☔ Weather
Bengaluru: ☁️ 22°C | AQI 58
Mysore: ☁️ 24°C | AQI 62
Mangalore: ☁️ 28°C | AQI 81
Bengaluru: ☁️ 22°C | AQI 58

UGNEET 2026: ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಭಾಗವಹಿಸಲು ಅವಕಾಶ; ಅ.19 ಕೊನೆಯ ದಿನ

UGNEET 2026: Stray Vacancy Round KEA Extends Deadline For Caution Deposit And Option Entry

Image: @KEA_karnataka/X

UGNEET 2026: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹೊಂದಿಲ್ಲದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಮಾಹಿತಿಯೊಂದನ್ನು ನೀಡಿದೆ. ವಿದ್ಯಾರ್ಥಿಗಳ ವಿಶೇಷ ಕೋರಿಕೆಯನ್ನು ಮಾನ್ಯ ಮಾಡಿ ಕೆಇಎ ಈ ಪ್ರಮುಖ ತೀರ್ಮಾನ ಕೈಗೊಂಡಿದೆ.

ಪ್ರಸ್ತುತ ನಡೆಯುತ್ತಿರುವ ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಸಡಿಲಿಕೆ ಮಾಡಲಾಗಿದೆ. ಯಾವುದೇ ಸೀಟುಗಳನ್ನು ಪಡೆಯದ ಅಭ್ಯರ್ಥಿಗಳು ಈಗ ಮರು ಅವಕಾಶವನ್ನು ಬಳಸಿಕೊಳ್ಳಬಹುದು.

ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ಕಾಷನ್ ಡೆಪಾಸಿಟ್ ಕಟ್ಟಿ ನೇರವಾಗಿ ಈ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ. ಈ ಕುರಿತಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಐಎಎಸ್ ಅಧಿಕೃತ ಮಾಹಿತಿ ಪ್ರಕಟಿಸಿದ್ದಾರೆ.

ಕಾಷನ್ ಡೆಪಾಸಿಟ್ ಪಾವತಿಸಲು ಪ್ರಮುಖ ದಿನಾಂಕ

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಷನ್ ಡೆಪಾಸಿಟ್ ಹಣವನ್ನು ಪಾವತಿಸಲು ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ಅದರಂತೆ ಅಕ್ಟೋಬರ್ 19ರ ಬೆಳಿಗ್ಗೆ 11 ಗಂಟೆಯವರೆಗೆ ಇದಕ್ಕೆ ಅವಕಾಶ ನೀಡಲಾಗಿದೆ.

ನಿಗದಿಪಡಿಸಿದ ಈ ಸಮಯದೊಳಗೆ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ. ತಪ್ಪಿದಲ್ಲಿ ಮುಂದಿನ ಪ್ರಕ್ರಿಯೆಗೆ ಅವಕಾಶವಿರುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

UGNEET 2026: ಆಪ್ಷನ್ಸ್ ದಾಖಲಿಸಲು ಸಮಯ ವಿಸ್ತರಣೆ

ಕಾಷನ್ ಡೆಪಾಸಿಟ್ ಪಾವತಿಸಿದ ಬಳಿಕ ಆಪ್ಷನ್ಸ್ (Options) ದಾಖಲಿಸಲು ಸಹ ಕಾಲಾವಕಾಶ ನೀಡಲಾಗಿದೆ. ಅಕ್ಟೋಬರ್ 19ರ ಮಧ್ಯಾಹ್ನ 1 ಗಂಟೆಯವರೆಗೂ ಆಪ್ಷನ್ಸ್ ಎಂಟ್ರಿ ಮಾಡಲು ಅವಕಾಶ ವಿಸ್ತರಿಸಲಾಗಿದೆ.

ವಿದ್ಯಾರ್ಥಿಗಳು ಕೊನೆಯ ಗಂಟೆಯವರೆಗೆ ಕಾಯದೆ ಆದಷ್ಟು ಬೇಗ ತಮ್ಮ ಆಯ್ಕೆಗಳನ್ನು ದಾಖಲಿಸುವುದು ಸೂಕ್ತವಾಗಿದೆ. ಈ ಅವಕಾಶವನ್ನು ವೈದ್ಯಕೀಯ ಆಕಾಂಕ್ಷಿಗಳು ಸದುಪಯೋಗಪಡಿಸಿಕೊಳ್ಳಬೇಕು.