Jailer 2 Box Office: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಶುರುವಾಗಿದೆ. ಸಿನಿಮಾ ಬಿಡುಗಡೆಗೂ ಮುಂಚೆಯೇ ಮುಂಗಡ ಬುಕಿಂಗ್ ಭಾರಿ ಪ್ರಮಾಣದಲ್ಲಿ ನಡೆದಿತ್ತು. ಅದರಂತೆ ಈ ಸಿನಿಮಾ ಮೊದಲ ದಿನವೇ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಬ್ರಹ್ಮಾಂಡ ಗಳಿಕೆ ದಾಖಲಿಸಿ ಸದ್ದು ಮಾಡುತ್ತಿದೆ.
ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 120 ಕೋಟಿಗೂ ಹೆಚ್ಚು ಸಂಗ್ರಹ
‘ಜೈಲರ್ 2’ ಸಿನಿಮಾ ಮೊದಲ ದಿನ ಪ್ರಪಂಚದಾದ್ಯಂತ 120 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಬಾಚಿಕೊಂಡಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಈ ಶುರುವಾತನ್ನು ನೋಡಿದರೆ ಮೊದಲ ವಾರಾಂತ್ಯದ ವೇಳೆಗೆ ಸಿನಿಮಾ 300 ಕೋಟಿ ರೂಪಾಯಿ ಗಳಿಕೆ ದಾಟುವ ನಿರೀಕ್ಷೆಯಿದೆ.
ಭಾರತದಲ್ಲಿ ಮೊದಲ ದಿನದ ನೆಟ್ ಮತ್ತು ಗ್ರಾಸ್ ಕಲೆಕ್ಷನ್
ವರದಿಗಳ ಪ್ರಕಾರ ‘ಜೈಲರ್ 2’ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ 59.70 ಕೋಟಿ ನೆಟ್ ಗಳಿಸಿದೆ. ಇನ್ನು ಗ್ರಾಸ್ ಲೆಕ್ಕಾಚಾರದಲ್ಲಿ ಭಾರತದಲ್ಲೇ ಸುಮಾರು 70.25 ಕೋಟಿ ರೂಪಾಯಿ ಸಂಗ್ರಹವಾಗಿದೆ. ಭಾಷಾವಾರು ಲೆಕ್ಕದಲ್ಲಿ ತಮಿಳು ಆವೃತ್ತಿ ಒಂದರಲ್ಲೇ 43.35 ಕೋಟಿ ರೂ. ಹಾಗೂ ತೆಲುಗು ಆವೃತ್ತಿ 12.50 ಕೋಟಿ ರೂ. ಬಾಚಿಕೊಂಡಿದೆ.
ಇದನ್ನು ಓದಿ: Jailer 2: ಅಮೆಜಾನ್ ಪ್ರೈಮ್ ಪಾಲಾದ ‘ಜೈಲರ್ 2’ ಡಿಜಿಟಲ್ ಹಕ್ಕುಗಳು; ಒಟಿಟಿಗೆ ಬರೋದು ಯಾವಾಗ?
ರಾಜ್ಯವಾರು ಗಳಿಕೆಯಲ್ಲಿ ತಮಿಳುನಾಡು ಮುಂಚೂಣಿ
ರಾಜ್ಯವಾರು ಗ್ರಾಸ್ ಗಳಿಕೆಯಲ್ಲಿ ತಮಿಳುನಾಡು 24 ಕೋಟಿ ರೂಪಾಯಿ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ತಲಾ 14.5 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಕೇರಳದಲ್ಲಿ 12.5 ಕೋಟಿ ಹಾಗೂ ಭಾರತದ ಉಳಿದ ಭಾಗಗಳಲ್ಲಿ 4.75 ಕೋಟಿ ರೂಪಾಯಿ ಸಂಗ್ರಹವಾಗಿದೆ.
ನಿವೃತ್ತ ಜೈಲರ್ ಪಾತ್ರದಲ್ಲಿ ತಲೈವಾ ಮ್ಯಾಜಿಕ್
2023ರಲ್ಲಿ ರಿಲೀಸ್ ಆಗಿ ಧಮಾಕಾ ಮಾಡಿದ್ದ ‘ಜೈಲರ್’ ಸಿನಿಮಾದ ಮುಂದುವರಿದ ಭಾಗವೇ ಈ ಚಿತ್ರವಾಗಿದೆ. ರಜನಿಕಾಂತ್ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಕಿಕ್ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ, ಮೋಹನ್ ಲಾಲ್, ಜ್ಯಾಕಿ ಶ್ರಾಫ್, ರಮ್ಯಾ ಕೃಷ್ಣ ಹಾಗೂ ಹೃತಿಕ್ ರೋಷನ್ ಮಿಂಚಿದ್ದಾರೆ.
Jailer 2 Box Office: ನೆಲ್ಸನ್ ನಿರ್ದೇಶನ ಮತ್ತು ಅನಿರುದ್ಧ್ ಸಂಗೀತ ಜಾದೂ
ಕಲಾನಿಧಿ ಮಾರನ್ ಅವರ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಬೃಹತ್ ಚಿತ್ರ ನಿರ್ಮಾಣಗೊಂಡಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ತಮ್ಮ ಬಿಗಿಯಾದ ಕಥಾಹಂದರದಿಂದ ಪ್ರೇಕ್ಷಕರನ್ನು ಕಟ್ಟಿಹಾಕಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಧೂಳೆಬ್ಬಿಸುತ್ತಿದೆ.




