☔ Weather
Bengaluru: 🌧️ 25°C | AQI 52
Mysore: ☁️ 29°C | AQI 51
Mangalore: ☁️ 32°C | AQI 86
Bengaluru: 🌧️ 25°C | AQI 52

BBK 13: ಗಾರ್ಡ್‌ಗಳ ಜಗಳದ ಲಾಭ ಪಡೆದು ಕಳ್ಳತನ

BBK 13: Thieves Steal Inside House Due to Guards Negligence

BBK 13: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಆಟದ ರೋಚಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಪರ್ಧಿಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. ಮನೆಯಲ್ಲಿ ಕಾವಲು ಕಾಯಬೇಕಾದ ರಕ್ಷಕರೇ ಪರಸ್ಪರ ಜಗಳವಾಡಿಕೊಳ್ಳುತ್ತಿರುವುದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಗಾರ್ಡ್‌ಗಳ ಜಗಳದ ಲಾಭ ಪಡೆದುಕೊಂಡ ಕಳ್ಳರು ಮನೆಯೊಳಗೆ ಕೈಚಳಕ ತೋರಿದ್ದಾರೆ.

ರಕ್ಷಕರೇ ಆದ ಕಿರಣ್ ಹಾಗೂ ಗಾನವಿ ನಡುವೆ ತೀವ್ರ ಕಿತ್ತಾಟ

ಬಿಗ್ ಬಾಸ್ ಮನೆಯಲ್ಲಿ ಗಾರ್ಡ್‌ಗಳ ಜವಾಬ್ದಾರಿ ಹೊತ್ತಿದ್ದ ಕಿರಣ್ ಹಾಗೂ ಗಾನವಿ ನಡುವೆ ಮಾತಿನ ಚಕಮಕಿ ನಡೆದಿದೆ. ಕಾವಲು ಕಾಯಬೇಕಾದ ಸಮಯದಲ್ಲೇ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಒಬ್ಬರನ್ನೊಬ್ಬರು ದೂಷಿಸಿಕೊಳ್ಳುತ್ತಾ ಆಟದ ನಿಯಮ ಮರೆತು ವಾಗ್ವಾದ ನಡೆಸಿದ್ದಾರೆ. ಈ ಜಟಾಪಟಿಯಿಂದ ಮನೆಯ ಭದ್ರತೆ ಸಂಪೂರ್ಣವಾಗಿ ಹದಗೆಟ್ಟಿದೆ.

ಸೆಕ್ಯುರಿಟಿ ಕಣ್ಣು ತಪ್ಪಿಸಿ ಮನೆಯಲ್ಲಿ ಕಳ್ಳರ ಕೈಚಳಕ

ರಕ್ಷಕರ ಈ ನಿರ್ಲಕ್ಷ್ಯ ಹಾಗೂ ಪರಸ್ಪರ ಜಗಳದ ಲಾಭವನ್ನು ಕಳ್ಳರು ಸರಿಯಾಗಿ ಬಳಸಿಕೊಂಡಿದ್ದಾರೆ. ಸೆಕ್ಯುರಿಟಿ ಕಣ್ಣು ತಪ್ಪಿಸಿ ರಹಸ್ಯವಾಗಿ ಮನೆಯೊಳಗೆ ನುಗ್ಗಿದ್ದಾರೆ. ಅಮೂಲ್ಯವಾದ ವಸ್ತುಗಳನ್ನು ಕಳ್ಳತನ ಮಾಡುವ ಮೂಲಕ ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ. ಗಾರ್ಡ್‌ಗಳ ಅಜಾಗರೂಕತೆಯಿಂದ ಬಿಗ್ ಬಾಸ್ ಮನೆಯಲ್ಲಿ ಈ ಅನಾಹುತ ಸಂಭವಿಸಿದೆ.

BBK 13: ಮುಂದೇನು ಅನಾಹುತ ಕಾದಿದೆ ಎಂಬ ಕುತೂಹಲ

ಕಳ್ಳತನ ನಡೆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮಟ್ಟದ ಕೋಲಾಹಲ ಉಂಟಾಗಿದೆ. ವಸ್ತುಗಳು ಕಳ್ಳತನವಾಗಲು ಕಾರಣ ಯಾರು ಎಂಬ ಬಗ್ಗೆಯೂ ಚರ್ಚೆಗಳು ಶುರುವಗಿವೆ. ರಕ್ಷಕರ ಈ ನಿರ್ಲಕ್ಷ್ಯಕ್ಕೆ ಬಿಗ್ ಬಾಸ್ ಯಾವ ರೀತಿಯ ಶಿಕ್ಷೆ ನೀಡಲಿದ್ದಾರೆ? ಮುಂದಿನ ಸಂಚಿಕೆಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.