲೋರ್ ಮಾಡಲಿಕ್ಕೆ ಅವಕಾಶ ಮಾಡಿಕೊಡುತ್ತೆ ಮತ್ತೆ ನನಗೂ ಕೂಡ ಗೌತಮ್ ಪಾತ್ರದಿಂದ ನಾನು ಏನು ಮಾಡಬೇಕು ಏನು ಮಾಡಬಾರದು ಅಂದ್ರೆ ನನ್ನ ಲೈಫ್‌ನಲ್ಲಿ ನನಗೆ ಏನು ಬೇಕು ಏನು ಬೇಡ ಅನ್ನೋದನ್ನುವೇ ಅವಲೋಕಿಸಿಕೊಳ್ಳುವುದಕ್ಕೆ ಒಂದು ಸ್ಪೇಸ್ ಸಿಗುತ್ತೆ. ಹಾಗಾಗಿ ಇದೊಂದು ಪಾತ್ರ ನನಗೆ ಖುಷಿ ಕೊಡುತ್ತೆ ಪ್ಲೇ ಮಾಡಲಿಕ್ಕೆ.

 

ಹಾಗೆ ಡೈರೆಕ್ಟರ್ ಕೂಡ ಇಲ್ಲೂ ಅಷ್ಟೇನೆ ಡೈರೆಕ್ಟರ್ ನನಗೆ ಒಳ್ಳೆ ಫ್ರೀ ಹ್ಯಾಂಡ್ ಕೊಟ್ಟಿದ್ದಾರೆ, ನೀವು ಮಾಡಿ ನೀವೇನು ಮಾಡ್ತೀರಾ ಮಾಡಿ ಅಂತ ಒಂದು ಫ್ರೀ ಹ್ಯಾಂಡ್ ಕೊಟ್ರು. ಸೋ ಹಂಗಾಗಿ ನನಗೆ ಹೇಗೆ ಬೇಕಾಗಿತ್ತೋ ಹಾಗೆ ಆ ಪಾತ್ರನ ಒಂದು ಚೂರು ಬ್ಲೆಂಡ್ ಮಾಡ್ಲಿಕ್ಕೆ ಸ್ಟಾರ್ಟ್ ಮಾಡಿದೆ.

 

ಐಶ್ವರ್ಯಳ ಹಿಂದೆ ಬಿದ್ದು ಕಾಟ ಕೊಡುವ ಸೀನ್‌ಗಳನ್ನು ಮಾಡುವಾಗ ಏನನಿಸುತ್ತದೆ?

ವಿಠ್ಠಲ್ ಕಾಮತ್: ಎಕ್ಸಾಕ್ಟ್ ಆಗಿ ಹೇಳಬೇಕು ಅಂತಂದ್ರೆ ಐಶ್ವರ್ಯಗೆ ಕಾಟ ಕೊಡೋದಕಿಂತಲೂವೇ ನನಗೆ ಅಂದ್ರೆ ಗೌತಮ್‌ಗೆ ಕಾಟ ಅನ್ನೋದಕ್ಕಿಂತ ಹೆಂಗೆ ಅಂತಂದ್ರೆ ಒಂದು ಆ ಗೌತಮ್ ಪಾತ್ರಕ್ಕೆ ಏನು ಅಂತಂದ್ರೆ ಐಶ್ವರ್ಯ ಬೇಕು ಅಷ್ಟೇನೆ. ಐಶ್ವರ್ಯ ಹುಡುಗಿ ಅಲ್ಲ ಐಶ್ವರ್ಯನೇ ಐಶ್ವರ್ಯ ಬೇಕು.

 

ಸೋ ಹಂಗಿರಬೇಕಾದ್ರೆ ಅದನ್ನ ಪಡ್ಕೊಳ್ಳೋಕೆ ಎಂಥ ನೀಚ ಮಟ್ಟಕ್ಕೆ ಬೇಕಾದ್ರೂ ಇಳಿದು ಮಾಡ್ತೀನಿ ಅನ್ನೋದು ಇದೆಯಲ್ಲ. ಸೋ ಅದು ಆಕ್ಚುಲಿ ಆಸ್ ಎ ವಿಠ್ಠಲ್ ಕಾಮತ್ ನನಗೆ ಅಕ್ಸೆಪ್ಟ್ ಮಾಡ್ಕೊಳ್ಳೋಕೆ ಆಗಲ್ಲ ಅದನ್ನ. ಸೋ ಸ್ವಲ್ಪ ಚಾಲೆಂಜಿಂಗ್ ಇದು.

 

ಅದನ್ನ ನನ್ನನ್ನು ನಾನು ಕನ್ವಿನ್ಸ್ ಮಾಡಿ ಮಾಡಬೇಕಲ್ಲ ಅಂದ್ರೆ ನಾನಲ್ಲ ಅದನ್ನ ನಾನು ನಾನು ಅಂತ ಹೇಳಿ ನಂಬಿ ಮಾಡೋದು ಇದೆಯಲ್ಲ ಸ್ವಲ್ಪ ಚಾಲೆಂಜಿಂಗ್ ಅಂತ ಅನ್ಸುತ್ತೆ.

 

ಕಥೆಯಲ್ಲಿ ರಾಮಣ್ಣನ ಜೊತೆ ಮದುವೆ ಫಿಕ್ಸ್ ಆದಮೇಲೆ ಗೌತಮ್ ರಿಯಾಕ್ಷನ್ ಏನು?

ವಿಠ್ಠಲ್ ಕಾಮತ್: ರಿಯಾಕ್ಷನ್… ಹೇಗ್ ಹೇಳಿ ಇದನ್ನ… ಆಸ್ ಎ ಗೌತಮ್ ಆಗಿ ಹೇಳ್ಬೇಕಾ ಅಥವಾ ವಿಠ್ಠಲ್ ಕಾಮತ್ ಆಗಿ ಹೇಳ್ಬೇಕಾ ಅಂದ್ರೆ ಡೇಟ್ಸ್ ಸ್ವಲ್ಪ ಕಮ್ಮಿ ಆಯ್ತು ನನಗೆ ಬರೋದು. ಬಿಕಾಸ್ ಕಂಪ್ಲೀಟ್ ಆಗಿ ಕಥೆ ಅವರ ಕಡೆ ಶಿಫ್ಟ್ ಆಯಿತು. ನಂದು ಸ್ವಲ್ಪ ಕಥೆಯಲ್ಲಿ ಕಮ್ಮಿ ಇತ್ತು, ಈಗ ಮತ್ತೆ ಕಥೆಯಲ್ಲಿ ಇನ್‌ಕ್ಲೂಡ್ ಆಗ್ತಾ ಇದ್ದೀನಿ. ಆಕ್ಚುಲಿ ಮುಂಚೆ ಹೇಗಿತ್ತು ಅಂದ್ರೆ ಫ್ಯಾಮಿಲಿ ಜೊತೆ ಸೀನ್‌ಗಳು ಇತ್ತು, ಈಗ ಏನಾಗಿದೆ ಅಂದ್ರೆ ನಂದೇ ಸ್ವಲ್ಪ ಸೋಲೋ ಸೀನ್‌ಗಳು ಜಾಸ್ತಿ ಬರ್ತಾ ಇದೆ. ಸೋ ಈಗ ಆಸ್ ಎ ಗೌತಮ್ ಆಗಿ ಇನ್ನೂ ಜಾಸ್ತಿ ಎಫರ್ಟ್ ಹಾಕ್ಬೇಕಾಗಿದೆ, ಅದರಲ್ಲಿ ಇನ್ನೂ ಎಫರ್ಟ್ಗಳನ್ನು ಕೊಡಬೇಕಾಗಿದೆ.

 

ಮುಂದಿನ ಎಪಿಸೋಡ್‌ಗಳಲ್ಲಿ ಗೌತಮ್ ಪಾತ್ರಕ್ಕೆ ಯಾವ ರೀತಿಯ ಟ್ವಿಸ್ಟ್ ಸಿಗಲಿದೆ?

ವಿಠ್ಠಲ್ ಕಾಮತ್: ಟ್ವಿಸ್ಟ್… ಆಕ್ಚುಲಿ ನನಗೆ ಗೊತ್ತಿಲ್ಲ, ಯಾಕಂದ್ರೆ ಇದು ಸ್ಕ್ರೀನ್ ಪ್ಲೇ, ರೈಟರ್ ಮೇಲೆ ಡಿಪೆಂಡ್, ರೈಟರ್ ಮೇಲೆ ಸ್ಕ್ರೀನ್ ಪ್ಲೇ ಮೇಲೆ ಡಿಪೆಂಡ್. ಬಟ್ ಏನೇ ಇದ್ರೂವೇ ಗೌತಮ್‌ನ ಆದಷ್ಟು ನಿಕೃಷ್ಟವಾಗಿ, ನೀಚವಾಗಿ ತೋರಿಸಲಿಕ್ಕೆ ಟ್ರೈ ಮಾಡ್ತೀನಿ ನಾನು. ಅಂದ್ರೆ ಅವರು ಏನು ನನಗೆ ಸೀನ್ ಬರಿತಾ ಇದ್ದಾರೆ ಅಥವಾ ಏನು ಸ್ಕ್ರೀನ್ ಪ್ಲೇ ಬರ್ತಾ ಇದೆ, ಅದಕ್ಕೆ ಆದಷ್ಟು ಜಸ್ಟಿಫೈ ಮಾಡ್ಲಿಕ್ಕೆ ಟ್ರೈ ಮಾಡ್ತಾ ಇದ್ದೀನಿ. ಅದೇ ಎಫರ್ಟ್ ಕೂಡ ಆಗಿರುತ್ತೆ ನಂದು ಯಾವಾಗ್ಲೂವೇ.

 

ಅಂದ್ರೆ ಯಾವುದೇ ಪಾತ್ರ, ಇದು ಗೌತಮ್ ಅಂತ ಅಲ್ಲ, ಇದು ಗೌತಮ್ ಈಗ ಅವರು ಇನ್ಮುಂದಕ್ಕೆ ಗೌತಮ್‌ಗೆ ಎಲ್ಲ ರಿಯಲೈಸ್ ಆಗಿ ಇದೆಲ್ಲ ನನಗೆ ಬೇಕಾಗಿರೋದು ಜೀವನದಲ್ಲಿ ಅಂತ ಗೌತಮ್‌ಗೇನಾದ್ರೂ ರಿಯಲೈಸೇಶನ್ ಆಗಿ ಆತ ಒಳ್ಳೆ ವ್ಯಕ್ತಿಯಾಗಿ ಬದಲಾಗ್ತಾನೆ ಅಂತ ಅಂದ್ರುವೆ, ಆ ಒಳ್ಳೆ ಗೌತಮ್‌ನ್ನು ಕೂಡ ತೋರಿಸೋಕೆ ಈಗ ಎಷ್ಟು ಎಫರ್ಟ್ ಹಾಕ್ತಿದ್ದೇನೋ ಅಷ್ಟೇ ಎಫರ್ಟ್ ಅಲ್ಲಿ ನಾನು ತೋರಿಸಲಿಕ್ಕೆ ಟ್ರೈ ಮಾಡ್ತೀನಿ.

 

‘ಗೌರಿಶಂಕರ’ ಮತ್ತು ‘ಇಂತಿ ನಿಮ್ಮ ಆಶಾ’ ಸೀರಿಯಲ್ ಅನುಭವ ಹೇಗಿತ್ತು?

ವಿಠ್ಠಲ್ ಕಾಮತ್: ‘ಇಂತಿ ನಿಮ್ಮ ಆಶಾ’ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ಇದ್ದರೂ ಕೂಡ ನನಗೆ ಜಾಸ್ತಿ ಇಂಪಾರ್ಟೆನ್ಸ್ ಇರಲಿಲ್ಲ. ಆ ಹುಡುಗನ ನೆಗೆಟಿವ್ ಶೇಡ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತು, ಆದರೆ ಆಕಾಶ್ ಎನ್ನುವ ಆ ಪಾತ್ರ ಕೇವಲ ಆ ವಿಲನ್‌ಗೆ ಒಂದು ಸಣ್ಣ ಪುಷ್ ಕೊಡಲಿಕ್ಕೋಸ್ಕರ ಮಾತ್ರ ಇತ್ತು. ಆದರೆ ಇಲ್ಲಿ ಹಾಗಲ್ಲ, ಇಲ್ಲಿ ನಮಗೆ ಬೇರೆಯವರು ಪುಷ್ ಕೊಡುತ್ತಾರೆ, ಹಾಗಾಗಿ ಪ್ಲಾನಿಂಗ್ ಎಲ್ಲವನ್ನೂ ಗೌತಮ್ ಮಾಡಬೇಕಾಗುತ್ತದೆ.

 

ಇನ್ನು ‘ಗೌರಿಶಂಕರ’ ಧಾರಾವಾಹಿಯ ಪ್ಲಸ್ ಪಾಯಿಂಟ್ ಏನು ಅಂದ್ರೆ, ರುದ್ರ ಪಾತ್ರದಾರಿಗೆ ಯಾವುದೇ ತರಹದ ಬೌಂಡರೀಸ್ ಇರಲಿಲ್ಲ. ಅಂದ್ರೆ ಇವನು ಹೀಗೆಯೇ ಮಾಡಬೇಕು ಅಂತಿರಲಿಲ್ಲ, ರುದ್ರ ಪಾತ್ರವು ತುಂಬಾ ಅನ್‌ಪ್ರೆಡಿಕ್ಟಬಲ್ ಆಗಿದ್ದು ಅವನು ಏನು ಬೇಕಾದರೂ ಮಾಡಿಬಿಡುತ್ತಿದ್ದನು. ಅವನಿಗೆ ಅಷ್ಟು ಬುದ್ಧಿಯೂ ಇರುವುದಿಲ್ಲ, ಹಾಗಂತ ಅವನನ್ನು ಪೆದ್ದ ಅಂತಾನೂ ಅಥವಾ ಜಾಣ ಅಂತಾನೂ ಕರೆಯಲಾಗುವುದಿಲ್ಲ; ಅವನಿಗವನೇ ಜಾಣ ಎಂದುಕೊಂಡು ಏನೋ ಒಂದು ಮಾಡಲು ಹೋಗಿ ಅದು ಎಡವಟ್ಟಾಗುತ್ತದೆ. ಆ ಎಡವಟ್ಟಿನಿಂದ ಜನರಿಗೆ ನಗುವೂ ಬರುತ್ತದೆ, ಅವನು ಸಾಯಿಸುವುದಕ್ಕೆ ಅಥವಾ ಕ್ರೂರವಾಗಿ ಪ್ಲಾನ್ ಮಾಡುತ್ತಿದ್ದಾನಲ್ಲ ಎಂದು ಅನ್ನಿಸಿದರೂ ಸಹ, ಅದು ಫ್ಲಾಪ್ ಆಗುವ ಟೈಮ್‌ಗೆ ಕಾಮಿಡಿಯಾಗಿ ಕನ್ವರ್ಟ್ ಆಗುತ್ತಿತ್ತು.

