☔ Weather
Bengaluru: ☀️ 19°C | AQI 88
Mysore: 🌤️ 20°C | AQI 88
Mangalore: ☀️ 24°C | AQI 132
Bengaluru: ☀️ 19°C | AQI 88
☔ Weather
Bengaluru: ☀️ 19°C | AQI 88
Mysore: 🌤️ 20°C | AQI 88
Mangalore: ☀️ 24°C | AQI 132
Bengaluru: ☀️ 19°C | AQI 88

STING : ಮೆಟಾ ಗ್ಲಾಸ್ ರಹಸ್ಯ ಬಿಚ್ಚಿಟ್ಟ ಸಿಎಂ ಡಿಕೆ – ಸ್ಟಿಂಗ್ ಪ್ರಕರಣದಲ್ಲಿ ಮತ್ತೆ ಸಂಚಲನ

Image of DK Shivakumar about Sting
ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ (Sting operation) ವಿವಾದದ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಾಂಶಗಳು

  • ಸಿಎಂ ವಿರುದ್ಧವೇ ಸ್ಟಿಂಗ್ ಪ್ರಯತ್ನ
  • ಡಿಕೆಗೆ ಅನುಮಾನ ಬಂದಿದ್ದು ಹೇಗೆ..?
  • ಮೆಟಾ ಗ್ಲಾಸ್ ರಹಸ್ಯ ಕಾರ್ಯಾಚರಣೆ
ಬೆಂಗಳೂರು : ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ (Sting operation) ವಿವಾದದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಒಬ್ಬ ಉದ್ಯಮಿ ಅತ್ಯಾಧುನಿಕ ಮೆಟಾ ಎಐ ಸ್ಮಾರ್ಟ್ ಗ್ಲಾಸ್ ಧರಿಸಿಕೊಂಡು ತಮ್ಮನ್ನು ಭೇಟಿಯಾಗಲು ಬಂದಿದ್ದರು ಎಂದು ಹೇಳಿದ್ದಾರೆ. ಆ ಕನ್ನಡಕದಲ್ಲಿ ವಿಡಿಯೋ ಮತ್ತು ಆಡಿಯೋ ರೆಕಾರ್ಡ್ ಮಾಡುವ ಸೌಲಭ್ಯ ಇರುವುದರಿಂದ, ತಮ್ಮ ವಿರುದ್ಧ ಗುಪ್ತ ಕಾರ್ಯಾಚರಣೆ ನಡೆಸುವ ಉದ್ದೇಶದಿಂದಲೇ ಆ ವ್ಯಕ್ತಿ ಬಂದಿರಬಹುದು ಎಂಬ ಅನುಮಾನವನ್ನು ಅವರು ನೇರವಾಗಿ ವ್ಯಕ್ತಪಡಿಸಿದ್ದಾರೆ. ಉದ್ಯಮಿಯ ಸೋಗಿನಲ್ಲಿ ಸ್ಟಿಂಗ್ ಯತ್ನ..! ಈ ಘಟನೆಯನ್ನು ವಿವರಿಸಿದ ಸಿಎಂ, ಅಧಿಕಾರಿಗಳು ನಿಗದಿಪಡಿಸಿದ್ದ ಸಮಯದಲ್ಲಿ ಲ್ಯಾಪ್‌ಟಾಪ್ ಹಿಡಿದು ಬಂದ ಆ ಉದ್ಯಮಿ ಆರಂಭದಲ್ಲಿ ತಮ್ಮ ಸಂಸ್ಥೆಯ ವ್ಯವಹಾರದ ಬಗ್ಗೆ ಮಾತನಾಡಿದರು ಎಂದು ತಿಳಿಸಿದ್ದಾರೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಸಂಭಾಷಣೆ ರಾಜಕೀಯದತ್ತ ತಿರುಗಿತು. ಬೂತ್ ಮಟ್ಟದ ರಾಜಕೀಯ ತಂತ್ರಗಾರಿಕೆ ಮತ್ತು ಚುನಾವಣಾ ಸಮೀಕ್ಷೆಗಳ ಬಗ್ಗೆ ಆ ವ್ಯಕ್ತಿ ಹೆಚ್ಚು ಆಸಕ್ತಿಯಿಂದ ಪ್ರಶ್ನೆಗಳನ್ನು ಕೇಳಲು ಆರಂಭಿಸಿದಾಗ ಅನುಮಾನ ಇನ್ನಷ್ಟು ಹೆಚ್ಚಾಯಿತು. ಪ್ರತಿದಿನ ಸಾವಿರಾರು ಜನರನ್ನು ಭೇಟಿಯಾಗುವುದರಿಂದ ಯಾರ ಮುಖ ನೋಡಿದರೂ ಅವರ ಉದ್ದೇಶವನ್ನು ಅರಿಯುವ ಅನುಭವ ತಮಗಿದೆ ಎಂದು ಸಿಎಂ ಹೇಳಿದ್ದಾರೆ. ನಂತರ ಆ ವ್ಯಕ್ತಿಯ ಹಿನ್ನೆಲೆ ಪರಿಶೀಲಿಸಿದಾಗ ಇನ್ನೊಂದು ವಿಚಾರ ಬೆಳಕಿಗೆ ಬಂದಿದೆ. ಆ ಉದ್ಯಮಿ ತಮ್ಮನ್ನು ಮತ್ತು ಕೇರಳದ ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಅವರನ್ನು ಭೇಟಿಯಾದಾಗ ಮಾತ್ರ ಸ್ಮಾರ್ಟ್ ಗ್ಲಾಸ್ ಧರಿಸಿದ್ದರು. ಆದರೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಸಚಿವರನ್ನು ಭೇಟಿಯಾದಾಗ ಅಂತಹ ಕನ್ನಡಕ ಧರಿಸಿರಲಿಲ್ಲ ಎಂಬುದು ಪರಿಶೀಲನೆಯಲ್ಲಿ ತಿಳಿದುಬಂದಿದೆ ಎಂದು ಡಿಕೆಶಿ ಹೇಳಿದ್ದಾರೆ. ಇದನ್ನೂ ಓದಿ : ಸಿದ್ದು ಭೇಟಿಗೆ ಮುಂದಾದ ಹೆಚ್.ಡಿ.ಕೆ – ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ! ಈ ಬೆಳವಣಿಗೆ ಸಿಎಂ ಆದಿಯಾಗಿ ಪ್ರತಿ ರಾಜಕೀಯ ನಾಯಕರ ಮೇಲೆ ಕಣ್ಣಿಡುವ ಹೊಸ ಪ್ರವೃತ್ತಿಯ ಉದಾಹರಣೆ. ಸ್ಮಾರ್ಟ್ ಗ್ಲಾಸ್‌ನಂತಹ ಸಾಧನಗಳು ಸಾಮಾನ್ಯ ಕನ್ನಡಕದಂತೆ ಕಾಣುವುದರಿಂದ ಭೇಟಿಯ ಸಂದರ್ಭದಲ್ಲಿ ಅವುಗಳನ್ನು ಗುರುತಿಸುವುದು ಕಷ್ಟ. ಹೀಗಾಗಿ ನಾಯಕರ ಭದ್ರತೆ ಮತ್ತು ಖಾಸಗಿತನದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ ಎಂಬುದು ಸಿಎಂ ಡಿಕೆ ಶಿವಕುಮಾರ್ ಮಾತಿನ ತಾತ್ಪರ್ಯ. ಇಂತಹ ಪ್ರಕರಣಗಳು ರಾಜಕೀಯದಲ್ಲಿ ಅಪನಂಬಿಕೆ ಹೆಚ್ಚಿಸಿ, ಸಾರ್ವಜನಿಕ ಭೇಟಿಗಳ ಸ್ವರೂಪವನ್ನೇ ಬದಲಾಯಿಸಬಹುದು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆರೋಪದ ಸತ್ಯಾಸತ್ಯತೆ ತನಿಖೆಯಿಂದಲೇ ಹೊರಬರಬೇಕಿದ್ದರೂ, ಈ ಘಟನೆ ಆಧುನಿಕ ತಂತ್ರಜ್ಞಾನ, ಸ್ಟಿಂಗ್ ಆರೋಪಗಳು ರಾಜಕೀಯಕ್ಕೆ ಹೇಗೆ ಸವಾಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ.