BBK 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ಮನೆಯಲ್ಲಿ ದಿನದಿಂದ ದಿನಕ್ಕೆ ಮನರಂಜನೆಯ ಹೂರಣ ಜಾಸ್ತಿಯಾಗುತ್ತಿದೆ. ವೀಕೆಂಡ್ ಪಂಚಾಯಿತಿಯ ಸಂಚಿಕೆಯಲ್ಲಿ ಸ್ಪರ್ಧಿಗಳ ನಡುವಿನ ಮಜವಾದ ಮಾತುಕತೆಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಸ್ಪರ್ಧಿ ಪ್ರಶಾಂತ್ ಅವರ ಕಾಮಿಡಿ ಮತ್ತು ಅವರ ಮನವಿಯೊಂದು ಎಲ್ಲರ ಗಮನ ಸೆಳೆದಿದೆ.
ಪ್ರಶಾಂತ್ ಮನವಿ ಮತ್ತು ಸುದೀಪ್ ಕಾಲೆಳೆಯುವ ಹಾಸ್ಯ
ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಒಬ್ಬರು ಜೋಡಿ ಅಥವಾ ಕಂಫರ್ಟ್ ಪೇರ್ ಇದ್ದಾರೆ ಎಂದು ಪ್ರಶಾಂತ್ ಅಳಲು ತೋಡಿಕೊಂಡಿದ್ದರು. ಆದರೆ ತನಗೆ ಮಾತ್ರ ಯಾರೂ ಜೋಡಿ ಇಲ್ಲ ಎಂದು ಅವರು ನೇರವಾಗಿ ಬಿಗ್ ಬಾಸ್‌ಗೆ ಮನವಿ ಮಾಡಿದ್ದರು. ‘ಸೂಪರ್ ಸಂಡೆ ವಿತ್ ಬಾದ್‌ಷಾ’ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಈ ಕುರಿತು ಪ್ರಶಾಂತ್ ಅವರನ್ನು ತಮಾಷೆಯಾಗಿ ಪ್ರಶ್ನಿಸಿದರು. “ನೀವು ಯಾರಿಗೆಲ್ಲ ಟ್ರೈ ಮಾಡಿದ್ದೀರಿ?” ಎಂದು ಸುದೀಪ್ ಕೇಳಿದಾಗ ವಾತಾವರಣ ಮತ್ತಷ್ಟು ಮಜವಾಗಿ ಬದಲಾಯಿತು.
ಇದನ್ನು ಓದಿ: BBK 13: ಟೀಕಿಸಿದವರ ತಂಡವನ್ನೇ ಆಯ್ಕೆ ಮಾಡಿ ಶಾಕ್ ಕೊಟ್ಟ ಕುಮಾರಿ
ಸೋನಿಕಾ ಗೌಡ ಹೆಸರಿಸಿದ ಪ್ರಶಾಂತ್
ಸುದೀಪ್ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್, ತಾನು ಸೋನಿಕಾ ಗೌಡ ಅವರಿಗೆ ಟ್ರೈ ಮಾಡಿದ್ದಾಗಿ ತಿಳಿಸಿದರು. ಆದರೆ ಅವರಿಗೋ ಟಾಲ್, ಹ್ಯಾಂಡ್ಸಮ್ ಹಾಗೂ ಡಾರ್ಕ್ ಹುಡುಗ ಬೇಕಂತೆ ಎಂದು ಪ್ರಶಾಂತ್ ಹೇಳಿದರು. ತಾನು ಕೂಡ ಹಾಗೇ ಇದ್ದೇನೆ ಎಂದಾಗ, ಅದಕ್ಕೆ ಸುದೀಪ್ “ಅವರು ಹುಡುಕುತ್ತಿರುವ ಗುಣಗಳು ನಿಮ್ಮಲ್ಲಿ ಇಲ್ಲದಿರಬಹುದು, ಅದಕ್ಕೆ ಬೇಡ ಎಂದಿರಬಹುದು” ಎಂದು ಪ್ರಶಾಂತ್ ಕಾಲೆಳೆದರು. ಸುದೀಪ್ ಅವರ ಈ ಮಾತನ್ನು ಕೇಳಿ ಪ್ರಶಾಂತ್ ಶಾಕ್ ಆದರೆ, ಮನೆಯ ಇತರೆ ಸದಸ್ಯರು ಜೋರಾಗಿ ನಕ್ಕುಬಿಟ್ಟರು.
BBK 13: ಮನೆಯಲ್ಲಿ ಮುಂದುವರಿದ ಗದ್ದಲ ಹಾಗೂ ಆಟದ ರೋಚಕತೆ
ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ವಾರ ಯಾರು ಹೊರಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಈಗಾಗಲೇ ವಾಪಸ್ ಬಂದಿರುವ ತಾಂಡವ್ ರಾಮ್ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಗಾನವಿ ಗದ್ದಲ ಜೋರಾಗಿದೆ. ಪ್ರಶಾಂತ್ ಮನರಂಜನೆ ನೀಡಲು ಹೋಗಿ ತಾವೇ ಕಾಮಿಡಿ ಪೀಸ್ ಆಗುತ್ತಿದ್ದಾರೆ. ಒಟ್ಟಿನಲ್ಲಿ ದೊಡ್ಮನೆಯ ಆಟದಲ್ಲಿ ದಿನದಿಂದ ದಿನಕ್ಕೆ ಹೊಸ ತಿರುವುಗಳು ಸಿಗುತ್ತಿದ್ದು, ಮುಂದಿನ ಹಂತದಲ್ಲಿ ಆಟ ಯಾವ ರೂಪ ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.