 

ಇದರಲ್ಲಿ ತುಂಬಾ ಅಂದ್ರೆ ಪ್ಲೇ ಮಾಡೋಕೆ ಬೌಂಡರೀಸ್ ಇಲ್ಲದೆ ಇರೋದು, ಇದರಲ್ಲಿ ಏನಾಗಿದೆ ಅಂತಂದ್ರೆ ಇವಾಗ ನಾನು ಗೌತಮ್ ಪಾತ್ರ ಏನು ಮಾಡ್ತಿದೀನಲ್ಲ, ಇದರಲ್ಲಿ ನನಗೆ ಸರ್ಟನ್ ರಿಸ್ಟ್ರಿಕ್ಷನ್ಸ್ ಇದೆ. ನಾನು ನನ್ನ ಬಾಡಿ ಲ್ಯಾಂಗ್ವೇಜ್ ಹೀಗೆ ಇಟ್ಕೋಬೇಕು, ಹೀಗೆ ಇರಬೇಕು ಅಂತ; ಬಟ್ ರುದ್ರಂಗೆ ಆತರದೆಲ್ಲ ಏನು ಇರಲಿಲ್ಲ. ಅಂದ್ರೆ ರುದ್ರಂಗೆ ಒಂದು ಬೌಂಡರೀಸ್ ಅಂತಾನೆ ಇರಲಿಲ್ಲ, ಸೋ ನಾನು ಕಂಪ್ಲೀಟ್ ಆಗಿ ಫುಲ್ ಫ್ರೀ ಆಗಿ ಏನು ಬೇಕೋ ಅದನ್ನೆಲ್ಲ ಆಡ್ ಮಾಡ್ಕೊಂಡು ಎಷ್ಟೊಂದು ಸತಿ ಹೆಂಗ್ ಮಾಡಿದೀನಿ ಅಂತಂದ್ರೆ… ಈಗ ಅಟ್ ಪ್ರೆಸೆಂಟ್ ಟ್ರೆಂಡ್ ಅಲ್ಲಿ ಏನು ಮೆಮ್ಸ್ ಎಲ್ಲಾ ಬರುತ್ತೆ, ಅದನ್ನೆಲ್ಲ ಸೀನ್ಸಲ್ಲಿ ಜಸ್ಟ್ ಮೊಬೈಲ್ ನೋಡ್ತಾ ಇರ್ತೀರಾ ಅಂತೆಲ್ಲ ಇದ್ರೆ, ಆ ಮೆಮ್ಸ್ನೆಲ್ಲ ಆಡ್ ಮಾಡ್ಕೊಂಡು ಬಿಟ್ಟಿದೀನಿ ಎಷ್ಟೊಂದು ಸತಿ ನಾನು. ಸೋ ಅದು ಒಂದು ಡಿಫರೆಂಟ್ ಶೇಡ್ ಕೊಟ್ಟಿದೆ ಅದಕ್ಕೆ, ಅಂದ್ರೆ ಅದೆಲ್ಲ ಆಡ್ ಆನ್ ಆಗ್ತಾ ಹೋಗಿದೆ ಆ ಪಾತ್ರಕ್ಕೆ.

 

