☔ Weather
Bengaluru: ☀️ 19°C | AQI 88
Mysore: 🌤️ 20°C | AQI 88
Mangalore: ☀️ 24°C | AQI 132
Bengaluru: ☀️ 19°C | AQI 88
☔ Weather
Bengaluru: ☀️ 19°C | AQI 88
Mysore: 🌤️ 20°C | AQI 88
Mangalore: ☀️ 24°C | AQI 132
Bengaluru: ☀️ 19°C | AQI 88

STING : 15 ಸಾವಿರದ ಸೆಕೆಂಡ್ ಹ್ಯಾಂಡ್ ಫೋನ್‌ನಲ್ಲಿ ಸ್ಟಿಂಗ್ ವಿಡಿಯೋ ಅಪ್‌ಲೋಡ್, ಬಯಲಾಯ್ತು ಕೃತ್ಯ

Image of Sting operation case
ಬೆಂಗಳೂರು : ಸಿದ್ದರಾಮಯ್ಯ ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ (Sting operation) ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನದ ನಂತರ ತನಿಖೆಯಲ್ಲಿ ಮಹತ್ವದ ವಿವರಗಳು ಹೊರಬಿದ್ದಿವೆ

ಮುಖ್ಯಾಂಶಗಳು

  • ಸ್ಟಿಂಗ್ ವಿಡಿಯೋ ಅಪ್ಲೋಡ್ ಸೀಕ್ರೆಟ್
  • ಸಿಸಿಬಿ ತನಿಖೆಯಲ್ಲಿ ರಿವೀಲ್
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ವಿಡಿಯೋ ಪ್ರಕರಣದಲ್ಲಿ (Sting operation) ದೆಹಲಿ ಮೂಲದ ರಿತೇಶ್ ಪಾಂಡೆ ಬಂಧನದ ನಂತರ ತನಿಖೆಯಲ್ಲಿ ಮಹತ್ವದ ವಿವರಗಳು ಹೊರಬಿದ್ದಿವೆ. ಕರ್ನಾಟಕ ಹನಿಟ್ರ್ಯಾಪ್ ಹೆಸರಿನ ಯೂಟ್ಯೂಬ್ ಖಾತೆ ಮೂಲಕ ವಿಡಿಯೋ ಹಾಕಿದ್ದ ಆರೋಪ ಇರುವ ಆತ, ಇದಕ್ಕಾಗಿಯೇ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿ 15 ಸಾವಿರ ರೂಪಾಯಿಗೆ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿದ್ದ ಎಂಬುದು ಸಿಸಿಬಿ ತನಿಖೆಯಲ್ಲಿ ಗೊತ್ತಾಗಿದೆ. ಸಿಮ್ ಇಲ್ಲದೆಯೇ ವೈ-ಫೈ ಮೂಲಕ ಅಂತರ್ಜಾಲ ಬಳಸಬಹುದಾದ ಫೋನ್‌ಗಾಗಿ ಆತ ಹುಡುಕಾಡಿದ್ದ. ತನಗೆ ಮೊದಲೇ ಸಿಕ್ಕಿದ್ದ ಪೆನ್‌ಡ್ರೈವ್ ಅನ್ನು ಒಟಿಜಿ ಮೂಲಕ ಫೋನ್‌ಗೆ ಜೋಡಿಸಿ ಅದರಲ್ಲಿದ್ದ ವಿಡಿಯೋ ನೋಡಿದ್ದ. ಬಳಿಕ ಅದೇ ಫೋನ್‌ನಲ್ಲಿ ವೈ-ಫೈ ಸಂಪರ್ಕ ಪಡೆದು ಯೂಟ್ಯೂಬ್ ಖಾತೆ ತೆರೆದು ವಿಡಿಯೋ ಅಪ್‌ಲೋಡ್ ಮಾಡಿದ್ದ ಎಂಬುದಕ್ಕೆ ಪೊಲೀಸರು ಸಾಕ್ಷ್ಯ ಕಲೆಹಾಕಿದ್ದಾರೆ. ಮೊಬೈಲ್ ಖರೀದಿಸಿದ ಅಂಗಡಿಯ ಬಿಲ್ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ವಿಡಿಯೋ ಅಪ್‌ಲೋಡ್ ಮಾಡಲು 50 ಸಾವಿರ ರೂಪಾಯಿ..! ರಿತೇಶ್ ಬಂಧನದ ಬಳಿಕ 66ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪ್ರಕರಣದ ಸೆಕ್ಷನ್‌ಗಳಿಗೆ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವುದು ಮತ್ತು ಮತ್ತೊಬ್ಬ ಆರೋಪಿಗೆ ನಿರೀಕ್ಷಣಾ ಜಾಮೀನು ಸಿಕ್ಕಿರುವುದನ್ನು ಉಲ್ಲೇಖಿಸಿ ಆತನ ವಕೀಲರು ಜಾಮೀನು ಕೋರಿದ್ದರು. ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದ್ದು, ತನಿಖೆಗೆ ಸಹಕರಿಸಬೇಕು, ನಗರ ಬಿಡುವಾಗ ಮಾಹಿತಿ ನೀಡಬೇಕು, ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂದು ಸೂಚಿಸಿದೆ. ಸ್ಟಿಂಗ್ ವಿಡಿಯೋದಲ್ಲಿರುವ ಮಹಿಳೆಯ ಹೇಳಿಕೆಯನ್ನೂ ಸಿಸಿಬಿ ದಾಖಲಿಸಿಕೊಂಡಿದೆ. ವಿಡಿಯೋ ಅಪ್‌ಲೋಡ್ ಮಾಡಲು 50 ಸಾವಿರ ರೂಪಾಯಿ ಕೊಡಲಾಗಿದೆ ಎಂಬ ಶಂಕೆ ಇದ್ದು, ಸೂಚನೆ ಕೊಟ್ಟವರು ಯಾರು, ಪೆನ್‌ಡ್ರೈವ್ ತಲುಪಿಸಿದವರು ಯಾರು, ಹಣ ಕೊಟ್ಟವರು ಯಾರು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಇದನ್ನೂ ಓದಿ : ಸ್ಟಿಂಗ್ ಆಪರೇಷನ್ ಹಿಂದೆ ರಾಜಕೀಯ ಸಂಚು – ಸರ್ಕಾರಕ್ಕೆ ಡ್ಯಾಮೇಜ್ : ಪ್ರಿಯಾಂಕ್ ಖರ್ಗೆ ಈ ಪ್ರಕರಣ ಕೇವಲ ವಿಡಿಯೋ ಅಪ್‌ಲೋಡ್ ಮಾಡಿದ ವ್ಯಕ್ತಿಯ ಬಂಧನಕ್ಕೆ ಸೀಮಿತವಾಗಿಲ್ಲ. ಗುರುತು ಮರೆಮಾಚಲು ಸಿಮ್ ಇಲ್ಲದ ಫೋನ್, ಸೆಕೆಂಡ್ ಹ್ಯಾಂಡ್ ಮೊಬೈಲ್, ವೈ-ಫೈ ಬಳಕೆ, ಪೆನ್‌ಡ್ರೈವ್ ಮೂಲಕ ವಿಡಿಯೋ ವರ್ಗಾವಣೆ ಎಂಬೆಲ್ಲಾ ವಿಧಾನಗಳು ಇದೊಂದು ವ್ಯವಸ್ಥಿತ ಕಾರ್ಯಾಚರಣೆ ಎಂಬ ಅನುಮಾನವನ್ನು ಹೆಚ್ಚಿಸಿವೆ. ಅಪ್‌ಲೋಡ್ ಮಾಡಿದವನು ಸಿಕ್ಕರೂ ಹಿಂದಿರುವ ಸೂತ್ರಧಾರರು, ಹಣದ ಮೂಲ ಮತ್ತು ರಾಜಕೀಯ ಉದ್ದೇಶ ಪತ್ತೆಯಾಗದಿದ್ದರೆ ತನಿಖೆ ಅರ್ಧಕ್ಕೆ ನಿಲ್ಲುತ್ತದೆ. ಕರ್ನಾಟಕದಲ್ಲಿ ಇಂತಹ ಹನಿಟ್ರ್ಯಾಪ್ ಮತ್ತು ಸ್ಟಿಂಗ್ ಪ್ರಕರಣಗಳು ರಾಜಕೀಯ ಲಾಭಕ್ಕಾಗಿ ಬಳಸಲ್ಪಡುತ್ತಿವೆ ಎಂಬ ಚರ್ಚೆ ಇದೆ. ಹೀಗಾಗಿ ಸಿಸಿಬಿ ತನಿಖೆ ಹಣಕಾಸು ವ್ಯವಹಾರ, ಪೆನ್‌ಡ್ರೈವ್ ಸಾಗಿದ ದಾರಿ ಮತ್ತು ಸೂಚನೆ ನೀಡಿದವರವರೆಗೆ ತಲುಪಿದಾಗ ಮಾತ್ರ ನಿಜವಾದ ಸತ್ಯ ಹೊರಬರಲು ಸಾಧ್ಯ.