ಅಂದ್ರೆ ನಿಮಗೆ ಬ್ಯಾರಿಯರ್ಸ್ ಇಲ್ಲದೆ ಇದ್ದಾಗ ನೀವು ತುಂಬಾ ಚಂದ ಏನು ಎಕ್ಸ್ಪ್ಲೋರ್ ಮಾಡಬಹುದು, ಬಟ್ ಇದರಲ್ಲಿ ಹಂಗಿಲ್ಲ, ಇದು ಸ್ವಲ್ಪ ರಿಸ್ಟ್ರಿಕ್ಷನ್ಸ್ ಇದೆ. ಸೋ ನೋಡಿ ಮಾಡಿ ಮಾಡಬೇಕು ಈ ಪಾತ್ರನ, ಅಂದ್ರೆ ಈ ಗೌತಮ್ ಪಾತ್ರನ ನಿಭಾಯಿಸಬೇಕಾದರೆ ಸ್ವಲ್ಪ ಯೋಚನೆ ಮಾಡಿನೇ ಮಾಡಬೇಕು. ಅದರಲ್ಲಿ ನನಗೆ ಇರೋ ಅಷ್ಟು ಫ್ರೀ ಹ್ಯಾಂಡ್ ಆ ಗೌತಮ್ ಪಾತ್ರ ಮಾಡಬೇಕಾದರೆ ನನಗೆ ಇಲ್ಲ, ಅದು ಒಂದು ಚೂರು ಕಟ್ ಆದಂಗೆ ಆಗ್ತಿದೆ ನನಗೆ, ಬಟ್ ಸ್ಟಿಲ್ ಐ ಆಮ್ ಡೂಯಿಂಗ್ ಇಟ್. ಅದು ಒಂತರ ಅಂದ್ರೆ ಬೇರೆ ಬೇರೆ ಪಾತ್ರ ಮಾಡಲಿಕ್ಕೆ ನನಗೆ ತುಂಬಾ ಖುಷಿ ಕೊಡುತ್ತೆ. ಇನ್ಮುಂದಕ್ಕೆ ಆದ್ರೆ ಬೇರೆ ಬೇರೆ ತರದ್ದು ಪಾತ್ರನು ಅಂದ್ರೆ ಈಗ ರುದ್ರ ಮಾಡಿ ಆದ್ಮೇಲೆ, ನಾನು ಗೌರಿಶಂಕರ ಮಾಡಿ ಆದ್ಮೇಲೆ ತುಂಬಾ ಬರ್ತಾ ಇದೆ ನನಗೆ ನೆಗೆಟಿವ್ ಶೇಡ್‌ಗೆ. ಸೋ ನಾನು ಇದರಿಂದ ಆಚೆ ಬಂದು ಬೇರೆ ಏನಾದ್ರೂ ಮಾಡಿ ಅದರಲ್ಲೂ ಪ್ರೂವ್ ಮಾಡಬೇಕು ಅನ್ನೋ ಆಸೆ ಇದೆ, ಗೊತ್ತಿಲ್ಲ, ಆ ತರದ್ದು ಖಂಡಿತ ಯಾವುದಾದರೂ ಅವಕಾಶ ಬಂದ್ರೆ ಮಾಡ್ತೀನಿ ಖಂಡಿತ.

 

‘ರಾಜಾ ರಾಣಿ’ ರಿಯಾಲಿಟಿ ಶೋ ಅನುಭವ ಮತ್ತು ಸೀರಿಯಲ್ ಶೂಟಿಂಗ್‌ಗೆ ವ್ಯತ್ಯಾಸವೇನು?

ವಿಠ್ಠಲ್ ಕಾಮತ್: ಸೀರಿಯಲ್‌ಗಳಲ್ಲಿ ನಾನು ವಿಲನ್ ಆಗಿದ್ದರೆ, ‘ರಾಜಾರಾಣಿ’ಯಲ್ಲಿ ನನ್ನ ಹೆಂಡತಿ ವಿಲನ್ ಆಗಿದ್ಲು ಅಂತ ಹೇಳಬಹುದು. ನನಗೆ ಡ್ಯಾನ್ಸ್ ಬರುತ್ತೆ ಅಂತ ಅವರಿಗೆ ಚೆನ್ನಾಗಿ ಗೊತ್ತು, ಯಾಕಂದ್ರೆ ನಾನು ಡ್ಯಾನ್ಸರ್ ಆಗಿರೋದ್ರಿಂದ; ಆದರೆ ನನ್ನ ಹೆಂಡತಿಗೆ ಡ್ಯಾನ್ಸ್ ಬರೋದೇ ಇಲ್ಲ, ಅವಳಿಗೆ ಎಬಿಸಿಡಿಯೂ ಗೊತ್ತಿಲ್ಲ ಡ್ಯಾನ್ಸ್‌ನಲ್ಲಿ. ಆದರೂ ಡ್ಯಾನ್ಸ್ ರಿಯಾಲಿಟಿ ಶೋ ಅಂದಾಗ ನನ್ನ ಹೆಂಡತಿಗೆ ಡ್ಯಾನ್ಸ್ ಬರಲ್ಲ ಅಂದ್ರು ಅದೇ ತರ ಬೇಕು ಅಂದ್ರು, ನಾನು ಆಶ್ಚರ್ಯಪಟ್ಟು ಇವರು ಇದನ್ನ ಹೇಗೆ ಮಾಡ್ತಾರೆ ಇವರು ಇದನ್ನ ಅಂತ ಅಂದುಕೊಂಡಿದ್ದೆ. ಬಟ್ ಅದರಲ್ಲಿ ಒಂದು ಫನ್ ಇದೆ, ಆದರೆ ಅವಳಿಗೆ ಕಲಿಸಿ ಅವಳ ಜೊತೆಗೆ ನಾನು ಮ್ಯಾಚ್ ಮಾಡಿ ಮಾಡಬೇಕಾಗಿತ್ತಲ್ಲ, ಅದೇ ನನಗೆ ದೊಡ್ಡ ಟಾಸ್ಕ್ ಆಗಿತ್ತು.

 

ನಾನು ಅಟ್ ಎ ಟೈಮ್ ನಾಲ್ಕು ಸೀರಿಯಲ್ ಮಾಡಬಲ್ಲೆ, ಬಟ್ ಒಂದು ರಿಯಾಲಿಟಿ ಶೋ ಮಾಡುವಷ್ಟು ಸುಸ್ತು ಹೊಡೆದುಬಿಟ್ಟಿದ್ದೆ. ಅದಕ್ಕಿಂತ ಮೊದಲು ನಾನು ಸುವರ್ಣದಲ್ಲಿ  ‘ಡ್ಯಾನ್ಸ್ ಡ್ಯಾನ್ಸ್’ ಅಂತ ರಿಯಾಲಿಟಿ ಶೋ ಮಾಡಿದ್ದೆ, ಅದರಲ್ಲಿ ರನ್ನರ್ ಅಪ್ ಕೂಡ ಆಗಿದ್ದೆ; ಆದರೂ ಅದರಲ್ಲಿ ನಾನು ಎಷ್ಟು ಎಫರ್ಟ್ ಹಾಕಿ ಮಾಡಿದ್ದೆನೋ ಅದರ ಡಬಲ್ ಎಫರ್ಟ್ ಇದರಲ್ಲೂ ಹಾಕಬೇಕಾಗಿತ್ತು. ಯಾಕಂದ್ರೆ ಹೆಂಡತಿ ಕೂಡ ಇದ್ದರು, ಅವಳಿಗೆ ಡ್ಯಾನ್ಸ್ ಬರಲ್ಲ, ಅವಳಿಗೆ ಹೇಳಿಕೊಟ್ಟು ಅವಳಿಗೆ ಸಮಾನವಾಗಿ ನಿಲ್ಲಿಸಬೇಕು; ಏಕೆಂದರೆ ಅವಳು ಇಂಡಸ್ಟ್ರಿಗೆ ಹೊಸಬಳು. ಅವಳಿಗೆ ಇದು ಹೇಗೆ ಆಪರೇಟ್ ಆಗುತ್ತೆ ಅಂತ ಗೊತ್ತಿರಲಿಲ್ಲ, ರಾತ್ರಿ ಎಲ್ಲಾ ಡ್ಯಾನ್ಸ್ ಕ್ಲಾಸ್ ಅಲ್ಲೇ ಮಲಗುತ್ತಾ ಇದ್ದೆವು. ಆದರೆ ಅವಳಿಗೆ ಇದು ಹೊಸದು, ರಾತ್ರಿ ಎಲ್ಲಾ ನಾವು ಕೂತ್ಕೊಂಡು ವರ್ಕ್ ಮಾಡ್ತೀವಿ ಅನ್ನೋದು ಅವಳಿಗೆ ಗೊತ್ತೇ ಇಲ್ಲ; ಅವಳಿಗೆ ಗೊತ್ತಿರೋದು ಒಂಬತ್ತರಿಂದ ಐದು ಜಾಬ್ ಅಷ್ಟೇ. ಹಾಗಾಗಿ ಇದು ಮಾಡಬೇಕಾದರೆ ಅವಳು ನಿದ್ದೆಗಟ್ಟಿದ್ದಾಳೆ, ಅಷ್ಟು ಎಫರ್ಟ್ ಹಾಕಿ ಜೊತೆಗೆ ನಿಂತು ಮಾಡಿದ್ದಕ್ಕೆ ನಾನು ಅವಳಿಗೆ ನಿಜವಾಗ್ಲೂ ಅಪ್ರಿಷಿಯೇಟ್ ಮಾಡಬೇಕು.

 

ರಾಜಾರಾಣಿ ನನ್ನ ಅನುಭವಕ್ಕಿಂತ ಅವಳ ಅನುಭವವೇ ದೊಡ್ಡದು, ಯಾಕಂದ್ರೆ ನನಗೆ ಶೂಟಿಂಗ್ ಮಾಡಬೇಕಾದರೆ ಅಭ್ಯಾಸವಿತ್ತು, ಆದರೆ ಅವಳ ಅನುಭವ ದೊಡ್ಡದು ಮತ್ತು ಅವಳ ಸಪೋರ್ಟ್ ಇದ್ದಿದ್ದಕ್ಕೇ ಅಷ್ಟು ದಿವಸ ಬರಲಿಕ್ಕೆ ಸಾಧ್ಯವಾಯಿತು. ಬಟ್ ಇಟ್ ವಾಸ್ ಫನ್, ರಾಜಾರಾಣಿ ಮಾಡಿದ್ದು ತುಂಬಾ ಫನ್, ಅದರಲ್ಲಿ ನಾನು ಬೇಗ ಎಕ್ಸಿಟ್ ಆದೆ, ಆ ಶೋನಿಂದ ಎಲಿಮಿನೇಟ್ ಆದೆ. ಆದರೆ ತುಂಬಾ ಒಳ್ಳೆಯ ಸ್ನೇಹಿತರನ್ನು ಪಡೆದುಕೊಂಡೆ, ಇವಾಗಲೂ ಕೂಡ ಒಂದಷ್ಟು ಜನ ಸ್ನೇಹಿತರು ವರ್ಷಕ್ಕೊಂದು ಸತಿ ಟ್ರಿಪ್‌ಗೆ ಹೋಗ್ತೀವಿ. ಅಲ್ಲಿ ಹೆಸರು, ದುಡ್ಡು ಸಂಪಾದನೆ ಮಾಡಿದ್ದಕ್ಕಿಂತ ಸ್ನೇಹಿತರು ಸಿಕ್ಕಿದ್ದು ದೊಡ್ಡ ಸಂಪಾದನೆ. ಅದರಲ್ಲಿ ‘ಮಧುಸಾಗರ್’ ಅಂತ ಆರ್ಟಿಸ್ಟ್ ಇದ್ದರು, ಅವರು ಕೂಡ ಇವಾಗ ನಾನು ಮತ್ತು ಅವರು ‘ಭಾಗ್ಯವಂತರು’ ಅಂತ ಉದಯದಲ್ಲಿ ಒಂದು ಸೀರಿಯಲ್ ಮಾಡ್ತಾ ಇದ್ದೀವಿ. ಅದರಲ್ಲಿ ನನ್ನ ಅಣ್ಣನ ಪಾತ್ರ ಮಾಡ್ತಾ ಇದ್ದಾರೆ ಅವರು. ಇಲ್ಲೂ ಕೂಡ ಒಟ್ಟಿಗೆ ಇದ್ದೀವಿ, ರಾಜಾರಾಣಿ ಹ್ಯಾಸ್ ಗಿವೆನ್ ಮಿ ಅ ಬ್ಯೂಟಿಫುಲ್ ಫ್ಯಾಮಿಲಿ ಅಂಡ್ ಫ್ರೆಂಡ್ ಸರ್ಕಲ್.

 

Interview: ವೀಕ್ಷಕರಿಂದ ಗೌತಮ್ ಪಾತ್ರಕ್ಕೆ ಸಿಗುತ್ತಿರುವ ಬೈಗುಳ ಅಥವಾ ಮೆಚ್ಚುಗೆ ಹೇಗಿದೆ?

ವಿಠ್ಠಲ್ ಕಾಮತ್: ನನಗೆ ಆಕ್ಚುಲಿ ಗೊತ್ತಾಗ್ತಿಲ್ಲ, ಯಾಕಂದ್ರೆ ನಾನು ಜಾಸ್ತಿ ಹೊರಗಡೆ ಓಡಾಡಲಿಕ್ಕೆ ಆಗ್ತಿಲ್ಲ. ಎರಡು ಸೀರಿಯಲ್ ನಡೀತಾ ಇದೆ, ನಾನು ಆಲ್ಮೋಸ್ಟ್ ಯಾವಾಗಲೂ ಶೂಟಿಂಗ್ ಸೆಟ್ ಅಲ್ಲೇ ಇರ್ತೀನಿ. ಶೂಟಿಂಗ್ ಸೆಟ್ ಅಲ್ಲಿ ಇರೋದ್ರಿಂದ, ಜಸ್ಟ್ ಲೈಕ್ ಈಗ ಅವರು ಯಾವುದಾದರೂ ಎಪಿಸೋಡ್ ನೋಡಿದ್ರೆ ಅದರದ್ದು ರಿವ್ಯೂ ಕೊಡ್ತಾರೆ, ತುಂಬಾ ಚೆನ್ನಾಗಿ ಬರ್ತಾ ಇದೆ ಅಂತ ಹೇಳಿ ರಿವ್ಯೂ ಕೊಡ್ತಾ ಇದ್ದಾರೆ ಅಷ್ಟೇ ಬಿಟ್ರೆ, ನಾನು ಹೊರಗಡೆ ನಾನು ಪಬ್ಲಿಕ್ ಅಲ್ಲಿ ಎಲ್ಲಿ ಕಾಣಿಸಿಕೊಳ್ಳೋಕೆ ಆಗ್ತಿಲ್ಲ ಅಟ್ ಪ್ರೆಸೆಂಟ್. ಯಾಕಂದ್ರೆ ಎರಡು ಪ್ರಾಜೆಕ್ಟ್ ಇಲ್ಲಿ ನಡೀತಾ ಇದೆ, ಅದಕ್ಕೇನೆ ಹೆಚ್ಚು ಕಮ್ಮಿ ನಾನು 15 ಟು 18 ಡೇಸ್ ನಾನು ಶೂಟಿಂಗ್ ಅಲ್ಲೇ ಬಿಜಿ ಇದ್ದೀನಿ.

 

ಇನ್ನೊಂದು ನಮ್ಮದೊಂದು ಸಣ್ಣದಾಗಿ, ಪುಟ್ಟದಾಗಿ ಒಂದು ಹೋಟೆಲ್ ತರ ಸ್ಟಾರ್ಟ್ ಮಾಡಿದೀವಿ ಮೈಸೂರಲ್ಲಿ. ಇನ್ನು ಮಿಕ್ಕಿದ ಟೈಮ್‌ನಲ್ಲಿ ಅಲ್ಲಿ ಏನು ಕಾನ್ಸಂಟ್ರೇಟ್ ಮಾಡ್ತಾ ಇರ್ತೀನಿ, ಯಾಕಂದ್ರೆ ನನ್ನ ವೈಫ್‌ಗೆ ಸಪೋರ್ಟ್ ಮಾಡ್ತಾ ಇದೀನಿ ಅಲ್ಲಿ. ಸೋ ಹಂಗಾಗಿ ನನಗೆ ಪಬ್ಲಿಕ್ ರಿಯಾಕ್ಷನ್ ನನಗೆ ಕರೆಕ್ಟಾಗಿ ಗೊತ್ತಾಗ್ತಾ ಇಲ್ಲ, ಮುಂಚೆ ಎಲ್ಲಾ ಬೇರೆ ಬೇರೆ ಕಡೆ ಹೋಗ್ತಾ ಇದ್ದೆ, ಸೋ ಹಂಗಾಗಿ ಗೊತ್ತಾಗ್ತಾ ಇತ್ತು. ನನಗೆ ಅಷ್ಟು ಪಬ್ಲಿಕ್ ರಿಯಾಕ್ಷನ್ ಅಷ್ಟು ಗೊತ್ತಿಲ್ಲ, ಬಟ್ ಆಸ್ ಏನು ನನ್ನ ಫ್ರೆಂಡ್ ಸರ್ಕಲ್ ಆಗಲಿ, ಫ್ಯಾಮಿಲಿಯವರು ಆಗಲಿ ತುಂಬಾ ಅಪ್ರಿಷಿಯೇಟ್ ಮಾಡ್ತಾರೆ, ತುಂಬಾ ಚೆನ್ನಾಗಿ ಬರ್ತಾ ಇದೆ.

 

ಏನ್ ನೀನು ಇದು ಅವರಿಗೆ ವಿಲನ್ ಆಗಿ ಇನ್ನೂ ಏನು ರಿಸೀವ್ ಮಾಡ್ಕೊಳ್ಳೋಕೆ ಸ್ವಲ್ಪ ಕಷ್ಟ ಆಗ್ತಿದೆ, ನೀನು ಯಾಕೆ ಕೆಟ್ಟ ಕೆಟ್ಟ ಪಾತ್ರ ಮಾಡ್ತೀಯಾ? ಒಳ್ಳೆ ಪಾತ್ರ ಮಾಡು, ನೀನು ಹೀರೋ ಆಗಿ ಮಾಡು ಹಂಗೆ ಹೀಗೆ ಅಂತ ಹೇಳ್ತಾರೆ. ಬಟ್ ಆದ್ರೆ ನನಗೆ ಪರ್ಸನಲಿ ಆತರ ಏನು ಹೀರೋ ಆಗಿ ಕೂಡ ನಾನು ಮಾಡಿದ್ದೀನಿ ಈ ಹಿಂದೆ ಒಂದು ಎರಡು ಮೂರು ಪ್ರಾಜೆಕ್ಟ್, ಬಟ್ ಅದಕ್ಕಿಂತಾನೂ ತುಂಬಾ ಖುಷಿ ನನಗೆ ಇದರಲ್ಲಿ ಸಿಕ್ತಾ ಇದೆ. ಅದಕ್ಕಿಂತ ಒಳ್ಳೆ ಹೆಸರು ಕೂಡ ಬಂದಿದೆ ಇದರಲ್ಲಿ ನನಗೆ. ಸೋ ಖುಷಿ ಇದೆ, ನನಗೆ ಏನೇನು ಸಿಕ್ಕಿದೆ, ನನಗೆ ಏನೇನು ಸಿಕ್ತಾ ಇದೆ, ಅದರ ಬಗ್ಗೆ ತುಂಬಾ ಖುಷಿ ಇದೆ.